ಮನೆಯ ಇಂಟೀರಿಯರ್‌ ವಿಶೇಷವಾಗಿ ಬೆಡ್‌ ರೂಮ್ ನ ಇಂಟೀರಿಯರ್‌ ಮಾಡುವಾಗ ಡ್ರೆಸಿಂಗ್‌ ಟೇಬಲ್‌ನ ಆಯ್ಕೆ ಬಹಳ ಮಹತ್ವದ್ದಾಗಿರುತ್ತದೆ. ಮಹಿಳೆಯರು ಅಲಂಕರಿಸಿಕೊಳ್ಳಲು ಡ್ರೆಸ್ಸಿಂಗ್‌ ಟೇಬಲ್ ಬೇಕೇಬೇಕು. ಮನೆಯ ಅಲಂಕರಣದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಈ ದಿನಗಳಲ್ಲಿ ಡ್ರೆಸಿಂಗ್‌ ಟೇಬಲ್‌ನ ಬಹಳಷ್ಟು ವೆರೈಟಿಗಳು ಸಿಗುತ್ತವೆ. ಅದನ್ನು ಸರಿಯಾಗಿ ಬಳಸಿಕೊಂಡು ರಕ್ಷಿಸಬೇಕು.

ಡ್ರೆಸ್ಸಿಂಗ್‌ ಟೇಬಲ್ ವುಡ್‌ ಮೆಟೀರಿಯಲ್ ಡ್ರೆಸ್ಸಿಂಗ್‌ ಟೇಬಲ್‌ಗೆ 3 ರೀತಿಯ ಮರಗಳನ್ನು ಉಪಯೋಗಿಸಲಾಗುತ್ತದೆ. ಪೈನಲ್ ಡ್ರೆಸ್ಸಿಂಗ್‌ ಟೇಬಲ್, ಟೀಕ್‌ ಡ್ರೆಸ್ಸಿಂಗ್‌ ಟೇಬಲ್ ಮತ್ತು ಮಹಾಗನಿ ಡ್ರೆಸ್ಸಿಂಗ್‌ ಟೇಬಲ್.

ಪೈನ್ಡ್ರೆಸ್ಸಿಂಗ್ಟೇಬಲ್ : ಪೈನ್‌ ಅಥವಾ ದೇವದಾರು ಮರ ಬಹಳ ಸದೃಢವಾಗಿರುತ್ತದೆ. ಇದರ ಸಣ್ಣ ಸಣ್ಣ ತುಂಡುಗಳಿಂದ ಡ್ರೆಸ್ಸಿಂಗ್‌ ಟೇಬಲ್ ತಯಾರಿಸಲಾಗುತ್ತದೆ. ದೇವದಾರು ಮರದಿಂದ ತಯಾರಾದ ಡ್ರೆಸ್ಸಿಂಗ್‌ ಟೇಬಲ್ ಬಹಳ ಗಟ್ಟಿಯಾಗಿರುತ್ತದೆ ಹಾಗೂ ಬಹಳ ಕಾಲ ಬಾಳಿಕೆ ಬರುತ್ತದೆ. ಈ ಮರದಲ್ಲಿ ಡ್ರೆಸ್ಸಿಂಗ್‌ ಟೇಬಲ್‌ನ ಬಹಳಷ್ಟು ಡಿಸೈನ್‌ಗಳು ಸಿಗಲಿದ್ದು ಬಹಳ ಸ್ಟೈಲಿಶ್‌ಆಗಿರುತ್ತವೆ.

ಟೀಕ್ಡ್ರೆಸ್ಸಿಂಗ್ಟೇಬಲ್ :  ಟೀಕ್‌ ಅಥವಾ ತೇಗದ ಮರ ಬಹಳ ಫೈನ್‌ ಕ್ವಾಲಿಟಿಯದ್ದಾಗಿದೆ. ಇದು ಮಲ್ಟಿ ಕಲರ್‌ಗಳಲ್ಲಿ ಲಭ್ಯವಿದೆ. ಇದರಿಂದ ತಯಾರಾದ ಡ್ರೆಸ್ಸಿಂಗ್‌ ಟೇಬಲ್ ಇನ್ನೂ ಸುಂದರವಾಗಿರುತ್ತದೆ. ಮಾರುಕಟ್ಟೆಯಲ್ಲಿ ಟೀಕ್‌ ವುಡ್‌ನ ಡ್ರೆಸ್ಸಿಂಗ್ ಟೇಬಲ್‌ನ್ನು ಇಷ್ಟಪಡಲಾಗುತ್ತದೆ. ಏಕೆಂದರೆ ಈಗ ಕಲರ್‌ ಫುಲ್ ವಸ್ತುಗಳು ಹೆಚ್ಚು ಚಾಲನೆಯಲ್ಲಿದೆ.

ಮಹಾಗನಿ ಡ್ರೆಸ್ಸಿಂಗ್ಟೇಬಲ್ : ಮಹಾಗನಿ ಕೆಂಪು ಹಾಗೂ ಕಂದು ಬಣ್ಣದ ಮರವಾಗಿದೆ. ಅದನ್ನು ಫರ್ನೀಚರ್‌ ತಯಾರಿಸಲು ಉಪಯೋಗಿಸುತ್ತಾರೆ. ಈ ಮರದಲ್ಲಿ ಬಹಳ ಹೊಳಪಿದೆ. ಆದ್ದರಿಂದಲೇ ಈ ಮರದಿಂದ ತಯಾರಾದ ಡ್ರೆಸ್ಸಿಂಗ್‌ ಟೇಬಲ್ ಎಲಿಗೆಂಟ್‌ ಹಾಗೂ ಕ್ಲಾಸಿ ಲುಕ್‌ ಕೊಡುತ್ತದೆ.

ಡ್ರೆಸ್ಸಿಂಗ್ಟೇಬಲ್ ಸ್ಟೈಲ್

ಕಾಂಪ್ಯಾಕ್ಟ್ ಡ್ರೆಸ್ಸಿಂಗ್ಟೇಬಲ್ : ನಿಮ್ಮ ಮನೆಯಲ್ಲಿ ಜಾಗ ಕಡಿಮೆ ಇದ್ದರೆ ನೀವು ಕಾಂಪ್ಯಾಕ್ಟ್ ಡ್ರೆಸಿಂಗ್‌ ಟೇಬಲ್ ಖರೀದಿಸಿ. ಇದು ಕಡಿಮೆ ಜಾಗ ತೆಗೆದುಕೊಳ್ಳುತ್ತದೆ. ಇದರಲ್ಲಿ ವಸ್ತುಗಳನ್ನು ಇಡಲು 2-3 ಡ್ರಾಯರ್‌ಗಳೂ ಇರುತ್ತವೆ. ಅದರಲ್ಲಿ ನಿಮ್ಮ ಮೇಕಪ್‌ ವಸ್ತುಗಳನ್ನು ಇಟ್ಟುಕೊಳ್ಳಬಹುದು. ಇದರ ಬೆಲೆ 2000 ರೂ.ಗಳಿಂದ 5000 ರೂ.ಗಳವರೆಗೆ ಇದೆ.

ಲೂಪ್‌ ಲೆಗ್‌ ಡ್ರೆಸ್ಸಿಂಗ್‌ ಟೇಬಲ್‌ನಲ್ಲಿ 2 ಡ್ರಾಯರ್‌ಗಳು ಮತ್ತು 1 ಮಿರರ್‌ ಇರುತ್ತದೆ. ಡ್ರಾಯರ್‌ಗಳಿಗೆ ಗ್ಲಾಸ್‌ ಹಾಕಿರುವುದರಿಂದ ಅವು ಸಾಕಷ್ಟು ಸ್ಟೈಲಿಶ್‌ ಹಾಗೂ  ಕ್ಲಾಸಿ ಆಗಿ ಕಂಡುಬರುತ್ತದೆ. ಮಿರರ್‌ನ ಸೈಜ್‌ ಸಾಕಷ್ಟು ದೊಡ್ಡದಾಗಿರುತ್ತದೆ. ಜೊತೆಗೆ ಇದರ ಸುತ್ತಮುತ್ತ ಸ್ಟೋನ್ಸ್ ಮತ್ತು ಮಿರರ್‌ನಿಂದ ಡಿಸೈನಿಂಗ್‌ ಬಹಳ ಸುಂದರವಾಗಿ ಕಾಣುತ್ತದೆ. ಇದು ನಿಮ್ಮ ಬೆಡ್‌ ರೂಮಿ‌ಗೆ ಯೂನಿಕ್‌ಲುಕ್‌ ಕೊಡುತ್ತದೆ. ಇದರ ಬೆಲೆ 3000 ರೂ.ಗಳಿಂದ 6,000 ರೂ.ವರೆಗೆ  ಆಗುತ್ತದೆ.

ವೈಟ್ವರ್ಟಿಕಲ್ ಡ್ರೆಸ್ಸಿಂಗ್ಟೇಬಲ್ : ಲೈಟ್‌ ಕಲರ್‌ನ ಡ್ರೆಸ್ಸಿಂಗ್‌ ಟೇಬಲ್ ಬೇರೆಯದೇ ಆದ ಲುಕ್‌ ಕೊಡುತ್ತದೆ. ಇದರಲ್ಲಿ ನಿಮಗೆ ಸಾಕಷ್ಟು ವೆರೈಟಿಯೂ ಸಿಗುತ್ತದೆ. ವರ್ಟಿಕಲ್ ಶೇಪ್‌ನ ಡ್ರೆಸ್ಸಿಂಗ್‌ ಟೇಬಲ್ ಸ್ವಲ್ಪ ಡಿಫರೆಂಟ್‌ ಆಗಿ ಕಂಡುಬರುತ್ತದೆ. ಇದರಲ್ಲಿ ಸಾಕಷ್ಟು ಡ್ರಾಯರ್‌ಗಳು ಇರುವುದರಿಂದ ನಿಮ್ಮ ವಸ್ತುಗಳನ್ನು ಇಡಲು ಯಾವುದೇ ತೊಂದರೆಯಿಲ್ಲ. ಇದರಲ್ಲಿ ರೌಂಡ್ ಮತ್ತು ಡಿಫರೆಂಟ್‌ ಶೇಪ್‌ಗಳಲ್ಲಿ ಹ್ಯಾಂಡಲ್ ಇರುವುದರಿಂದ ಇದು ಸ್ಟೈಲಿಶ್‌ ಲುಕ್‌ ಕೊಡುತ್ತದೆ. ಇದರ ಬೆಲೆ 2500 ರೂ.ಗಳಿಂದ 7000ರೂ.ಗಳವರೆಗೆ ಇದೆ.

antique-french-dressing

ಆ್ಯಂಟಿಕ್ಡ್ರೆಸ್ಸಿಂಗ್ಟೇಬಲ್ : ಈ ಡ್ರೆಸ್ಸಿಂಗ್‌ ಟೇಬಲ್ ಮೇಲೆ ಆ್ಯಂಟಿಕ್‌ ಪಾಲಿಶ್‌ ಇದ್ದು ನಿಮ್ಮ ಬೆಡ್‌ರೂಂಗೆ ಆ್ಯಂಟಿಕ್‌ ಲುಕ್ ಕೊಡುತ್ತದೆ. ಇದರ ಡ್ರಾಯರ್‌ಗಳಿಗೆ ಮೆಟಲ್ ಹ್ಯಾಂಡಲ್ ಇರುತ್ತದೆ. ಇದು ಬೇರೆ ಬೇರೆ ಶೇಪ್‌ ಮತ್ತು ಡಿಸೈನ್‌ಗಳಲ್ಲಿ ಇರುತ್ತದೆ. ಅದರಲ್ಲಿರುವ ಮಿರರ್‌ ಕೂಡ ದೊಡ್ಡ ಸೈಜ್‌ ಮತ್ತು ಡಿಫರೆಂಟ್‌ ಶೇಪ್‌ಗಳಲ್ಲಿ ಇರುತ್ತವೆ. ಇದರ ಬೆಲೆ 10,000 ರೂ.ಗಳಿಂದ ಶುರುವಾಗುತ್ತದೆ.

ವಿಕ್ಟೋರಿಯನ್ಸ್ಟೈಲ್ ಡ್ರೆಸ್ಸಿಂಗ್ಟೇಬಲ್ : ನಿಮ್ಮ ಬೆಡ್‌ ರೂಮಿಗೆ ರಾಯಲ್ ಸ್ಟೈಲ್ ಕೊಡಲು ಇಚ್ಛಿಸಿದರೆ ವಿಕ್ಟೋರಿಯನ್‌ ಸ್ಟೈಲ್ ‌ಡ್ರೆಸ್ಸಿಂಗ್‌ ಟೇಬಲ್‌ನ್ನು ನಿಮ್ಮ ಇಂಟೀರಿಯರ್‌ನಲ್ಲಿ ಸೇರಿಸಿಕೊಳ್ಳಿ. ಈ ಡ್ರೆಸ್ಸಿಂಗ್‌ ಟೇಬಲ್‌ನ ಬಹಳಷ್ಟು ವೆರೈಟಿಗಳು ನಿಮಗೆ ಮಾರ್ಕೆಟ್‌ನಲ್ಲಿ ಸಿಗುತ್ತವೆ. ಇದರಲ್ಲಿ ಮಿರರ್‌ನ ಸುತ್ತಮುತ್ತ ಮತ್ತು ಡ್ರಾಯರ್‌ಗಳ ಮೇಲೆ ಸಾಕಷ್ಟು ಸೂಕ್ಷ್ಮ ಡಿಸೈನ್‌ಗಳನ್ನು ಮಾಡಿರುತ್ತಾರೆ. ಈ ಡ್ರೆಸ್ಸಿಂಗ್‌ ಟೇಬಲ್‌ನ್ನು ಭಾರವಾದ ಮರದಿಂದ ತಯಾರಿಸಿರುತ್ತಾರೆ. ಇದರ ಬೆಲೆ 25,000 ರೂ.ಗಳಿಂದ ಶುರುವಾಗುತ್ತದೆ.

ಬೆಡ್ರೂಮ್ ನ್ನು ಅಟ್ರ್ಯಾಕ್ಟಿವ್ ಮಾಡಿ

ಬೆಡ್‌ ರೂಮ್ ನ್ನು ಸ್ಟೈಲಿಶ್‌ ಹಾಗೂ ಅಟ್ರ್ಯಾಕ್ಟಿವ್ ‌ಆಗಿಸಲು ಅದರ ಇಂಟೀರಿಯರ್‌ ಬಗ್ಗೆ ವಿಶೇಷ ಗಮನ ನೀಡಬೇಕು. ಬೆಡ್ ರೂಮಿಗೆ ಡ್ರೆಸ್ಸಿಂಗ್‌ ಟೇಬಲ್ ಅರೇಂಜ್‌ ಮಾಡಬೇಕಿದ್ದರೆ ಕೆಳಗಿನ ವಿಷಯಗಳನ್ನು ಗಮನಿಸಿ.

ಕಲರ್‌ : ಡ್ರೆಸ್ಸಿಂಗ್‌ ಟೇಬಲ್ ಖರೀದಿಸುವಾಗ ನಿಮ್ಮ ಬೆಡ್‌ ರೂಮಿನಲ್ಲಿ ಹಾಕಿರುವ ಫರ್ನೀಚರ್‌, ಅಲಮಾರುಗಳು, ಗೋಡೆಗಳು ಇತ್ಯಾದಿಗಳ ಬಣ್ಣ ಹೇಗಿದೆ ಎಂದು ಗಮನಿಸಬೇಕು. ಏಕೆಂದರೆ ಫರ್ನೀಚರ್‌ ಯಾವಾಗಲೂ ಮ್ಯಾಚ್‌ ಆಗಬೇಕು. ಬೆಡ್‌ ರೂಮಿನಲ್ಲಿ ಯಾವಾಗಲೂ ಲೈಟ್‌ ಕಲರ್‌ ಚೆನ್ನಾಗಿರುತ್ತದೆ. ಹೆಚ್ಚು ಬ್ರೈಟ್‌ ಹಾಗೂ ಡಾರ್ಕ್‌ ಕಲರ್‌ಗಳನ್ನು ಬಾಥ್‌ ರೂಮಿನಲ್ಲಿ ಕಡಿಮೆ ಉಪಯೋಗಿಸಿ.

mahogany-dressing-table

ಲೈಟ್ಸ್ : ಡ್ರೆಸ್ಸಿಂಗ್‌ ಟೇಬಲ್‌ನಲ್ಲಿ ಲೈಟ್ಸ್ ವಿಷಯ ಮಾತಾಡುವುದಾದರೆ ಲೇಡೀಸ್‌ ಡ್ರೆಸ್ಸಿಂಗ್‌ ಟೇಬಲ್‌ನ ಲೈಟ್ಸ್ ಸಾಕಷ್ಟು ಪ್ರಮಾಣದಲ್ಲಿ ಇಟ್ಟುಕೊಳ್ಳುತ್ತಾರೆ. ಏಕೆಂದರೆ ಅದರಿಂದ ಅವರು ತಮ್ಮ ಮೇಕಪ್‌ ಮತ್ತು ಡ್ರೆಸ್‌ನ್ನು ಸರಿಯಾಗಿ ನೋಡಿಕೊಳ್ಳುತ್ತಾರೆ. ಅದಕ್ಕೆ ಡ್ರೆಸ್ಸಿಂಗ್‌ ಟೇಬಲ್‌ನಲ್ಲಿ ಪ್ರಾಪರ್‌ ಲೈಟ್‌ ಇರಬೇಕು. ಮಿರರ್‌ನ ಮೇಲಿರುವ ಚಿಕ್ಕ ಲೈಟ್‌ ನೀವು ಸಿದ್ಧರಾಗಲು ಸಂಪೂರ್ಣವಾಗಿ ಬೆಳಕು ನೀಡುತ್ತದೆ. ಅದಲ್ಲದೆ ಡ್ರೆಸ್ಸಿಂಗ್‌ ಟೇಬಲ್‌ನ ಸೈಡ್‌ನಲ್ಲಿ ಲೈಟ್‌ ಅಳವಡಿಸಿದ್ದು ಅಲಂಕೃತವಾಗಿರುತ್ತದೆ. ಡ್ರೆಸಿಂಗ್‌ ಟೇಬಲ್ ನಿಮ್ಮ ಬೆಡ್‌ರೂಮನ್ನು ಇನ್ನೂ ಅಟ್ರಾಕ್ಟಿವ್ ‌ಮಾಡುತ್ತದೆ.

ಮಿರರ್‌ : ಬೆಡ್‌ ರೂಮನ್ನು ನೀವು ಕೊಂಚ ಮಾಡರ್ನ್‌ ಅಥವಾ ಕ್ರಿಯೇಟಿವ್ ‌ಮಾಡಲಿಚ್ಛಿಸಿದರೆ ಸಾಕಷ್ಟು ದೊಡ್ಡದಿರುವ ಮಿರರ್‌ನ  ಡ್ರೆಸ್ಸಿಂಗ್‌ ಟೇಬಲ್ ಆರಿಸಿಕೊಳ್ಳಿ. ಈಗ ಹೇಗೂ ಇಂತಹ ಡ್ರೆಸ್ಸಿಂಗ್‌ ಟೇಬಲ್‌ನ ಟ್ರೆಂಡ್‌ ಇದೆ. ಇದರಿಂದ ನಿಮ್ಮ ಬೆಡ್‌ ರೂಮ್ ದೊಡ್ಡದಾಗಿ ಅಟ್ರ್ಯಾಕ್ಟಿವ್ ‌ಆಗಿ ಕಾಣಿಸುತ್ತದೆ. ನಿಮ್ಮ ಬೆಡ್‌ ರೂಮ್ ನಲ್ಲಿ ಕಡಿಮೆ ಜಾಗವಿದ್ದರೆ ಮಿರರ್‌ನ್ನು ಗೋಡೆಯ ಮೇಲೂ ಅಳವಡಿಸಬಹುದು. ಜೊತೆಗೆ ಡ್ರಾಯರ್ಸ್ ಮಾಡಿಸಿ ಡ್ರೆಸಿಂಗ್‌ ಟೇಬಲ್ ಲುಕ್‌ ಕೊಡಬಹುದು. ಮಿರರ್‌ ಕೂಡ ಚಾಲನೆಯಲ್ಲಿದ್ದು, ಅದರಿಂದ ನಿಮ್ಮ ಸಂಪೂರ್ಣ ಲುಕ್‌ ನೋಡಿಕೊಳ್ಳಬಹುದು.

ಇಡುವ ಜಾಗ

ಡ್ರೆಸ್ಸಿಂಗ್‌ ಟೇಬಲ್ ಇಡುವ ಜಾಗದ ಬಗ್ಗೆ ಗೊಂದಲವಿದೆ. ಡ್ರೆಸ್ಸಿಂಗ್‌ ಟೇಬಲ್‌ನ್ನು ಹೆಚ್ಚಾಗಿ ಬೆಡ್‌ನೊಂದಿಗೆ ಇಡಲಾಗುತ್ತದೆ. ಆದರೆ ಅದಕ್ಕೆ ಜಾಗ ಬೇಕು. ನಿಮ್ಮ ರೂಮಿನಲ್ಲಿ ಕಿಟಕಿ ಇದ್ದು ಡ್ರೆಸ್ಸಿಂಗ್‌ ಟೇಬಲ್‌ಗೆ ಜಾಗವಿದ್ದರೆ ಅಲ್ಲೂ ಇಡಬಹುದು. ಅಲ್ಲಿ ನೇರವಾಗಿ ಪ್ರಾಕೃತಿಕ ಬೆಳಕು ಬರುವುದರಿಂದ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಬಹುದು. ಇಲ್ಲದಿದ್ದರೆ ಖಾಲಿ ಜಾಗವಿರುವ ಗೋಡೆಯಲ್ಲಿ ಬೆಳಕಿನ ವ್ಯವಸ್ಥೆ ಚೆನ್ನಾಗಿ ಮಾಡಿಕೊಂಡು ಅಲ್ಲಿ ಡ್ರೆಸಿಂಗ್‌ ಟೇಬಲ್ ಇಟ್ಟು ಗೋಡೆಗೆ ಅಟ್ರ್ಯಾಕ್ಟಿವ್ ‌ಲುಕ್ ಕೊಡಬಹುದು.

ಕುರ್ಚಿಯೊಂದಿಗೆ ಡ್ರೆಸ್ಸಿಂಗ್ಟೇಬಲ್

ಇಂದು ಮಾರುಕಟ್ಟೆಯಲ್ಲಿ ಕುರ್ಚಿಯಿಲ್ಲದ ಡ್ರೆಸ್ಸಿಂಗ್‌ ಟೇಬಲ್ ಲಭ್ಯವಿದೆ. ಆದರೆ ಕುರ್ಚಿೂಂದಿಗೆ ಡ್ರೆಸ್ಸಿಂಗ್‌ ಟೇಬಲ್ ಇದ್ದರೆ ಚೆನ್ನಾಗಿರುತ್ತದೆ. ಕುರ್ಚಿಗಳಲ್ಲಿ ಅನೇಕ ವಿಧಗಳಿವೆ. ಒಂದು ಸ್ಟೂಲ್ ಅಥವಾ ಕುಶನ್‌ನೊಂದಿಗೂ ಇರಬಹುದು. ನಿಮಗೆ ಭವ್ಯ ಲುಕ್ ಬೇಕಾಗಿದ್ದರೆ ದೊಡ್ಡ ಡ್ರೆಸ್ಸಿಂಗ್‌ ಟೇಬಲ್‌ನೊಂದಿಗೆ ಒಂದು ಭಾರಿಯಾದ ಕುರ್ಚಿ ಖರೀದಿಸಬಹುದು.

ಡೆಕೋರೇಶನ್‌ ಡ್ರೆಸ್ಸಿಂಗ್‌ ಟೇಬಲ್‌ನ್ನು ಅಟ್ರ್ಯಾಕ್ಟಿವ್ ಮಾಡಲು ಅದರ ಮೇಲೆ ಸುಂದರವಾದ ಜ್ಯೂವೆಲರಿ ಬಾಕ್ಸ್ ಅಥವಾ ಜ್ಯೂವೆಲರಿ ಸ್ಟ್ಯಾಂಡ್‌ ಇಡಿಸಿ. ಪರ್ಲ್ ಅಥವಾ ಆ್ಯಂಟಿಕ್‌ ಜ್ಯೂವೆಲರಿ ಇಟ್ಟೂ ಅದನ್ನು ಅಲಂಕರಿಸಬಹುದು. ಕಾಸ್ಮೆಟಿಕ್ಸ್ ಇಟ್ಟೂ ಅದನ್ನು ಅಟ್ರ್ಯಾಕ್ಟಿವ್ ‌ಮಾಡಬಹುದು.

ಬೆಡ್ರೂಮ್ ಲುಕ್

ನಿಮ್ಮ ಬೆಡ್‌ ರೂಮ್ ಲುಕ್‌ ಟ್ರೆಡಿಷನಲ್ ಆಗಿದೆಯೇ ಇಲ್ಲ ಮಾಡರ್ನ್‌ ಆಗಿದೆಯೇ ಎಂದು ನೋಡುವುದು ಅಗತ್ಯ. ಅದಕ್ಕೆ ತಕ್ಕಂತೆಯೇ ಡ್ರೆಸ್ಸಿಂಗ್‌ ಟೇಬಲ್ ಖರೀದಿಸಿ. ಏಕೆಂದರೆ ಬೇರೆ ಫರ್ನೀಚರ್‌ ಉಪಯೋಗಿಸುವುದರಿಂದ ಬೆಡ್‌ ರೂಮಿನ ಲುಕ್ ಹಾಳಾಗುತ್ತದೆ.

ಪಿ. ವಸುಂಧರಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ