ಹಾಯಿಸೋಣ…..

ಈಗ ಫ್ಯಾಷನ್ನಿನ ಯುಗ. ಈಗ ಎಲ್ಲರೂ ಹೊಸ ಸ್ಟೈಲ್ ‌ತಮ್ಮದಾಗಿಸಿಕೊಂಡು ಹೆಚ್ಚು ಸುಂದರವಾಗಿ ಹಾಗೂ ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳಲು ಸ್ಪರ್ಧಿಸುತ್ತಿದ್ದಾರೆ. ಅದಕ್ಕೆ ಹೊಸ ಫ್ಯಾಷನ್‌ ತನ್ನ ಹೊಸ ರೂಪ ತೋರಿಸುತ್ತಿದೆ. ಟ್ರೆಡಿಶನಲ್ ಫ್ಯಾಷನ್ ಪಾರಂಪರಿಕ ಉಡುಪುಗಳ ಮೂಲರೂಪವನ್ನು ಇಟ್ಟುಕೊಂಡು ಅವುಗಳಲ್ಲಿ ಕೆಲವು ಹೊಸ ಪ್ರಯೋಗಗಳನ್ನು ಮಾಡುತ್ತಿದೆ. ಸೀರೆ ಹಾಗೂ ಸಲ್ವಾರ್‌ ಸೂಟ್‌ ನಮ್ಮ ಪಾರಂಪರಿಕ ಉಡುಪುಗಳಾಗಿವೆ. ಆದರೆ ಇಂದು ಫ್ಯಾಷನ್‌ ಲೋಕದಲ್ಲಿ ಈ ಉಡುಪುಗಳಲ್ಲಿ ಹೊಸ ಹೊಸ ಬದಲಾವಣೆ ತಂದು ಅವನ್ನು ನ್ಯೂ ಫ್ಯಾಷನ್‌ ರೂಪದಲ್ಲಿ ಪ್ರಸ್ತುತಪಡಿಸಲಾಗುತ್ತಿದೆ.

ಆದರೆ ಪಾಶ್ಚಿಮಾತ್ಯ ಉಡುಪುಗಳಲ್ಲಿ ಯಾವುದೇ ವಿಶೇಷ ಬದಲಾವಣೆಗಳು ಕಾಣುವುದಿಲ್ಲ. ಅಲ್ಲಿನ ಜೀನ್ಸ್ ಟಾಪ್‌, ತ್ರೀ ಫೋರ್ಥ್‌, ಮಿಡಿ, ಫ್ರಾಕ್‌, ಮ್ಯಾಕ್ಸಿ, ಫುಲ್ ಪ್ಯಾಂಟ್‌, ಹಾಫ್‌ ಪ್ಯಾಂಟ್‌ ಇವೆಲ್ಲ ಉಡುಪುಗಳು ಹಿಂದಿನ ಕಾಲದಿಂದ ಇಂದಿನವರೆಗೂ ಚಾಲನೆಯಲ್ಲಿವೆ. ಆದರೆ ವ್ಯತ್ಯಾಸವೆಂದರೆ ಈ ಉಡುಪುಗಳಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು ಅವಕ್ಕೆ ಹೊಸ ಲುಕ್ ಕೊಡಲಾಗುತ್ತದೆ. 70ರ ದಶಕದಲ್ಲಿ ಬೆಲ್ ‌ಬಾಟಮ್ ಪ್ಯಾಂಟು ಹಾಗೂ ಜೀನ್ಸ್ ನ್ನು ಧರಿಸುತ್ತಿದ್ದರು. 80 ರಿಂದ 90ರವರೆಗಿನ ದಶಕದಲ್ಲಿ ಈ ಪ್ಯಾಂಟ್‌ಗಳಲ್ಲಿ ಬದಲಾವಣೆ ಬಂದಿತು. ಅವುಗಳ ಬಾಟಮ್ ಚಿಕ್ಕದಾಯಿತು. 90 ರಿಂದ 2000ರವರೆಗಿನ ದಶಕದಲ್ಲಿ ಇವುಗಳಲ್ಲಿ ಮತ್ತೆ ಬದಲಾವಣೆ ಬಂದಿತು ಮತ್ತು ಹಳೆಯ ಬೆಲ್ ಬಾಟಮ್ ಪ್ಯಾಂಟ್‌ಗಳ ಕಾಲ ಬಂದಿತು. ಆದರೆ 2010 ಬರುತ್ತವೆ ಮತ್ತೆ ಬಾಟಮ್ ಚಿಕ್ಕದಾಯಿತು. ಶರೀರದಲ್ಲಿ ಫಿಟ್‌ ಆಗುವ ಚಿಕ್ಕ ಬಾಟಮ್ ನ ಪ್ಯಾಂಟ್‌ಗಳ ಸುರಿಮಳೆ ಶುರುವಾಯಿತು. ಈಗಲೂ ಫಿಟ್‌ ಆಗಿದ್ದು ಬಾಡಿಶೇಪ್‌ ತೋರಿಸುವ ಪ್ಯಾಂಟ್‌ಗಳ ಫ್ಯಾಷನ್‌ ಇದೆ. ಟೀಶರ್ಟ್‌ ಮತ್ತು ಟಾಪ್ಸ್ ಬಗ್ಗೆ ಹೇಳುವುದಾದರೆ ಅವುಗಳ ಡಿಸೈನ್‌ ಮತ್ತು ಪ್ಯಾಟರ್ನ್‌ ಬದಲಿಸಿ ಅವಕ್ಕೆ ನ್ಯೂ ಫ್ಯಾಷನ್‌ ಎಂದು ಕರೆಯಲಾಗುತ್ತದೆ. ಬದಲಾದ ಸಮಯದೊಂದಿಗೆ 2015ರ ಫ್ಯಾಷನ್‌ನಲ್ಲಿ ಯಾವ ಯಾವ ಬದಲಾವಣೆಗಳು ಆಗಿವೆಯೆಂದು ತಿಳಿಯೋಣ ಬನ್ನಿ.

ಉಡುಪುಗಳು

ಪಾರಂಪರಿಕ ಉಡುಪುಗಳನ್ನು ನೋಡುವಾಗ ಸಲ್ವಾರ್‌ ಸೂಟ್‌ನಲ್ಲಿ ಸಡಿಲವಾದ ಮತ್ತು ಲಾಂಗ್‌ ಅನಾರ್ಕಲಿ ಡ್ರೆಸ್‌ನ ಫ್ಯಾಷನ್ ಚಾಲನೆಯಲ್ಲಿದೆ. ಸೂಟ್‌ ಆದರೂ ಇದರಲ್ಲಿ ಬ್ಲೌಸ್‌ನಂತೆ ಹಿಂದೆ ಡೀಪ್‌ ನೆಕ್‌ ಇರುತ್ತದೆ. ಕುಚ್ಚು ಸಿಕ್ಕಿಸಿ ಇನ್ನಷ್ಟು ಸುಂದರಗೊಳಿಸಬಹುದು. ಸ್ಲೀವ್ ಲೆ‌ಸ್‌, ಹಾಫ್‌ ಸ್ಲೀವ್‌, ಮೆಗಾ ಸ್ಲೀವ್‌, ತ್ರೀ ಫೋರ್ಥ್‌ ಮತ್ತು ಫುಲ್ ಸ್ಲೀವ್ ‌ಗಳನ್ನು ಅವರವರ ಇಚ್ಛೆಗೆ ತಕ್ಕಂತೆ ಆರಿಸಿಕೊಳ್ಳಬಹುದು. ನೀವು ಉದ್ದವಾಗಿದ್ದರೆ ಎಂಪೈರ್‌ ಅಥವಾ ವೇಸ್ಟ್ ಲೈನ್‌ನ ಕಾಂಟ್ರಾಸ್ಟ್ ಕಲರ್‌ ಇರುವ ಅನಾರ್ಕಲಿ ಧರಿಸಿ. ನಿಮ್ಮ ಎತ್ತರ ಕಡಿಮೆಯಾಗಿದ್ದರೆ. ವೈಟ್‌ ಫ್ಯಾಬ್ರಿಕ್‌ನ ಕಡಿಮೆ ಫ್ಲೇಯರ್ಸ್‌ ಮಂಡಿಯವರೆಗೆ ಅನಾರ್ಕಲಿ ಹೊಲಿಸಿ. ಹೈಟ್‌ ಕಡಿಮೆಯಾಗಿದ್ದರೂ ನೀವು ಹೆಲ್ದಿಯಾಗಿದ್ದರೆ ಅನಾರ್ಕಲಿ ಧರಿಸದಿರುವುದೇ ಒಳ್ಳೆಯದು. ಅದನ್ನು ಧರಿಸಲೇಬೇಕೆಂದಿದ್ದರೆ ಸಿಂಪಲ್ ಕಲರ್‌ನಲ್ಲಿ  ಸಿಂಪಲ್ ಡಿಸೈನ್‌ನ ಫ್ಲೇಯರ್‌ ಮತ್ತು ಕಡಿಮೆ ಮೊಗ್ಗುಗಳನ್ನು ಮಾಡಿಸಿ. ತೆಳ್ಳಗಿನ ಹುಡುಗಿಯರಿಗೆ ಅನಾರ್ಕಲಿ ಪರ್ಫೆಕ್ಟ್ ಆಗಿರುತ್ತದೆ. ದಪ್ಪ ಹುಡುಗಿಯರು ಶರೀರದ ಅಪ್ಪರ್‌ ಪಾರ್ಟ್‌ನಿಂದ ಶುರುವಾಗುವ ಅರ್ನಾಕಲಿ ಆಯ್ದುಕೊಳ್ಳಬೇಕು.

ಸಲ್ವಾರ್‌ ಸೂಟ್‌ನಲ್ಲಿ ಸಡಿಲವಾದ ಪಟಿಯಾಲಾ ಅಥವಾ ಸಡಿಲವಾದ ಸಿಂಪ್‌ ಸಲ್ವಾರ್‌ ಚಾಲನೆಯಲ್ಲಿದೆ. ಅಲ್ಲಿಯೇ ಚೂಡಿದಾರ್‌ಹಾಗೂ ಲೆಗಿಂಗ್ಸ್ ಗಳನ್ನೂ ಕುರ್ತಾದೊಂದಿಗೆ ಧರಿಸಬಹುದು. ಕುರ್ತಾದ ಮೇಲೆ ಸ್ಲೀವ್ ಲೆ‌ಸ್‌ ಜಾಕೆಟ್‌ ಧರಿಸುವ ಫ್ಯಾಷನ್‌ ಮತ್ತೆ ಬಂದಿದೆ, ಮತ್ತು ಕುರ್ತಾಗಳಲ್ಲಿ ಶಾರ್ಟ್‌ ಮತ್ತು ಮೊಣಕಾಲು ಉದ್ದದ ಕುರ್ತಾಗಳ ಫ್ಯಾಷನ್‌ ಇದೆ. ಸೀರೆಗಳಲ್ಲಿ ಈಗೀಗ ಸುತ್ತಲೂ ಕಲರ್‌ ಫುಲ್ ಎಂಬ್ರಾಯಿಡರಿ ಅಥವಾ ರೇಷ್ಮೆ ಬಟ್ಟೆಯ ಬಾರ್ಡರ್‌ ಇರುತ್ತದೆ. ಬ್ಲೌಸ್‌ಗಳಲ್ಲಿ ಹಿಂದುಗಡೆ ಡೀಪ್‌ ನೆಕ್‌ನ ಫ್ಯಾಷನ್‌ ಇದೆ. ಡೀಪ್‌ ನೆಕ್‌ ಕಾರಣದಿಂದಾಗಿ ಬ್ರಾ ಧರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಬ್ಲೌಸ್‌ಗಳನ್ನು ಹೊಲಿಸುವಾಗ ಪ್ಯಾಡೆಡ್‌ ಕಪ್‌ಗಳನ್ನು ಅಳವಡಿಸಲಾಗುತ್ತದೆ. ಆದ್ದರಿಂದ ಬ್ಲೌಸ್‌ ಧರಿಸುವಾಗ ಬ್ರಾದ ಅಗತ್ಯವಿರುವುದಿಲ್ಲ. ಬ್ಲೌಸ್‌ನ ಆಕಾರ ಆಕರ್ಷಕವಾಗಿರುತ್ತದೆ. ಬ್ಲೌಸ್‌ಗಳಲ್ಲಿ ಮತ್ತೊಮ್ಮೆ ಫುಲ್ ಮತ್ತು ತ್ರೀ ಫೋರ್ಥ್‌ ಸ್ಲೀವ್ ಚಾಲನೆಯಲ್ಲಿದೆ.

ಪಾಶ್ಚಿಮಾತ್ಯ ಉಡುಪುಗಳಲ್ಲಿಯೂ ಮತ್ತೆ ಪ್ಲಾಜೋ ಪ್ಯಾಂಟ್ಸ್ ಮತ್ತು ಫುಲ್ ಅಂಡ್‌ ಹಾಫ್‌ ಜಂಪ್‌ ಸೂಟ್‌ನ ಫ್ಯಾಷನ್‌ ಬಂದಿದೆ. ಸಡಿಲವಾದ ಲಾಂಗ್‌ ಸ್ಕರ್ಟ್‌ ಮತ್ತು ಟಾಪ್‌, ಫ್ರಾಕ್ಸ್, ಮ್ಯಾಕ್ಸಿ, ಶಾರ್ಟ್‌ ಸ್ಕರ್ಟ್‌ ಟಾಪ್‌ ಮತ್ತು ಜೀನ್ಸ್ ಟಾಪ್‌ ಇಂದಿಗೂ ಫ್ಯಾಷನ್‌ನಲ್ಲಿದೆ. ಟಾಪ್ಸ್ನ ಪ್ಯಾಟರ್ನ್‌ ಮತ್ತು ಡಿಸೈನ್‌ನಲ್ಲಿ ಬೇರೆ ಬೇರೆ ಬದಲಾವಣೆ ಮಾಡಿ ಅವಕ್ಕೆ ಹೊಸ ಫ್ಯಾಷನ್‌ನ ರೂಪ ಕೊಡಲಾಗಿದೆ. ಫಿಟಿಂಗ್‌ ಇರುವ ಟಾಪ್ಸ್ ನೊಂದಿಗೆ ಕುತ್ತಿಗೆಯಲ್ಲಿ ಸ್ಕಾರ್ಫ್‌ ಅಥವಾ ಸ್ಟೋಲ್ ‌ಧರಿಸುವುದು ಇಂದಿಗೂ ಫ್ಯಾಷನ್‌ನಲ್ಲಿದೆ.

ಆ್ಯಕ್ಸೆಸರೀಸ್

ಆ್ಯಕ್ಸೆಸರೀಸ್‌ನಲ್ಲಿ ಒಡವೆಗಳ ಬಗ್ಗೆ ಹೇಳುವುದಾದರೆ, ನಿಮ್ಮ ಉಡುಪು ಪಾರಂಪರಿಕವಾಗಿದ್ದರೆ ಸೀರೆ ಮತ್ತು ಲಂಗದ ಮೇಲೆ ಮುತ್ತು ಅಥವಾ ಸ್ಟೋನ್‌ನ್ನು ಕುತ್ತಿಗೆಗೆ ಸಿಕ್ಕಿಸಿ ಧರಿಸುವ ನೆಕ್ಲೇಸ್‌ ಅಥವಾ ಅದೇ ತರದ ಉದ್ದದ ಹೊಕ್ಕಳಿನವರೆಗೆ ತಲುಪುವ ಮಹಾರಾಣಿ ಸರ ಧರಿಸಬಹುದು. ಸಲ್ವಾರ್‌ ಸೂಟಿನ ಮೇಲೆ ನಿಮಗೆ ಇಷ್ಟವಾದಂತೆ ಸಣ್ಣ, ದೊಡ್ಡ ಹಾಗೂ ಮೀಡಿಯಂ ಸೈಜ್‌ನ ಪೆಂಡೆಂಟ್‌ ಚೇನ್‌ ಅಥವಾ ಬೇರೆ ಯಾವುದಾದರೂ ನೆಕ್ಲೇಸ್‌ನೊಂದಿಗೆ ಧರಿಸಬಹುದು. ಪಾಶ್ಚಿಮಾತ್ಯ ಉಡುಪುಗಳ ಮೇಲೆ ಬಣ್ಣಬಣ್ಣದ  ಮುತ್ತುಗಳುಳ್ಳ ಉದ್ದವಾದ ನೆಕ್ಲೇಸ್‌, ಮೆಟಲ್, ಸಿಲ್ವರ್‌ ಅಥವಾ ಗೋಲ್ಡನ್‌ ಚೇನ್‌ ಕೂಡ ಧರಿಸಬಹುದು. ವಿಧವಿಧವಾದ, ಬಣ್ಣ ಬಣ್ಣದ ಅಥವಾ ವಿಭಿನ್ನ ಬಣ್ಣಗಳ ಮುತ್ತುಗಳು ಅಥವಾ ಚೇನ್‌ ಇರುವ ನೆಕ್ಲೇಸ್‌ ಮತ್ತು ಬ್ಯಾಂಗಲ್ಸ್ ಕೂಡ ಮಾರುಕಟ್ಟೆಯಲ್ಲಿ ಸಿಗುತ್ತದೆ. ನಿಮ್ಮ ಉಡುಪಿನೊಂದಿಗೆ ಮ್ಯಾಚ್‌ ಆಗುವ ದಪ್ಪನೆಯ ಅಥವಾ ಸಣ್ಣ ಪ್ಲಾಸ್ಟಿಕ್‌ ಅಥವಾ ಮೆಟಲ್ ನ ಬಿರುಸಾದ ಬಣ್ಣ ಬಣ್ಣದ ರೇಷ್ಮೆ ಎಳೆಯಲ್ಲಿ ನೇಯ್ದ ಬ್ಯಾಂಗಲ್ಸ್ ಮತ್ತು ದಪ್ಪನಾದ ಬ್ರೇಸ್‌ಲೆಟ್‌ ಕೂಡ ಧರಿಸಬಹುದು.

ಗಡಿಯಾರಗಳು

ಗಡಿಯಾರಗಳಲ್ಲಿ ಈಗ ಮಾರುಕಟ್ಟೆಯಲ್ಲಿ ಟೈಟನ್‌, ಟೈಮೆಕ್ಸ್, ಸೊನಾಟಾ, ಫೌಸೀಲ್‌,  ಫಾಸ್‌್ಟ ಟ್ರಾಕ್‌ ಇತ್ಯಾದಿ ಬ್ರ್ಯಾಂಡೆಡ್‌ ಕಂಪನಿಗಳ ಹೊಸ ಡಿಸೈನ್‌ಗಳ ದಪ್ಪ, ಸಣ್ಣ ಬ್ಯಾಂಗಲ್ ಮತ್ತು ಬ್ರೇಸ್‌ಲೆಟ್‌ ಟೈಪ್‌ನ ಗಡಿಯಾರಗಳ ರೇಂಜ್‌ನೋಡಬಹುದು.

ಫುಟ್‌ವೇರ್‌ ಚಪ್ಪಲಿ, ಶೂಗಳಲ್ಲಿ  ಈಗ ಮತ್ತೊಮ್ಮೆ ಶೂಸ್‌ನ ಫ್ಯಾಷನ್‌ ಬಂದಿದೆ. ಶೂಸ್‌ನ್ನು ಪಾಶ್ಚಿಮಾತ್ಯ ಡ್ರೆಸ್‌ನೊಂದಿಗೆ ಧರಿಸಬಹುದು. ಜೊತೆಗೆ ಸಲ್ವಾರ್‌ ಸೂಟ್‌ ಇತ್ಯಾದಿ ಪಾರಂಪರಿಕ ಉಡುಪುಗಳೊಂದಿಗೂ ಧರಿಸಬಹುದು. ನಿಮ್ಮ ಉಡುಪಿಗೆ ತಕ್ಕಂತೆ ಪ್ಯೂಮಾ, ರೀಬಾಕ್‌, ಮೆಟ್ರೋ, ಅಡಿಡಾಸ್‌, ನೈಕ್‌ ಇತ್ಯಾದಿ ಬ್ರ್ಯಾಂಡೆಡ್‌ ಕಂಪನಿಗಳ ಚಪ್ಪಲಿ, ಶೂ, ಸ್ಯಾಂಡಲ್ಸ್ ಫ್ಲಿಪ್‌ಫ್ಲಾಪ್‌ ಅಥವಾ ತೆಳುವಾದ ಚಪ್ಪಲಿಗಳು ಮತ್ತು ಸ್ಯಾಂಡಲ್ಸ್ ಧರಿಸಬಹುದು. ಹೈಹೀಲ್ಡ್ ಶೂಸ್‌ ಹಾಗೂ ಸ್ಯಾಂಡಲ್ಸ್ ಇಂದಿಗೂ ಚಾಲನೆಯಲ್ಲಿದೆ.

ಬ್ಯಾಗ್ಸ್

ಬೇರೆ ಬೇರೆ ಡಿಸೈನ್ಸ್ ಮತ್ತು ಬಣ್ಣಗಳ ದೊಡ್ಡ ಸೈಜಿನ ಆಫೀಸ್‌ ಮತ್ತು ಕಾಲೇಜ್‌ ಬ್ಯಾಗ್ಸ್, ಶೋಲ್ಡರ್‌ ಬ್ಯಾಗ್ಸ್, ವೆಡಿಂಗ್‌ ಬ್ಯಾಗ್ಸ್, ಕ್ಲಚೆಸ್‌ ಪರ್ಸ್‌ಗಳು ಇತ್ಯಾದಿಗಳ ಹೊಸ ರೇಂಜ್‌ ಮಾರುಕಟ್ಟೆಗೆ ಬಂದಿದೆ. ನಿಮ್ಮ ಡ್ರೆಸ್‌ ಕೋಡ್‌ಗೆ ಸೂಟ್‌ ಆಗುವ ಬ್ಯಾಗ್‌ನ್ನು ಆರಿಸಿಕೊಳ್ಳಬಹುದು.

ಕೂದಲು

ಮತ್ತೊಮ್ಮೆ ಉದ್ದ ಕೂದಲಿನ ಫ್ಯಾಷನ್‌ ಬಂದಿದೆ. ಸ್ಟ್ರೇಟನಿಂಗ್‌ ಸ್ವಲ್ಪ ಚಾಲನೆಯಲ್ಲಿದ್ದರೂ ಇಂದು ಹೆಚ್ಚಿನ ಹುಡುಗಿಯರು ಸ್ಚ್ರೇಟನಿಂಗ್‌ ಮಾಡದೆ ಉದ್ದ ಕೂದಲನ್ನು ಇಟ್ಟುಕೊಳ್ಳುತ್ತಿದ್ದಾರೆ. ಮುಂದಿನಿಂದ ಕೂದಲಿನಲ್ಲಿ ಫ್ಲಿಕ್ಸ್ ಅಥವಾ ಕೂದಲಿನ ಲೇಯರ್‌ಕೂಡ ಫ್ಯಾಷನ್‌ನಲ್ಲಿದೆ.

ಜಿ. ಪ್ರಿಯಂವದಾ

ಗ್ಲಾಮರ್‌ ಹುಡುಗಿಯರು ಇಂದು ತಮ್ಮ ತ್ವಚೆಯ ಬಗ್ಗೆ ಎಷ್ಟು ಜಾಗರೂಕರಾಗಿದ್ದಾರೋ ಫ್ಯಾಷನ್‌ ಬಗ್ಗೆಯೂ ಅಷ್ಟೇ ಜಾಗರೂಕರಾಗಿದ್ದಾರೆ. ಆದರೂ ಅವರ ಪ್ರಪಂಚ ಮನೆಯಿಂದ ಆಫೀಸಿಗೆ ಅಥವಾ ಕಾಲೇಜಿಗೆ ಸೀಮಿತವಾಗಿದೆ. ಹೀಗಿರುವಾಗ ಅವರಿಗೆ ಫ್ಯಾಷನ್‌ನಲ್ಲಿ ಹೊಸದೇನು ಬಂದಿದೆ ಎಂದು ತಿಳಿಯುವುದೇ ಇಲ್ಲ. ಹೊಸ ಫ್ಯಾಷನ್‌ ಬಗ್ಗೆ ತಿಳಿದುಕೊಳ್ಳಲು ಅವರು ಈ ವಿಷಯಗಳ ಬಗ್ಗೆ ಗಮನಿಸಬೇಕು.

ಪತ್ರಿಕೆಗಳನ್ನು ಓದಬೇಕು. ಅವುಗಳಲ್ಲಿ ಫ್ಯಾಷನ್‌ ಲೋಕಕ್ಕೆ ಸಂಬಂಧಿಸಿದ ಹೊಸ ಹೊಸ ವಿಷಯಗಳು ಸಿಗುತ್ತವೆ.

ಟಿ.ವಿ. ಸೀರಿಯಲ್ ಗಳು ಮತ್ತು ಫಿಲ್ಮ್ ಗಳಲ್ಲಿ ಹೊಸ ಫ್ಯಾಷನ್ನಿನ ಪಾರಂಪರಿಕ ಹಾಗೂ ಪಾಶ್ಚಿಮಾತ್ಯ ಉಡುಪುಗಳು ಮತ್ತು ಹೊಸ ಹೇರ್‌ ಸ್ಟೈಲ್‌ಗಳು ನೋಡಲು ಸಿಗುತ್ತವೆ.

ಪಾರ್ಕ್‌ನಲ್ಲಿ ಸುತ್ತಾಡುವ ಜೊತೆ ಜೊತೆಗೆ ವಾರದಲ್ಲಿ 3 ದಿನ ಮಾರುಕಟ್ಟೆಯಲ್ಲಿ ಸುತ್ತಾಡಿ. ಅಲ್ಲಿ ಫ್ಯಾಷನ್‌ನಲ್ಲಿ ಬಂದ ಹೊಸ ವಸ್ತುಗಳ ಬಗ್ಗೆ ತಿಳಿಯುತ್ತದೆ.

ಬಾಲಿವುಡ್‌ಗೆ ಸಂಬಂಧಿಸಿದ ಪತ್ರಿಕೆಗಳನ್ನು ಓದಿ ಇಲ್ಲವೇ ಟಿವಿಯಲ್ಲಿ ನೋಡಿ. ಅದರಿಂದಲೂ ನಿಮಗೆ ಹೊಸ ಫ್ಯಾಷನ್‌ಗೆ ಸಂಬಂಧಿಸಿದ ಅನೇಕ ಮಾಹಿತಿಗಳು ತಿಳಿಯುತ್ತವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ