ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಕಂಪನಿಗಳ ಏರ್‌ ಕಂಡೀಶನರ್‌ಗಳು ನೋಡಲು ದೊರೆಯುತ್ತವೆ. ಆದರೆ ಬಗೆಬಗೆಯ ಏರ್‌ ಕಂಡೀಶನರ್‌ಗಳ ಕಾರಣದಿಂದ ಯಾವುದನ್ನು ಆಯ್ಕೆ ಮಾಡಬೇಕೆಂಬ ಗೊಂದಲ ಕಾಡುತ್ತದೆ.

ನೀವು ನಿಮ್ಮ ಅಗತ್ಯಕ್ಕನುಗುಣವಾಗಿ ಉಪಯುಕ್ತ ಏರ್‌ ಕಂಡೀಶನರ್‌ನ್ನು ಹೇಗೆ ಆಯ್ದುಕೊಳ್ಳಬೇಕೆಂದು ತಿಳಿದುಕೊಳ್ಳಲು ಇಲ್ಲಿ ನಿಮಗಾಗಿ ಕೆಲವು ಉಪಯುಕ್ತ ಕಿವಿಮಾತುಗಳನ್ನು ಕೊಡಲಾಗಿದೆ.

ಸಮರ್ಪಕ ಏರ್‌ ಕಂಡೀಶನರ್‌ ಆಯ್ಕೆ ಮಾಡುವ ಸಮಯದಲ್ಲಿ ಎಲ್ಲಕ್ಕೂ ಮುಂಚೆ ಯಾವ ತೆರನಾದ ಸಿಸ್ಟಂ ಸರಿಯಾಗಿರುತ್ತದೆ ಎನ್ನುವುದರ ಬಗ್ಗೆ ವಿಚಾರ ಮಾಡಬೇಕು. ಮಾರುಕಟ್ಟೆಯಲ್ಲಿ ಪ್ರಸ್ತುತ ಯಾವ ಬಗೆಯ ಏರ್‌ ಕಂಡೀಶನರ್‌ಗಳು ಲಭ್ಯವಿವೆ ಎನ್ನುವುದರ ಮೇಲೊಂದು ಕಣ್ಣೋಟ :

ವಿಂಡೋ ಏರ್ಕಂಡೀಶನರ್

ಕೋಣೆಯಲ್ಲಿ ಬಳಸಲು ಇದು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಇದರ ಕಂಪ್ರೆಸರ್‌, ಕಂಡೆನ್ಸರ್‌, ಕಾಯಿಲ್‌, ಎವಾಪರೇಟರ್‌ ಮತ್ತು ಕೂಲಿಂಗ್‌ ಕಾಯಿಲ್ ‌ಇವೆಲ್ಲ ಒಂದೇ ಬಾಕ್ಸ್ ನಲ್ಲಿ ಇರುತ್ತವೆ. ಈ ಯೂನಿಟ್‌ನ್ನು ಗೋಡೆಗೆ ಅಳವಡಿಸಿದ ಕ್ಯಾಂಪ್‌ಗಳಲ್ಲಿ ಕೂರಿಸಲಾಗುತ್ತದೆ. ಇಲ್ಲವೇ ಕಿಟಕಿಯಲ್ಲಿಯೇ ಅಳವಡಿಸಲಾಗುತ್ತದೆ. ವಿಂಡೊ ಏಸಿಯನ್ನು ಅಳವಡಿಸುವುದು ಹಾಗೂ ಅದನ್ನು ಮತ್ತೊಂದು ಕಡೆಗೆ ಸಾಗಿಸುವುದು ತುಂಬಾ ಸುಲಭ.

ಹೈವಾಲ್ ಸ್ಲಿಟ್ಏರ್ಕಂಡೀಶನರ್

ಸ್ಲಿಟ್‌ ಏರ್‌ ಕಂಡೀಶನರ್‌ನಲ್ಲಿ 2 ಭಾಗಗಳಿರುತ್ತವೆ. ಔಟ್‌ ಡೋರ್‌ ಯೂನಿಟ್‌ ಮತ್ತು ಇನ್‌ ಡೋರ್‌ ಯೂನಿಟ್‌. ಔಟ್‌ ಡೋರ್ ಯೂನಿಟ್‌ನ್ನು ಕೋಣೆ ಅಥವಾ ಮನೆಯ ಹೊರಗಡೆ ಅಳವಡಿಸಲಾಗುತ್ತದೆ. ಇದರಲ್ಲಿ ಕಂಪ್ರೆಸರ್‌, ಕಂಡೆನ್ಸರ್‌ ಮತ್ತು ಎಕ್ಸಾಸ್ ಪ್ಯಾನ್ಶನ್ ವಾಲ್ ‌ಇರುತ್ತವೆ.

ಇನ್‌ ಡೋರ್‌ ಯೂನಿಟ್‌ನಲ್ಲಿ ಕೂಲಿಂಗ್‌ ಕಾಯಿಲ್ ‌ಮತ್ತು ಕೂಲಿಂಗ್‌ ಪ್ಯಾನ್‌ ಇರುತ್ತದೆ. ಈ ಯೂನಿಟ್‌ಗಾಗಿ ನೀವು ಗೋಡೆಯಲ್ಲಿ ಯಾವುದೇ ಕ್ಯಾಂಪ್‌ ಅಳವಡಿಸುವ ಅಗತ್ಯವಿಲ್ಲ ಹಾಗೂ ಇದನ್ನು ಯಾವುದೇ ಗೋಡೆಯ ಮೇಲೆ ಫಿಟ್ ಮಾಡಬಹುದಾಗಿದೆ.

ವಿಂಡೋ ಯೂನಿಟ್‌ನಿಂದ ಪ್ರತ್ಯೇಕವಾಗಿ ಇದನ್ನು ಖಾಯಂ ಆಗಿ ಅಳವಡಿಸಲಾಗುತ್ತದೆ. ಇದರ ಆರಂಭಿಕ ವೆಚ್ಚ ಹೆಚ್ಚಾಗಿರುತ್ತದೆ. ಏಕೆಂದರೆ ಇದನ್ನು ಫಿಟ್‌ ಮಾಡುವ ಕೆಲಸ ಬಹಳ ಜಟಿಲವಾಗಿರುತ್ತದೆ. ಅದರ ಬಗ್ಗೆ ವೃತ್ತಿಪರ ಮಾಹಿತಿ ಇರುವುದು ಅತ್ಯವಶ್ಯ. ಒಂದು ವೇಳೆ ನಿಮ್ಮ ಕೋಣೆಯಲ್ಲಿ ಕಿಟಕಿ ಇರದೇ ಇದ್ದರೆ ಅದು ಉತ್ತಮ ಪರ್ಯಾಯವಾಗುತ್ತದೆ.

ಸೀಲಿಂಗ್ಕ್ಯಾಸೆಟ್ಏರ್ಕಂಡೀಶನರ್

ಕಿಟಕಿಗಳು ಹಾಗೂ ಗೋಡೆಗಳು ಇರದೇ ಇರುವ ಕಡೆ ಸೀಲಿಂಗ್‌ಗೆ ಇದನ್ನು ಅಳವಡಿಸಲಾಗುತ್ತದೆ. ಇದು ಸದ್ದನ್ನೇನೂ ಮಾಡದು. ಮಲಗುವ ಮುಖ್ಯ ಕೋಣೆ, ಕುಳಿತುಕೊಳ್ಳುವ ಸ್ಥಳ ಮತ್ತು ವಾಣಿಜ್ಯ ಬಳಕೆಗೆ ಉಪಯುಕ್ತವಾದುದಾಗಿರುತ್ತದೆ.

ಫ್ಲೋರ್ಸ್ಟ್ಯಾಂಡಿಂಗ್ಏರ್ಕಂಡೀಶನರ್

ಇದು ದೊಡ್ಡ ಹಾಗೂ ಭವ್ಯ ಮನೆಗಳಿಗೆ ಉಪಯುಕ್ತ. ಇದನ್ನು ಎಲ್ಲಿಬೇಕಾದರೂ ನಿಲ್ಲಿಸಬಹುದು. ಜೊತೆಗೆ ಇದನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಎಲ್ಲಿಗೆ ಬೇಕಾದರೂ ಸುಲಭವಾಗಿ ಒಯ್ಯಬಹುದು. ಆದರೆ ಇದನ್ನು ಕಿಟಕಿಯ ಬಳಿ ಇರಿಸುವುದು ಸೂಕ್ತ. ಏಕೆಂದರೆ ವಿಂಡೋ ಏರ್‌ ಕಂಡೀಶನರ್‌ ನಂತೆಯೇ ಇದರ ಎಗ್ಸಾಸ್ಟ್ ವ್ಯಾಟ್‌ನ್ನು ಕಿಟಕಿಯ ಬಳಿ ಇರಿಸುವುದು ಸೂಕ್ತವಾದುದಾಗಿರುತ್ತದೆ.

ಇಂದಿನ ದಿನಗಳಲ್ಲಿ ಇನ್ವರ್ಟರ್‌ ಟೆಕ್ನಾಲಜಿಯುಳ್ಳ ಏರ್‌ ಕಂಡೀಶನರ್‌ ಮಾರುಕಟ್ಟೆಯಲ್ಲಿದೆ. ಅದು ಸಾಮಾನ್ಯ ತಾಪಮಾನವನ್ನು ಕಾಯ್ದುಕೊಂಡು ಹೋಗುತ್ತದೆ. ಇನ್ವರ್ಟರ್‌ ಏಸಿಯನ್ನು ನಿರ್ವಹಣೆ ಖರ್ಚು ಮತ್ತು ಅಗತ್ಯಕ್ಕನುಸಾರ ಅತ್ಯುತ್ತಮ ಏರ್ ಕಂಡೀಶನಿಂಗ್‌ನ್ನು ಗಮನದಲ್ಲಿಟ್ಟುಕೊಂಡು. ತಯಾರಿಸಲಾಗಿದೆ. ಪಾರಂಪರಿಕ ಏರ್‌ ಕಂಡೀಶನರ್‌ಗೆ ಹೋಲಿಸಿದಲ್ಲಿ ಇನ್ವರ್ಟರ್ ಏರ್‌ ಕಂಡೀಶನಿಂಗ್‌ನ ಲಾಭಗಳು ಕೆಳಕಂಡಂತಿವೆ.

ಇನ್ವರ್ಟರ್‌ ಏ.ಸಿ.ಯಲ್ಲಿ ಕಡಿಮೆ ವಿದ್ಯುತ್‌ ಖರ್ಚಾಗುತ್ತದೆ. ಇದರಿಂದಾಗಿ ಶೇ.30-40 ರಷ್ಟು ವಿದ್ಯುತ್‌ ಉಳಿತಾಯವಾಗುತ್ತದೆ.

ಇದು ಅತಿ ಹೆಚ್ಚು ವೇಗದಲ್ಲಿ ತನ್ನ ಗುರಿಯ ತಾಪಮಾನ ತಲುಪುತ್ತದೆ.

ಇದನ್ನು ಸ್ಟಾರ್ಟ್‌ ಮಾಡಲು ಶೇ.30ರಷ್ಟು ಕಡಿಮೆ ಸಮಯ ಸಾಕು.

ಇದು ಸದ್ದು ಮಾಡದೆಯೇ ಕಾರ್ಯ ನಿರ್ವಹಿಸುತ್ತದೆ.

ನಿರ್ದಿಷ್ಟ ತಾಪಮಾನದಲ್ಲಿ ಅತಿ ಹೆಚ್ಚು ಆರಾಮದಾಯಕ.

ಕಂಪ್ರೆಸರ್‌/ ಇನ್ವರ್ಟರ್‌ನಲ್ಲಿ  ವೆಂಟಿಲೇಜ್‌ ಪ್ರಮಾಣ ಹೆಚ್ಚುವುದಿಲ್ಲ.

ಕೆಲವು ಇನ್ವರ್ಟರ್‌ ಎಸಿಯಲ್ಲಿ ಹಾಟ್‌ ಪಂಪ್‌ ಅಳವಡಿಸಲಾಗಿರುತ್ತದೆ. ಅದು ಬೇಸಿಗೆಯ ದಿನಗಳಲ್ಲಿ ಸಮರ್ಪಕವಾಗಿ ಕೆಲಸ ಮಾಡುವುದರ ಜೊತೆ ಜೊತೆಗೆ ಬಹಳ ಉಪಯುಕ್ತ ಎನಿಸುತ್ತದೆ.

ಗಾತ್ರ ಮತ್ತು ಸಾಮರ್ಥ್ಯದ ಆಯ್ಕೆ

ತಂಪಾಗುವ ಜಾಗಗಳ ಹೊರತಾಗಿ ಏರ್‌ ಕಂಡೀಶನಿಂಗ್‌ ಸಿಸ್ಟಮ್ ನ ಸೂಕ್ತ ಸಾಮರ್ಥ್ಯ ಅರಿತುಕೊಳ್ಳಲು ಇನ್ನೂ ಅನೇಕ ಕಾರಣಗಳಿವೆ. ಅಗತ್ಯ ಸಾಮರ್ಥ್ಯ ನಿರ್ಧರಿಸಲು ಕೆಳಕಂಡ ಸಂಗತಿಗಳ ಬಗ್ಗೆ ಗಮನಹರಿಸಿ.

ಜಾಗದ ಆಕಾರ.

ಓರಿಯೆಂಟೇಶನ್‌

ಜಾಗ ತಂಪುಗೊಳಿಸುವ ಸ್ಥಳದ ಆಸುಪಾಸು ಮತ್ತು ಮೇಲೆ ಕೆಳಗಿನ ವಿನ್ಯಾಸ

ಗಾಜು ಅಳವಡಿಸಿದ ಸ್ಥಳ

ಗಾಜಿನ ಮೇಲೆ ನೆರಳಿನ ಪ್ರಮಾಣ ಮತ್ತು ಅದರ ಸ್ವರೂಪ.

ಇನ್ಸುಲೇಶನ್‌ ಡೆಕ್‌ನ ಮೇಲೆ/ ಕೆಳಗಿನ ಸ್ಥಿತಿ ಮತ್ತು  ಅದರಲ್ಲಿನ ಸಾಮಗ್ರಿ

ಸ್ಥಳದಲ್ಲಿ ಕಾಪಿಯರ್‌, ಸರ್ವರ್ ಮುಂತಾದ ಉಪಕರಣಗಳ ಉಪಸ್ಥಿತಿ.

ಕಟ್ಟಡ ಕಟ್ಟಲು ಬಳಸಿದ ಸಾಮಗ್ರಿ.

ತಂಪುಗೊಳಿಸುವ ಜಾಗದ ಲೆಕ್ಕಾಚಾರಕ್ಕನುಗುಣವಾಗಿ ಸೂಕ್ತ ಸಾಮರ್ಥ್ಯ ನಿರ್ಧರಿಸಲು ಯಾರಾದರೂ ವೃತ್ತಿಪರರ ಸಲಹೆ ಪಡೆಯಿರಿ.

air-conditioner- (2)

ಇಂಧನ ದಕ್ಷತೆ ಮತ್ತು ಇಂಧನ ಉಳಿತಾಯ

ವಿಂಡೋ ಏ.ಸಿ. ಮತ್ತು ಹೈವಾಲ್ ‌ಯೂನಿಟ್‌ಗಳಿಗೆ ಬೋರ್ಡೆಡ್‌ ಸ್ಟಾರ್‌ ರೇಟಿಂಗ್‌ನ್ನು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. ಏರ್ ಕಂಡೀಶನರ್‌ನ ಕೂಲಿಂಗ್‌ ಸಾಮರ್ಥ್ಯ ಮತ್ತು ವಿದ್ಯುತ್‌ ಬಳಕೆಯ ಅನುಪಾತವನ್ನು ಅಳೆಯಲು ಇಇಆರ್‌ ರೇಟಿಂಗ್‌ ಎಷ್ಟು ಉನ್ನತವಾಗಿರುತ್ತೊ, ಅದರ ದಕ್ಷತೆ ಕೂಡ ಹೆಚ್ಚಾಗಿರುತ್ತದೆ.

ವೈಶಿಷ್ಟ್ಯತೆಗಳು : ಉಪಕರಣಗಳ ಸುಲಭ ಬಳಕೆಗಾಗಿ ರಿಮೋಟ್‌ ಕಂಟ್ರೋಲ್‌, ಎಲ್ಸಿಡಿ ಡಿಸ್‌ಪ್ಲೇ ಮತ್ತು ಬಿಲ್ಟ್ ಇನ್‌ ಟೈಮರ್ ಮಹತ್ವದ ವೈಶಿಷ್ಟ್ಯಗಳಾಗಿವೆ. ಬೇರೆ ವೈಶಿಷ್ಟ್ಯತೆಗಳಲ್ಲಿ ಅಗ್ಗದ ಕ್ರಿಯಾಶೀಲ ಪದ್ಧತಿ, ಫಿಲ್ಟರ್‌ ಮತ್ತು ಗಾಳಿಶೋಧಕ ಅದರಲ್ಲಿ ಶಾಮೀಲಾಗಿವೆ.

ಇದರ ಹೊರತಾಗಿ ಖರೀದಿಯ ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಬಳಕೆ ಮಾಡುವ ಸುಲಭ ವಿಧಾನಗಳ ಬಗೆಗೂ ತಿಳಿದುಕೊಳ್ಳುವುದು ಅಗತ್ಯ. ಖರೀದಿಗೂ ಮುನ್ನ ಅದರ ಧ್ವನಿ ಮತ್ತು ಕಂಪನದ ಬಗೆಗೂ ತಿಳಿದುಕೊಳ್ಳುವುದು ಅತ್ಯವಶ್ಯ.

ಹೆಚ್ಚು ಸ್ಟೈಲಿಶ್‌ ಆಗಿರುವ ಏರ್‌ ಕಂಡೀಶನರ್‌ನಿಂದ ನೆಮ್ಮದಿ ನಿರಾಳತೆಯಂತೂ ದೊರಕುತ್ತದೆ. ಜೊತೆಗೆ ಜೀವನ ಶೈಲಿಯೂ ಸುಂದರಗೊಳ್ಳುತ್ತದೆ.

ವಾರಂಟಿ : ಏರ್‌ ಕಂಡೀಶನರ್‌ನ್ನು ಸದಾ ಅಧಿಕೃತ ಮಾರಾಟಗಾರರಿಂದಲೇ ಖರೀದಿಸಿ. ನೀವು ಯಾವ ಬ್ರ್ಯಾಂಡ್‌ನ್ನು ಖರೀದಿಸುತ್ತಿದ್ದೀರೊ, ಅದರ ವಾರಂಟಿಯ ಬಗೆಗೆ ಮಾಹಿತಿ ಪಡೆದುಕೊಳ್ಳಿ. ಕಂಪನಿಯ ಸೇವಾ ಜಾಲ ಹೇಗಿದೆ ಎನ್ನುವುದು ಮುಖ್ಯ. ಏಕೆಂದರೆ ನಿಮಗೆ ಅಗತ್ಯವಿದ್ದಾಗ ಅವರು ತಕ್ಷಣವೇ ಬರುವುದು ಅಗತ್ಯ.

ಮನೆಗಾಗಿ ಏರ್‌ ಕಂಡೀಶನರ್‌ ಖರೀದಿಸುವುದು ನಿಮಗೆ ಎಲ್ಲಕ್ಕೂ ದುಬಾರಿ ಖರೀದಿಯಾಗಬಹುದು. ನೀವು ಹಳೆಯ ಏ.ಸಿ.ಯನ್ನು ಬದಲಿಸುತ್ತಿರಬಹುದು ಅಥವಾ ಹೊಸದಾಗಿಯೇ ಖರೀದಿಸುತ್ತಿರಬಹುದು. ಒಂದು ಸಲ ಅದನ್ನು ಖರೀದಿಸಿದರೆ 10 ವರ್ಷದ ಬಳಿಕವೇ ಅದನ್ನು ಬದಲಿಸಬೇಕಾಗಿ ಬರಬಹುದು. ನೀವು ಅದನ್ನು ದೀರ್ಘಾವಧಿಯವರೆಗೆ ಬಳಸಲು ಮೇಲ್ಕಂಡ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡರೆ ನಿಮಗ ಬೇಸಿಗೆಯ ಬಿಸಿಯಿಂದ ನಿರಾಳತೆ ಪಡೆದುಕೊಳ್ಳಬಹುದು. ಅದರಿಂದ ವಿದ್ಯುತ್‌ ಬಿಲ್ ‌ನಲ್ಲೂ ಕೂಡ ಸಾಕಷ್ಟು ಉಳಿತಾಯ ಮಾಡಬಹುದು.

ಜಿ. ದಿವ್ಯಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ