`ಯುವರ್‌ ಬೆಸ್ಟ್ ಇಯರ್‌ಯೆಟ್‌’ನ ಲೇಖಕಿ ಜಿನ್ನಿ ಡಿಟಜಲರ್‌ ಹೀಗೆ ಹೇಳುತ್ತಾರೆ, ಒಂದು ವೇಳೆ ನೀವು ನಿಮ್ಮ ಪ್ರತಿ ವರ್ಷ ವಿಶೇಷವಾಗಿ ಚೆನ್ನಾಗಿರಬೇಕೆಂದು ಬಯಸಿದರೆ ನಿಮ್ಮನ್ನು ನೀವು ಪ್ರೀತಿಸಿ. ಆನಂದ ಪಡೆಯಲು ಮೊಟ್ಟ ಮೊದಲು ನಿಮ್ಮ ಬಗ್ಗೆ ನೀವು ದಯಾಳುವಾಗಿರಿ. ನೀವು ಚಿಂತಾಮುಕ್ತರಾಗಿರುವ ವಿಧಾನ ಕಲಿಯುವವರೆಗೆ ನಿಮ್ಮನ್ನು ನೀವು ಖುಷಿಯಾಗಿಟ್ಟುಕೊಳ್ಳಲು ಸಾಧ್ಯವಿಲ್ಲ. ಇತರರೊಂದಿಗೆ ಉದಾರವಾಗಿ ವರ್ತಿಸಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮನ್ನು ಪ್ರೀತಿಸಿ ಹಾಗೂ ನಿಮ್ಮನ್ನು ಸಂತೋಷ ಹಾಗೂ ಪಶ್ಚಾತ್ತಾಪದಿಂದ ಮುಕ್ತಗೊಳಿಸಿ.

ನಿಮ್ಮನ್ನು ನೀವು ಸ್ವೀಕರಿಸಿ

ನಿಮ್ಮನ್ನು ನೀವು ಬೇಷರತ್ತಾಗಿ ಪ್ರೀತಿಸಿದಾಗ ನಿಮ್ಮ ಆ ಗುಣ ಇತರರನ್ನು ಪ್ರೀತಿಸುವ ಯೋಗ್ಯತೆಯನ್ನು ಹೆಚ್ಚಿಸುತ್ತದೆ. ಯೋಗ ಗುರು ಗುರ್‌ ಮುಖ್‌ ಖಾಲ್ ಸಾ ಹೀಗೆ ಹೇಳುತ್ತಾರೆ, “ನಮ್ಮನ್ನು ಪ್ರೀತಿಸುವುದೆಂದರೆ ಉಸಿರಾಡಿದಂತೆ. ಆದರೆ ಸಾಮಾನ್ಯವಾಗಿ ನಾವು ನಮ್ಮಿಂದ ಹಾಗೂ ನಮ್ಮ ಕನಸುಗಳಿಂದ ದೂರವಾಗುತ್ತೇವೆ. ಹೀಗಾಗಿ ನಾವು ದುಃಖಿತರಾಗಿರುತ್ತೇವೆ.”

ಜಿನ್ನಿ ಕೊಂಚ ವ್ಯಾವಹಾರಿಕವಾಗಿ ನಮ್ಮೊಡನೆ ನಾವು ಸೇರಿಕೊಳ್ಳಲು ಹೇಳುತ್ತಾರೆ. ಅವೆಂದರೆ ಒಳ್ಳೆಯ ಊಟ, ಧ್ಯಾನ, ಹೊಸ ಫ್ಯಾಷನ್ನಿನ ಉಡುಪು ಧರಿಸುವುದು, ದಾನ ಮಾಡುವ ಕಲೆ ಮತ್ತು ಜೀವನದ ಉದ್ದೇಶಗಳ ಪ್ರಾಪ್ತಿ ಇತ್ಯಾದಿ.

100 ದಿನಗಳ ನಿಯಮ

ಮೋನಿಕಾ ಜಾಂಡ್ಸ್, `ನಿಮ್ಮನ್ನು ನೀವು ಪ್ರೀತಿಸಿ’ ಹೆಸರಿನಲ್ಲಿ ಪ್ರಚಾರಾಂದೋಲನ ಆರಂಭಿಸಿದ್ದಾರೆ. ಅವರು ಹೀಗೆ ಹೇಳುತ್ತಾರೆ, “ನಿಮಗೆ ನೀವು ಪ್ರೀತಿಭರಿತ ಆಲಿಂಗನ ಕೊಡಿ. ನಿಮ್ಮನ್ನು ನೀವು ಪ್ರೀತಿಸಿದರೆ ಜೀವನಪರ್ಯಂತ ನಿಮಗೆ ಪ್ರೀತಿ ಸಿಗುತ್ತದೆ. ನಾನು ಪ್ರಚಾರ ಆರಂಭಿಸಿದಾಗ ಜನ ತಮ್ಮನ್ನು 100 ದಿನಗಳ 100 ವಿಧಾನಗಳಿಂದ ಪ್ರೀತಿಸಬೇಕು.

“ತಮ್ಮನ್ನು ನೋಡಿಕೊಳ್ಳಬೇಕು ಎಂದು ಬಯಸದೆ, ಜೀವನದ ಬಗ್ಗೆ ಪ್ರೀತಿ ಇಟ್ಟುಕೊಳ್ಳಬೇಕು. ತಮ್ಮ ಭಾವನೆಗಳನ್ನು ವ್ಯಕ್ತಪಡಿಸಬೇಕು ಎಂದು ಬಯಸಿದ್ದೆ. ನೀವು ವಿಭಿನ್ನ ವಸ್ತುಗಳ ಜೊತೆ ವಿಭಿನ್ನ ವಿಧಾನಗಳಿಂದ ದಿನ ವ್ಯವಹರಿಸತೊಡಗಿದಾಗ ನಿಮ್ಮನ್ನು ನೀವು ಪ್ರೀತಿಸಲು ಶುರು ಮಾಡಬಹುದು. ಜೊತೆಗೆ ನಿಮ್ಮ ಜೀವನದ ಉದ್ದೇಶವನ್ನು ನಿರ್ಧರಿಸಿ ನಿಮ್ಮ ಗುರಿ ತಲುಪಬಹುದು.”

ಪೂರ್ವಾಗ್ರಹ ಬೇಡ

ಎಂದಿಗೂ ಪೂರ್ವಾಗ್ರಹ ಇಟ್ಟುಕೊಳ್ಳಬೇಡಿ. ಸಾಧ್ಯವಾದಷ್ಟೂ ಕ್ಷಮಾಶೀಲರಾಗಿ. `ನಿಮಗಾಗಿ ಉತ್ತಮ ಸಂಭಾವ್ಯತೆಗಳು’ ಪುಸ್ತಕದ ಲೇಖಕ ಮೈಲ್ ಡಿಓಲಿ ಹೀಗೆ ಹೇಳುತ್ತಾರೆ. ಜೀವನದಲ್ಲಿ ಸುಗಮ ಯಾತ್ರೆಗಾಗಿ ಪೂರ್ವಾಗ್ರಹಗಳ ಹೆಚ್ಚುವರಿ ಭಾರದಿಂದ ಸಮಯಾನುಸಾರವಾಗಿ ಮುಕ್ತರಾಗಬೇಕು. ಅಗತ್ಯ ಬಿದ್ದಾಗ ಮಾತ್ರ ವ್ಯಕ್ತಿ ಒಂದು ಸ್ಥಾನದಲ್ಲಿ ನಿಲ್ಲಬೇಕು. ನಿಮ್ಮ ದ್ವೇಷ, ನಿಮ್ಮ ನಕಾರಾತ್ಮಕ ಆಲೋಚನೆ, ನಿಮ್ಮ ವಿಕ್ಷಿಪ್ತತೆ, ದ್ವಂದ್ವ, ಕೋಪ ಮತ್ತು ನಿಮ್ಮ ಉದಾರತನದ ಕೊರತೆ, ನೀವು ಒಳ್ಳೆಯ ಸಂಬಂಧಗಳನ್ನು ಮಾಡುವುದನ್ನು ತಪ್ಪಿಸುತ್ತದೆ. ಲೇಖಕಿ ಅನಿತಾ ಮೋರಜಾನಿ ಹೀಗೆ ಹೇಳುತ್ತಾರೆ, “ವಾಸ್ತವದಲ್ಲಿ ನಮ್ಮ ಶತ್ರು ಸ್ವಯಂ ನಾವೇ ಆಗಿದ್ದೇವೆ, ನಮ್ಮ ಉಗ್ರ ವಿಮರ್ಶಕರೂ ನಾವೇ ಆಗಿದ್ದೇವೆ. ಬೇರೆಯವರ ಬಗ್ಗೆ ನಾವು ಇದೇ ರೀತಿ ವರ್ತಿಸಿದರೆ ನಾವು ಎಲ್ಲ ವ್ಯಕ್ತಿಗಳನ್ನೂ ಒಂದೇ ದೃಷ್ಟಿಕೋನದಿಂದ ನೋಡುತ್ತೇವೆ. ನಾವು ನಮ್ಮ ಜೀವನದ ಪ್ರತ್ಯೇಕ ಪಾರ್ಶ್ವವನ್ನು ಅದು ಒಳ್ಳೆಯದಾಗಲಿ ಕೆಟ್ಟದಾಗಲಿ, ಸ್ವೀಕರಿಸಲೇಬೇಕು.

ಇನ್ನೊಬ್ಬರಿಗೆ ಅಧೀನರಾಗಬೇಡಿ

ಸಾಮಾನ್ಯ ಬದುಕು ಸಾಗಿಸುತ್ತಾ ಒಂದು ವೇಳೆ ಅವಕಾಶ ಸಿಕ್ಕರೆ ಸಂಪೂರ್ಣ ಆನಂದ ಅನುಭವಿಸುವಲ್ಲಿ ನಿಮ್ಮನ್ನು ತಡೆಯಬೇಡಿ. ಮನೋವಿಜ್ಞಾನಿ ಹಾಗೂ `ದಿಲ್ ಸೆ ಜಿಯೋ’ದ ಲೇಖಕ ರೋಹಿತ್‌ ಜುನೇಜಾ, “ನಾವು ನಮ್ಮ ಸುಖ ಹಾಗೂ ವಿವಾದಗಳ ಮುಖ್ಯ ಸ್ರೋತವಾಗಿದ್ದೇವೆ. ನಾವೆಲ್ಲರೂ ಮನುಷ್ಯರು. ತಪ್ಪು ಮಾಡುವುದು ಮಾನವನ ಸಹಜ ಗುಣ. ಶ್ರೇಷ್ಠತೆಗಾಗಿ ಇನ್ನೊಬ್ಬರ ಅಧೀನರಾಗಬೇಡಿ. ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ಬೇಡ. ಅಗತ್ಯವಿರುವ ವ್ಯಕ್ತಿತ್ವ ಪ್ರಭಾವಶಾಲಿಯಾಗಿರುವುದಿಲ್ಲ. ಬದುಕಿನ ಏರಿಳಿತಗಳಿಂದಾಗಿ ನಿಮ್ಮನ್ನು ನೀವು ಜೀವನದ ಆನಂದುಮಯ ಕ್ಷಣಗಳ ಆನಂದ ಪಡೆಯಲು ವಂಚಿತರನ್ನಾಗಿ ಮಾಡಬೇಡಿ,” ಎಂದು ಹೇಳುತ್ತಾರೆ.

ಸ್ವಯಂ ಪ್ರೇಮ ಹೀಗೆ ಸಾಧ್ಯ

ನಿಮ್ಮನ್ನು ನೀವು ಪ್ರೀತಿಸಲು ದಿನ ಕನಿಷ್ಠ 5 ನಿಮಿಷ ಧ್ಯಾನ ಮಾಡಿದರೆ ರಕ್ತದೊತ್ತಡ ಕಡಿಮೆಯಾಗಿ ಜಠರಾಗ್ನಿ ಗುಣವನ್ನು ಸದೃಢಗೊಳಿಸುತ್ತದೆ. ಜೊತೆಗೆ ಜೀವನವನ್ನು ಪ್ರಭಾವಶಾಲಿ ವಿಧಾನದಿಂದ ಬದುಕಲು ಯೋಗ್ಯವಾಗಿ ಮಾಡುತ್ತದೆ. ಧ್ಯಾನ ನಮ್ಮ ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ. ದುಃಖಗಳೊಂದಿಗೆ ಹೋರಾಡಲು ಕಲಿಸುತ್ತದೆ. ನಿಮ್ಮ ಆವೇಶವನ್ನು ತಡೆಯುತ್ತದೆ. ಆಗ ನೀವು ನಿಮ್ಮನ್ನು ಪ್ರೀತಿಸತೊಡಗುತ್ತೀರಿ. ಏಕೆಂದರೆ ಧ್ಯಾನ ನಿಮ್ಮ ಮಾನಸಿಕತೆ ಮತ್ತು ಆರೋಗ್ಯವನ್ನು ವೃದ್ಧಿಸುತ್ತದೆ. ಇದು ಸಂತಸ ತರುವ ಹಾರ್ಮೋನ್ಸ್ ಗಳನ್ನೂ ಚಾಲನೆ ಮಾಡುತ್ತದೆ.

ಕೌಟುಂಬಿಕ ಸಮಸ್ಯೆಗಳು

ನೀವು ನಿರಂತರವಾಗಿ ನೆನಪಿಸಿದಾಗಲೂ ನಿಮ್ಮ ಸಂಗಾತಿ ಬಿಲ್ ‌ಗಳು, ಬೀಗದಕೈ ಮತ್ತು ಮನೆಯ ಇತರ ಅಗತ್ಯ ವಸ್ತುಗಳನ್ನು ಸರಿಯಾದ ಜಾಗದಲ್ಲಿ ಇಡದಿದ್ದರೆ ಸಮಸ್ಯೆಗಳು ಮುಗಿಯುವುದೇ ಇಲ್ಲ ಹಾಗೂ ನಿಮ್ಮ ಚಿಂತೆಗೆ ಕಾರಣವಾಗುತ್ತವೆ. ಹೀಗಾದಾಗ ಚಿಂತೆಯಲ್ಲಿ ಮುಳುಗುವ ಬದಲು ಯಾರೊಂದಿಗೆ ಮದುವೆಯನ್ನು, ನಿಮ್ಮ ಸುಖದುಃಖಗಳನ್ನೂ ಹಂಚಿಕೊಳ್ಳಲು ಹೋಗುತ್ತಿದ್ದೀರೋ ಅವರೊಂದಿಗೆ ನೀವು ಅಸಮಾನತೆಯನ್ನೂ ಹಂಚಿಕೊಳ್ಳಬೇಕು. ನಿಮ್ಮ ಚಿಂತೆಯನ್ನು ಸಹಜವಾಗಿ ಸಂಗಾತಿಯ ಮುಂದಿಡಿ. ಮನೆಯ ವ್ಯವಸ್ಥೆ ಹಾಗೂ ನೈಜ ಅಗತ್ಯಗಳ ಬಗ್ಗೆ ಮಾತಾಡಿ.

ಹೀಗೆಯೇ ಹಲವು ಬಾರಿ ಆಯಾಸದಿಂದಾಗಿ ಕೆಲವು ಪುರುಷರು ಸಮಾಗಮಕ್ಕೆ ಇಚ್ಛಿಸುದಿಲ್ಲ. ಅದರಿಂದಾಗಿ ಸಮಾಗಮದ ಸಮಯದಲ್ಲಿ ಉತ್ಸಾಹ ಕಡಿಮೆ ಇರುತ್ತದೆ. ಹೀಗಿರುವಾಗ ಗಂಡನ ಇಚ್ಛೆಗೆ ಹೊಂದದಿದ್ದರೆ ಪತ್ನಿಗೆ ಅಸಹಜತೆಯ ಅನುಭವವಾಗುತ್ತದೆ. ಆಗ ಆಕೆ ಅಸಂತುಷ್ಟಳಾಗಿರುತ್ತಾಳೆ.

ಇದರ ಬಗ್ಗೆ ಲೈಂಗಿಕ ತಜ್ಞರು ಹೀಗೆ ಹೇಳುತ್ತಾರೆ, ಸಂಗಾತಿಗಳಲ್ಲಿ ಒಬ್ಬರು ಇಚ್ಛಕರಾಗಿದ್ದು ಇನ್ನೊಬ್ಬರಿಗೆ ಇಚ್ಛೆಯಿಲ್ಲದಿದ್ದರೆ ಪ್ರತಿ 3ರಲ್ಲಿ 1 ಜೋಡಿ ಲೈಂಗಿಕ ತೃಪ್ತಿ ಸಿಗದಿರುವ ಸಮಸ್ಯೆ ಎದುರಿಸುತ್ತಾರೆ. ಅನೇಕ ಬಾರಿ ಇಂತಹ ತೊಂದರೆಗಳಿಂದ ನಿಮ್ಮ ದಾಂಪತ್ಯ ಮುರಿದುಬೀಳುವ ಹಂತಕ್ಕೆ ಬರುತ್ತದೆ. ಸಮಾಗಮ ನಿಮಗೆ ಔಪಚಾರಿಕತೆ ಮಾತ್ರವಲ್ಲ ಒಂದು ಮಹತ್ವಪೂರ್ಣ ಅಗತ್ಯ ಆಗಿದೆ. ಒಂದು ವೇಳೆ ನಿಮ್ಮ ಸಂಗಾತಿ ಸಮಾಗಮ ಇಚ್ಛಿಸದ್ದಿದರೆ ಲೈಂಗಿಕ ಇಚ್ಛೆಯನ್ನು ಜಾಗೃತಗೊಳಿಸಲು ಅನೇಕ ಉಪಾಯಗಳಿವೆ. ನೀವು ಅವರಿಗೆ ಕಚಗುಳಿ ನೀಡಿ. ಪ್ರೇಮಭರಿತ ಅಥವಾ ಕಾಮಭರಿತ ವಾರ್ತಾಲಾಪ ಮಾಡಿ. ಅದರಿಂದ ನಿಮ್ಮ ಸಂಗತಿಯ ಲೈಂಗಿಕ ಇಚ್ಛೆ ಜಾಗೃತವಾಗುತ್ತದೆ. ಅವರು ಸಮಾಗಮಕ್ಕೆ ಸಿದ್ಧರಾಗಿ ನಿಮಗೆ ಸಹಕರಿಸುತ್ತಾರೆ. ಅದರಿಂದ ನಿಮ್ಮಿಬ್ಬರಿಗೂ ಲೈಂಗಿಕ ತೃಪ್ತಿ ಸಿಗುತ್ತದೆ.

ಉದ್ಯೋಗದ ಸಮಸ್ಯೆಗಳು

ಆಫೀಸಿನಿಂದ ಮನೆಗೆ ಹಿಂತಿರುಗಿದ ನಂತರ ಈಗ ಅನೇಕ ಪುರುಷರು ಲ್ಯಾಪ್‌ಟಾಪ್‌ನಲ್ಲಿ ಅಥವಾ ಡಿನ್ನರ್‌ ಟೇಬಲ್ ನಲ್ಲಿ ಆಫೀಸಿಗೆ ಸಂಬಂಧಿಸಿದ ಫೋನ್‌ನಲ್ಲಿ ವ್ಯಸ್ತರಾಗಿರುತ್ತಾರೆ. ಅದು ಸಂಗಾತಿಯ ಕೋಪಕ್ಕೆ ಕಾರಣವಾಗುತ್ತದೆ. ಏಕೆಂದರೆ, ಆ ಸಮಯ ಪರಸ್ಪರ ಮಾತುಕಥೆಗಾಗಿ ಮೀಸಲಾಗಿರುತ್ತದೆ.

ನಿಮ್ಮ ಸಂಗಾತಿ ಲ್ಯಾಪ್‌ಟಾಪ್‌ ಅಥವಾ ಫೋನ್‌ನಲ್ಲಿ ವ್ಯಸ್ತರಾಗಿದ್ದರೆ, ಆಗ ವಾದ ವಿವಾದ ಮಾಡುವ ಬದಲು ವಿಷಯವನ್ನು ಸರಿಯಾದ ಸಮಯದಲ್ಲಿ ಎತ್ತಿ. ನಾವಿಬ್ಬರೂ ಒಟ್ಟಿಗೆ ಸಮಯ ಕಳೆಯುವ ಅಗತ್ಯವಿದೆ. ಇದರಲ್ಲಿ ಯಾವುದೇ ರೀತಿಯ ಅಡ್ಡಿ ಉಂಟಾಗಬಾರದು. ನಿಮಗೆ ದಿನ ಸಮಯ ಸಿಗದಿದ್ದರೆ ಕನಿಷ್ಠ ವಾರದಲ್ಲಿ ಒಂದು ದಿನವಾದರೂ ನನಗಾಗಿ ಮೀಸಲಿಡಿ ಎಂದು ಪ್ರೀತಿಯಿಂದ ಹೇಳಿನೋಡಿ.

ಜೀವನವನ್ನು ರಸಭರಿತಾಗಿ ಮಾಡಲು ಚುಂಬನದ ಮಹತ್ವವನ್ನು ಅಲ್ಲಗಳೆಯಲಾಗುವುದಿಲ್ಲ. ಈ ಸಂಬಂಧದಲ್ಲಿ ಮಾಡಿದ ಸಮೀಕ್ಷೆಯಲ್ಲಿ ತಿಳಿದುಬಂದಿದ್ದು ಉದ್ಯೋಗ, ಮಕ್ಕಳು ಅಭ್ಯಾಸ, ಕೌಟುಂಬಿಕ ಉತ್ತರದಾಯಿತ್ವದಿಂದಾಗಿ ವಿವಾಹಿತ ದಂಪತಿಗಳು ದಿನದಲ್ಲಿ ಕೇವಲ 4 ನಿಮಿಷ ಜೊತೆಗಿರುತ್ತಾರೆ. ಆ ಸಮಯವನ್ನು ಅವರು ಚುಂಬನ ಅಥವಾ ಪ್ರೀತಿಯ ಮಾತನಾಡಲು ಕೊಟ್ಟರೆ ದಾಂಪತ್ಯ ಜೀವನದಲ್ಲಿ ಸಂತಸ ಇರುತ್ತದೆ.

ಒಬ್ಬ ಸಾಮಾನ್ಯ ದಂಪತಿ ವರ್ಷಕ್ಕೆ 58 ಬಾರಿ ಸಮಾಗಮ ನಡೆಸುತ್ತಾರೆ. ಅಂದರೆ ಸರಾಸರಿ ವಾರಕ್ಕೆ ಒಂದು ಬಾರಿ. ಆದ್ದರಿಂದ ಬರಿಯ ಸೆಕ್ಸ್ ಅಲ್ಲ. ಗೆಳೆತನ, ಹಾಸ್ಯ ಪರಿಹಾಸ್ಯ, ಉದಾರತೆ, ಕ್ಷಮಾಶೀಲ ನಡವಳಿಕೆ ಮತ್ತು ಸಮಾಗಮಕ್ಕಿಂತ ಹೆಚ್ಚಾಗಿ ದಂಪತಿಗಳ ನಡುವೆ ಪರಸ್ಪರ ವಿಶ್ವಾಸ, ಸುಖೀ ವೈವಾಹಿಕ ಜೀವನಕ್ಕೆ ಮಹತ್ವಪೂರ್ಣ ಅಗತ್ಯವಾಗಿದೆ. ಇದರ ಜೊತೆಗೆ ಯಾರು ತಮ್ಮ ಸಂಗಾತಿಯಿಂದ ಬೆಳಗ್ಗೆ ಚುಂಬನ ಪಡೆಯುತ್ತಾರೋ ಅವರು, ಚುಂಬನ ಪಡೆಯದವರಿಗೆ ಹೋಲಿಸಿದರೆ 5 ವರ್ಷ ದೀರ್ಘಾಯುವಾಗುತ್ತಾರೆ. ಆದ್ದರಿಂದ ಚುಂಬನ ಮತ್ತು ಪ್ರೇಮದ ವಾರ್ತಾಲಾಪ ನಡೆಸಲು ಸಮಯವನ್ನು ಅಗತ್ಯವಾಗಿ ಹೊಂದಿಸಿಕೊಳ್ಳಿ.

ಜಿ. ಅನುರಾಧಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ