ಒಂದು ದುರ್ಘಟನೆ ಹಲವು ಪ್ರಶ್ನೆಗಳು

ತನ್ನ ಸ್ವಂತ ಮಗಳನ್ನು ತನ್ನ ಕೈಗಳಿಂದಲೇ ಕುತ್ತಿಗೆ ಹಿಸುಕಿ ಹತ್ಯೆ ಮಾಡಿ ಅವಳ ಹೆಣವನ್ನು ದೂರದ ಕಾಡಿನಲ್ಲಿ ಸುಟ್ಟು ಬಿಸಾಡುವುದು ಮತ್ತು 3 ವರ್ಷಗಳವರೆಗೆ ಏನೂ ಆಗಿಯೇ ಇಲ್ಲವೆಂಬಂತೆ ಹಗಲು ರಾತ್ರಿ ಕಣ್ಣು ಕುಕ್ಕುವ ಬೆಳಕಿನಲ್ಲಿ ಕ್ಯಾಮೆರಾಗಳ ಮುಂದೆ ಹೊಳೆಯುವುದು ಆಶ್ಚರ್ಯವೇ ಸರಿ!

ಪೀಟರ್‌ ಮುಖರ್ಜಿ ಮತ್ತು ಇಂದ್ರಾಣಿ ಮುಖರ್ಜಿ ದಂಪತಿಗಳು ಹಲವು ವರ್ಷಗಳಿಂದ ಟೆಲಿವಿಷನ್‌ ಸ್ಕ್ರೀನ್‌ಗಳಲ್ಲಿ ಕಂಡುಬರುತ್ತಿದ್ದರು. ಅವರು ಸ್ಟಾರ್‌ ಟಿವಿ ಮತ್ತು ಐಎನ್‌ಎಕ್ಸ್ ಮೀಡಿಯಾಗೆ ಸೇರಿದವರಾಗಿದ್ದು ಕೆಲವು ಆರ್ಥಿಕ ಸಮಸ್ಯೆಗಳಲ್ಲಿ ಸಿಲುಕಿಯೂ ಇದ್ದರು. ಆದರೆ ತಾಯಿಯಾಗಿದ್ದು ಅಂತಹ ಅಪರಾಧ ಮಾಡಿದರೆಂದರೆ ನಂಬಲಾಗುತ್ತಿಲ್ಲ.

ಬದುಕು ಬಹಳ ಕಠಿಣ. ಹಲವು ವರ್ಷಗಳ ಹಿಂದೆಯೇ ತನ್ನ ಮೊದಲ ಹಾಗೂ ಎರಡನೇ ಗಂಡನನ್ನು ಬಿಟ್ಟ ಹೆಣ್ಣು, ಮೊದಲ ದಿನವೇ ಮಗಳ ಜನ್ಮ ಪ್ರಮಾಣ ಪತ್ರದಲ್ಲಿ ತಂದೆ ತಾಯಿಯರ ಹೆಸರನ್ನು ಬೇರೇನೋ ಬರೆದ ಹೆಣ್ಣು, ಮೂರನೇ ಹೊಸ ಗಂಡನನ್ನು ಆಲಂಗಿಸಿಕೊಳ್ಳುತ್ತಲೇ, ಎರಡನೇ ಗಂಡನೊಂದಿಗೂ ಸಂಪರ್ಕ ಇಟ್ಟುಕೊಂಡಿದ್ದಂತಹ ವಿಲಕ್ಷಣ ಹೆಂಗಸಿನ ಸಂಪೂರ್ಣ ವಿವರವಂತೂ ಯಾವುದಾದರೂ ದಪ್ಪನೆಯ ಪುಸ್ತಕದಿಂದಲೇ ತಿಳಿದುಬರುತ್ತದೆ. ಸದ್ಯಕ್ಕೆ ಇಂದ್ರಾಣಿ ಮುಖರ್ಜಿ ತನ್ನ ಡ್ರೈವರ್‌ ಮತ್ತು ಪತಿ ನಂ.2 ಜೊತೆ ಜೈಲಿನಲ್ಲಿದ್ದಾರೆ. ಅವರು ಅಪರಾಧ ಎಸಗಿದ್ದು ಹೇಗೆ ಎಂಬುದರ ಪದರಗಳು ತೆರೆಯುತ್ತಿವೆ. ಆದರೆ ಆ ಪದರಗಳು ಅವರನ್ನು ಅಪರಾಧಿಯನ್ನಾಗಿ ಸಾಧಿಸುವುದೇ ಎಂದು ಹೇಳಲಾಗುವುದಿಲ್ಲ.

ಸದ್ಯಕ್ಕೆ ಹೇಳಬಹುದಾಗಿದ್ದೇನೆಂದರೆ ಕೆಲವು ಮಹಿಳೆಯರು ತಮ್ಮ ಬದಕಿನಲ್ಲಾದ ತಪ್ಪುಗಳನ್ನು ಮುಚ್ಚಿಹಾಕಲು ಇನ್ನಷ್ಟು ತಪ್ಪುಗಳನ್ನು ಮಾಡುತ್ತಾರೆ. ಹಾಗೆ ತಪ್ಪುಗಳನ್ನು ಮಾಡುತ್ತಾ ಸರಿಯಾದುದರ ಕಡೆ ಗಮನಕೊಡುವುದನ್ನೇ ಮರೆಯುತ್ತಾರೆ. ಕ್ಲಿಯೋಪಾತ್ರಾಳಂತಹ ತಮ್ಮ ಸುಂದರ ಸೌಮ್ಯ ಮುಖದಿಂದ ಎಲ್ಲ ಅಪರಾಧಗಳೂ ಮುಚ್ಚಿಹೋಗುತ್ತವೆಂದು ಅವರಿಗೆ ಅನ್ನಿಸುತ್ತದೆ.

ಇತಿಹಾಸ, ಸಾಹಿತ್ಯ ಮತ್ತು ಸಮಾಜಕ್ಕೆ ಈ ಮಹಿಳೆಯರ ದುಷ್ಕೃತ್ಯಗಳಿಗೆ ಕೊಂಚ ಉಪ್ಪು, ಖಾರ ಹಚ್ಚಿ ತೋರಿಸುವ ಅಭ್ಯಾಸ ಇದೆ. ಏಕೆಂದರೆ ಅ ಬಹಳ ಪರಿಶ್ರಮದಿಂದ ಮಹಿಳೆಯನ್ನು ಒಬ್ಬ ಅಸಹಾಯಕ, ಹಸುವಿನಂತೆ ಶಾಂತ, ಧರ್ಮ ಮತ್ತು ಕುಟುಂಬದ ಸತತ ದಬ್ಬಾಳಿಕೆಯಿಂದ ಪೀಡಿತ ಮಹಿಳೆಯನ್ನಾಗಿ ಮಾಡಲು ಸಾವಿರಾರು ವರ್ಷ ತೆಗೆದುಕೊಂಡಿವೆ. ಈ ಫ್ರೇಮ್ ವರ್ಕ್‌ನ್ನು ಮುರಿದ ಮಹಿಳೆಯನ್ನು ಸಮಾಜ ಒಪ್ಪಿಕೊಂಡಿಲ್ಲ. ಇಂದ್ರಾಣಿ ಮುಖರ್ಜಿ ಮತ್ತು ಸುನಂದಾ ಪುಷ್ಕರ್‌ರಂತಹವರು ಸಮಾಜಕ್ಕೆ ಒಪ್ಪಿಗೆಯಿಲ್ಲ. ಇಡೀ ಪ್ರಕರಣ ಸಹ ಪತ್ರಿಕೆಗಳ ಮುಖ್ಯ ಸುದ್ದಿಯಾಗಿ, ಟಿವಿಯಲ್ಲಿ ಹೆಡ್‌ ಲೈನ್‌ ನ್ಯೂಸ್‌ನ್ನು ಆಕ್ರಮಿಸಿಕೊಂಡಿದೆ. ಹೀಗಾಗಿಯೇ ಅವರು ಇಚ್ಛೆಯಿಲ್ಲದಿದ್ದರೂ, ಒಪ್ಪಿಗೆ ಇಲ್ಲದಿದ್ದರೂ ಹಾಗೆ ಮಾಡಿದರು.

ಇಂದ್ರಾಣಿ ಮುಖರ್ಜಿ ಹೊಸ ಹೊಸ ಹೆಸರುಗಳಿಂದ ಅವತರಿಸಿ, ಮಕ್ಕಳಿದ್ದಾಗ್ಯೂ ತನ್ನ ಬಣ್ಣ ರೂಪ ಉಳಿಸಿಕೊಂಡು, ಹಳೆಯ ಮತ್ತು ಹೊಸ ಗಂಡಂದಿರನ್ನು ಸಹಿಸಿಕೊಂಡು ಬಿಟ್ಟುಹೋದ ಮಕ್ಕಳನ್ನು ಸಂಭಾಳಿಸುತ್ತಿದ್ದೂ ಸಹ ತನ್ನ ಸುಂದರವಾದ ನಗುಮುಖವನ್ನು ಹೇಗೆ ತೋರುತ್ತಿದ್ದರೆಂಬುದು ಅಪ್ಸರೆಯರ ಪ್ರೇಮಕಥೆಗಳಂತಿದೆ. ಅವುಗಳಲ್ಲಿ ರಹಸ್ಯ, ರೋಮಾಂಚನ ತೋರಿಸುತ್ತಿದ್ದರೂ ಆ ಮಹಿಳೆ ಯಾವ ಯಾವ ನೋವು ಅನುಭವಿಸುತ್ತಿದ್ದರೂ ಸಹ ಏಕೆ ಹಾಗೂ ಹೇಗೆ ತನ್ನ ಮುಖದಲ್ಲಿ ಮಹತ್ವಾಕಾಂಕ್ಷೆಯನ್ನು ಆತ್ಮವಿಶ್ವಾಸದೊಂದಿಗೆ ಉಳಿಸಿಕೊಂಡಿರಬಹುದೆಂದು ತೋರಿಸುವುದಿಲ್ಲ.

ಇಂದ್ರಾಣಿ ಮತ್ತು ಸುನಂದಾರಂತಹ ಮಹಿಳೆಯರನ್ನು ಅದಕ್ಕೆ ಅಪಾದವೆಂದು ತಿಳಿಯಲಾಗಿದೆ. ಏಕೆಂದರೆ ಸಮಾಜದ ನಿಯಮಗಳನ್ನು ಲೆಕ್ಕಿಸದೆ ಸರಿ ಅಥವಾ ತಪ್ಪು ನಿರ್ಧಾರದ ಮೇಲೆ ಅವರು ಪುರುಷರ ಕ್ರೂರ ಸಮಾಜದಲ್ಲಿ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನಿಸಿದರು ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ.

ಇಂದ್ರಾಣಿ ಮುಖರ್ಜಿಯವರ ದಾಂಪತ್ಯ ಉಳಿಯುತ್ತದೋ ಇಲ್ಲವೋ, ಅವರು ಜೈಲಿನಲ್ಲಿ ಇರುತ್ತಾರೋ ಅಥವಾ ಬಿಡುಗಡೆಯಾಗುತ್ತಾರೋ ಅವರ ಮೇಲಿನ ಆರೋಪಗಳು ದೃಢಪಡುತ್ತದೋ ಇಲ್ಲವೋ ಎಂದು ಸದ್ಯ ಹೇಳುವುದು ಕಷ್ಟ. ಆದರೆ ಅವರು ಪುರುಷರ ಏಕಾಧಿಕಾರ ಎಂದು ತಿಳಿಯಾಗಿದ್ದನ್ನು ಮಾಡಿ ತೋರಿಸಿದರು. ಅವರು ಬಹಳಷ್ಟು ತಪ್ಪು ಕೆಲಸಗಳನ್ನು ಮಾಡಿದ್ದರೂ ಸಮಾಜ ಹಾಕಿದ್ದ ಗೆರೆಗಳನ್ನು ಮುರಿದಿದ್ದಾರೆ. ಹೇಗೆ ಬುದ್ಧಿವಂತ ಪುರುಷರು ತಮ್ಮ ಬುದ್ಧಿಯ ಬಲದಿಂದ ಅಧಿಕಾರ ನಡೆಸುತ್ತಾರೋ ಹಾಗೆಯೇ ಸುಂದರ ಮಹಿಳೆಯರು ತಮ್ಮ ಸೌಂದರ್ಯದ ಬಲದಿಂದ ಶಕ್ತಿ ಪಡೆಯುತ್ತಾರೆಂದು ಸಾಬೀತುಪಡಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

vihangam-2A

ಮೀಸಲಾತಿ ಸಿಗಬೇಕಾದುದು ಇವರಿಗೆ

ಮೀಸಲಾತಿಯ ಬೆಂಕಿಗೆ ಈಗ ಮೋದಿಯ ಗುಜರಾತ್‌ ಮತ್ತೊಮ್ಮೆ ಸಿಲುಕಿಕೊಂಡಿದೆ. ಒಂದು ಅತಿ ದೊಡ್ಡ ಗುಂಪಿನ, ಧಾರವಾಳ ಹಣವುಳ್ಳ ಆದರೆ ಸರ್ಕಾರಿ ನೌಕರಿ ಸಿಗದ, ಹಣವಿದ್ದರೂ ಸಾಮಾಜಿಕ ಮಾನ್ಯತೆಗಳಲ್ಲಿ ಸಮಾನರೆಂದು ಪರಿಗಣಿಸಿದ ಗುಂಪಿನ ನಾಯಕನಾಗಿ ಹಾರ್ದಿಕ್‌ ಪಟೇಲ್ ‌ಧುತ್ತೆಂದು ಎದ್ದು ನಿಂತಿದ್ದಾನೆ. ಧಾರ್ಮಿಕ ನಿಯಮಗಳ ನೆಪವೊಡ್ಡಿ ಹೆಂಗಸರ ಆತ್ಮವಿಶ್ವಾಸ ಕಸಿದುಕೊಳ್ಳುವಂತೆ, ಧರ್ಮಜನಿತ ಜಾತಿವರ್ಣಗಳ ನಿಯಮಗಳಿಂದ, ದೇಹದಿಂದ ಗಟ್ಟಿಮುಟ್ಟಾಗಿದ್ದರೂ, ಕಷ್ಟಸಹಿಷ್ಣುಗಳಾಗಿ ಮತ್ತು ಅಧಿಕ ಸಂಖ್ಯೆಯಲ್ಲಿದ್ದರೂ ಹೆಚ್ಚಿನ ಸವರ್ಣೀಯರಲ್ಲದವರನ್ನು ಶಿಕ್ಷಣ ಹಾಗೂ ಸಮಾನತೆಯ ವಿಷಯದಲ್ಲಿ ಒಂದೇ ಆಗಿದ್ದರೂ, ಇಂದಿಗೂ ಸಾಮಾಜಿಕವಾಗಿ ಈ ಗುಂಪನ್ನು ಕಡೆಗಣಿಸಲಾಗುತ್ತಿದೆ.

ಈ ಹಿಂದುಳಿದ ಹಾಗೂ ಕೀಳು ಜಾತಿಗಳಿಗೆ ಮೀಸಲಾತಿಯ ವತಿಯಿಂದ ಒಂದಿಷ್ಟು ಲಾಭ ಆಗುತ್ತಿದೆ, ಆದರೆ ಇಂಥ ಮೀಸಲಾತಿಯು ಅದೇ ವರ್ಗದ ಹೆಂಗಸರಿಗೆ ಮಾತ್ರ ಸಿಗುತ್ತಿಲ್ಲ. ಇವರು ಶೈಕ್ಷಣಿಕವಾಗಿ ಹೆಚ್ಚು ಹಿಂದುಳಿದಿದ್ದಾರೆ. ಇವರು ಮೇಲು ಜಾತಿಯವರಿಂದ ಮಾತ್ರವಲ್ಲದೆ, ತಮ್ಮವರಿಂದಲೂ ತುಳಿತಕ್ಕೆ ಒಳಗಾಗುತ್ತಿದ್ದಾರೆ.

ಅಸಲಿಗೆ ಮೀಸಲಾತಿ ಎಂಬುದು ಇಂಥ ಹೆಂಗಸರಿಗೆ ಸಿಗಬೇಕು. ಪಟೇಲ್‌, ಜಾಟ್‌, ಯಾದವ್, ಮರಾಠಿಗರಿಗೆ ಕೇಳಲಾಗುತ್ತಿರುವ ಮೀಸಲಾತಿಯು ಮುಖ್ಯವಾಗಿ ಅವರಲ್ಲಿನ ಹೆಂಗಸರಿಗೆ ಸಿಗಬೇಕು. ಆಗ ಮಾತ್ರ ಅವರು ಮನೆ ಹಾಗೂ ಹೊರಗೆ ಹೊಸ ವಾತಾವರಣ ಕಾಣಲು ಸಾಧ್ಯ. ಇಂಥ ಮೀಸಲಾತಿ ಬೇರೆ ಜಾತಿಯವರಿಗೆ ಅಪ್ರಿಯವಾಗದು, ಏಕೆಂದರೆ ಅವರು ಈಗಾಗಲೇ ಬಲಿಷ್ಠ ಜಾತಿಗಳ ಶೋಷಣೆಗೆ ತುತ್ತಾಗಿದ್ದಾರೆ. ಅದರಲ್ಲೂ ಗಂಡಸರ ಶೋಷಣೆಗೆ ಹೊರತು ಹೆಂಗಸರದಲ್ಲ. ಈ ಹೆಂಗಸರಿಗೆ ಆ ಮೂಲಕ ಅವಕಾಶ ಸಿಗಲು ಅವರು ಸುಲಭವಾಗಿ ಬಿಟ್ಟುಕೊಡುತ್ತಾರೆ.

ಮೇಲುಜಾತಿಯ ಹೆಂಗಸರಿಗೆ ಹೇಗೋ ಒಂದಿಷ್ಟು ಅವಕಾಶ ಸಿಗುತ್ತಿದೆ ಹಾಗೂ ಜನರಲ್ ಖೋಟಾದಲ್ಲಿ ಅವರು ವಿಶೇಷ ಸ್ಥಾನ ಪಡೆಯುತ್ತಿದ್ದಾರೆ. ಅವರು ಉತ್ತಮ ಶಿಕ್ಷಣ ಪಡೆದು ಸ್ವತಂತ್ರರಾಗಿದ್ದಾರೆ. ಹಾರ್ದಿಕ್‌ ಪಟೇಲ್ ‌ಇಂಥ ಹೆಂಗಸರಿಗಾಗಿ ಹೆಚ್ಚುವರಿ ಮೀಸಲಾತಿ ಕೇಳಿದರೆ ಸುಲಭವಾಗಿ ಸಿಗಬಹುದು. ಮುಂದೆ ಈ ಹೆಂಗಸರು ಈ ಮೀಸಲಾತಿಯ ಸೌಲಭ್ಯದಿಂದ ಶಿಕ್ಷಣ, ನೌಕರಿ ಗಳಿಸಿ ಮುಂದಿನ ಪೀಳಿಗೆ ಮೀಸಲಾತಿ ಬಯಸದಂತೆ ಸಲಹುವಲ್ಲಿ ಯಶಸ್ವಿಯಾಗುತ್ತಾರೆ.

ಹೆಂಗಸರಿಗೆ ಮೀಸಲಾತಿಯ ಹೆಸರಲ್ಲಿ ಸಿಗುತ್ತಿರುವ ಸೌಲಭ್ಯ ಕೇವಲ ನೆಪಮಾತ್ರವಾಗಿದೆ. ಅಲ್ಲಿಂದ ಮುಂದೆ ಈ ಹೆಂಗಸರು ಕೆರಿಯರ್‌ನಲ್ಲಿ ಹೆಸರು ಗಳಿಸಲಾಗುತ್ತಿಲ್ಲ. ಅವರು ಕೇವಲ ಕೆಲವು ಕಾಲ ಗಂಡಸರ ಸೂತ್ರದ ಗೊಂಬೆಗಳಾಗಿರುತ್ತಾರೆ. ಯಾವಾಗ 50% ಮೀಸಲಾತಿಯು ಇಂಥ ಕೆಳಜಾತಿಯ ಹೆಂಗಸರಿಗೆ ಇಡಿಯಾಗಿ ಸಿಗುತ್ತದೋ ಆಗ ಮಾತ್ರ ಅಸಲಿ ಮೀಸಲಾತಿ ಸಿಕ್ಕಿತೆಂದು ಅರ್ಥ. ಹಾರ್ದಿಕ್‌ ಪಟೇಲ್ ‌ಗೆ ಈ ಹೆಚ್ಚುವರಿ ಮೀಸಲಾತಿ ಸಿಗುತ್ತದೋ ಇಲ್ಲವೋ, ಕಾಲವೇ ನಿರ್ಣಯಿಸಬೇಕು.

ಸಭ್ಯ ಸಮಾಜದ ಪಿತೂರಿ

ಜಪಾನಿನಲ್ಲಿ ಹೆಂಗಸರ ಸಶಕ್ತೀಕರಣಕ್ಕಾಗಿ ಒಂದು ಹೊಸ ಕಾನೂನು ಜಾರಿಗೊಳಿಸಲಾಗಿದೆ, ಅದರಿಂದಾಗಿ ಅವರು ಮನೆ ಮತ್ತು ಕೆಲಸದ ಜಾಗದಲ್ಲಿ ಮತ್ತಷ್ಟು ಹೆಚ್ಚು ಹಕ್ಕುಗಳನ್ನು ಪಡೆಯಬಹುದಾಗಿದೆ. ಕಛೇರಿ ಆಡಳಿತದಲ್ಲಿ ಅವರು ಪೂರ್ಣ ರೀತಿಯಲ್ಲಿ ಭಾಗವಹಿಸಲಿ. ಹೆಂಗಸರಾದ ಕಾರಣಕ್ಕೆ ಅವರ ಪ್ರಗತಿ ಕುಂಠಿತಗೊಳ್ಳದಿರಲಿ ಎಂಬುದು. ಜಪಾನಿನ ಆಡಳಿತ ವರ್ಗದಲ್ಲಿ ಕೇವಲ 11% ಹೆಂಗಸರಿದ್ದಾರೆ, ಅದೇ ಸ್ವೀಡನ್‌, ಅಮೆರಿಕಾದಲ್ಲಿ 30% ಇದ್ದಾರೆ.

ಈಗಿನ ಪ್ರಶ್ನೆ ಎಂದರೆ ಇಷ್ಟು ದಿನ ಇಲ್ಲದ್ದು ಈಗ 2015ರಲ್ಲಿ ಜಪಾನಿಗೆ ಇಂಥ ಕಾನೂನು ರೂಪಿಸಬೇಕಾಯ್ತೆ? ಈ ಕೆಲಸ ತಂತಾನೇ ಆಗಬೇಕಾದುದು ಇದೀಗ ಕಾನೂನಿನ ವತಿಯಿಂದ ಏಕೆ ನಡೆಯುತ್ತಿದೆ? ಹಣದ ವಿಷಯದಲ್ಲಿ ಅಡ್ಡಿ ಇಲ್ಲದಾಗ, ಆಧುನಿಕ ವಿಚಾರಧಾರೆ ಇಲ್ಲಿ ಸಾಮಾನ್ಯ ಎನಿಸಿರುವಾಗ, ಧಾರ್ಮಿಕ ಕಂದಾಚಾರ ಕಡಿಮೆ ಇರುವಾಗ….. ಇಷ್ಟೆಲ್ಲ ಇದ್ದೂ ಅಲ್ಲಿನ ಹೆಣ್ಣು ಜಪಾನಿ ಗೊಂಬೆಯಾಗಿಯೇ ಉಳಿದುಬಿಟ್ಟಿದ್ದೇಕೆ? ಗಂಡಸರ ಸನ್ನೆಗೆ ಕುಣಿಯುತ್ತಿದ್ದುದೇಕೆ? ಈಗವರಿಗೆ ತುಸು ಮುಕ್ತಿ ಸಿಗುತ್ತಿದೆ ಎಂದರೆ ಅದು ದಾನಪಾತ್ರೆಗೆ ಹಾಕಿದ ನಾಣ್ಯಗಳಂತಾಗಿದೆ.

ಜಪಾನಿನಲ್ಲಿ ಹೆಂಗಸರು ಎಷ್ಟೋ ದಶಕಗಳಿಂದ ಗಂಡಸಿಗೆ ಸರಿಸಮಾನರಾಗಿ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಿದ್ದಾರೆ. ಆದರೆ ಇವರ ಹೆಗಲ ಮೇಲೆ ಭಾರಿ ಹೊರೆ ಇದೆ, ಜೊತೆಗೆ ಹಗ್ಗದಿಂದ ಕಟ್ಟಿಹಾಕಲ್ಪಟ್ಟಿದೆ. ಸಂಪ್ರದಾಯದ ಹೆಸರಿನಲ್ಲಿ ಇಂದಿಗೂ ಹೆಂಗಸರು ಬಹಳಷ್ಟು ಸಹಿಸುತ್ತಿದ್ದಾರೆ, ಗಂಡಸರಿಗೆ ಆ ಗೊಡವೆ ಇಲ್ಲ.

ಯಾವಾಗಿನಿಂದ ಯುದ್ಧ ಹಾಗೂ ಸುರಕ್ಷತೆಯ ವಿಷಯದಲ್ಲಿ ಹೊಸ ವಿಜ್ಞಾನ ಹಾಗೂ ಹೊಸ ತಾಂತ್ರಿಕತೆ ಬಂದಿದೆಯೋ, ಗಂಡಸರ ಶಕ್ತಿ ನಿರರ್ಥಕ ಎನಿಸುತ್ತಿದೆ. ಹೆಂಗಸರು ದೈಹಿಕವಾಗಿ ದುರ್ಬಲರು ಎಂಬುದು ಭ್ರಮೆ. ಪ್ರಕೃತಿಯಲ್ಲಿ ಗಂಡುಹೆಣ್ಣು ತಮ್ಮಷ್ಟಕ್ಕೆ ತಾವು ಸ್ವತಂತ್ರವಾಗಿ ಜೀವಿಸುತ್ತಾರೆ. ಮಕ್ಕಳನ್ನು ಹೆರುವ ಅನಿವಾರ್ಯತೆ ಇರುವ ಹೆಣ್ಣು ಸಹ ಗಂಡಿನ ಮೇಲೆಯೇ ಅವಲಂಬಿಸಬೇಕಿಲ್ಲ. ಹೆಂಗಸರು ಗಂಡಸರ ಗುಲಾಮರಾಗಿ ಇರಬೇಕೆಂಬುದು ನಿಜಕ್ಕೂ ಸಭ್ಯ ಸಮಾಜದ ಪಿತೂರಿಯಾಗಿದೆ. ಅವರನ್ನು ಹಲವು ದಶಕಗಳಿಂದ ಸತತ ಬ್ರೇನ್‌ ವಾಶ್‌ ಮಾಡಲಾಗುತ್ತಿದೆ.

ಜಪಾನಿನ ಈಗಿನ ಕಾನೂನು ದೊಡ್ಡ ಮೈಲಿಗಲ್ಲವೇನಲ್ಲ. ಉನ್ನತ, ಪ್ರಗತಿಪರ ದೇಶಗಳೂ ಸಹ ಸೆಕ್ಸ್ ಆಧಾರಿತ ಭೇದಭಾವಗಳನ್ನು ಕೊನೆಗೊಳಿಸಿಲ್ಲ ಎಂಬುದನ್ನು ನೆನಪಿಸುತ್ತದಷ್ಟೆ. ಹಾಗಿರುವಾಗ ಭಾರತದಂಥ ಹಿಂದುಳಿದ, ಬಡ, ಮೂಢನಂಬಿಕೆಗಳೇ ಪ್ರಧಾನವಾದ, ಕಂದಾಚಾರಿಗಳ ಸಮಾಜದ ಬಗ್ಗೆ ಹೇಳುವುದಾದರೂ ಏನು?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ