ಉಡುಗೊರೆಗಳನ್ನು ಕೊಡುಕೊಳ್ಳುವಿಕೆ ದೀಪಾವಳಿಯ ಪರಂಪರೆಯ ಅವಿಚಿನ್ನ ಭಾಗವಾಗಿದೆ. ಅದರಿಂದ ಸಂಬಂಧಗಳಲ್ಲಿ ಆತ್ಮೀಯತೆಯ ಅನುಭವ ಉಂಟಾಗುತ್ತದೆ. ಹೀಗಿರುವಾಗ ನೀವು ನಿಮ್ಮ ವಿಶೇಷ ಸಂಬಂಧಿ ಅಂದರೆ ನಿಮ್ಮ ಪ್ರೀತಿಯ ಪತ್ನಿಯನ್ನು ಹೇಗೆ ಮರೆಯುತ್ತೀರಿ? ನೀವು ಅವರಿಗೆ ಅನೇಕ ಬಾರಿ ಉಡುಗೊರೆಗಳನ್ನು ಕೊಟ್ಟಿರಬಹುದು. ಆದರೆ ಈ ದೀಪಾವಳಿಯಲ್ಲಿ ನಿಮ್ಮ ಬೆಟರ್ ಹಾಫ್‌ಗೆ ಎಂತಹ ಉಡುಗೊರೆ ಕೊಡಬೇಕೆಂದರೆ ನಿಮ್ಮ ಸಂಬಂಧಗಳ ಅವಿಚಿನ್ನ ಬಂಧನದಿಂದ ನಿಮ್ಮ ದೀಪಾವಳಿ ಉಜ್ವಲವಾಗಿರುತ್ತದೆ.
ಆಭೂಷಣಗಳು ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಸಣ್ಣ ಪುಟ್ಟ ಸಂದರ್ಭಗಳಲ್ಲಿ ನೀವು ಪತ್ನಿಗೆ ಉಡುಗೊರೆಯಾಗಿ ಕೊಟ್ಟಿರಬಹುದು. ಈ ಬಾರಿ ವೈಟ್ ಗೋಲ್ಡ್, ಪ್ಲಾಟಿನಂ, ಡೈಮಂಡ್ ಅಥವಾ ಪರ್ಲ್ ಸೆಟ್ ಉಡುಗೊರೆಯಾಗಿ ಕೊಡಿ. ಅದರಿಂದ ಅವರ ಜ್ಯೂವೆಲರಿ ಕಲೆಕ್ಷನ್‌ನಲ್ಲಿ ಹೊಸ ರೀತಿಯ ಸ್ಟೈಲಿಶ್ ಮತ್ತು ಟ್ರೆಂಡಿ ಜ್ಯೂವೆಲರಿ ಹೆಚ್ಚಾಗಿ ನಿಮ್ಮ ಲೈಫ್ ಪಾರ್ಟ್‌ನರ್‌ಮುಖದಲ್ಲಿ ಮುಗುಳ್ನಗೆ ಅರಳುತ್ತದೆ. ಆಭೂಷಣಗಳಂತೂ ಮಹಿಳೆಯರ ಮೊದಲ ಆದ್ಯತೆಯಾಗಿವೆ.
ಟ್ರೆಡ್ ಮಿಲ್
ಒಂದು ವೇಳೆ ನಿಮ್ಮ ಲೈಫ್ ಪಾರ್ಟ್‌ನರ್‌ಗೆ ಫಿಟ್ನೆಸ್ ಮತ್ತು ಹೆಲ್ತ್ ನ ಉಡುಗೊರೆ ಕೊಡಲು ಬಯಸಿದರೆ ಇದೊಂದು ಉತ್ತಮ ಆಯ್ಕೆಯಾಗಿದೆ. ಟ್ರೆಡ್ ಮಿಲ್‌ನಲ್ಲಿ ವರ್ಕ್ ಔಟ್ ಮಾಡುವುದರಿಂದ ಅನೇಕ ಲಾಭಗಳಿವೆ. ಅದರಿಂದ ಸ್ಟ್ರೆಸ್‌ನಿಂದ ಮುಕ್ತಿ ಸಿಗುತ್ತದೆ. ಆಕ್ಸಿಜನ್‌ನ ಪ್ರಮಾಣ ಹೆಚ್ಚುತ್ತದೆ. ಟ್ರೆಡ್ ಮಿಲ್‌ನಲ್ಲಿ ಓಡುವುದರಿಂದ ಅವರ ಹೃದಯ ಆರೋಗ್ಯವಾಗಿರುತ್ತದೆ. ಅದರಲ್ಲಿ ವರ್ಕ್‌ಔಟ್ ಮಾಡುವುದರಿಂದ ಬೆವರು ಬರುತ್ತದೆ. ಅದರಿಂದ ತ್ವಚೆಯ ಪೋರ್ಸ್ ತೆರೆದು ತ್ವಚೆಯ ಟಾಕ್ಸಿನ್‌ಗಳು ಹೊರಹೋಗಿ ತ್ವಚೆ ಹೊಳೆಯುತ್ತದೆ. ದೇಹದ ಹೆಚ್ಚುವರಿ ಕೊಬ್ಬನ್ನು ಬರ್ನ್ ಮಾಡಲೂ ಸಹ 10-15 ನಿಮಿಷಗಳ ಟ್ರೆಡ್ ಮಿಲ್ ವರ್ಕ್ ಔಟ್ ಸಾಕು. ಅದರಿಂದ ದೇಹದ ಮೆಟಬಾಲಿಸಂ ಹೆಚ್ಚುತ್ತದೆ ಹಾಗೂ ನಿಮ್ಮ ಪತ್ನಿ ಯಾವಾಗಲೂ ಎನರ್ಜೆಟಿಕ್ ಆಗಿರುತ್ತಾರೆ.
ವೆಯಿಂಗ್ ಮೆಶಿನ್
ನಿಮ್ಮ ಪತ್ನಿ ಸ್ಲಿಮ್, ಟ್ರಿಮ್ ಆಗಿ ಮಾಡೆಲ್‌ಗಳಂತೆ ಕಾಣಬೇಕೆಂದಿದ್ದರೆ ಈ ದೀಪಾವಳಿಯಲ್ಲಿ ಅವರಿಗೆ ವೆಯಿಂಗ್ ಮೆಶಿನ್ ಗಿಫ್ಟ್ಸ್ ಕೊಡಿ. ಅದನ್ನು ಉಪಯೋಗಿಸಿ ಅವರು ಹೆಚ್ಚುತ್ತಿರುವ ಅಥವಾ ಕಡಿಮೆಯಾಗುತ್ತಿರುವ ತೂಕದ ಬಗ್ಗೆ ಗಮನಕೊಟ್ಟು ಸ್ಲಿಮ್ ಟ್ರಿಮ್ ಆಗಬಹುದು. ಮಾರುಕಟ್ಟೆಯಲ್ಲಿ ಆಟೋ ಆನ್ ಅಂಡ್ ಆಫ್ ಫೆಸಿಲಿಟಿ ಇರುವ ಪ್ಲ್ಯಾಸ್ಟಿಕ್ ಮತ್ತು ಗ್ಲಾಸ್ ಪ್ಲ್ಯಾಟ್ ಫಾರಂನ ಅನೇಕ ವೆಯಿಂಗ್ ಮೆಶಿನ್‌ಗಳು ಲಭ್ಯವಿವೆ. ಅವುಗಳಲ್ಲಿ ಎಲ್ಇಡಿ ಇಂಡಿಕೇಟರ್ ಲೈಟ್, ಮ್ಯಾಕ್ಸಿಮವ್ ವೇಟ್ ಕೆಪಾಸಿಟಿ, ಡಿಜಿಟಲ್ ಡಿಸ್‌ಪ್ಲೇ ಗಳಂತಹ ಅನುಕೂಲವಿದೆ. ಇವುಗಳಿಂದ ತೂಕವನ್ನು ನಿಯಂತ್ರಿಸಬಹುದು. ಜೊತೆಗೆ ಬಿಎಂಐನ್ನು ನಿರ್ಧರಿಸಿ ಡಯೆಟ್ ಪ್ಲ್ಯಾನ್ ಮಾಡಿಕೊಳ್ಳಬಹುದು. ಈ ಉಡುಗೊರೆಯನ್ನು ಉಪಯೋಗಿಸಿ ನಿಮ್ಮ ಪತ್ನಿ ಸದಾ ಹೆಲ್ದಿ ಅಂಡ್ ಫಿಟ್ ಆಗಿ ಕಾಣುತ್ತಾರೆ.
ಸ್ಕೂಟಿ ಈ ದೀಪಾವಳಿಯಲ್ಲಿ ನಿಮ್ಮ ಪತ್ನಿಗೆ ಸ್ಕೂಟಿಯನ್ನು ಅನುಪಮ ಗಿಫ್ಟ್ ಆಗಿ ಕೊಡಬಹುದು. ಸ್ಕೂಟಿಯಿಂದ ಅವರ ಆತ್ಮವಿಶ್ವಾಸ ಹೆಚ್ಚಾಗುತ್ತದೆಯಲ್ಲದೇ ಅವರು ಸ್ವಾವಲಂಬಿಯಾಗಿರುತ್ತಾರೆ. ಮಕ್ಕಳನ್ನು ಶಾಲೆಗೆ ಬಿಡುವುದು, ಸಂಜೆ ಮನೆಗೆ ಕರೆತರುವುದು, ಬ್ಯೂಟಿ ಪಾರ್ಲರ್‌ಗೆ ಹೋಗಲು ಅಥವಾ ಇನ್ಯಾವುದಾದರೂ ಕೆಲಸವಿದ್ದರೆ ನಿಮ್ಮ ಈ ಯೂನಿಕ್ ಗಿಫ್ಟ್ ಅವರಿಗೆ ಸಹಾಯವಾಗುತ್ತದೆ. ಅವರು ಸ್ಕೂಟಿ ಉಪಯೋಗಿಸುವಾಗೆಲ್ಲ ನಿಮಗೆ ಮನದಲ್ಲೇ ಧನ್ಯವಾದ ಅರ್ಪಿಸುತ್ತಾರೆ.
ಏರ್‌ಕಂಡೀಶನರ್ ಹೊರಗಿನ ವಾತಾವರಣ ಬಿಸಿಯಾಗಿದ್ದರೆ ಬೆಡ್‌ರೂಮನ್ನು ತಂಪಾಗಿಡಲು ನಿಮ್ಮ ಪತ್ನಿಗೆ ಈ ಗಿಫ್ಟ್ ಕೊಡಬಹುದು. ಈ ದೀಪಾವಳಿಯಲ್ಲಿ ನೀವು ಉಡುಗೊರೆಯಾಗಿ ಕೊಟ್ಟ ಏ.ಸಿ. ಸುಡುವ ಬಿಸಿಲಿನಲ್ಲೂ ಅವರ ಮೂಡ್‌ನ್ನು ಫ್ರೆಶ್‌ಆಗಿಡುತ್ತದೆ ಮತ್ತು ಅವರು ಯಾವಾಗಲೂ ನಸುನಗುತ್ತಿರುತ್ತಾರೆ. ಅದರ ಸಂಪೂರ್ಣ ಕ್ರೆಡಿಟ್ ನಿಮಗೇ ಸೇರುತ್ತದೆ. ಮಾರುಕಟ್ಟೆಯಲ್ಲಿ ವಿಂಡೋ ಏ.ಸಿ. ಮತ್ತು ಸ್ಪಿಲಟ್ ಏ.ಸಿ.ಯ ಅನೇಕ ಆಯ್ಕೆಗಳಿವೆ. ವಿಂಡೋ ಏ.ಸಿ.ಗಳು 1 ಟನ್‌ನಿಂದ 1.5 ಟನ್‌ನ ವೆರೈಟಿಗಳಲ್ಲಿ ಸಿಗುತ್ತವೆ. ಈಗ ಮಾರುಕಟ್ಟೆಯಲ್ಲಿ 2 ಸ್ಟಾರ್‌ನಿಂದ 5 ಸ್ಟಾರ್‌ವರೆಗೆ ಏ.ಸಿ. ಲಭ್ಯವಿವೆ. ಅವು ಪರ್ಫೆಕ್ಟ್ ಕೂಲಿಂಗ್ ಕೊಡುವ ಜೊತೆ ಜೊತೆಗೆ ಪವರ್‌ಸೋರ್ಸ್‌ನ ಕೆಲಸವನ್ನೂ ಮಾಡುತ್ತವೆ. ಅವು ನಿಮ್ಮ ಪತ್ನಿಗೆ ಕಂಫರ್ಟೆಬಲ್ ಹಾಗೂ ಹೆಲ್ದಿ ವಾತಾವರಣ ನೀಡುತ್ತವೆ.
ಕಿಚನ್ ಟೆಲಿವಿಷನ್
ಈ ದೀಪಾವಳಿಯಲ್ಲಿ ನಿಮ್ಮ ಪತ್ನಿ ನಿಮಗಿಷ್ಟವಾದ ತಿಂಡಿಗಳನ್ನು ಕಿಚನ್‌ನಲ್ಲಿ ತಯಾರಿಸುವಾಗ ಅವರಿಗಿಷ್ಟವಾದ ಮೂವಿ ಅಥವಾ ಬೇರೆ ಕಾರ್ಯಕ್ರಮಗಳನ್ನು ನೋಡುವ ಅವಕಾಶ ಕೊಡಿ. ಅವರಿಗೆ ಕಿಚನ್ ಟೆಲಿವಿಷನ್ ಗಿಫ್ಟ್ ಕೊಡಬಹುದು. ಅದು ಅವರಿಗೆ ಸುಖಕರವಾದ ಸರ್‌ಪ್ರೈಸ್ ಆಗುತ್ತದೆ. ಮಾರುಕಟ್ಟೆಯಲ್ಲಿ ಎಲ್ಇಡಿ, ಎಚ್‌ಡಿ, ಎಲ್‌ಸಿಡಿ, 15 ಇಂಚು, 16 ಇಂಚು ಇತ್ಯಾದಿ ಅನೇಕ ಸೈಜಿನ ಟೆಲಿವಿಷನ್‌ಗಳು ಲಭ್ಯವಿವೆ. ಅಡುಗೆ ಮಾಡುವಾಗ ಅವರು ಯಾವುದೇ ಟಿ.ವಿ. ಧಾರಾವಾಹಿಯನ್ನು ಮಿಸ್‌ಮಾಡಬೇಕಾಗಿಲ್ಲ. ಅದಕ್ಕಾಗಿ ಅವರು ನಿಮಗೆ ಯಾವಾಗಲೂ ಆಭಾರಿಯಾಗಿರುತ್ತಾರೆ. ಇದು ನಿಮ್ಮಿಬ್ಬರ ನಡುವಿನ ಪ್ರೀತಿಯ ಕೆಮಿಸ್ಟ್ರಿಯನ್ನು ಇನ್ನಷ್ಟು ಸದೃಢಗೊಳಿಸುತ್ತದೆ.
ಸೆಕ್ಯೂರಿಟಿ ಸಿಸ್ಟಮ್
ನಿಮ್ಮ ಬದುಕಿನಲ್ಲಿ ನಿಮ್ಮ ಪತ್ನಿಗಿಂತ ಮಹತ್ವಪೂರ್ಣರಾದವರು ಬೇರಾರಿದ್ದಾರೆ? ನೀವು ಅವರ ಸುರಕ್ಷತೆಯನ್ನು ಹೇಗೆ ಅಲಕ್ಷಿಸುತ್ತೀರಿ? ಈ ದೀಪಾವಳಿಯಲ್ಲಿ ನಿಮ್ಮ ಪ್ರೀತಿಯ ಪತ್ನಿಗೆ ಸುರಕ್ಷತೆಯ ಉಡುಗೊರೆ ಅಂದರೆ ಸೆಕ್ಯೂರಿಟಿ ಸಿಸ್ಟಂನ ಗಿಫ್ಟ್ ಕೊಡಿ. ಈ ಸೆಕ್ಯೂರಿಟಿ ಸಿಸ್ಟಂ ಸೆಕ್ಯೂರಿಟಿ ಗಾರ್ಡ್‌ಗಿಂತಲೂ ಉತ್ತಮವಾಗಿ ನಿಮ್ಮ ಪತ್ನಿಯನ್ನು ರಕ್ಷಿಸುತ್ತದೆ. ಈ ಸೆಕ್ಯೂರಿಟಿ ಸಿಸ್ಟಂ ಅಳವಡಿಸಿ, ನೀವು ಟೆನ್ಶನ್ ಫ್ರೀ ಆಗಿರಬಹುದು. ಸ್ಮೋಕ್ ಇಂಡಿಕೇಟರ್, ಬೆಂಕಿಯಿಂದ ರಕ್ಷಣೆ, ಅಪರಿಚಿತರನ್ನು ಗುರುತಿಸಿದ ನಂತರ ಮನೆಯೊಳಗೆ ಬಿಡುವ ಈ ಸೆಕ್ಯೂರಿಟಿ ಸಿಸ್ಟಮ್ಸ್ ನಲ್ಲಿ ಫಿಂಗರ್ ಪ್ರಿಂಟ್ ಲಾಕ್ಸ್, ಕೀ ಇಲ್ಲದೆ ಬಾಗಿಲು ತೆರೆಯುವ ಸೌಲಭ್ಯ, ಡೂಪ್ಲಿಕೇಟ್ ಕೀ ಮಾಡಿಸುವ ಆಯ್ಕೆಯೇ ಇಲ್ಲ. ವಿಡಿಯೋ ಡೋರ್ ಫೋನ್, ಟೂ ವೇ ಕಮ್ಯೂನಿಕೇಶನ್, ಸ್ಪೀಕರ್‌ಸಿಸ್ಟಂ, ಒಳಗಿನಿಂದ ಎಲೆಕ್ಟ್ರಾನಿಕ್ ಲಾಕ್ ತೆರೆಯುವ ಸೌಲಭ್ಯ ಇತ್ಯಾದಿಗಳಿವೆ. ಒಟ್ಟಿನಲ್ಲಿ ನಿಮ್ಮ `ಪ್ರಾಣ`ದ ಪ್ರಾಣ ಕಾಪಾಡುವ ಸರ್ವೋತ್ತಮ ಉಡುಗೊರೆ. ಇದಕ್ಕಿಂತ ಹೆಚ್ಚು ಉಪಯೋಗವಾಗುವ ಉಡುಗೊರೆ ಬೇರೇನಿದೆ?
ಐಟಿ ಗ್ಯಾಜೆಟ್ಸ್
ನಿಮ್ಮ ಪತ್ನಿ ಟೆಕ್ನೋಸೇವಿ ಆಗಬೇಕೆಂದು ನಿಮ್ಮ ಇಚ್ಛೆಯಾಗಿದ್ದರೆ, ಟೆಕ್ನಾಲಜಿಯ ಹೊಸ ಹೊಸ ಗ್ಯಾಜೆಟ್ಸ್ ಗಳಿಂದ ಅಪ್‌ಡೇಟೆಡ್ ಆಗಿರಲಿ. ಅದಕ್ಕಾಗಿ ಈ ದೀಪಾವಳಿಯಲ್ಲಿ ಅವರಿಗೆ ಐಟಿ ಗ್ಯಾಜೆಟ್ಸ್ ನ್ನು ಉಡುಗೊರೆಯಾಗಿ ಕೊಡಬಹುದು. ಐಟಿ ಗ್ಯಾಜೆಟ್ಸ್ ಗಳಲ್ಲಿ ಗಿಫ್ಟಿಂಗ್‌ನ ಅನೇಕ ಆಪ್ಶನ್‌ಗಳಿರುತ್ತವೆ. ಉದಾಹರಣೆಗೆ ಸ್ಮಾರ್ಟ್ ಫೋನ್, ಐಪಾಡ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್, ಹ್ಯಾಂಡಿ ಕ್ಯಾಮ್, ಜಿಪಿಎಸ್ ಫಿಟ್ನೆಸ್ ಟ್ರೇನರ್‌ನಂತಹ ಗ್ಯಾಜೆಟ್ಸ್ ಮಾರ್ಕೆಟ್‌ನಲ್ಲಿವೆ. ಅವರು ಸುಂದರ ಕ್ಷಣಗಳನ್ನು ಒಟ್ಟುಗೂಡಿಸಿ ಇಟ್ಟುಕೊಳ್ಳಲು ಬಯಸಿದರೆ ಹ್ಯಾಂಡಿಕ್ಯಾಮ್ ಒಂದು ಒಳ್ಳೆಯ ಗಿಫ್ಟ್ ಆಪ್ಶನ್ ಆಗುತ್ತದೆ.
ಜಿಪಿಎಸ್ ಫಿಟ್ನೆಸ್ ಟ್ರ್ಯಾಕರ್
ಈ ಗ್ಯಾಜೆಟ್‌ನಲ್ಲಿ ಸ್ಮಾರ್ಟ್ ಎಂಪಿ3 ಪ್ಲೇಯರ್ ಇದೆ. ಅದು ಸ್ವಾಟ್‌ಪ್ರೂಫ್ ಮತ್ತು ಸ್ಟೈಲಿಶ್ ಆಗಿದೆ. ಇದರಲ್ಲಿ ಜಿಪಿಎಸ್ ಹಾರ್ಟ್
ರೇಟ್ ಕೇಪಬಿಲಿಟಿ ಇದೆ. ಇದು ಆ್ಯಂಡ್ರಾಯಿಡ್ ಬೇಸ್ ಆಗಿದೆ. ಇದು ನಿಮ್ಮ ರನ್ನಿಂಗ್ ಆ್ಯಕ್ಟಿವಿಟಿ ಮತ್ತು ಅದರ ಜಿಪಿಎಸ್ ನಿಮ್ಮ ದೂರವನ್ನು ಅಳೆಯುವ ಕೆಲಸ ಮಾಡುತ್ತದೆ. ಈ ಗ್ಯಾಜೆಟ್ ನಿಮ್ಮ ಪತ್ನಿಯನ್ನು ಫಿಟ್ ಆಗಿಡಲು ಸಹಾಯವಾಗುತ್ತದೆ.
ನೀವು ಬಯಸಿದರೆ ನಿಮ್ಮ ಪತ್ನಿಗೆ ಐಪಾಡ್ ಉಡುಗೊರೆಯಾಗಿ ನೀಡಬಹುದು. ಅದರಲ್ಲಿ ಅರಿಗಿಷ್ಟವಾದ ಸಂಗೀತ, ಹಾಡುಗಳು ಇರಬೇಕು. ಈ ಗಿಫ್ಟ್ ಪಡೆದು ಅವರು ಖಂಡಿತ ನಿಮ್ಮನ್ನು ಹೆಚ್ಚು ಪ್ರೀತಿಸುತ್ತಾರೆ.
ಇದಲ್ಲದೆ ನೀವು ಅವರಿಗೆ ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್‌ನ್ನು ಉಡುಗೊರೆಯಾಗಿ ನೀಡಬಹುದು. ಅದರಿಂದ ನಿಮ್ಮಿಬ್ಬರ ನಡುವಿನ ಬೇಸರ ಕಡಿಮೆಯಾಗಿ ಆಪ್ತತೆ ಹೆಚ್ಚುತ್ತದೆ. ನೀವು ಅವರೊಂದಿಗೆ ಚೆನ್ನಾಗಿ ಕನೆಕ್ಟೆಡ್ ಆಗಿ ಇರಬಹುದು. ಜೊತೆಗೆ ನಿಮ್ಮ ಪತ್ನಿ ಆನ್‌ಲೈನ್ ಬ್ಯಾಂಕಿಂಗ್ ಮತ್ತು ಇನ್ವೆಸ್ಟ್ ಮೆಂಟ್‌ನಂತಹ ಟ್ರೆಂಡ್‌ಗಳನ್ನು ತಿಳಿದುಕೊಂಡು ನಿಮಗೆ ಸಹಾಯ ಮಾಡಬಹುದು.
– ರಾಧಿಕಾ ಮೋಹನ್