ಸಾಮಗ್ರಿ : 2-3 ಈರುಳ್ಳಿ, ಹೆಚ್ಚಿದ ಬೀನ್ಸ್, ಕ್ಯಾರೆಟ್, ಎಲೆಕೋಸು (ತಲಾ 1-1 ಕಪ್), ತುಸು ತುರಿದ ಶುಂಠಿ, ತೆಂಗು, ಬೆಳ್ಳುಳ್ಳಿ, 250 ಗ್ರಾಂ ಮಸೆದ ಪನೀರ್, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಟೊಮೇಟೊ ಕೆಚಪ್, ಆಶೀರ್ವಾದ್ ಮಲ್ಟಿಗ್ರೇನ್ ಆಟಾದಿಂದ ತಯಾರಿಸಿದ ಮೃದುವಾದ 8-10 ಚಪಾತಿಗಳು, ಒಗ್ಗರಣೆಗೆ ಎಣ್ಣೆ ಇತ್ಯಾದಿ.
ವಿಧಾನ : ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ತುರಿದ ಬೆಳ್ಳುಳ್ಳಿ, ಶುಂಠಿ ಆಮೇಲೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಹೆಚ್ಚಿದ ತರಕಾರಿ ಸೇರಿಸಿ, ನೀರು ಚಿಮುಕಿಸುತ್ತಾ ಬಾಡಿಸಿ. ಮುಚ್ಚಳ ಮುಚ್ಚಿ ಬೇಯಲು ಬಿಡಿ. ಆಮೇಲೆ ಮಸೆದ ಪನೀರ್, ತೆಂಗಿನ ತುರಿ ಹಾಕಿ ಬಾಡಿಸಬೇಕು. ಕೊನೆಯಲ್ಲಿ ಉಪ್ಪು, ಮೆಣಸು, ಟೊಮೇಟೊ ಕೆಚಪ್ ಬೆರೆಸಿ ಚೆನ್ನಾಗಿ ಕೆದಕಿ ಕೆಳಗಿಳಿಸಿ. ಈ ಪನೀರ್ ಪಲ್ಯ ಆರುವ ಮೊದಲೇ ತುಪ್ಪ ಸವರಿದ ಚಪಾತಿಗಳಲ್ಲಿ ಹರಡಿ, ರೋಲ್ ಮಾಡಿಕೊಂಡು ಈರುಳ್ಳಿ ಬಿಲ್ಲೆ, ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.