ಈ ಕೆಳಗಿನ ಸಲಹೆ ಅನುಸರಿಸಿ ಚಟ್ನಿ ಹೆಚ್ಚು ರುಚಿಕರವಾಗಿಸಿ :

ನೀವು ಕೊ.ಸೊಪ್ಪಿನ ಚಟ್ನಿ ಮಾಡಲಿದ್ದೀರಾ? ಹಾಗಾದರೆ ಇದಕ್ಕೆ ಹುಳಿ ಮೊಸರು ಅಥವಾ ನಿಂಬೆ ರಸ, ತುಪ್ಪದಲ್ಲಿ ಹುರಿದ ಕಡಲೆಬೀಜ ಅಥವಾ ಗೋಡಂಬಿಯನ್ನು ಪೇಸ್ಟ್ ಮಾಡಿ ಅಗತ್ಯ ಇದಕ್ಕೆ ಬೆರೆಸಿರಿ. ಆಗ ಸಾಧಾರಣ ಕೊ.ಸೊಪ್ಪಿನ ಚಟ್ನಿ ಬೊಂಬಾಟ್‌ ರುಚಿ ಪಡೆಯುತ್ತದೆ.

ಪುದೀನಾ ಚಟ್ನಿ ಮಾಡುವಾಗ ಅದಕ್ಕೆ ತುಸು ಆಮ್ಚೂರ್‌ಪುಡಿ, ಬೆಲ್ಲವನ್ನು ಅಗತ್ಯ ಸೇರಿಸಿ. ಇದರಿಂದ ಚಟ್ನಿಯ ಸ್ವಾದ ಹೆಚ್ಚುತ್ತದೆ.

ಯಾವುದೇ ಬಗೆಯ ಚಟ್ನಿ ಇರಲಿ, ರುಚಿಯಲ್ಲಿ ವ್ಯತ್ಯಾಸ ಕಂಡುಕೊಳ್ಳಲು, ಮಾಮೂಲಿ ಉಪ್ಪಿನ ಬದಲು ಸೈಂಧವ ಲವಣ (ಬ್ಲ್ಕಾಕ್‌ಸಾಲ್ಟ್) ಉಪಯೋಗಿಸಿ.

ಟೊಮೇಟೊ ಚಟ್ನಿ ಮಾಡುವಾಗ ಅಗತ್ಯ ಅದಕ್ಕೆ ಬೆಳ್ಳುಳ್ಳಿ ಸೇರಿಸಿ. ಕಾಯಿ ಚಟ್ನಿಗೂ ನಡುನಡುವೆ ಇದನ್ನು ಬಳಸಿಕೊಳ್ಳಿ.

ಈರುಳ್ಳಿ ಚಟ್ನಿ ಮಾಡುವಾಗ, ಅಗತ್ಯ ಅದಕ್ಕೆ ಹೆಚ್ಚಿದ ಈರುಳ್ಳಿ ತೆನೆ (ಸೀಸನ್‌ನಲ್ಲಿ ಲಭ್ಯವಿರುವಾಗ) ಬಾಡಿಸಿ ಹಾಕಿ. ಆಗ ಈರುಳ್ಳಿ ಚಟ್ನಿಯ ರುಚಿ ಹೆಚ್ಚುತ್ತದೆ.

ತಾಜಾ ಕಾಯಿ ಚಟ್ನಿ ಮಾಡುವಾಗ ಅದಕ್ಕೆ ಹುರಿಗಡಲೆ, ತುಸು ಹುರಿದ ಕಡಲೆಕಾಯಿ ಬೀಜ, ಶುಂಠಿ, ಕರಿಬೇವಿನೊಂದಿಗೆ ತಿರುವಿಕೊಳ್ಳಿ. ಹಾಗೇ ಪ್ರತಿ ಸಲ ಹುಣಿಸೇಹಣ್ಣು ಬಳಸುವ ಬದಲು ಒಮ್ಮೊಮ್ಮೆ ನಿಂಬೆರಸ ಹಿಂಡಿಕೊಳ್ಳಿ, ಟೇಸ್ಟ್ ಡಿಫರೆಂಟ್ ಆಗಿರುತ್ತದೆ.

ಚಟ್ನಿ ಪುಡಿ ತಯಾರಿಸುವಾಗ ಹುರಿದ ಕ/ಉ ಬೇಳೆ ಜೊತೆ ಅಗತ್ಯವಾಗಿ ಹುರಿದ ಒಣ ಮೆಣಸಿನಕಾಯಿ, ಕಡಲೆಕಾಯಿ ಬೀಜ, ಜೀರಿಗೆ, ತುರಿದ ಕೊಬ್ಬರಿ, ಉಪ್ಪು, ಹುಣಿಸೆಪುಡಿ, ಬೆಳ್ಳುಳ್ಳಿ ಸೇರಿಸಿ. ಇದರಿಂದ ರುಚಿ ಹೆಚ್ಚುತ್ತದೆ.

ತಂಬುಳಿಯಲ್ಲಿ ವಿಭಿನ್ನತೆ ತರಲು ಹುಳಿ ಮೊಸರಿಗೆ ಹುರಿದ ಕಡಲೆಕಾಯಿ ಬೀಜ, ಕಾಳುಮೆಣಸು, ಸೈಂಧವ ಲವಣ, ಚಾಟ್‌ ಮಸಾಲೆ ಬೆರೆಸಿ ಮಿಕ್ಸಿಯಲ್ಲಿ ತಿರುವಿಕೊಳ್ಳಿ. ನಿಮಗೆ ಬೇಕಾದ ಬೆಂದ ತರಕಾರಿ ಬೆರೆಸಿ, ಇದರೊಂದಿಗೆ ಇನ್ನಷ್ಟು ಮೊಸರು ಬೆರೆಸಿ ಕುದಿಸಿದರೆ ಸ್ವಾದಿಷ್ಟ ತಂಬುಳಿ ರೆಡಿ!

ಸೂಪ್‌ ಸಾಕಷ್ಟು ಥಿಕ್‌ ಆಗಿರ ಬಯಸಿದರೆ ಅದಕ್ಕೆ ಮೆಣಸು, ಬ್ಲ್ಯಾಕ್‌ ಸಾಲ್ಟ್, ಇಂಗು, ಮೇಲ್ಭಾಗಕ್ಕೆ ಫ್ರೆಶ್‌ ಕ್ರೀಂ, ಟೋಸ್ಟ್ ಪೀಸ್‌ಹಾಕಿಡ.

ಕಾರ್ನ್‌ಫ್ಲೋರ್‌ಗೆ ತುಸು ಬಿಸಿ ನೀರು ಕದಡಿಕೊಂಡು ಸೂಪ್‌ ಗಟ್ಟಿ ಆಗಿಸಿ.

ಸೂಪ್‌ಗೆ ಅನ್ನದ ಗಂಜಿ ಬೆರೆಸಿರಿ, ಇದರಿಂದ ಸೂಪ್‌ ಗಟ್ಟಿಯಾಗಿ ರುಚಿ ಹೆಚ್ಚುತ್ತದೆ.

ಬೆಂದ ಆಲೂ ಚೆನ್ನಾಗಿ ಫೈನ್‌ ಮ್ಯಾಶ್‌ ಮಾಡಿ ಸೂಪ್‌ಗೆ ಬೆರೆಸಿರಿ.

ಮೈದಾ ಸಹ ತುಸು ಬೆಚ್ಚಗೆ ಹುರಿದು ಇದಕ್ಕೆ ಬೆರೆಸಬಹುದು.

ಸೂಪ್‌ ರೆಡಿ ಆಗಿ, ಬಟ್ಟಲಿಗೆ ತುಂಬಿಸಿದ ನಂತರವೇ ಕ್ರೀಂ ಬೆರೆಸಬೇಕು.

ಆರಾರೂಟ್‌ಗೂ ಸಹ ಬಿಸಿ ನೀರು ಬೆರೆಸಿ ಪೇಸ್ಟ್ ಮಾಡಿ ಸೂಪ್‌ಗೆ ಬೆರೆಸಿ. ಗಟ್ಟಿ ಸೂಪ್‌ ರೆಡಿ ಆಗುತ್ತದೆ.

ಎಲೆಕೋಸನ್ನು ಹೆಚ್ಚಿ ಬೇಯಿಸಿ, ಮಿಕ್ಸಿಯಲ್ಲಿ ತಿರುವಿಕೊಂಡು ಸೂಪ್‌ಗೆ ಬೆರೆಸಿಕೊಳ್ಳಿ.

ಗಸಗಸೆ ಪೇಸ್ಟ್ ಮಾಡಿ ಸೂಪ್‌ಗೆ ಬೆರೆಸಿ ವಿಭಿನ್ನ ರುಚಿ ಬರುತ್ತದೆ.

ಅದೇ ರೀತಿ ಗೋಡಂಬಿ, ಬಾದಾಮಿ, ಪಿಸ್ತಾಗಳನ್ನು ಬೇರೆ ಬೇರೆಯಾಗಿ ಪೇಸ್ಟ್ ಮಾಡಿಕೊಂಡು ಅಥವಾ ಎರಡೆರಡರ ಕಾಂಬಿನೇಶನ್‌ ಬೆರೆಸಿ ಟ್ರೈ ಮಾಡಿ.

- ಜ್ಯೋತಿ ರಾವ್

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ