ವಾಟರ್ಮೆಲನ್ಸ್ಮೂದಿ

ಸಾಮಗ್ರಿ : 1 ಸಣ್ಣ ಗಾತ್ರದ ಚೆನ್ನಾಗಿ ಮಾಗಿದ ಕಲ್ಲಂಗಡಿಹಣ್ಣು, ಒಂದಿಷ್ಟು ಹೆಚ್ಚಿದ ಪುದೀನಾ, ರುಚಿಗೆ ತಕ್ಕಷ್ಟು ನಿಂಬೆರಸ, ಬ್ಲ್ಯಾಕ್ ಸಾಲ್ಟ್, ಪುಡಿಸಕ್ಕರೆ, ಒಂದಿಷ್ಟು ಪುಡಿ ಐಸ್‌.

ವಿಧಾನ : ಕಲ್ಲಂಗಡಿ ಹೋಳುಗಳ (ಬೀಜ ರಹಿತ)ನ್ನು ಪುದೀನಾ ಜೊತೆಯಲ್ಲಿ ಮಿಕ್ಸಿಯಲ್ಲಿ ನುಣ್ಣಗೆ ಮಾಡಿಕೊಳ್ಳಿ. ಇದಕ್ಕೆ ಉಳಿದೆಲ್ಲ ಸಾಮಗ್ರಿ ಸೇರಿಸಿ ಮತ್ತೊಮ್ಮೆ ಮಿಕ್ಸಿ ಚಲಾಯಿಸಿ, ಉದ್ದನೆ ಗ್ಲಾಸುಗಳಿಗೆ ತುಂಬಿಸಿ, ಪುಡಿಐಸ್‌ ಹಾಕಿ ಸವಿಯಲು ಕೊಡಿ.

ಲೆಮನ್ಮಿಂಟ್ಐಸ್ಡ್ ಟೀ

ಸಾಮಗ್ರಿ : 2 ರಸಭರಿತ ನಿಂಬೆಹಣ್ಣು, ಒಂದಿಷ್ಟು ಪುದೀನಾ, ಪುಡಿಐಸ್‌, ಟೀಪುಡಿ, ತುಸು ನೀರು.

ವಿಧಾನ : ಮೊದಲು ನೀರಿಗೆ ಟೀ ಪುಡಿ, ಪುದೀನಾ ಹಾಕಿ ಟೀ ಡಿಕಾಕ್ಷನ್‌ ಕುದಿಸಿ, ಚರಟ ಬೇರ್ಪಡಿಸಿ. ಇದನ್ನು ಸ್ವಲ್ಪ ಹೊತ್ತು ಆರಲು ಬಿಡಿ. ತಣ್ಣಗಿನ ಇದಕ್ಕೆ ನಿಂಬೆರಸ ಬೆರೆಸಿ ಇದನ್ನು 2-3 ಗ್ಲಾಸುಗಳಿಗೆ ತುಂಬಿಸಿ, ಮೇಲೆ ಒಂದಿಷ್ಟು ಐಸ್‌ ಕ್ಯೂಬ್ಸ್ ಹಾಕಿ, ಪುದೀನಾ ತೇಲಿಬಿಟ್ಟು, ನಿಂಬೆ ಸ್ಲೈಸ್‌ ಸಿಗಿಸಿ ತಣ್ಣಗೆ ಸವಿಯಲು ಕೊಡಿ.

drinks-cookery-2

ಕೂಲ್ ಆರೆಂಜ್ಡಿಲೈಟ್

ಸಾಮಗ್ರಿ : 1 ಲೀ. ಫುಲ್ ಕ್ರೀಂ ಹಾಲು, 1 ಕಪ್‌ ಆರೆಂಜ್‌ ಜೂಸ್‌, 1 ದೊಡ್ಡ ಚಮಚ ಗೋಡಂಬಿ ಬಾದಾಮಿ ಚೂರು, 1 ಸಣ್ಣ ಚಮಚ ಟೂಟಿಫ್ರೂಟಿ, 2 ಚಿಟಕಿ ಏಲಕ್ಕಿಪುಡಿ, ಅಲಂಕರಿಸಲು ಆರೆಂಜ್‌ ಸಿಪ್ಪೆಯ ಸುರುಳಿ.

ವಿಧಾನ : ಹಾಲು ಕಾಯಿಸಲಿಟ್ಟು, ಅದಕ್ಕೆ ಗೋಡಂಬಿ ಬಾದಾಮಿ ಚೂರು ಬೆರೆಸಿ, ಮಂದ ಉರಿಯಲ್ಲಿ ಅರ್ಧದಷ್ಟು ಹಿಂಗುವವರೆಗೂ ಕುದಿಸುತ್ತಲಿರಿ. ಕೆಳಗಿಳಿಸಿ ಚೆನ್ನಾಗಿ ಆರಿದ ನಂತರ ಮಿಕ್ಸಿಗೆ ಹಾಕಿ ಗ್ರೈಂಡ್‌ ಮಾಡಿ. ಈ ಮಿಶ್ರಣವನ್ನು 1 ಗಂಟೆ ಕಾಲ ಫ್ರಿಜ್‌ನಲ್ಲಿರಿಸಿ. ನಂತರ ಇದಕ್ಕೆ ಏಲಕ್ಕಿ, ಟೂಟಿಫ್ರೂಟಿ, ಆರೆಂಜ್‌ ಜೂಸ್‌ ಬೆರೆಸಿ ಚೆನ್ನಾಗಿ ಕದಡಿಕೊಂಡು ಚಿತ್ರದಲ್ಲಿರುವಂತೆ ಉದ್ದನೆ ಗ್ಲಾಸುಗಳಿಗೆ ಸುರಿದು, ಆರೆಂಜ್‌ ಸಿಪ್ಪೆಯಿಂದ ಅಲಂಕರಿಸಿ ತಣ್ಣಗೆ ಸವಿಯಲು ಕೊಡಿ.

ಸ್ಟ್ರಾಬೆರಿ ರೋಸ್ಲೆಮೋನೇಡ್

ಸಾಮಗ್ರಿ : 4-5 ಸ್ಟ್ರಾಬೆರಿ, 1 ದೊಡ್ಡ ರಸಭರಿತ ನಿಂಬೆಹಣ್ಣು, 1 ಚಮಚ ಜೇನು, 4-5 ದೊಡ್ಡ ಚಮಚ ಸ್ಟ್ರಾಬೆರಿ ಸ್ಕ್ವಾಶ್‌, 8-10 ಹನಿ ಗುಲಾಬಿ ಜಲ, 2 ಸಣ್ಣ ಚಮಚ ರೋಸ್‌ ಸ್ಕ್ವಾಶ್‌, ರುಚಿಗೆ ತಕ್ಕಷ್ಟು ಸಕ್ಕರೆ, ಪುಡಿಐಸ್‌.

ವಿಧಾನ :  ತಣ್ಣೀರಿಗೆ ಜೇನು, ಪುಡಿಸಕ್ಕರೆ, ಗುಲಾಬಿ ಜಲ, ನಿಂಬೆ ರಸ ಬೆರೆಸಿ ಮಿಕ್ಸಿಯಲ್ಲಿ ಬ್ಲೆಂಡ್‌ ಮಾಡಿ. ಸ್ಟ್ರಾಬೆರಿ ಶುಚಿಗೊಳಿಸಿ ಪೇಸ್ಟ್ ಮಾಡಿಕೊಳ್ಳಿ. ನಂತರ ಇದನ್ನು ಸ್ಟೀಲ್ ಜರಡಿಯಲ್ಲಿ ಸೋಸಿಕೊಂಡು ನಿಂಬೆ ಮಿಶ್ರಣಕ್ಕೆ ಬೆರೆಸಿರಿ, ಮತ್ತೆ ಬ್ಲೆಂಡ್‌ ಮಾಡಿ. ಇದನ್ನು ಗ್ಲಾಸುಗಳಿಗೆ ಬಗ್ಗಿಸಿ, ಪುಡಿಐಸ್‌ ಪುದೀನಾ ಹಾಕಿ, ಸ್ಟ್ರಾಬೆರಿ ರೋಸ್‌ ಸ್ಕ್ವಾಶ್‌ ಬೆರೆಸಿ ಸವಿಯಲು ಕೊಡಿ.

cookery-drinks-3

ರೋಸ್ಡ್ರಿಂಕ್

ಸಾಮಗ್ರಿ : ಅರ್ಧ ಲೀ. ಫುಲ್ ಕ್ರೀಂ ಹಾಲು, 4 ಚಮಚ ರೋಸ್‌ ಸಿರಪ್‌, ರುಚಿಗೆ ತಕ್ಕಷ್ಟು ಸಕ್ಕರೆ, ಅಲಂಕರಿಸಲು ಒಂದಿಷ್ಟು ಗುಲಾಬಿ ದಳಗಳು.

ವಿಧಾನ : ಹಾಲು ಕಾಯಿಸಿ. ಸಕ್ಕರೆ ಬೆರೆಸಿ ಚೆನ್ನಾಗಿ ಕದಡುತ್ತಾ ಅರ್ಧದಷ್ಟು ಹಿಂಗಿಸಿ. ಇದನ್ನು ಕೆಳಗಿಳಿಸಿ ಆರಿದ ಮೇಲೆ ರೋಸ್ ಸಿರಪ್‌ ಬೆರೆಸಿ, 1 ಗಂಟೆ ಕಾಲ ಫ್ರಿಜ್‌ನಲ್ಲಿರಿಸಿ, ನಂತರ ಗುಲಾಬಿ ದಳ ಉದುರಿಸಿ ಸವಿಯಲು ಕೊಡಿ.

ಮಿಂಟ್ಮಜ್ಜಿಗೆಯ ಮೋಡಿ

ಸಾಮಗ್ರಿ : ಅರ್ಧ ಲೀ. ಗಟ್ಟಿ ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಸಣ್ಣಗೆ ಹೆಚ್ಚಿದ 1 ಹಸಿ ಮೆಣಸು, ಕೊ.ಸೊಪ್ಪು, ಕರಿಬೇವು, ಪುದೀನಾ, ಶುಂಠಿ, ಹುರಿದು ಪುಡಿ ಮಾಡಿದ ಜೀರಿಗೆ.

ವಿಧಾನ : 1 ಸೌಟು ಮೊಸರಿಗೆ ಹೆಚ್ಚಿದ ಉಳಿದ ಸಾಮಗ್ರಿ ಸೇರಿಸಿ ಮಿಕ್ಸಿಯಲ್ಲಿ ಚೆನ್ನಾಗಿ ಬ್ಲೆಂಡ್‌ ಮಾಡಿ. ಉಳಿದ ಮೊಸರನ್ನು ಕಡೆದು ಮಜ್ಜಿಗೆ ಮಾಡಿ. ಇದಕ್ಕೆ ಬೆರೆಸಿ, ಮತ್ತೆ ಬ್ಲೆಂಡ್‌ ಮಾಡಿ, ಪುಡಿಐಸ್‌ ಹಾಕಿ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ