ಕಾಲಿಫ್ಲವರ್ಕುರ್ಮಾ

ಸಾಮಗ್ರಿ : 1 ಸ್ಯಾಚೆಟ್‌ ಫ್ರೈಡ್‌ ರೈಸ್‌ ಮಸಾಲೆ, 2 ಈರುಳ್ಳಿ, 1 ಕಪ್‌ ಬೆಂದ ಹಸಿ ಬಟಾಣಿ, 1 ದೊಡ್ಡ ಹೂಕೋಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹೆಚ್ಚಿದ ಹಸಿ ಮೆಣಸು, ನಿಂಬೆರಸ, ಹೆಚ್ಚಿದ ಕೊ.ಸೊಪ್ಪು, ತುಸು ಎಣ್ಣೆ, ಒಗ್ಗರಣೆ ಸಾಮಗ್ರಿ.

ವಿಧಾನ : ಮೊದಲು ಹೂಕೋಸು ಬಿಡಿಸಿ, ಬಿಸಿ ನೀರಿಗೆ ಹಾಕಿ ಶುಚಿಗೊಳಿಸಿ ಸಣ್ಣದಾಗಿ ಹೆಚ್ಚಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಒಗ್ಗರಣೆ ಕೊಡಿ. ಇದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಹಸಿ ಮೆಣಸು, ಹೂಕೋಸು ಹಾಕಿ ಚೆನ್ನಾಗಿ ಬಾಡಿಸಿ. ಆಮೇಲೆ ಬೆಂದ ಬಟಾಣಿ ಸೇರಿಸಿ ಕೆದಕಿರಿ. ನಂತರ ಉಪ್ಪು, ಖಾರ, ಫ್ರೈಡ್‌ ರೈಸ್‌ ಮಸಾಲೆ ಹಾಕಿ ಚೆನ್ನಾಗಿ ಕೆದಕಿ ಕೆಳಗಿಳಿಸಿ. ಇದಕ್ಕೆ ನಿಂಬೆ ರಸ  ಹಿಂಡಿಕೊಂಡು ಬಿಸಿಯಾಗಿ ಅನ್ನ, ರೊಟ್ಟಿ ಜೊತೆ ಸವಿಯಿರಿ.

ಪನೀರ್ಕೋಫ್ತಾ

ಸಾಮಗ್ರಿ : 2 ಕಪ್‌ ತುರಿದ ಪನೀರ್‌,  ಅರ್ಧ ಕಪ್‌ ಮೈದಾ, ತುಸು ಕಾರ್ನ್‌ಫ್ಲೋರ್‌, 2-3  ಹಸಿಮೆಣಸು, 1-1 ಹಸಿರು, ಕೆಂಪು, ಹಳದಿ ಕ್ಯಾಪ್ಸಿಕಂ, 2 ಈರುಳ್ಳಿ, 5-6 ಎಸಳು ಬೆಳ್ಳುಳ್ಳಿ, 1 ಸಣ್ಣ ತುಂಡು ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಪನೀರ್‌ ಚಿಲೀ ಮಸಾಲ (ರೆಡಿಮೇಡ್‌), ಕರಿಯಲು ಎಣ್ಣೆ.

ವಿಧಾನ : ತುರಿದ ಪನೀರ್‌ಗೆ ಕಾರ್ನ್‌ಫ್ಲೋರ್‌, ಚಿಟಕಿ ಉಪ್ಪು, ಖಾರ ಹಾಕಿ ಮಿಶ್ರಣ ಕಲಸಿಡಿ. ಇದರಿಂದ ಸಣ್ಣ ಸಣ್ಣ ಉಂಡೆ ಮಾಡಿಕೊಂಡು ಕಾದ ಎಣ್ಣೆಯಲ್ಲಿ  ಕರಿಯಿರಿ. ಅದೇ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಉಳಿಸಿಕೊಂಡು, ಮೊದಲು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ನಂತರ ಒಂದೊಂದಾಗಿ 3 ಬಗೆ ಕ್ಯಾಪ್ಸಿಕಂ ಹಾಕಿ ಶುಂಠಿ ಜೊತೆ ಬಾಡಿಸಬೇಕು. ನಂತರ ಹೆಚ್ಚಿದ ಹಸಿ ಮೆಣಸು, ಉಪ್ಪು, ರೆಡಿಮೇಡ್‌ ಮಸಾಲೆ ಹಾಕಿ ಮಂದ ಉರಿಯಲ್ಲಿ ಬಾಡಿಸಿ. ಇದಕ್ಕೆ ಅರ್ಧ ಕಪ್‌ ನೀರು ಬೆರೆಸಿ ಗ್ರೇವಿ ಕುದಿಸಿರಿ. ಕೊನೆಯಲ್ಲಿ ಕರಿದ ಪನೀರ್‌ ಉಂಡೆ. ತೇಲಿಬಿಟ್ಟು ಒಡೆಯದಂತೆ ನಿಧಾನ ಬೆರೆಸಿಕೊಳ್ಳಿ. 2 ನಿಮಿಷ ಬಿಟ್ಟು ಬಿಸಿಯಾಗಿ ಪೂರಿ, ಚಪಾತಿ ಜೊತೆ ಸವಿಯಲು ಕೊಡಿ.

ಸ್ವೀಟ್ಪೊಟೇಟೊ ವೆಜ್ಕರೀ

ಸಾಮಗ್ರಿ : 2 ದೊಡ್ಡ ಸಿಹಿ ಗೆಣಸು (ಬೇಯಿಸಿಡಿ), 1 ಕೆಂಪು ಕ್ಯಾಪ್ಸಿಕಂ (ಹೆಚ್ಚಿಡಿ), 1 ಈರುಳ್ಳಿ, 1-2 ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಪನೀರ್‌ ಚಿಲೀ ಮಸಾಲ, ತುಸು ಎಣ್ಣೆ.

ವಿಧಾನ : ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ಮೊದಲು ಹೆಚ್ಚಿದ ಈರುಳ್ಳಿ, ನಂತರ ಕ್ಯಾಪ್ಸಿಕಂ ಹಾಕಿ ಬಾಡಿಸಿ. ನಂತರ ಬೆಂದ ಗೆಣಸನ್ನು ಬಿಲ್ಲೆಗಳಾಗಿ ಹೆಚ್ಚಿ ಹಾಕಿ. ನಂತರ ಉಳಿದ ಸಾಮಗ್ರಿ ಬೆರೆಸಿ, ಕೆದಕಿ, ತುಸು ನೀರು ಬೆರೆಸಿ ಕುದಿಸಿರಿ. ಗ್ರೇವಿ ಗಟ್ಟಿಯಾದಾಗ ಕೆಳಗಿಳಿಸಿ, ಬಿಸಿಯಾಗಿ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ