ಬ್ಲೂಬೆರಿ ಸರ್ಪ್ರೈಸ್

ಸಾಮಗ್ರಿ : 4-5 ದೊಡ್ಡ  ಚಮಚ ಕ್ರಶ್ಡ್ ಬ್ಲೂ ಬೆರಿ, 1 ಕ್ಯಾನ್‌ ಜಿಂಜರ್‌ ಏಲ್ (ಕಾರ್ಬೊನೇಟೆಡ್‌ ಸಾಫ್ಟ್ ಡ್ರಿಂಕ್ಸ್), 4-5 ಪುದೀನಾ ಎಲೆ, 1 ನಿಂಬೆಹಣ್ಣು, 1-2 ಚಮಚ ನಿಂಬೆ ಕುಸುಮೆ, ಚಿಟಕಿ ಉಪ್ಪು.

ವಿಧಾನ :  ಪುದೀನಾ ಎಲೆ, ನಿಂಬೆ ಕುಸುಮೆಯನ್ನು ಮಿಕ್ಸಿಗೆ ಹಾಕಿ. ಬ್ಲೆಂಡ್‌ ಮಾಡಿ ಇದಕ್ಕೆ ಬ್ಲೂ ಬೆರಿ ಬೆರೆಸಿ ಮತ್ತೊಮ್ಮೆ ಚಲಾಯಿಸಿ. ಇದನ್ನು ಲೋಟಗಳಿಗೆ ಸುರಿದು ಮೇಲೆ ಪುಡಿ ಐಸ್‌, ಜಿಂಜರ್‌ ಏಲ್ ಸುರಿದು, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

ಸ್ಪೆಷಲ್ ಪಂಚ್

ಸಾಮಗ್ರಿ :  7-8 ಚಮಚ ಲಾವಂಚದ ರಸ, 300 ಎಂ.ಎಲ್ ಸೋಡ, 2-3 ಚಮಚ ಶುಗರ್‌ ಸಿರಪ್‌, 5-6 ಚಮಚ ಪುಡಿ ಐಸ್‌, 1 ಸಣ್ಣ ಚಮಚ ಕೇದಗೆ ಎಸೆನ್ಸ್.

ವಿಧಾನ : ಎಲ್ಲವನ್ನೂ ಜೂಸರ್‌ಗೆ ಬೆರೆಸಿ ಮಿಕ್ಸಿ ಚಲಾಯಿಸಿ. ಫ್ರೆಶ್‌ ಪೇಯವನ್ನು ಉದ್ದದ ಗ್ಲಾಸಿಗೆ ತುಂಬಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

kiwi-khas

ಕಿವೀ ಸ್ಮೂದಿ

ಸಾಮಗ್ರಿ :  2-3 ಕಿವೀ ಫ್ರೂಟ್‌, 1-2 ಸೇಬು, 3-4 ಚಮಚ ಜೇನುತುಪ್ಪ, 3-4 ಚಮಚ ಹಂಗ್‌ ಕರ್ಡ್‌, 3-4 ಚಮಚ ಕಾದಾರಿದ ಗಟ್ಟಿ ಹಾಲು, 3-4 ಐಸ್‌ ಕ್ಯೂಬ್ಸ್.

ವಿಧಾನ :  ಕಿವೀ, ಸೇಬುಗಳ ಸಿಪ್ಪೆ ಹೆರೆದು ಮಿಕ್ಸಿಗೆ ಹಾಕಿ ಚಲಾಯಿಸಿ. ನಂತರ ಉಳಿದೆಲ್ಲ ಸಾಮಗ್ರಿ ಬೆರೆಸಿ ಮತ್ತೊಮ್ಮೆ ಚಲಾಯಿಸಿ. ಇದನ್ನು ಗ್ಲಾಸ್‌ಗೆ ಸುರಿದು ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

chaklete-freaky-shake

ಚಾಕಲೇಟ್ಫ್ರೀಕೀ ಶೇಕ್

ಸಾಮಗ್ರಿ : 4-5 ಚಮಚ ವೆನಿಲಾ ಐಸ್‌ ಕ್ರೀಂ, 4-5 ಚಮಚ ಚಾಕಲೇಟ್‌ ಐಸ್‌ ಕ್ರೀಂ, ಅರ್ಧ ಕಪ್‌ ಗಟ್ಟಿ ಕೆನೆ ಹಾಲು, 1 ಚಮಚ ಇನ್‌ಸ್ಟೆಂಟ್‌ ಕಾಫಿ ಪುಡಿ, 4 ಚಮಚ ಪುಡಿ ಸಕ್ಕರೆ, 4-6 ಚಮಚ ಚಾಕಲೇಟ್‌ ಸಿರಪ್‌, ಅಲಂಕರಿಸಲು ಅಗತ್ಯವಿದ್ದಷ್ಟು ಬ್ರೌನಿ, ಚೆರ್ರಿ ಹಣ್ಣು, ವೇಫರ್ಸ್‌.

ವಿಧಾನ : ಬ್ರೌನಿ ಹೊರತುಪಡಿಸಿ ಉಳಿದೆಲ್ಲವನ್ನೂ ಮಿಲ್ಕ್ ಶೇಕರ್‌ಗೆ ಹಾಕಿ ಚೆನ್ನಾಗಿ ಶೇಕ್‌ ಮಾಡಿ. 2-3 ಗ್ಲಾಸ್‌ಗೆ ಬ್ರೌನಿ ತುಂಡರಿಸಿ ಹಾಕಿ, ಅದರ ಮೇಲೆ ಈ ಮಿಶ್ರಣ ಸುರಿಯಿರಿ. ನಂತರ ಚಿತ್ರದಲ್ಲಿರುವಂತೆ ಚೆರ್ರಿ, ವೇಫರ್ಸ್‌ನಿಂದ ಅಲಂಕರಿಸಿ ಸವಿಯಲು ಕೊಡಿ.

pina-colada

ಪೀನಾ ಕೊಲಾಡಾ

ಸಾಮಗ್ರಿ :  1 ಕಪ್‌ ಪೈನ್‌ ಆ್ಯಪಲ್ ಪೇಸ್ಟ್, 200 ಎಂ.ಎಲ್ ಸ್ಪ್ರೈಟ್‌, ಅಗತ್ಯವಿದ್ದಷ್ಟು ಐಸ್‌ ಕ್ಯೂಬ್ಸ್.

ವಿಧಾನ :  ಪೈನ್‌ ಆ್ಯಪಲ್ ಪೇಸ್ಟ್ ಮತ್ತು ಐಸ್‌ ಕ್ಯೂಬ್ಸ್ ಸೇರಿಸಿ ಮಾಕ್‌ಟೇಲ್ ‌ಮಿಕ್ಸರ್‌ನಲ್ಲಿ ಚೆನ್ನಾಗಿ ಬ್ಲೆಂಡ್‌ ಮಾಡಿ ಶೇಕ್ ಸಿದ್ಧಪಡಿಸಿ. ಇದಕ್ಕೆ ಸ್ಪ್ರೈಟ್‌ ಬೆರೆಸಿ ಉದ್ದನೆ ಗ್ಲಾಸುಗಳಿಗೆ ಸುರಿದು, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

mint-blue-drinks

ಮೊಯಿತೋ ಮಿಂಟ್

ಸಾಮಗ್ರಿ :  10-12 ಪುದೀನಾ ಎಲೆ, 1 ನಿಂಬೆ ಹಣ್ಣು, 5-6 ಚಮಚ ಶುಗರ್‌ ಸಿರಪ್‌, 1 ಚಮಚ ಮೊಯಿತೋ (ರೆಡಿಮೇಡ್‌) ಸಿರಪ್‌, 5-6 ಐಸ್‌ ಕ್ಯೂಬ್ಸ್, ಅಗತ್ಯವಿದ್ದಷ್ಟು ಸೋಡ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ