ಸಾಮಗ್ರಿ : 2 ಕಪ್‌ ಗಟ್ಟಿ ಹಂಗ್‌ ಕರ್ಡ್‌, 4 ಚಮಚ ಗೋಡಂಬಿ ಪೇಸ್ಟ್, 2-3 ಚಮಚ ತಾಜಾ ಫ್ರೆಶ್‌ ಕ್ರೀಂ, ರುಚಿಗೆ ತಕ್ಕಷ್ಟು ಉಪ್ಪು, ಪುಡಿಮೆಣಸು, ಬೂರಾ ಸಕ್ಕರೆ, ತುರಿದ ಪ್ರೊಸೆಸ್ಡ್ ಚೀಸ್‌, ಏಲಕ್ಕಿ ಪುಡಿ, ಹೆಚ್ಚಿದ ಶುಂಠಿ, ಪುದೀನಾ ಚಟ್ನಿ.

ವಿಧಾನ : ಮೊದಲು ಬ್ರೋಕ್ಲಿ ಹೆಚ್ಚಿ, ಬೇಯಿಸಿ, ಅದನ್ನು ತಣ್ಣೀರಿಗೆ ಹಾಕಿಡಿ. ನಂತರ ಉಳಿದೆಲ್ಲ ಸಾಮಗ್ರಿ ಬೆರೆಸಿಕೊಂಡು, ಅದರಲ್ಲಿ ಬ್ರೋಕ್ಲಿ ತುಂಡು ಹಾಕಿರಿಸಿ ನೆನೆಯಲು ಬಿಡಿ. ನಂತರ ಇವಕ್ಕೆ ಬೆಣ್ಣೆ ಸವರಿ ತಂದೂರ್‌ ಅಥವಾ ಮೈಕ್ರೋವೇವ್‌ನಲ್ಲಿ  ಹದನಾಗಿ ಗ್ರಿಲ್ ‌ಮಾಡಿ. ನಂತರ ಬಿಸಿಯಾಗಿ ಇನ್ನು ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.

Single-tipsy-B

ಪೆಪ್ಪರ್ಕಾರ್ನ್ಚೀಸ್ರೋಲ್ಸ್

ಸಾಮಗ್ರಿ : 3 ಬಗೆ ಕ್ಯಾಪ್ಸಿಕಂ, ಬ್ಲ್ಯಾಕ್‌ ಆಲಿವ್ಸ್, ಈರುಳ್ಳಿ, ಟೊಮೇಟೊ, ಕ್ಯಾರೆಟ್‌, ಜೋಳದ ಕಾಳು (ನೀಟಾಗಿ ಹೆಚ್ಚಿದ್ದು, ತಲಾ ಅರ್ಧರ್ಧ ಕಪ್‌), 3 ಕಪ್‌ ಮೈದಾ, ಅರ್ಧ ಕಪ್‌ ಹಾಲು, ಒಂದಿಷ್ಟು ಸ್ಪ್ರಿಂಗ್‌ ರೋಲ್ ಶೀಟ್ಸ್, ರುಚಿಗೆ ತಕ್ಕಷ್ಟು ಉಪ್ಪು, ಪುಡಿಮೆಣಸು, ತುರಿದ ಚೀಸ್‌, ಹೆಚ್ಚಿದ ಪಾರ್ಸ್ಲೆ, ಕರಿಯಲು ಎಣ್ಣೆ.

ವಿಧಾನ : ಒಂದು ಬಾಣಲೆಯಲ್ಲಿ ತುಸು ಬೆಣ್ಣೆ ಬಿಸಿ ಮಾಡಿಕೊಂಡು, ಅದಕ್ಕೆ ಮೈದಾ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ನಂತರ ಇದಕ್ಕೆ ಕಾದಾರಿದ ಹಾಲು ಬೆರೆಸಿ ಚೆನ್ನಾಗಿ ಕುದಿ ಬರಿಸಿ. ನಂತರ ಇದಕ್ಕೆ ಉಪ್ಪು, ಮೆಣಸು ಬೆರೆಸಿ, ವೈಟ್‌ ಸಾಸ್‌ ತುಸು ಗಟ್ಟಿಯಾಗುವವರೆಗೂ ಕುದಿಸಿ ಕೆಳಗಿಳಿಸಿ ಆರಲು ಬಿಡಿ. ತಣ್ಣಗಾದ ಮೇಲೆ ಇದಕ್ಕೆ ಕ್ಯಾಪ್ಸಿಕಂ, ಆಲಿವ್ಸ್, ಈರುಳ್ಳಿ, ಟೊಮೇಟೊ, ಶುಂಠಿ, ಉಪ್ಪು, ಖಾರ, ಚೀಸ್‌, ಪಾರ್ಸ್ಲೆ, ಸೇರಿಸಿ ಹಾಗೂ ಸ್ಪ್ರಿಂಗ್‌ ರೋಲ್ ಶೀಟ್‌ನ ಒಂದು ಬದಿಗೆ ಈ ಮಿಶ್ರಣದಿಂದ 2-3 ಚಮಚ ಹರಡಿಕೊಳ್ಳಿ. ಚಿತ್ರದಲ್ಲಿರುವಂತೆ ನೀಟಾಗಿ ಇದನ್ನು ಫೋಲ್ಡ್ ‌ಮಾಡಿ, ಅಂಚನ್ನು ಒದ್ದೆ  ಕೈಯಿಂದ ಒತ್ತಿಬಿಡಿ. ಹೀಗೆ ಎಲ್ಲಾ ಶೀಟ್‌ಗಳಿಗೂ ಮಿಶ್ರಣ ತುಂಬಿಸಿ ರೆಡಿ ಮಾಡಿಕೊಂಡು ಕಾದ ಎಣ್ಣೆಯಲ್ಲಿ ಗರಿಗರಿಯಾಗಿ ಕರಿದು ಬಿಸಿಬಿಸಿಯಾಗಿ ಸಾಸ್‌ ಜೊತೆ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ