ನೂಡಲ್ಸ್ ಎಗ್ ಮೀಲ್
ಸಾಮಗ್ರಿ : 150 ಗ್ರಾಂ ನೂಡಲ್ಸ್, 4 ಬೆಂದ ಮೊಟ್ಟೆ, 100 ಗ್ರಾಂ ಬೆಂದ ಬಟಾಣಿ ಕಾಳು, 1 ಕೆಂಪು ಕ್ಯಾಪ್ಸಿಕಂ, 4-5 ಎಸಳು ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಪುಡಿ ಮೆಣಸು, ಓರಿಗ್ಯಾನೊ, ಟೊಮೇಟೊ ಸಾಸ್, ಗ್ರೀನ್ ಚಿಲಿಸಾಸ್, ಬೆಂದ ಜೋಳದ ಕಾಳು, ತುಸು ಹೆಚ್ಚಿದ ಕೊ.ಸೊಪ್ಪು.
ವಿಧಾನ : ಮೊದಲು ನೂಡಲ್ಸ್ ಬೇಯಿಸಿಕೊಂಡು ನೀರು ಬಸಿದಿಡಿ. ಜಿಡ್ಡು ಕೈಗಳಿಂದ ಇನ್ನು ಬೇರೆಯಾಗಿಸಿ. ಬೆಂದ ಮೊಟ್ಟೆಯ ಸಿಪ್ಪೆ ಸುಲಿದು ಉದ್ದಕ್ಕೆ ಹೆಚ್ಚಿಡಿ. ಬೇರೆ ತರಕಾರಿ ಹೆಚ್ಚಿಡಿ. ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ, ಬೆಂದ ಮೊಟ್ಟೆ ಹಾಕಿ ಲಘು ಫ್ರೈ ಮಾಡಿ ಬೇರೆಯಾಗಿಡಿ. ಅದಕ್ಕೆ ಇನ್ನಷ್ಟು ಎಣ್ಣೆ ಬೆರೆಸಿ ಈರುಳ್ಳಿ ಹಾಕಿ ಬಾಡಿಸಿ, ಬೇರೆಯಾಗಿಡಿ. ಅದಕ್ಕೆ ಈಗ ಬೆಳ್ಳುಳ್ಳಿ ಹಾಕಿ ಬಾಡಿಸಿ. ನಂತರ ಬಟಾಣಿ, ಕ್ಯಾಪ್ಸಿಕಂ, ಜೋಳದ ಕಾಳು ಹಾಕಿ ಕೈಯಾಡಿಸಿ. ಆಮೇಲೆ ಓರಿಗ್ಯಾನೊ, ಚಿಲೀ ಫ್ಲೇಕ್ಸ್, ಗ್ರೀನ್ ಚಿಲೀ ಸಾಸ್, ಟೊಮೇಟೊ ಸಾಸ್, ಉಪ್ಪು ಹಾಕಿ ಮೇಲೆ ನೂಡಲ್ಸ್ ಹಾಕಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಇದರ ಮೇಲೆ ಫ್ರೈಡ್ ಈರುಳ್ಳಿ, ಬೆಂದ ಮೊಟ್ಟೆಯಿಂದ ಅಲಂಕರಿಸಿ ಸವಿಯಲು ಕೊಡಿ.
ಪಾಲ್ ಮಿಟೋ ನೂಡಲ್ಸ್
ಸಾಮಗ್ರಿ : 150 ಗ್ರಾಂ ಬೆಂದ ನೂಡಲ್ಸ್, 50 ಗ್ರಾಂ ಬೆಣ್ಣೆ, 1 ದೊಡ್ಡ ಈರುಳ್ಳಿ, 1 ಕಪ್ ತುರಿದ ಬೂದುಗುಂಬಳ, 3 ಕೆಂಪು ಹಸಿ ಮೆಣಸಿನಕಾಯಿ, 5-6 ಎಸಳು ಬೆಳ್ಳುಳ್ಳಿ, 4 ಸಣ್ಣ ಚಮಚ ಮೆಯೋನೀಸ್, 10-12 ತಂಡು ಬೂದುಗುಂಬಳ, ರುಚಿಗೆ ತಕ್ಕಷ್ಟು ಉಪ್ಪು, ಪುಡಿಮೆಣಸು, ಚಿಲೀ ಫ್ಲೇಕ್ಸ್, ನಿಂಬೆರಸ, ಓರಿಗ್ಯಾನೋ, ತುಸು ಹೆಚ್ಚಿದ ಕೊ.ಸೊಪ್ಪು.
ವಿಧಾನ : ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿಕೊಂಡು ಬೂದುಗುಂಬಳದ ಹೋಳನ್ನು ಶ್ಯಾಲೋ ಫ್ರೈ ಮಾಡಿ ಬೇರೆಯಾಗಿಡಿ. ಉಳಿದ ಬೆಣ್ಣೆಗೆ ಹೆಚ್ಚಿದ ಕೆಂಪು ಮೆಣಸು, ಬೆಳ್ಳುಳ್ಳಿ, ಈರುಳ್ಳಿ ಹಾಕಿ ಬಾಡಿಸಿ. ಇದಕ್ಕೆ ತುರಿದ ಕುಂಬಳ ಹಾಕಿ ಬಾಡಿಸಿ. ಇದಕ್ಕೆ ತುಸು ಹಾಲು, ಉಪ್ಪು, ಖಾರ, ಮೆಣಸು, ಚಿಲೀ ಫ್ಲೇಕ್ಸ್ ಹಾಕಿ ಬಾಡಿಸಿ. ಮಂದ ಉರಿ ಮಾಡಿ ಮೆಯೋನೀಸ್, ನೂಡಲ್ಸ್ ಹಾಕಿ ಕೈಯಾಡಿಸಿ ಕೆಳಗಿಳಿಸಿ. ಇದಕ್ಕೆ ಓರಿಗ್ಯಾನೋ, ನಿಂಬೆ ರಸ, ಕೊ.ಸೊಪ್ಪು ಬೆರೆಸಿ, ಕುಂಬಳದ ಹೋಳುಗಳೊಂದಿಗೆ ಚಿತ್ರದಲ್ಲಿರುವಂತೆ ಅಲಂಕರಿಸಿ ಬಿಸಿ ಬಿಸಿಯಾಗಿ ಸವಿಯಲು ಕೊಡಿ.
ನೂಡಲ್ಸ್ ವಿತ್ ವೆಜ್ ಸೂಪ್
ಸಾಮಗ್ರಿ : 100 ಗ್ರಾಂ ಬೆಂದ ನೂಡಲ್ಸ್, ನೀಟಾಗಿ ಹೆಚ್ಚಿದ ಹೂಕೋಸು, ಎಲೆಕೋಸು, 1 ಟೊಮೇಟೊ, 4-5 ಬೀನ್ಸ್, ಬೇಬಿ ಕಾರ್ನ್, ಬ್ರೋಕ್ಲಿ, ಕ್ಯಾರೆಟ್, ಬೆಂದ ಬಟಾಣಿ (ತಲಾ 25-30 ಗ್ರಾಂ), 1 ಈರುಳ್ಳಿ, 3 ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಪುಡಿಮೆಣಸು, ನಿಂಬೆರಸ, ಬೆಣ್ಣೆ, ಬೆಳ್ಳುಳ್ಳಿ ಶುಂಠಿ ಪೇಸ್ಟ್, ಫ್ರೆಶ್ ಕ್ರೀಂ, ಹೆಚ್ಚಿ ಕೊ.ಸೊಪ್ಪು.