ಶತಶತಮಾನಗಳಿಂದ ಜಗತ್ತು ಮಹಿಳೆಯರನ್ನು ಸಪ್ತ ಪರದೆಗಳ ಹಿಂದೆ ಬಚ್ಚಿಟ್ಟು, ನಾಲ್ಕು ಗೋಡೆಗಳ ನಡುವೆ ಬಂಧಿಸಿಟ್ಟಿತ್ತು. ಅವಳ ಮೇಲೆ ಸತತ ನಿಗಾ ಇಡಲಾಯಿತು. ಏಕೆಂದರೆ ಸಮಾಜ ಹಾಕಿದ ನೀತಿ ನಿಯಮಗಳು, ಕಟ್ಟುಪಾಡುಗಳನ್ನು ಆಕೆ ಉಲ್ಲಂಘಿಸುತ್ತಿದ್ದಾಳೆಯೇ ಎಂದು ಕಂಡುಕೊಳ್ಳಲು ಪುರುಷ ಅವಳಿಗಾಗಿ ಪ್ರತಿಯೊಂದು ಕಡೆ ಗಡಿರೇಖೆ ಎಳೆದ. ಅವಳ ದೇಹ ಹಾಗೂ ಮನಸ್ಸಿಗೆ ಯಾವಾಗ ಯಾವ ವಸ್ತುವಿನ ಅವಶ್ಯಕತೆ ಇದೆ, ಅದನ್ನು ಎಷ್ಟರಮಟ್ಟಿಗೆ ಕೊಡಬೇಕು ಎನ್ನುವುದನ್ನು ಪುರುಷ ತನ್ನ ಅಗತ್ಯಕ್ಕನುಗುಣವಾಗಿ ನಿರ್ಧರಿಸಿದ. ಆದರೆ ಎಲ್ಲಕ್ಕೂ ಒಂದು ಇತಿಮಿತಿ ಎನ್ನುವುದು ಇದ್ದೇ ಇರುತ್ತದೆ. ಈ ಒತ್ತಡ  ಹುದುಗಿಸಿಡುವುದು ಕೊನೆಗೊಮ್ಮೆ ನಿಲ್ಲಲೇಬೇಕಿತ್ತು.

ಶಿಕ್ಷಣ ಅವಳಲ್ಲಿ ಬಲ ತುಂಬಿತು. ಪ್ರಜಾಪ್ರಭುತ್ವ ಅವಳಿಗೆ ನೆಲೆ ನಿಲ್ಲಲು ಅವಕಾಶ ಕೊಟ್ಟಿತು. ಯೋಚನೆ, ವಿಚಾರ ಮಾಡುವ ಹಾಗೂ ತನ್ನ ಹಕ್ಕುಗಳ ಬಗ್ಗೆ ಅರಿತುಕೊಳ್ಳಲು ಅವಕಾಶ ಕೊಟ್ಟಿತು. ಕಳೆದ ಹಲವು ದಶಕಗಳಲ್ಲಿ ಮಹಿಳೆ ಬಂಡೆದ್ದು ಇಲ್ಲಿ ಮನೆಯ ಪರಿಸ್ಥಿತಿಗಳಿಂದ ರೋಸಿ ಹೋಗಿ, ಅನಿವಾರ್ಯ ಪರಿಸ್ಥಿತಿಗಳಿಂದ ಆರ್ಥಿಕವಾಗಿ ಸ್ಥಿರತೆ ಕಂಡುಕೊಳ್ಳಲು ನಾಲ್ಕು ಗೋಡೆಗಳಿಂದ ಹೊರಗೆ ಹೆಜ್ಜೆ ಹಾಕಿದಳು. ಕಳೆದ 2 ದಶಕಗಳಲ್ಲಿ ಆರ್ಥಿಕ ಬಲವರ್ಧನೆಯ ಜೊತೆಗೆ ವೈಚಾರಿಕವಾಗಿ ಸಾಕಷ್ಟು ಗಟ್ಟಿಗಳಾದಳು. ಅವಳಿಗೆ ತನ್ನ ಕಾಯದಿಂದಲ್ಲ, ವ್ಯಕ್ತಿಯ ರೂಪದಲ್ಲಿ ಒಂದು ಗುರುತು ಸಿಕ್ಕಿತು.

ಸಂಕೋಲೆಗಳಿಂದ ಮುಕ್ತ ನಾರಿ ದೇಹ

ಇಂದಿನ ಮಹಿಳೆ ತನ್ನಿಚ್ಛೆಗಳನ್ನು ವ್ಯಕ್ತಪಡಿಸಲು ಹಿಂದೇಟು ಹಾಕುವುದಿಲ್ಲ. ಅವಳು ಏನಾದರೂ ಹೆಚ್ಚೂ ಕಡಿಮೆಯಾದರೆ ಅದರ ಪರಿಣಾಮ ಎದುರಿಸಲು ಸಿದ್ಧಳಿದ್ದಾಳೆ. ಅವಳು ತನ್ನ ವ್ಯಕ್ತಿತ್ವ ಹಾಗೂ ತಿಳಿವಳಿಕೆಯಿಂದ ಈವರೆಗೆ ಮಹಿಳೆಯರಿಗೆ ತೆರೆಯದೇ ಇದ್ದ ಬಾಗಿಲುಗಳನ್ನು ತನಗಾಗಿ ತೆರೆಯುತ್ತಿದ್ದಾಳೆ. ಎಲ್ಲಕ್ಕೂ ದೊಡ್ಡ ಕ್ರಾಂತಿ ದೈಹಿಕ ಮಟ್ಟದಲ್ಲಿ ಬಂದಿದೆ. ಸ್ತ್ರೀ ದೇಹದ ಮೇಲೆ ತನ್ನದೇ ಹಕ್ಕು ಎಂದು ಪ್ರತಿಪಾದಿಸುತ್ತ ಬಂದಿದ್ದ ಪುರುಷನ ದೃಷ್ಟಿಯ ಸಂಕೋಲೆಗಳಿಂದ ಅವಳು ತನ್ನ ದೇಹವನ್ನು ಮುಕ್ತಗೊಳಿಸಿಕೊಂಡಿದ್ದಾಳೆ. ಧಾರ್ಮಿಕ ಹಾಗೂ ಸಾಮಾಜಿಕ ಕಟ್ಟುಪಾಡುಗಳು ಅವಳ ದೇಹವನ್ನು ಗಟ್ಟಿಯಾಗಿ ಬಂಧಿಸಿಬಿಟ್ಟಿದ್ದ. ಅವನ್ನು ಅವಳು ಕಿತ್ತು ಬಿಸಾಡಿದ್ದಾಳೆ. ಅವಳು ತನ್ನ ದೈಹಿಕ ಅವಶ್ಯಕತೆಗಳಿಗಾಗಿ ಮುಕ್ತವಾಗಿ ಚರ್ಚಿಸಬಲ್ಲಳು. ಮೊದಲು ಮಹಿಳೆ ತನ್ನ ಇಚ್ಛೆಗಳನ್ನು ಪ್ರಕಟಪಡಿಸಲೂ ಸಂಕೋಚಪಡುತ್ತಿದ್ದಳು. ಅವಳೀಗ ತನಿಚ್ಛೆಯಂತೆ ಬೆಡ್‌ ಮೇಲೆ ಪುರುಷನನ್ನು ಬೆರಗುಗೊಳಿಸಬಲ್ಲಳು.

ಮದುವೆಗೂ ಮುನ್ನ ಒಪ್ಪಿಗೆಯ ಸೆಕ್ಸ್ ಗೂ ಅವಳಲ್ಲಿ ಯಾವುದೇ ಹಿಂದೇಟು ಉಳಿದಿಲ್ಲ. ಈ ಹೊಸ ಉನ್ಮುಕ್ತ ಸ್ತ್ರೀಯ ಚಲನವಲನಗಳು ಕೆಲವು ದಶಕಗಳ ಮುಂಚೆಯೇ ದಾಖಲಾಗಲು ಶುರುವಾಗಿದ್ದ. ವಿವಾಹದ ಅಸಮಾನ ಸ್ಥಿತಿಗಳಲ್ಲಿ ಬಂಧಿ, ನೈತಿಕ ದ್ವಂದ್ವಗಳಿಗೆ ಉತ್ಸಾಹ, ಅಪರಾಧಪ್ರಜ್ಞೆಯ ಒತ್ತಡದಿಂದ ಹೊರಬಂದು ಈಗ ಒಬ್ಬ ಹೊಸ ಸ್ತ್ರೀಯ ಪಾದಾರ್ಪಣೆ ಆಗಿಬಿಟ್ಟಿದೆ. ಅವಳು ತನ್ನ ಭವಿಷ್ಯವನ್ನು ತಾನೇ ಬರೆದುಕೊಳ್ಳುತ್ತಿದ್ದಾಳೆ. ತನಗೆ ಬೇಕಾದ ರೀತಿಯ ಪೋಷಾಕು ಧರಿಸಿ ತಡರಾತ್ರಿಯ ಪಾರ್ಟಿಗಳಿಗೂ ಅಟೆಂಡ್‌ ಆಗುತ್ತಿದ್ದಾಳೆ. ದೊಡ್ಡ ದೊಡ್ಡ ಕನಸು ಕಂಡು ಅವನ್ನು ಈಡೇರಿಸಿಕೊಳ್ಳುವ ಶಕ್ತಿ ಕೂಡ ಹೊಂದಿದ್ದಾಳೆ.

ನನ್ನ ಜೀವನ ನನ್ನ ಷರತ್ತು

ಒಂದು ಸಮೀಕ್ಷೆಯ ಪ್ರಕಾರ, 2003ರಲ್ಲಿ ಪೋರ್ನ್‌ ನೋಡು ಅಭ್ಯಾಸವನ್ನು ಕೇವಲ ಶೇ.9ರಷ್ಟು ಮಹಿಳೆಯರು ಮಾತ್ರ ಒಪ್ಪಿಕೊಂಡಿದ್ದರು. ಆ ಸಂಖ್ಯೆ ಈಗ ಶೇ.40ಕ್ಕೆ ತಲುಪಿದೆ. ಅವಳೀಗ ತನ್ನ ಅಪೇಕ್ಷೆ ಹಾಗೂ ಪ್ರೀತಿಯ ಕತ್ತು ಹಿಚುಕಲು ತಯಾರಿಲ್ಲ. ತಾನು ಯಾವ ಪುರುಷನೊಂದಿಗೆ ಮದುವೆಯಾಗಬೇಕೆಂದು ಅವಳೇ ನಿರ್ಧರಿಸುತ್ತಾಳೆ. ಅದೇ ರೀತಿ ತಾನು ಯಾವಾಗ ತಾಯಿಯಾಗಬೇಕೆಂದೂ ನಿರ್ಧರಿಸುವಷ್ಟು ಸ್ವತಂತ್ರಳಾಗಿದ್ದಾಳೆ.

ಇಂದಿನ ನಾರಿ ತನ್ನ ಮೇಲಾದ ಅನ್ಯಾಯದ ಬಗೆಗೂ ಮಾತನಾಡುತ್ತಿದ್ದಾಳೆ. ಚುಡಾಯಿಸುವುದು, ಲೈಂಗಿಕ ದೌರ್ಜನ್ಯ, ಹಿಂಸೆ, ಬಲಾತ್ಕಾರದ ಬಗ್ಗೆ ಆಕೆ ತನ್ನನ್ನು ತಾನು ಅಪರಾಧಿ ಎಂದು ಭಾವಿಸುವುದಿಲ್ಲ. ತನ್ನ ಮೇಲೆ ದೌರ್ಜನ್ಯ ಎಸಗಿದವರನ್ನು ಜೈಲು ಕಂಬಿಗಳ ಹಿಂದೆ ಕಳುಹಿಸಲು ಕೂಡ ಅವಳು ಹಿಂದೆ ಮುಂದೆ ನೋಡುವುದಿಲ್ಲ. `ಮೀ ಟೂ ಅಭಿಯಾನ’ ಇದಕ್ಕೊಂದು ತಾಜಾ ಉದಾಹರಣೆ. ಇಂಟರ್‌ನೆಟ್‌ ಸೇವೆಗಳು ಮಹಿಳೆಗೆ ಸಾಕಷ್ಟು ಬೆಂಬಲ ಸೂಚಿಸುತ್ತಿವೆ. ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಅವಳಿಗೆ ಸಾಮಾಜಿಕ ಜಾಲತಾಣಗಳು ವೇದಿಕೆಯಾಗುತ್ತಿವೆ.

ಸ್ತ್ರೀ ಹಾಗೂ ಪುರುಷರು ಹೆಚ್ಚು ಕಡಿಮೆ ಪರಸ್ಪರರ ಬಗ್ಗೆ ಸಮಾನ ದೈಹಿಕ ಮೋಹವುಳ್ಳವರಾಗಿದ್ದಾರೆ. ತನ್ನ ದೈಹಿಕ ಸೌಂದರ್ಯದ ಅನುಭವ ಅವಳಿಗೆ ಇದೆ. ಇನ್ನಷ್ಟು ಸುಂದರವಾಗಿ ಕಾಣಬೇಕೆಂಬ ಅಪೇಕ್ಷೆ ಇದ್ದೇ ಇದೆ. ಅದರ ಪ್ರತಿಫಲ ಅವಳಿಗೆ ದೊರೆಯುತ್ತಿದೆ ಕೂಡ. ತನ್ನ ಈ ವಿಶೇಷತೆಯ ಪ್ರಯೋಗವನ್ನು ಯಾವಾಗ, ಹೇಗೆ ಮಾಡಬೇಕೆಂದು ಅವಳಿಗೆ ಚೆನ್ನಾಗಿ ಗೊತ್ತಿದೆ.

ಕಾರ್ಯ ಸ್ಥಳದಲ್ಲಿ ಬಾಸ್‌ನನ್ನು ಖುಷಿಪಡಿಸಿ ಪ್ರಗತಿಯ ಮೆಟ್ಟಿಲೇರುವ ಕಲೆ ಕೂಡ ಅವಳಿಗೆ ಚೆನ್ನಾಗಿ ಗೊತ್ತು. ಮೀಡಿಯಾ, ಫಿಲ್ಮ್ ಇಂಡಸ್ಟ್ರಿ, ಟಿ.ವಿ ಅಥವಾ ಮಾಡೆಲಿಂಗ್‌ ಕ್ಷೇತ್ರದಲ್ಲಿ ಅವಳ ಸೌಂದರ್ಯದಿಂದ ಕೂಡಿದ ದೇಹ ಅವಳ ಟ್ಯಾಲೆಂಟ್‌ಗಿಂತ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ. ಅದೇ ಅವಳ ಯಶಸ್ಸಿನ ದಾರಿಯನ್ನು ನಿಗದಿಪಡಿಸುತ್ತದೆ. ಅವಳ ಈ ದೈಹಿಕ ಸ್ವಾತಂತ್ರ್ಯವೇ ಅವಳನ್ನು ಪುರುಷನಿಗೆ ಸರಿ ಸಮಾನ ಇಲ್ಲವೋ ಅದಕ್ಕೂ ಮೇಲಕ್ಕೆ ಒಯ್ದು ನಿಲ್ಲಿಸಿದೆ.

ಸೆಕ್ಸ್ ಅಗತ್ಯ ಪುರುಷನಿಗೆ ಎಷ್ಟಿದೆಯೋ ಮಹಿಳೆಗೂ ಅಷ್ಟೇ ಇದೆ ಎನ್ನುವುದನ್ನು ಸಮಾಜದ ಒಪ್ಪಿಕೊಳ್ಳಬೇಕಿದೆ. ಪುರುಷ ಬೇರೆ ಮಹಿಳೆಯ ಜೊತೆ ಹೇಗೆ ಒಡನಾಟ ಹೊಂದಿರುತ್ತಾನೊ, ಅದೇ ರೀತಿ ಮಹಿಳೆ ಏಕೆ ಹೊಂದಬಾರದು? ಒಂದು ವೇಳೆ ಗಂಡ ತನ್ನ ಭಾವನಾತ್ಮಕ ಹಾಗೂ ದೈಹಿಕ ಅಗತ್ಯಗಳನ್ನು ಪೂರೈಸಲು ವಿಫಲನಾದರೆ ಅದನ್ನು ಈಡೇರಿಸಿಕೊಳ್ಳಲು ಆಕೆ ಬೇರೆ ಪುರುಷನ ಸಖ್ಯ ಏಕೆ ಬೆಳೆಸಬಾರದು?

ತನುಶ್ರೀ ದತ್ತಾಳ ಬಳಿಕ `ಮೀ ಟೂ’ ಅಭಿಯಾನದಲ್ಲಿ ಕೇಳಿ ಬಂದ ಹೆಸರುಗಳಲ್ಲಿ ಯಾವೊಬ್ಬ ಪುರುಷನು ಕೂಡ ಮಹಿಳೆ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದಳು ಎಂದು ಹೇಳಲಿಲ್ಲ. ಅಂತಹ ಘಟನೆ ನಡೆದೇ ಇಲ್ಲ ಎಂದೆಲ್ಲ ಅವರು ಹೇಳಿ ಜಾರಿಕೊಂಡರು.

ಸುರಕ್ಷಿತ ಆರ್ಥಿಕ ಭವಿಷ್ಯ

ಆರ್ಥಿಕ ಸ್ವಾತಂತ್ರ್ಯ ಸ್ತ್ರೀಗೆ ಪುರುಷನಿಂದ ಸಂಪೂರ್ಣ ಸ್ವಾತಂತ್ರ್ಯ ದೊರಕಿಸಿಕೊಟ್ಟಿದೆ. ಅದು ಅವಳಲ್ಲಿ ಚುರುಕುತನ ಹಾಗೂ ಸೌಂದರ್ಯವನ್ನು ತುಂಬಿಸಿಬಿಟ್ಟಿದೆ. ಪುರುಷ ಸಹೋದ್ಯೋಗಿಗಳಿಗಿಂತ ಇಂದು ಮಹಿಳೆಯರೇ ಹೆಚ್ಚು ಖುಷಿಯಿಂದಿರುವುದು ಕಂಡುಬರುತ್ತಿದೆ. ವಾಸ್ತವ ಸಂಗತಿಯೇನೆಂದರೆ, ಇದು ಸುರಕ್ಷಿತ ಆರ್ಥಿಕ ಭವಿಷ್ಯದ ಜೊತೆಗೆ ಸಂತೋಷದಾಯಕ ಸಂಬಂಧಗಳನ್ನು ಹಿಂದೆಂದೂ ಕಾಣದ ವಾತಾವರಣ ಈಗ ಗೋಚರಿಸುತ್ತಿದೆ. ಸ್ತ್ರೀ ಸ್ವಾತಂತ್ರ್ಯವನ್ನು ಸರ್ವೋಚ್ಚ ನ್ಯಾಯಾಲಯ ಕೂಡ ಬೆಂಬಲಿಸಿದೆ. ಅದು ಲಿವ್ ಇನ್‌ ರಿಲೇಶನ್‌ಶಿಪ್‌ ಆಗಿರಬಹುದು ಅಥವಾ ವಿವಾಹಬಾಹಿರ ಸಂಬಂಧವೇ ಇರಬಹುದು. ನ್ಯಾಯಾಲಯ ಅವಳ ಪರವಾಗಿಯೇ ತೀರ್ಪು ನೀಡಿದೆ. ಇದರಿಂದ ಅವಳ ಉತ್ಸಾಹ ದ್ವಿಗುಣಗೊಂಡಿದೆ. ಅವಳಿಂದು ಸಂಕೋಲೆಗಳನ್ನು ತೊಡೆದು ಹಾಕಿ ತಾಜಾ ಗಾಳಿಯಲ್ಲಿ ಉಸಿರಾಡುತ್ತಿದ್ದಾಳೆ.

10-15 ವರ್ಷಗಳ ಹಿಂದೆ ಮಹಿಳೆ ತನ್ನ ಜೊತೆಗೆ ನಡೆದ ಅಹಿತಕರ ಘಟನೆಯನ್ನು ಸಾಮಾಜಿಕ ಸಂಕೋಲೆಯಲ್ಲಿ ಬಂಧಿಯಾಗಿರುವ ಕಾರಣದಿಂದ ತನ್ನಲ್ಲಿಯೇ ಬಚ್ಚಿಟ್ಟುಕೊಳ್ಳುತ್ತಿದ್ದಳು. ಆದರೆ ಈಗ ಹಾಗಲ್ಲ. ತನ್ನ ನೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೂಗಿ ಕೂಗಿ ಹೇಳುತ್ತಿದ್ದಾಳೆ. ಕೆಲವರು ಎಫ್‌ಐಆರ್‌ ಕೂಡ ದಾಖಲಿಸುವ ಧೈರ್ಯ ತೋರಿಸುತ್ತಿದ್ದಾರೆ. ಆರೋಪಿಗಳನ್ನು ಜೈಲಿಗೆ ಕಳಿಸಲು ಕಾನೂನು ಹೋರಾಟ ನಡೆಸುತ್ತಿದ್ದಾಳೆ. ಕೆಲವು ಪುರುಷರು ಆಮಿಷ ತೋರಿಸಿ ಸ್ತ್ರೀ ದೇಹವನ್ನು ತಮ್ಮದಾಗಿಸಿಕೊಳ್ಳಲು ನೋಡುತ್ತಾರೆ.

ಮೀ ಟೂ ಅಭಿಯಾನದ ಪರಿಣಾಮದಿಂದ ಎಂ.ಜೆ. ಅಕ್ಬರ್‌ ಮಂತ್ರಿ ಹುದ್ದೆಯಿಂದ ಕೆಳಕ್ಕಿಳಿಯಬೇಕಾಯಿತು.ಅರ್ಧ ಜನಸಂಖ್ಯೆ ಜಾಗೃತ ಮಹಿಳೆ ತನ್ನ ಸ್ವಾತಂತ್ರ್ಯದ ಬಗ್ಗೆ ಜಾಗರೂಕಳಾಗಿರುವಂತೆ ತನ್ನೊಂದಿಗೆ ನಡೆಯುವ ಅಪರಾಧಗಳ ಬಗ್ಗೆಯೂ ಎಚ್ಚರದಿಂದಿದ್ದಾಳೆ. ಇದರಿಂದ ಪುರುಷರಲ್ಲಿ ಒಂದು ಬಗೆಯ ಭಯ ಹುಟ್ಟಿಕೊಂಡಿದೆ. ಕಾರ್ಯಸ್ಥಳದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಪಾರ್ಟಿಗಳಲ್ಲಿ ಮಹಿಳೆಯರ ಬಗ್ಗೆ ಅಸಭ್ಯತನದಿಂದ ನಡೆದುಕೊಳ್ಳುವ ಸಾಕಷ್ಟು ಘಟನೆಗಳು ನಡೆಯುತ್ತಿದ್ದವು. ಈಗ ಆ ಪ್ರಕರಣಗಳು ಸಾಕಷ್ಟು ಇಳಿಮುಖವಾಗಿವೆ. ಇದಕ್ಕೆಲ್ಲ ಕಾರಣ ಮಹಿಳೆಯರ ಧೈರ್ಯ.

`ಮೀ ಟೂ’ ಅಭಿಯಾನದ ಪರಿಣಾಮಗಳು ದೂರಗಾಮಿಯಾಗಿವೆ. ಅದರದ್ದೇ ಆದ ಕೆಲವು ಅಡ್ಡ ಪರಿಣಾಮಗಳು ಇವೆ. ಮಹಿಳೆಯರಿಗೆ ಕೆಲಸ ದೊರಕುವುದು ಸ್ವಲ್ಪ ಕಷ್ಟಕರವಾಗಬಹುದು. ಪುರುಷ ಸಹೋದ್ಯೋಗಿಗಳು ರಿಸರ್ವ್ ಆಗಿರಲು ಬಯಸುತ್ತಾರೆ. ಆದರೆ ಇದರಿಂದ ಗಾಬರಿಗೊಳಗಾಗಿ ಮಹಿಳೆ ಹಿಂದೆ ಹೆಜ್ಜೆ ಇಡುವ ಅಗತ್ಯವಿಲ್ಲ.

ದೈಹಿಕ ಸಂಬಂಧದ ವಿಷಯದಲ್ಲಿ ಮಹಿಳೆಯರ ಒಪ್ಪಿಗೆ ಪಡೆಯಬೇಕಾದ ಸಂದರ್ಭ ಬರಬಹುದು. ಆಗ ಅದು ಅಪರಾಧದ ವ್ಯಾಪ್ತಿಯಿಂದ ಹೊರಬಂದು ಆನಂದದ ಪರಾಕಾಷ್ಠೆ ತಲುಪುತ್ತದೆ. ಯಾವ ದಿನ ಮಹಿಳೆ `ಹೌದು’ ಅಂದರೆ `ಹೌದು’  ಇಲ್ಲವೆಂದರೆ `ಇಲ್ಲ’ ಎಂದಾಗುತ್ತೊ ಆಗ ಪುರುಷರಿಗೆ ಅದು ಅರ್ಥವಾಗುತ್ತದೆ. ಆ ದಿನ ಪುರುಷ ಸ್ತ್ರೀ ಸಂಬಂಧ ಹೊಸ ವ್ಯಾಖ್ಯೆ ಪಡೆದುಕೊಳ್ಳುತ್ತದೆ.

ದೇಹ ಸ್ವಾತಂತ್ರ್ಯದ ಅರ್ಥ, ಯಾರು ಒಪ್ಪಿಗೆಯ ಮೂಲಕ ಪ್ರೀತಿ ಪಡೆದುಕೊಳ್ಳುತ್ತಾರೊ ಅವರಿಗೆ ಅದು ಲಭ್ಯ. ಮಹಿಳೆ ಆಟಿಕೆಯ ಬೊಂಬೆ ಥರ ಅಲ್ಲ, ಆಟ ಆಡುವುದು, ಬಿಟ್ಟು ಹೋಗುವುದು ಮಾಡಬೇಡಿ ಎನ್ನುವುದನ್ನು ಇದು ಸೂಚಿಸುತ್ತದೆ.

ನರ್ಮದಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ