ಏಪ್ರಿಲ್ ‌, ಮಂಗಳವಾರ ರಾತ್ರಿ ಭಾರತದ ಬಹುತೇಕ ಎಲ್ಲ ಟಿ.ವಿ. ಚಾನೆಲ್‌ಗಳಲ್ಲಿ ಕೊರೋನಾ ಬಗೆಗಿನ ಸುದ್ದಿಗಳೇ ಪುಂಖಾನುಪುಂಖವಾಗಿ ಬರುತ್ತಿದ್ದವು. ಈ ಮಧ್ಯೆ `ಬ್ರೇಕಿಂಗ್‌ ನ್ಯೂಸ್‌' ಎಂಬಂತೆ ಅಮೆರಿಕಾದಿಂದ ಬಂದ ಹೊಸದೊಂದು ಸುದ್ದಿ ಟಿ.ವಿ. ಸ್ಕ್ರೀನ್‌ ಮೇಲೆ ಮೂಡತೊಡಗಿತು. ಆ ಸುದ್ದಿ ಏನೆಂದರೆ, ಭಾರತೀಯ ಮೂಲದ ಮಹಿಳಾ ವೈದ್ಯರೊಬ್ಬರು ತಮ್ಮ ಮನೆಯ ಮುಂದಿನ ಲಾನ್‌ನಲ್ಲಿ ನಿಂತಿದ್ದಾರೆ. ಎದುರಿಗಿನ ವಿಶಾಲ ರಸ್ತೆಯಲ್ಲಿ ಸಾಲುಸಾಲಾಗಿ ಬರುತ್ತಿದ್ದ ಕಾರುಗಳು, ಆಂಬ್ಯುಲೆನ್ಸ್ ಗಳು ಹಾರ್ನ್‌ ಹೊಡೆಯುತ್ತಾ, ಸೈರನ್‌ ಕೂಗುತ್ತಾ ಆ ವೈದ್ಯೆಯ ಮನೆಯ ಮುಂದೆ ಕೆಲವು ಕ್ಷಣ ನಿಲ್ಲಿಸಿ, ಗಾಜು ಕೆಳಗಿಳಿಸಿ ಅಭಿನಂದನೆಯ ನುಡಿಗಳನ್ನು ಉಲ್ಲೇಖಿಸುತ್ತಾ ಮುಂದೆ ಸಾಗುತ್ತಿದ್ದವು. ಅದಕ್ಕೆ ಪ್ರತಿಯಾಗಿ ಆ ವೈದ್ಯೆ ಕೈ ಬೀಸುತ್ತಾ, ಮುಗುಳ್ನಗೆ ಸೂಸುತ್ತ ಧನ್ಯವಾದ ಹೇಳುತ್ತಿದ್ದರು.

ಆ ಸುದ್ದಿ ನೋಡಿ ಭಾರತದ ಟಿವಿ ಪ್ರೇಕ್ಷಕರು ದಂಗಾಗಿ ಹೋಗಿದ್ದರು, ರೋಮಾಂಚನಗೊಂಡಿದ್ದರು. ಕನ್ನಡಿಗರಂತೂ ಆ ವೈದ್ಯೆಯ ಬಗ್ಗೆ ಡಬಲ್ ಖುಷಿಯಲ್ಲಿದ್ದರು.

ಇಷ್ಟೆಲ್ಲ ಪೀಠಿಕೆಗೆ ಕಾರಣರಾದವರು ನಮ್ಮ ಹೆಮ್ಮೆಯ ಕನ್ನಡತಿ, ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಡಾ. ಉಮಾ ಮಧುಸೂಧನ್‌. ಅಮೆರಿಕದಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿದ್ದ ದಿನಗಳಲ್ಲಿ ಡಾ. ಉಮಾ ಮಧುಸೂಧನ್‌ ಅವರು ಅಮೆರಿಕಾದ ಕನೆಕ್ಟಿಕಟ್‌ ರಾಜ್ಯದ ಸೌಥ್‌ ವಿಂಡ್ಸರ್‌ನಲ್ಲಿರುವ `ಹೆಲ್ತ್ ಕೇರ್‌' ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಅವರ ಚಿಕಿತ್ಸೆಯಿಂದ ಗುಣಮುಖರಾದವರು ಅದೆಷ್ಟೊ ಜನ.

ಅದರ ಜೊತೆಗೆ ಸಾರ್ವಜನಿಕರು, ಪೊಲೀಸರು, ಅಗ್ನಿಶಾಮಕದಳದವರು ಡಾ. ಉಮಾರವರಿಗೆ ಬಹಿರಂಗವಾಗಿ ತಮ್ಮ ಕೃತಜ್ಞತೆ ಸಲ್ಲಿಸಲು `ಡ್ರೈವ್ ಆಫ್‌ ಆನರ್‌' ಎಂಬ ಅಮೆರಿಕಾದ ಬಹು ಜನಪ್ರಿಯ ವಿಧಾನವನ್ನು ಆಯ್ಕೆ ಮಾಡಿಕೊಂಡರು.

ಬೃಹತ್‌ ಪರೇಡ್‌ ಮೂಲಕ ಸುಮಾರು 100ಕ್ಕೂ ಹೆಚ್ಚು ವಾಹನಗಳಲ್ಲಿ ಬಂದ ನಾಗರಿಕರು ಅವರಿಗೆ ತಮ್ಮ ಗೌರವ ಸೂಚಿಸಿದರು. ಇದು ಡಾ. ಉಮಾ ಮಧುಸೂಧನ್‌ರವರ ಜೀವನದಲ್ಲಿ ಎಂದೂ ಮರೆಯದ ಕ್ಷಣವಾಗಿ ಉಳಿಯಲಿದೆ.

ಡಾ. ಉಮಾ `ಡ್ರೈವ್ ‌ಆನರ್‌' ಮಾಡಿದ ವಿಡಿಯೋ ಭಾರತದಲ್ಲಿ ವೈರಲ್ ಆಗಿ ಹೊಸ ಟ್ರೆಂಡ್‌ನ್ನೇ ಸೃಷ್ಟಿಸಿತು.

ಮೈಸೂರಿನಲ್ಲಿ ಶಿಕ್ಷಣ ಡಾ. ಉಮಾ ಮಧುಸೂಧನ್‌ ಮೈಸೂರಿನ ಜೆ.ಎಸ್‌.ಎಸ್‌ ವೈದ್ಯಕೀಯ ಮಹಾವಿದ್ಯಾಲಯದಿಂದ 1997ರಲ್ಲಿ ವೈದ್ಯಕೀಯ ಪದವಿ ಪಡೆದಿದ್ದರು. ಆ ಬಳಿಕ ಅಮೆರಿಕಕ್ಕೆ ತೆರಳಿ ಅಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಸಂಶೋಧನೆ ನಡೆಸಿದರು. ``ತಮ್ಮ ಕಾಲೇಜಿನ ವಿದ್ಯಾರ್ಥಿನಿಯ ಸಾಧನೆಯ ಬಗ್ಗೆ ಹೆಮ್ಮೆ ಮೂಡಿಸಿದೆ,'' ಎಂದು ಜೆ.ಎಸ್‌.ಎಸ್‌ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್‌. ಬಸನಗೌಡಪ್ಪ ಪ್ರತಿಕ್ರಿಯೆ ಕೊಟ್ಟಿದ್ದಾರೆ.

``ಡಾ. ಉಮಾರವರ ಸಾಧನೆ ಮೈಸೂರಿನ ಹೆಮ್ಮೆ,'' ಎಂದು ಸಂಸದ ಪ್ರತಾಪಸಿಂಹ ಹೇಳಿದ್ದಾರೆ.

``ಡಾ. ಉಮಾರವರಿಂದ ಚಿಕಿತ್ಸೆ ಪಡೆದು ಗುಣಮುಖರಾದವರು, ಅಲ್ಲಿನ ಸರ್ಕಾರಿ ಸಂಸ್ಥೆಗಳು ಕೃತಜ್ಞತೆ, ಗೌರವ ಸೂಚಿಸಿದ್ದನ್ನು ನೋಡಿ ಸಂತಸವಾಯಿತು. ನಿಜಕ್ಕೂ ಸಾರ್ಥಕತೆ ಕಂಡಂತಾಯಿತು,'' ಎಂದು ವೈದ್ಯಕೀಯ ಶಿಕ್ಷಣ ಸಚಿ ಡಾ. ಕೆ. ಸುಧಾಕರ್ ಟ್ವೀಟ್‌ ಮಾಡಿ ಅಭಿನಂದನೆ ಸಲ್ಲಿಸಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ