ಹುಡುಗಿಯರು ಇನ್‌ಸ್ಟಾಗ್ರಾಮ್ ನಲ್ಲಿ ತಮ್ಮ ಬೋಲ್ಡ್ ಫೋಟೋಗಳನ್ನು ಪೋಸ್ಟ್ ಮಾಡುವುದು ಹೊಸ ವಿಷಯವೇನಲ್ಲ. ಸೆಲೆಬ್ರಿಟಿಗಳೇ ಆಗಿರಬಹುದು ಅಥವಾ ಸಾಮಾನ್ಯ ಹುಡುಗಿಯರು, ಎಲ್ಲರೂ ಸುಂದರವಾಗಿ ಕಾಣಬೇಕೆಂಬ ಸ್ಪರ್ಧೆಯಲ್ಲಿ ಶಾಮೀಲಾಗಿದ್ದಾರೆ. ಕೆಲವರು `ಟಿಕ್‌ ಟಾಕ್‌’ ಮೂಲಕ ತಮ್ಮ ಪಡಿಯಚ್ಚು ಮೂಡಿಸುತ್ತಿದ್ದರೆ, ಮತ್ತೆ ಕೆಲವರು ಬ್ಲಾಗಿಂಗ್‌ನಲ್ಲಿ. ಆದರೆ ಯಾರಿಗೆ ತಾನು ಎಲ್ಲರಿಗಿಂತ ವಿಭಿನ್ನವಾಗಿ ಕಾಣಬೇಕೆಂಬ ಅಕಾಂಕ್ಷೆ ಇದೆಯೊ, ಅವರು ತಮ್ಮ ಬೋಲ್ಡ್ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ, ಈ ಫೋಟೋಗಳ ಮೂಲಕ ಅವರ, ಕಾಲು, ಬೆನ್ನು, ಸೊಂಟ, ಹೊಟ್ಟೆ ತೋರಿಸುತ್ತಿರುವುದು ಕಂಡುಬರುತ್ತದೆ.

ಕೆಲವರು ಈ ಮಹಿಳೆಯರು, ಹುಡುಗಿಯರ ಫೋಟೋಗಳ ಬಗ್ಗೆ ಪ್ರಶಂಸೆಯ ಸುರಿಮಳೆ ಸುರಿಸುತ್ತಾರಾದರೆ, ಮತ್ತೆ ಕೆಲವರು ಅವರನ್ನು ಟೀಕಿಸುತ್ತಾರೆ. ಹೊಗಳುವವರಿಗೆ ಗೊತ್ತಿರುವ ಒಂದು ವಿಚಾರವೆಂದರೆ, ಅನೇಕ ವರ್ಷಗಳ ಶ್ರಮದಿಂದ ಪಡೆದುಕೊಂಡ ಫಿಗರ್‌ನಿಂದ ಅವರು ಈ ಫೋಟೋ ತೆಗೆಸಿಕೊಂಡಿದ್ದಾರೆ. ಹಾಗಾಗಿ ಅದು ಸಾಧ್ಯವಾಯಿತು ಎನ್ನುತ್ತಾರೆ. ಇನ್ನೊಂದೆಡೆ ಕೆಲವರು ಸಂಸ್ಕೃತಿಯ ನಾಗರಿಕತೆಯ ನೆಪ ಮುಂದೊಡ್ಡಿ ಅಂಥವರನ್ನು ಟೀಕಿಸುತ್ತಾರೆ.

ಮಹಿಳೆಯರ ಬೋಲ್ಡ್ ಫೋಟೋ ಪೋಸ್ಟ್ ಮಾಡುವುದು ತಪ್ಪಾ ಅಥವಾ ಜನರ ಯೋಚನೆಯೇ ಸರಿ ಇಲ್ಲವೇ? ಈ ಕುರಿತಂತೆ ಕೆಲವೇ ಜನರ ಅಭಿಪ್ರಾಯ ಪಡೆದು ನಿರ್ಧಾರ ಮಾಡುವುದು ತಪ್ಪಾಗುತ್ತದೆ. ನಾವು ಬೇರೆ ಬೇರೆ ವಯಸ್ಸಿನ ಮಹಿಳೆಯರಿಗೆ ಈ ಪ್ರಶ್ನೆಗೆ ಉತ್ತರ ಕೊಡಲು ಹೇಳಿದೆ.

ಹುಡುಗಿ : ವಯಸ್ಸು 22, ಇದರಲ್ಲಿ ಯಾವುದೇ ತಪ್ಪು ಇದೆ ಎಂದು ನನಗನ್ನಿಸುವುದಿಲ್ಲ. ಯಾವುದೇ ಒಬ್ಬ ಹುಡುಗಿಗೆ ಯಾವ ರೀತಿಯ ಫೋಟೋಗಳನ್ನು ಪೋಸ್ಟ್ ಮಾಡಬೇಕೆಂದು ಚೆನ್ನಾಗಿ ಗೊತ್ತಿರುತ್ತದೆ. ಇಲ್ಲಿ ಜನರ ಯೋಚನೆಯೇ ತಪ್ಪು. ಅಂದಹಾಗೆ ಹುಡುಗಿಯರು ಕೂಡ ತಮ್ಮ ಆಸುಪಾಸಿನ ವಾತಾವರಣದ ಬಗ್ಗೆ ಒಂದಿಷ್ಟು ಗಮನ ಕೊಡಬೇಕು. ಮನೆಯಲ್ಲಿ ಇರುವ ಇಮೇಜನ್ನು ಸೋಶಿಯಲ್ ಮೀಡಿಯದಲ್ಲೂ ಕಾಪಾಡಿಕೊಳ್ಳಬೇಕು. ಅದು ಬೋಲ್ಡ್ ಆಗಿರಬಹುದು ಅಥವಾ ಆಗಿರದೇ ಇರಬಹುದು.

bold-avtar-kahan-tak-sahi-3

ಹುಡುಗಿ : ವಯಸ್ಸು 24, ಯಾರೇ ಒಬ್ಬ ಹುಡುಗಿ ಬೋಲ್ಡ್ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾಳೆಂದರೆ, ಅವಳು ಚೆನ್ನಾಗಿ ಯೋಚನೆ ಮಾಡಿಯೇ ಆ ನಿರ್ಧಾರಕ್ಕೆ ಬಂದಿದ್ದಾಳೆಂದು ಅರ್ಥ. ಅವಳಿಗೆ ಒಳ್ಳೆಯ ಕಮೆಂಟ್‌ ಹಾಗೂ ಕೆಟ್ಟ ಕಮೆಂಟ್‌ ಎರಡೂ ಸಿಗುತ್ತವೆ. ಪ್ರತಿಯೊಬ್ಬ ಹುಡುಗಿಗೂ ಬೋಲ್ಡ್ ಹಾಗೂ ಬ್ಯೂಟಿಯ ನಡುವಿನ ವ್ಯತ್ಯಾಸ ಗೊತ್ತಿರಬೇಕು.

ಮಹಿಳೆ : ವಯಸ್ಸು 40. ಮಹಿಳೆಯರು ತಮ್ಮ ಕಾಲುಗಳನ್ನು ಹಾಗೂ ಟಾಪ್‌ ಲೆಸ್‌ ಬ್ಯಾಕ್‌ನ್ನು ತೋರಿಸಬೇಕೆಂದಿದ್ದರೆ ಸರಿ. ಏಕೆಂದರೆ. ಅಷ್ಟಂತೂ ನಡೆಯುತ್ತದೆ. ಇಂದಿನ ಪೀಳಿಗೆಯ ಯೋಚನೆ ಸರಿಯಾಗಿಯೇ ಇದೆ. ಒಂದು ವೇಳೆ ಅವರು ಇದನ್ನು ಅನುಸರಿಸದಿದ್ದರೆ ಹಿಂದುಳಿದವರು ಎನಿಸಿಕೊಳ್ಳುತ್ತಾರೆ. ಕಾಲಕ್ಕೆ ತಕ್ಕಂತೆ ಇಷ್ಟಂತೂ ಬದಲಾವಣೆ ಆಗಲೇಬೇಕಿದೆ. ಅಂದಹಾಗೆ, ದೇಹದ ಬಹಳಷ್ಟು ಭಾಗವನ್ನು ನಾವು ತೋರಿಸಬಾರದು. ಅಷ್ಟಿಷ್ಟು ತೋರಿಸುವುದು ಸರಿ. ಸ್ಕರ್ಟ್‌ ಫೋಟೋ ಆಗಿರಬಹುದು ಅಥವಾ ಕಿರಿದಾದ ಬಟ್ಟೆಯ ಫೋಟೋವನ್ನು ಎಲ್ಲರೂ ಲೈಕ್‌ ಮಾಡುತ್ತಾರೆ.

ಮಹಿಳೆ : 44 ವರ್ಷ. ಯಾವುದೇ ಒಬ್ಬ ಹುಡುಗಿ ಅದರಲ್ಲೂ ವಿಶೇಷವಾಗಿ ಆಕೆ ಸೆಲೆಬ್ರಿಟಿ ಆಗಿರದೆ ಇದ್ದರೆ, ಅವಳು ತನ್ನ ಇಮೇಜ್ ಕಾಪಾಡಿಕೊಳ್ಳಬೇಕು. ಅಷ್ಟಿಷ್ಟು ಬೋಲ್ಡ್ ನೆಸ್‌ ಸರಿ. ಆದರೆ ಟಾಪ್‌ ಲೆಸ್‌ ಫೋಟೋಗಳು ಮತ್ತು ಬಿಕಿನಿ ಧರಿಸಿರುವ ಫೋಟೋಗಳು ಅಲ್ಲ. ನಾನು ಯಾವ ವ್ಯಕ್ತಿಗೆ ಅಂತಹ ಫೋಟೋಗಳನ್ನು ತೋರಿಸಲು ಇಷ್ಟಪಡುತ್ತೇನೆಂದರೆ, ಆ ವ್ಯಕ್ತಿಯಿಂದ ಪ್ರಶಂಸೆ ಬಯಸುತ್ತೇನೆ. ಹಾದಿ ಬೀದಿಯಲ್ಲಿ ಹೋಗುವ ವ್ಯಕ್ತಿಗೆ ನನ್ನ ಬೋಲ್ಡ್ ಚಿತ್ರಗಳನ್ನು ತೋರಿಸುವ ಬಯಕೆ ನನಗಿಲ್ಲ.

ಈ ನಾಲ್ಕೂ ಅಭಿಪ್ರಾಯಗಳಿಂದ ತಿಳಿದು ಬರುವ ವಿಚಾರವೆಂದರೆ, ಬೋಲ್ಡ್ ನೆಸ್‌ ಒಂದು ಹಂತದವರೆಗೆ ಸರಿ, ಅದಕ್ಕೂ ಮೀರಿ ಬೋಲ್ಡ್ ನೆಸ್‌ ಆದರೆ ಅದನ್ನು ನ್ಯೂಡಿಟಿಗಿಂತ ಬೇರೆ ಯಾವುದೇ ಹೆಸರಿನಿಂದ ಕರೆಯಲು ಸಾಧ್ಯವಾಗುದಿಲ್ಲ.

ಸೆಲೆಬ್ರಿಟಿಗಳು ಏನು ಹೇಳುತ್ತಾರೆ?

ಸೆಲೆಬ್ರಿಟಿಗಳು ಹಾಗೂ ನಟಿಯರ ವಿಚಾರಗಳು ಈ ಸಾಮಾನ್ಯ ಮಹಿಳೆಯರು ಹಾಗೂ ಹುಡುಗಿಯರಿಗಿಂತ ಭಿನ್ನವಾಗಿವೆ. ಟಿ.ವಿ. ಕಲಾವಿದೆ ಶ್ರೀಜಿತಾ ಡೇ ಈಚೆಗಷ್ಟೇ ಇನ್‌ಸ್ಟಾಗ್ರಾಮ್ ನಲ್ಲಿ ತನ್ನ ಬಿಕಿನಿ ಫೋಟೋಗಳನ್ನು ಪೋಸ್ಟ್ ಮಾಡಿದಳು. ಆ ಫೋಟೋಗಳನ್ನು ನೋಡಿ ಹಲವು ಫ್ಯಾನ್‌ಗಳು ಆಕೆಯನ್ನು  ಟ್ರೋಲ್ ‌ಮಾಡಿದರು. ಆ ಟ್ರೋಲಿಂಗ್‌ನ ಪ್ರಶ್ನೆಗಳಿಗೆ ಶ್ರೀಜಿತಾ ಹೀಗೆ ಹೇಳಿದಳು, “ಯಾವುದೇ ಒಬ್ಬ ನಟಿಗೆ ಬೋಲ್ಡ್ ಫೋಟೋಗಳನ್ನು ತೆಗೆಸಿಕೊಳ್ಳುವುದು ಸಾಮಾನ್ಯ ವಿಷಯ. ನನಗೆ ಸ್ವಲ್ಪ ವಿಭಿನ್ನವಾಗಿ ಮಾಡಬೇಕಿತ್ತು. ನಾನು ಬಿಕಿನಿ ಧರಿಸಿ ಮಂಜುಗಡ್ಡೆಯ ಮೇಲೆ ನಡೆದೆ. ಇದರಿಂದ ನನಗೆ ಯಾವುದೇ ಕೆಡುಕೆನಿಸಲಿಲ್ಲ.”

ಬೋಲ್ಡ್ ಚಿತ್ರಗಳ ಪಟ್ಟಿಯಲ್ಲಿ ಬಾಲಿವುಡ್‌ ನಟಿ ಈಶಾ ಗುಪ್ತಾ ಹಾಗೂ ದಿಶಾ ಪಟಾನಿ ಕೂಡ ಸೇರಿದ್ದಾರೆ. ಅಂದಹಾಗೆ ಇವರು ಜನರ ಟ್ರೋಲಿಂಗ್‌ನಿಂದ ಪಾರಾಗಲು ತಮ್ಮ ಚಿತ್ರಗಳಿಂದ ಕಮೆಂಟ್‌ ಆಪ್ಶನ್‌ ತೆಗೆದು ಹಾಕುತ್ತಾರೆ.

ಎಂ ಟಿ.ವಿಯ ಶೋ `ಗರ್ಲ್ ಆನ್‌ ಟಾಪ್‌’ನ ಸೋನಿ ಚೋಪ್ರಾ ತನ್ನ ಬೋಲ್ಡ್ ಚಿತ್ರಗಳ ಬಗ್ಗೆ ಇನ್‌ಸ್ಟಾಗ್ರಾಮ್ ನ ಒಂದು ಕ್ಯಾಪ್ಶನ್‌ನಲ್ಲಿ ಹೀಗೆ ಬರೆಯುತ್ತಾಳೆ, “ಮೀಡಿಯಾ ಮಹಿಳೆಯರನ್ನು ಸೆಕ್ಶುಲೈಸ್‌ ಮಾಡಿದಾಗ ಅದರಿಂದ ಸಮಾಜಕ್ಕೇನೂ ವ್ಯತ್ಯಾಸವಾಗದು ಎಂಬುದು ನನಗೆ ಬಹಳ ಕುತೂಹಲಕಾರಿಯಾಗಿ ಕಂಡುಬರುತ್ತದೆ. ಸರ್ಕಾರ ಹಾಗೂ ಶಾಲೆಗಳು ಅವರನ್ನು ಸೆಕ್ಶುಲೈಸ್‌ ಮಾಡಿದಾಗಲೂ ಸಮಾಜಕ್ಕೇನೂ ವ್ಯತ್ಯಾಸವಾಗದು. ಆದರೆ ಮಹಿಳೆಯೊಬ್ಬಳು ಸ್ವತಃ ತನ್ನ ಸೆಕ್ಶುಯಾಲಿಟಿಯನ್ನು ನಿಯಂತ್ರಿಸಿಕೊಂಡರೂ ಸಮಾಜಕ್ಕೆ ಅದು ತಪ್ಪು ಎನಿಸುತ್ತದೆ.”

ಕೊನೆಗೊಮ್ಮೆ ಮಾತು ಬೋಲ್ಡ್ ನೆಸ್‌ ತಪ್ಪು ಎನ್ನುವುದಕ್ಕೆ ಬಂದು ನಿಲ್ಲುತ್ತದೆ. ಒಂದು ವೇಳೆ ಇಲ್ಲವೆಂದರೆ ಎಷ್ಟರಮಟ್ಟಿಗೆ ಸರಿ? ಯಾವುದೇ ಒಬ್ಬ ಮಹಿಳೆ ತನ್ನ ಸ್ಥಿತಿ, ಸಮಯ ಹಾಗೂ ಸಮಾಜವನ್ನು ಗಮನದಲ್ಲಿಟ್ಟುಕೊಂಡು ತನ್ನನ್ನು ತಾನು ಪ್ರದರ್ಶಿಸಿಕೊಳ್ಳಬೇಕು. ಒಂದು ವೇಳೆ ಯಾವುದೇ ಒಂದು ಸಂಗತಿಯ ಬಗ್ಗೆ ವ್ಯತ್ಯಾಸ ಎನಿಸುತ್ತದಾದರೆ ಜನ ಏನನ್ನುತ್ತಾರೆ ಎಂಬ ಬಗ್ಗೆ ಗಮನ ಕೊಡಬಾರದು. ಜನರಿರುವುದೇ ಟೀಕೆ ಮಾಡಲು ಎಂದುಕೊಳ್ಳಬೇಕು.

ಸೀಮಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ