ಹುಡುಗಿಯರು ಇನ್‌ಸ್ಟಾಗ್ರಾಮ್ ನಲ್ಲಿ ತಮ್ಮ ಬೋಲ್ಡ್ ಫೋಟೋಗಳನ್ನು ಪೋಸ್ಟ್ ಮಾಡುವುದು ಹೊಸ ವಿಷಯವೇನಲ್ಲ. ಸೆಲೆಬ್ರಿಟಿಗಳೇ ಆಗಿರಬಹುದು ಅಥವಾ ಸಾಮಾನ್ಯ ಹುಡುಗಿಯರು, ಎಲ್ಲರೂ ಸುಂದರವಾಗಿ ಕಾಣಬೇಕೆಂಬ ಸ್ಪರ್ಧೆಯಲ್ಲಿ ಶಾಮೀಲಾಗಿದ್ದಾರೆ. ಕೆಲವರು `ಟಿಕ್‌ ಟಾಕ್‌' ಮೂಲಕ ತಮ್ಮ ಪಡಿಯಚ್ಚು ಮೂಡಿಸುತ್ತಿದ್ದರೆ, ಮತ್ತೆ ಕೆಲವರು ಬ್ಲಾಗಿಂಗ್‌ನಲ್ಲಿ. ಆದರೆ ಯಾರಿಗೆ ತಾನು ಎಲ್ಲರಿಗಿಂತ ವಿಭಿನ್ನವಾಗಿ ಕಾಣಬೇಕೆಂಬ ಅಕಾಂಕ್ಷೆ ಇದೆಯೊ, ಅವರು ತಮ್ಮ ಬೋಲ್ಡ್ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ, ಈ ಫೋಟೋಗಳ ಮೂಲಕ ಅವರ, ಕಾಲು, ಬೆನ್ನು, ಸೊಂಟ, ಹೊಟ್ಟೆ ತೋರಿಸುತ್ತಿರುವುದು ಕಂಡುಬರುತ್ತದೆ.

ಕೆಲವರು ಈ ಮಹಿಳೆಯರು, ಹುಡುಗಿಯರ ಫೋಟೋಗಳ ಬಗ್ಗೆ ಪ್ರಶಂಸೆಯ ಸುರಿಮಳೆ ಸುರಿಸುತ್ತಾರಾದರೆ, ಮತ್ತೆ ಕೆಲವರು ಅವರನ್ನು ಟೀಕಿಸುತ್ತಾರೆ. ಹೊಗಳುವವರಿಗೆ ಗೊತ್ತಿರುವ ಒಂದು ವಿಚಾರವೆಂದರೆ, ಅನೇಕ ವರ್ಷಗಳ ಶ್ರಮದಿಂದ ಪಡೆದುಕೊಂಡ ಫಿಗರ್‌ನಿಂದ ಅವರು ಈ ಫೋಟೋ ತೆಗೆಸಿಕೊಂಡಿದ್ದಾರೆ. ಹಾಗಾಗಿ ಅದು ಸಾಧ್ಯವಾಯಿತು ಎನ್ನುತ್ತಾರೆ. ಇನ್ನೊಂದೆಡೆ ಕೆಲವರು ಸಂಸ್ಕೃತಿಯ ನಾಗರಿಕತೆಯ ನೆಪ ಮುಂದೊಡ್ಡಿ ಅಂಥವರನ್ನು ಟೀಕಿಸುತ್ತಾರೆ.

ಮಹಿಳೆಯರ ಬೋಲ್ಡ್ ಫೋಟೋ ಪೋಸ್ಟ್ ಮಾಡುವುದು ತಪ್ಪಾ ಅಥವಾ ಜನರ ಯೋಚನೆಯೇ ಸರಿ ಇಲ್ಲವೇ? ಈ ಕುರಿತಂತೆ ಕೆಲವೇ ಜನರ ಅಭಿಪ್ರಾಯ ಪಡೆದು ನಿರ್ಧಾರ ಮಾಡುವುದು ತಪ್ಪಾಗುತ್ತದೆ. ನಾವು ಬೇರೆ ಬೇರೆ ವಯಸ್ಸಿನ ಮಹಿಳೆಯರಿಗೆ ಈ ಪ್ರಶ್ನೆಗೆ ಉತ್ತರ ಕೊಡಲು ಹೇಳಿದೆ.

ಹುಡುಗಿ : ವಯಸ್ಸು 22, ಇದರಲ್ಲಿ ಯಾವುದೇ ತಪ್ಪು ಇದೆ ಎಂದು ನನಗನ್ನಿಸುವುದಿಲ್ಲ. ಯಾವುದೇ ಒಬ್ಬ ಹುಡುಗಿಗೆ ಯಾವ ರೀತಿಯ ಫೋಟೋಗಳನ್ನು ಪೋಸ್ಟ್ ಮಾಡಬೇಕೆಂದು ಚೆನ್ನಾಗಿ ಗೊತ್ತಿರುತ್ತದೆ. ಇಲ್ಲಿ ಜನರ ಯೋಚನೆಯೇ ತಪ್ಪು. ಅಂದಹಾಗೆ ಹುಡುಗಿಯರು ಕೂಡ ತಮ್ಮ ಆಸುಪಾಸಿನ ವಾತಾವರಣದ ಬಗ್ಗೆ ಒಂದಿಷ್ಟು ಗಮನ ಕೊಡಬೇಕು. ಮನೆಯಲ್ಲಿ ಇರುವ ಇಮೇಜನ್ನು ಸೋಶಿಯಲ್ ಮೀಡಿಯದಲ್ಲೂ ಕಾಪಾಡಿಕೊಳ್ಳಬೇಕು. ಅದು ಬೋಲ್ಡ್ ಆಗಿರಬಹುದು ಅಥವಾ ಆಗಿರದೇ ಇರಬಹುದು.

bold-avtar-kahan-tak-sahi-3

ಹುಡುಗಿ : ವಯಸ್ಸು 24, ಯಾರೇ ಒಬ್ಬ ಹುಡುಗಿ ಬೋಲ್ಡ್ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾಳೆಂದರೆ, ಅವಳು ಚೆನ್ನಾಗಿ ಯೋಚನೆ ಮಾಡಿಯೇ ಆ ನಿರ್ಧಾರಕ್ಕೆ ಬಂದಿದ್ದಾಳೆಂದು ಅರ್ಥ. ಅವಳಿಗೆ ಒಳ್ಳೆಯ ಕಮೆಂಟ್‌ ಹಾಗೂ ಕೆಟ್ಟ ಕಮೆಂಟ್‌ ಎರಡೂ ಸಿಗುತ್ತವೆ. ಪ್ರತಿಯೊಬ್ಬ ಹುಡುಗಿಗೂ ಬೋಲ್ಡ್ ಹಾಗೂ ಬ್ಯೂಟಿಯ ನಡುವಿನ ವ್ಯತ್ಯಾಸ ಗೊತ್ತಿರಬೇಕು.

ಮಹಿಳೆ : ವಯಸ್ಸು 40. ಮಹಿಳೆಯರು ತಮ್ಮ ಕಾಲುಗಳನ್ನು ಹಾಗೂ ಟಾಪ್‌ ಲೆಸ್‌ ಬ್ಯಾಕ್‌ನ್ನು ತೋರಿಸಬೇಕೆಂದಿದ್ದರೆ ಸರಿ. ಏಕೆಂದರೆ. ಅಷ್ಟಂತೂ ನಡೆಯುತ್ತದೆ. ಇಂದಿನ ಪೀಳಿಗೆಯ ಯೋಚನೆ ಸರಿಯಾಗಿಯೇ ಇದೆ. ಒಂದು ವೇಳೆ ಅವರು ಇದನ್ನು ಅನುಸರಿಸದಿದ್ದರೆ ಹಿಂದುಳಿದವರು ಎನಿಸಿಕೊಳ್ಳುತ್ತಾರೆ. ಕಾಲಕ್ಕೆ ತಕ್ಕಂತೆ ಇಷ್ಟಂತೂ ಬದಲಾವಣೆ ಆಗಲೇಬೇಕಿದೆ. ಅಂದಹಾಗೆ, ದೇಹದ ಬಹಳಷ್ಟು ಭಾಗವನ್ನು ನಾವು ತೋರಿಸಬಾರದು. ಅಷ್ಟಿಷ್ಟು ತೋರಿಸುವುದು ಸರಿ. ಸ್ಕರ್ಟ್‌ ಫೋಟೋ ಆಗಿರಬಹುದು ಅಥವಾ ಕಿರಿದಾದ ಬಟ್ಟೆಯ ಫೋಟೋವನ್ನು ಎಲ್ಲರೂ ಲೈಕ್‌ ಮಾಡುತ್ತಾರೆ.

ಮಹಿಳೆ : 44 ವರ್ಷ. ಯಾವುದೇ ಒಬ್ಬ ಹುಡುಗಿ ಅದರಲ್ಲೂ ವಿಶೇಷವಾಗಿ ಆಕೆ ಸೆಲೆಬ್ರಿಟಿ ಆಗಿರದೆ ಇದ್ದರೆ, ಅವಳು ತನ್ನ ಇಮೇಜ್ ಕಾಪಾಡಿಕೊಳ್ಳಬೇಕು. ಅಷ್ಟಿಷ್ಟು ಬೋಲ್ಡ್ ನೆಸ್‌ ಸರಿ. ಆದರೆ ಟಾಪ್‌ ಲೆಸ್‌ ಫೋಟೋಗಳು ಮತ್ತು ಬಿಕಿನಿ ಧರಿಸಿರುವ ಫೋಟೋಗಳು ಅಲ್ಲ. ನಾನು ಯಾವ ವ್ಯಕ್ತಿಗೆ ಅಂತಹ ಫೋಟೋಗಳನ್ನು ತೋರಿಸಲು ಇಷ್ಟಪಡುತ್ತೇನೆಂದರೆ, ಆ ವ್ಯಕ್ತಿಯಿಂದ ಪ್ರಶಂಸೆ ಬಯಸುತ್ತೇನೆ. ಹಾದಿ ಬೀದಿಯಲ್ಲಿ ಹೋಗುವ ವ್ಯಕ್ತಿಗೆ ನನ್ನ ಬೋಲ್ಡ್ ಚಿತ್ರಗಳನ್ನು ತೋರಿಸುವ ಬಯಕೆ ನನಗಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ