ಬಾಲಿವುಡ್‌ಗೆ ಕಾಲಿಡುತ್ತಲೇ ಇಡೀ ದೇಶವೇ ಬೆರಗುಗೊಳ್ಳುವಂತೆ, ಫೇಸ್‌ ಬುಕ್‌ ಫಾಲೋಯರ್ಸ್‌ನಲ್ಲಿ ಲಕ್ಷಾಂತರ ಪಡ್ಡೆ ಹುಡುಗರ ಫ್ಯಾನ್ಸ್ ದಂಡನ್ನು ಹೊಂದಿರುವ ಈ ಅನನ್ಯಾ ಪಾಂಡೆ, ದಶಕಗಳಾಚೆಯ ಜನಪ್ರಿಯ ನಟ ಚಂಕಿ ಪಾಂಡೆಯ ಮಗಳು! ಚಿತ್ರರಂಗದ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದಿದ್ದರೂ ತನ್ನದೇ ಆದ ಸ್ವಂತ ಸ್ಟೈಲ್‌, ಫ್ಯಾಷನ್‌, ಗ್ಲಾಮರ್‌, ಹಾರ್ಡ್‌ ವರ್ಕ್‌ಗಳಿಂದ ಕೋಟ್ಯಂತರ ಅಭಿಮಾನಿ ಬಳಗವನ್ನು ಹೊಂದಿರುವ ಹಿರಿಮೆ ಇವಳದು. ಮೊದಲ ಚಿತ್ರದಿಂದಲೇ ಫೀಮೇಲ್ ಡೆಬ್ಯು ಎಂದು ಫಿಲ್ಮ್ ಫೇರ್‌ ಪ್ರಶಸ್ತಿ ಗಳಿಸಿದ ಈಕೆ, ಕೇವಲ 2 ವರ್ಷಗಳಲ್ಲೇ ಬಾಲಿವುಡ್‌ನಿಂದ ದಕ್ಷಿಣದ ಟಾಲಿವುಡ್‌ಗೆ ದಾಂಗುಡಿ ಇಟ್ಟಳು. ಹಿಂದಿಯ ಅದ್ಭುತ ಕೆರಿಯರ್‌ ಗ್ರಾಫ್‌ ತೆಲುಗಿನಲ್ಲೂ ಆಪ್ಯಾಯತೆಯ ಬಾಗಿಲು ತೆರೆದಿದೆ. ಅದ್ಭುತವಾದ ನಟನಾ ಚಾತುರ್ಯದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲೂ ವಿವಿಧ ಬಗೆಯ ವಿಷಯಗಳಿಂದ ಸದಾ ಮಿಂಚುತ್ತಾ, ಪಡ್ಡೆಗಳ ನಿದ್ದೆ ಕೆಡಿಸಿರುವ ಈ ಚಿನ್ನಾರಿ ಚೆಲುವೆ ಉದುರಿಸಿದ ಮುತ್ತುಗಳೆಂಥವು…?

ಕೇವಲ 2 ವರ್ಷಗಳ ಕೆರಿಯರ್ನಲ್ಲಿ 20 ವರ್ಷಗಳಿಗಿಂತ ಹೆಚ್ಚಿನ ಸಾಧನೆ ಮಾಡಿದ್ದೀಯ….. ಕಂಗ್ರಾಟ್ಸ್!

ಥ್ಯಾಂಕ್ಸ್…… ಆದರೆ ಈ ವರ್ಷದ ಸಂಗತಿ ನನಗೆ ದೊಡ್ಡದು ಎನಿಸುತ್ತಿಲ್ಲ. ಮೊದಲಿನಿಂದ ಮಾಡುತ್ತಿರುವ ಎಲ್ಲಾ ಚಿತ್ರಗಳಲ್ಲೂ ಡೇರಿಂಗ್‌, ಡ್ಯಾಶಿಂಗ್‌ ಆಗಿರುವುದೇ ನನ್ನ ನೈಜ ಪ್ರತಿಭೆ. ಹಾಗಾಗಿ ಆ್ಯಕ್ಟಿಂಗ್‌, ಮಾಡೆಲಿಂಗ್‌, ಫ್ಯಾಷನ್‌ ಯಾವುದೇ ಆದರೂ ಬೋಲ್ಡ್ ಆಗಿ ಮುಂದುವರಿಯುತ್ತೇನೆ. ಯಾವುದಕ್ಕೂ ಭಯಪಡದಂಥ ಸ್ವಭಾವ ನನ್ನದು. ನನಗೆ ಸಿಕ್ಕಿದ ಚಿತ್ರಗಳಲ್ಲಿನ ಬಹುತೇಕ ಪಾತ್ರಗಳು ನನ್ನ ವೈಯಕ್ತಿಕ ಜೀವನಕ್ಕೆ, ನನ್ನ ಇಡೀ ವ್ಯಕ್ತಿತ್ವಕ್ಕೆ ಹತ್ತಿರವಾಗೇ ಇವೆ. ಹೀಗಾಗಿ ನನ್ನ ಕೈಲಾದ 100% ಕೊಟ್ಟಿದ್ದೇನೆ, ಅದರ ಪ್ರತಿಫಲವೇ ಈ ಹೆಸರು, ಖ್ಯಾತಿ, ಜನಪ್ರಿಯತೆ…..

ಫ್ಯಾಮಿಲಿ ಬ್ಯಾಕ್ಗ್ರೌಂಡ್ನಿನ್ನ ಎಂಟ್ರಿಗೆ ಸುಲಭವಾಯಿತೇ?

ಸಿನಿಮಾಗೆ ಎಂಟ್ರಿ ಪಡೆಯಲು ಕೌಟುಂಬಿಕ ಸಿನಿ ಹಿನ್ನಲೆ ಖಂಡಿತಾ ದೊಡ್ಡ ಸಹಾಯಕ ಎಂಬುದು ನಿಜ. ಪೂರ್ತಿ ಹೊಸಬರಾಗಿ ಈ ಮಾಯಾಲೋಕದಲ್ಲಿ ಬಂದು ಕಣ್ಣು ಕಣ್ಣು ಬಿಡುವುದಕ್ಕೂ, ತುಸು ಹಿಂದುಮುಂದು ತಿಳಿದಿರುವುದಕ್ಕೂ ವ್ಯತ್ಯಾಸವಿದೆ. ಆದರೆ ಅದೊಂದೇ ನಮ್ಮ ಕೆರಿಯರ್‌ಗೆ ಆಧಾರವಾಗುತ್ತದೆ ಎಂದರೆ ತಪ್ಪಾದೀತು. ಹಾಗೆಂದುಕೊಂಡವರು ಎಷ್ಟೋ ಮಂದಿ ಫ್ಲಾಪ್‌ ಆದ ಉದಾಹರಣೆ ನಿಮ್ಮ ಮುಂದಿದೆ. ನನ್ನ ವಿಷಯದಲ್ಲಿ ಸಂಪೂರ್ಣ ಸ್ವಯಂ ಕೃಷಿ, ಹಿಡಿದ ಹಠ ಸಾಧಿಸುವ ಛಲ, ಅಪಾರ ಧೈರ್ಯದಿಂದ ಮುನ್ನುಗ್ಗಿ ಈ ಹಂತ ತಲುಪಿದ್ದೇನೆ. ಒಂದು ದೃಢವಾದ ಗುರಿ, ಯಶಸ್ಸು ಗಳಿಸಬೇಕೆಂಬ ಹಠವಿದ್ದರೆ ಮುಂದುವರಿಯಲು ಸಾಧ್ಯ.

ನಿನ್ನ ಸಿನಿಮಾ ಕೆರಿಯರ್ಗೆ ತಾಯಿ ತಂದೆಯರ ಪ್ರೋತ್ಸಾಹ?

ನನ್ನ ತಂದೆ ಚಂಕಿ ಪಾಂಡೆ, (ದಶಕಗಳಾಚೆಯ ಯಶಸ್ವೀ ಬಾಲಿವುಡ್‌ ನಟ) ತಾಯಿ ಭಾವನಾ ಪಾಂಡೆ ಇಬ್ಬರೂ ನನ್ನ ಲವ್ಲಿ ಪೇರೆಂಟ್ಸ್! ನಾನು ಸ್ವತಂತ್ರವಾಗಿ ಮುನ್ನುಗ್ಗಲು ಅವರಿಂದ ಎಷ್ಟೋ ಪ್ರೋತ್ಸಾಹ, ಪ್ರೇರಣೆ ಸಿಗುತ್ತದೆ. ಡ್ಯಾಡಿ 90ರ ಕಾಲದಲ್ಲಿ 3 ದಶಕಗಳಿಗೂ ಹೆಚ್ಚಾಗಿ ಬಾಲಿವುಡ್‌ನಲ್ಲಿ ನಾಯಕ, ಪೋಷಕ ಪಾತ್ರಗಳಲ್ಲಿ ಜನಪ್ರಿಯತೆ ಪಡೆದಿದ್ದರು. ನಾನು ಆ್ಯಕ್ಟಿಂಗನ್ನೇ ಕೆರಿಯರ್‌ ಆಗಿ ಪಡೆಯಲು, ನನ್ನದೇ ವಿಶೇಷ ಸ್ಟೈಲ್ ‌ರೂಪಿಸಿಕೊಳ್ಳಲು ಡ್ಯಾಡಿಯ ಚಿತ್ರಗಳು ಹೆಚ್ಚಿನ ಪ್ರೇರಣೆ ನೀಡಿವೆ.

ಬಾಲಿವುಡ್ನಂತರ ದಕ್ಷಿಣದ ಟಾಲಿವುಡ್ಗೂ ಬಂದಿದ್ದಿ. ಬಗ್ಗೆ ಹೇಳು.

`ಸ್ಟೂಡೆಂಟ್‌ ಆಫ್‌ ದಿ ಇಯರ್‌, ಪತಿ ಪತ್ನಿ ಔರ್‌ ಓ, ಖಾಲೀಪೀಲಿ’ ಚಿತ್ರಗಳು ನನಗೆ ಬಾಲಿವುಡ್‌ನಲ್ಲಿ ಗ್ರಾಂಡ್‌ ಎಂಟ್ರಿ ಕೊಡಿಸಿದವು. ನನ್ನ ಮೊದಲ ಚಿತ್ರಕ್ಕೆ `ಸ್ಟೂಡೆಂಟ್‌’ ಫಿಲ್ಮ್ ಫೇರ್‌ ಪ್ರಶಸ್ತಿ ಬರಬಹುದೆಂದು ಖಂಡಿತಾ ನಿರೀಕ್ಷಿಸಿರಲಿಲ್ಲ. ಇದು ನನ್ನನ್ನು ಅನೂಹ್ಯ ಆಶ್ಚರ್ಯಕ್ಕೆ ಗುರಿ ಮಾಡಿ, ಜವಾಬ್ದಾರಿ ಹೆಚ್ಚಿಸಿದೆ. ದಕ್ಷಿಣದ ಚಿತ್ರಗಳೆಂದರೆ ನನಗೆ ಮೊದಲಿನಿಂದಲೂ ಭಾರಿ ಗೌರವ. ಕನ್ನಡ, ತಮಿಳು ಚಿತ್ರಗಳ ಅವಕಾಶಕ್ಕಾಗಿ ನಿರೀಕ್ಷಿಸುತ್ತಿರುವೆ. ತೆಲುಗಿನಲ್ಲಿ ಇದೀಗ ನಿರ್ದೇಶಕ ಪುರಿ ಜಗನ್ನಾಥ್‌, ನಾಯಕ ವಿಜಯ್‌ ದೇವರಕೊಂಡ ಜೊತೆಗೆ ನಾಯಕಿಯಾಗಿ `ಫೈಟರ್‌’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು, ದಕ್ಷಿಣದಲ್ಲಿ ನನ್ನ ಅದೃಷ್ಟದ ಬಾಗಿಲು ತೆರೆಯಿತೆಂದೇ ಭಾವಿಸುತ್ತೇನೆ!`

ಫೈಟರ್‌’ ಚಿತ್ರದ ಶೂಟಿಂಗ್‌, ದಕ್ಷಿಣದ ಅನುಭವ, ವಿಜಯ್ಜೊತೆಗಿನ ಪರಿಚಯ….. 

ಈ ಕುರಿತು……ದಕ್ಷಿಣದ ಚಿತ್ರಗಳಲ್ಲಿ ನಟಿಸುವುದೆಂದರೆ ನಿಜಕ್ಕೂ ಒಂದು ತುಂಬಿದ ಮನೆಯ ಅನುಭವ ನೀಡುತ್ತದೆ! ಉತ್ತರದ ಕಮರ್ಷಿಯಲ್ ವಾತಾವರಣಕ್ಕೂ ದಕ್ಷಿಣದ ಹೆಲ್ದಿ ತೃಪ್ತಿದಾಯಕ ವಾತಾವರಣಕ್ಕೂ ಇದೇ ವ್ಯತ್ಯಾಸ ಅಂತೀನಿ. ಮತ್ತೆ `ಫೈಟರ್‌’ ಚಿತ್ರವಂತೂ ಅದ್ಭುತ, ರೋಮಾಂಚಕಾರಿ. ಏಕಕಾಲಕ್ಕೆ ಇದು ಹಿಂದಿಗೂ ಡಬಲ್ ಆಗುತ್ತಿರುವುದು ಇನ್ನೊಂದು ಪ್ಲಸ್‌ ಪಾಯಿಂಟ್‌. ಪುರಿ ಜಗನ್ನಾಥ್‌ರ ಮಾರ್ಗದರ್ಶನ ನಿಜಕ್ಕೂ ಮರೆಯಲಾಗದ ಅನುಭವ. ಇವರುಗಳಿಂದ ನಾನು ಶಿಸ್ತು, ಸಮಯಪಾಲನೆ ಮುಂತಾದುವನ್ನು ಕಲಿತೆ. ವಿಜಯ್‌ ಅಂತೂ ನಿಜಕ್ಕೂ ಬಹಳ ಡೀಸೆಂಟ್‌, ಡೌನ್‌ ಟು ಅರ್ಥ್‌ ಅಂತಾರಲ್ಲ….. ಅಷ್ಟು ಸರಳ ವ್ಯಕ್ತಿ! ಇಷ್ಟೆಲ್ಲ ಲಕ್ಷಾಂತರ ಫ್ಯಾನ್‌ ಫಾಲೋಯರ್ಸ್‌ ಇದ್ದೂ ಇಷ್ಟು ಕೂಲ್‌, ಕಾಮ್ ಆಗಿರುವುದು ಗ್ರೇಟ್‌! ಈತನಿಗೆ ನಾನು ನಾಯಕಿ ಎಂಬುದು ಎಷ್ಟೋ ಸಂತೋಷಕರ ವಿಷಯ.

ಇಂಥ ಭಾರಿ ಬಜೆಟ್ಚಿತ್ರದಲ್ಲಿ ನಟಿಸುವಾಗ ನಿನಗೆ ಭಾಷೆಯ ಸಮಸ್ಯೆ ಬರಲಿಲ್ಲವೇ?

ಈ ಚಿತ್ರ ಒಪ್ಪಿಕೊಳ್ಳುವ ಮೊದಲಿನಿಂದಲೇ ನನಗೆ ಟಾಲಿವುಡ್‌ ಜೊತೆ ಪರೋಕ್ಷ ನಂಟಿತ್ತು. ಹೀಗಾಗಿ ನಾನು ಅಲ್ಪ ಸ್ವಲ್ಪ ತೆಲುಗು ಭಾಷೆಯ ಟಚ್‌ ಹೊಂದಿದ್ದೆ. ಕನ್ನಡ, ತಮಿಳು ಚಿತ್ರಗಳನ್ನೂ ನೋಡುತ್ತಿರುತ್ತೇನೆ. ಅವೆಲ್ಲ ಅರ್ಥವಾಗುತ್ತೆ, ಬೇಗ ಮಾತನಾಡಲು ಬರಲ್ಲ ಅಷ್ಟೆ. `ಫೈಟರ್‌’ ಚಿತ್ರದ ಚಿತ್ರೀಕರಣದಲ್ಲಿ ಬಹಳಷ್ಟು ತೆಲುಗು ಕಲಿಯಲು ಅವಕಾಶ ಸಿಕ್ಕಿತು. ಹೊಸ ಭಾಷೆಯ ಚಿತ್ರ ಒಪ್ಪಿಕೊಳ್ಳುವ ಮೊದಲು ಆ ಭಾಷೆಯ ಉಚ್ಚಾರಣೆ, ಆ್ಯಕ್ಸೆಂಟ್‌ ತಿಳಿದುಕೊಳ್ಳಬೇಕೆಂಬುದು ನನ್ನ ಪಾಲಿಸಿ.

`ಖಾಲೀಪೀಲಿಚಿತ್ರದಲ್ಲಿ ಸತತ 23 ಗಂಟೆಗಳ ಕಾಲ ನಟಿಸಿ ರೆಕಾರ್ಡ್ಮಾಡಿರುವ ನಿನಗೆ ಸ್ಛೂರ್ತಿ ಯಾವುದು?

ಈ ಚಿತ್ರದ ಕುರಿತ ಅಭಿಮಾನ ಹಾಗೆ ಮಾಡಿಸಿತು. ಬಾಲ್ಯದಿಂದಲೇ ನಾನು ನಾಯಕಿ ಆಗಲೇಬೇಕೆಂದು ಕನಸು ಕಂಡವಳು. ಅಂಥ ಒಂದು ಸುವರ್ಣಾವಕಾಶ ಈಗ ನನಗೆ ದೊರಕಿದೆ. ಇದನ್ನು ಪೂರ್ತಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಪಾತ್ರಕ್ಕಾಗಿ ಎಷ್ಟು ಬೋಲ್ಡ್ ಆಗಿಯಾದರೂ ನಟಿಸಬೇಕೇ ಹೊರತು ಭಯಪಡಬಾರದು ಎಂದು ನಿರ್ಧರಿಸಿದೆ. ಆದ್ದರಿಂದ ರೆಸ್ಟ್ ಟೈಂ ಬಗ್ಗೆ ತಲೆ ಕೆಡಿಸಿಕೊಳ್ಳಲೇ ಇಲ್ಲ. ಹಾಗಾಗಿ ಆ ಚಿತ್ರದ ದೃಶ್ಯಗಳು ಅದ್ಭುತವಾಗಿ ಮೂಡಿಬಂದವು.

ನೀನು ಸಾಮಾನ್ಯವಾಗಿ ಬರ್ತ್ಡೇಗಳನ್ನು ಶೂಟಿಂಗ್ಸೆಟ್ಸ್ ನಲ್ಲೇ ಮುಗಿಸಿಕೊಳ್ತೀಯಂತೆ….. ಹಾಗೇಕೆ?

ನಾನು ನಟಿ ಆಗಬೇಕೆಂಬ ಗುರಿ ನೆರವೇರಿದೆ. ಹೀಗಾಗಿ ನಟನೆಯಲ್ಲೇ ಪೂರ್ತಿ ಮುಳುಗಿಹೋಗಬೇಕು ಅಂದುಕೊಳ್ತೀನಿ. ಒಂದು ಸಲ ಮುಖ್ಯವಾದ ಶೂಟಿಂಗ್‌ ಪ್ರೋಗ್ರಾಂ ಇರುವಾಗಲೇ ಬರ್ತ್‌ ಡೇ ಬಂತು. ಆಗ ಡ್ಯಾಡಿ ಹೇಳುತ್ತಿದ್ದ ಮಾತು, `ನೀನು ಹುಟ್ಟುಹಬ್ಬದಂದು ಕರ್ತವ್ಯ ನಿಷ್ಠಳಾಗಿದ್ದರೆ ಇಡೀ ವರ್ಷ ಬಿಝಿಯಾಗಿಯೇ ಕಳೆಯುತ್ತೀಯಾ….’ ಎಂಬುದು ನೆನಪಾಯಿತು. ಡ್ಯಾಡಿಯ ಈ ಐಡಿಯಾ ನನಗೆ ನಿಜಕ್ಕೂ ವರ್ಕ್‌ಔಟ್‌ಆಗಿದೆ! ಹೀಗಾಗಿ ನಿಷ್ಠೆಯಿಂದ ಅದನ್ನೇ ಪಾಲಿಸುತ್ತಿದ್ದೇನೆ.

`ಸ್ವಚ್ಛ ಸೋಶಿಯಲ್ ಮೀಡಿಯಾಉದ್ಯಮವನ್ನು ಆರಂಭಿಸಿದ ಉದ್ದೇಶ?

ಸಿನಿ ನಟಿಯರ ಬಗ್ಗೆ, ಅವರ ಕುಟುಂಬದ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ಸ್, ಅಶ್ಲೀಲ ಕಾಮೆಂಟ್ಸ್ ಮುಂತಾದವು ಸೂಕ್ಷ್ಮ ಮನಸ್ಸಿನ ನನ್ನಂಥ ಹೆಣ್ಣುಮಕ್ಕಳಿಗೆ ಬಹಳ ಘಾಸಿ ಉಂಟು ಮಾಡುತ್ತವೆ. ನನ್ನ ವೈಯಕ್ತಿಕ ವಿಚಾರಗಳ ಮೇಲೂ ಇದು ಪ್ರಭಾವ ಬೀರಿದೆ. ಸಾಮಾಜಿಕ ಮಾಧ್ಯಮದ ವೇದಿಕೆಯಿಂದ ನಾವು ಸ್ನೇಹ, ಪ್ರೀತಿ, ವಾತ್ಸಲ್ಯ, ಜ್ಞಾನ ಹಂಚಬೇಕು. ಅದರ ಬದಲು ಇಂಥ ಕರಿಛಾಯೆ ತಾರೆಯರ ಕೆರಿಯರ್‌ಮೇಲೆ ದುಷ್ಪ್ರಭಾವ ಬೀರುತ್ತವೆ. ಹೀಗಾಗಿಯೇ ಈ ಮೂಲಕ ಅಂಥವನ್ನು ಮೆಟ್ಟಿಹಾಕಲು ನಾವು ಪ್ರಯತ್ನಿಸುತ್ತಿದ್ದೇವೆ.

ಲವ್, ಲೈಫ್‌, ಗುರಿ….. ಇತ್ಯಾದಿ ಬಗ್ಗೆ ಕಮೆಂಟ್ಸ್?

ಲವ್ ಯಾರಿಗೆ ಬೇಡ ಹೇಳಿ? ಇದೊಂದು ಮಧುರಾನುಭವ! ನಾನಂತೂ ಮುಂದೊಂದು ದಿನ ಖಂಡಿತಾ ಲವ್ ನಲ್ಲಿ ಬೀಳುವವಳೇ! ನನ್ನ ಲೈಫ್‌….. ಅದೊಂದು ದೊಡ್ಡ ಜರ್ನಿ. ನನಗೆ ಅನಿಸಿದ ರೀತಿಯಲ್ಲಿ ಎಲ್ಲರನ್ನೂ ಸಂತೋಷವಾಗಿರಿಸಿಕೊಳ್ಳಬೇಕು. ಇವು ನನ್ನ ಗುರಿ, ನನ್ನ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ, ಈ ಪಾತ್ರಕ್ಕೇ ಇವಳೇ ಸರಿ ಅನಿಸಿಕೊಳ್ಳಬೇಕು!

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ