ಬಾಲಿವುಡ್‌ಗೆ ಕಾಲಿಡುತ್ತಲೇ ಇಡೀ ದೇಶವೇ ಬೆರಗುಗೊಳ್ಳುವಂತೆ, ಫೇಸ್‌ ಬುಕ್‌ ಫಾಲೋಯರ್ಸ್‌ನಲ್ಲಿ ಲಕ್ಷಾಂತರ ಪಡ್ಡೆ ಹುಡುಗರ ಫ್ಯಾನ್ಸ್ ದಂಡನ್ನು ಹೊಂದಿರುವ ಈ ಅನನ್ಯಾ ಪಾಂಡೆ, ದಶಕಗಳಾಚೆಯ ಜನಪ್ರಿಯ ನಟ ಚಂಕಿ ಪಾಂಡೆಯ ಮಗಳು! ಚಿತ್ರರಂಗದ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದಿದ್ದರೂ ತನ್ನದೇ ಆದ ಸ್ವಂತ ಸ್ಟೈಲ್‌, ಫ್ಯಾಷನ್‌, ಗ್ಲಾಮರ್‌, ಹಾರ್ಡ್‌ ವರ್ಕ್‌ಗಳಿಂದ ಕೋಟ್ಯಂತರ ಅಭಿಮಾನಿ ಬಳಗವನ್ನು ಹೊಂದಿರುವ ಹಿರಿಮೆ ಇವಳದು. ಮೊದಲ ಚಿತ್ರದಿಂದಲೇ ಫೀಮೇಲ್ ಡೆಬ್ಯು ಎಂದು ಫಿಲ್ಮ್ ಫೇರ್‌ ಪ್ರಶಸ್ತಿ ಗಳಿಸಿದ ಈಕೆ, ಕೇವಲ 2 ವರ್ಷಗಳಲ್ಲೇ ಬಾಲಿವುಡ್‌ನಿಂದ ದಕ್ಷಿಣದ ಟಾಲಿವುಡ್‌ಗೆ ದಾಂಗುಡಿ ಇಟ್ಟಳು. ಹಿಂದಿಯ ಅದ್ಭುತ ಕೆರಿಯರ್‌ ಗ್ರಾಫ್‌ ತೆಲುಗಿನಲ್ಲೂ ಆಪ್ಯಾಯತೆಯ ಬಾಗಿಲು ತೆರೆದಿದೆ. ಅದ್ಭುತವಾದ ನಟನಾ ಚಾತುರ್ಯದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲೂ ವಿವಿಧ ಬಗೆಯ ವಿಷಯಗಳಿಂದ ಸದಾ ಮಿಂಚುತ್ತಾ, ಪಡ್ಡೆಗಳ ನಿದ್ದೆ ಕೆಡಿಸಿರುವ ಈ ಚಿನ್ನಾರಿ ಚೆಲುವೆ ಉದುರಿಸಿದ ಮುತ್ತುಗಳೆಂಥವು...?

ಕೇವಲ 2 ವರ್ಷಗಳ ಕೆರಿಯರ್ನಲ್ಲಿ 20 ವರ್ಷಗಳಿಗಿಂತ ಹೆಚ್ಚಿನ ಸಾಧನೆ ಮಾಡಿದ್ದೀಯ..... ಕಂಗ್ರಾಟ್ಸ್!

ಥ್ಯಾಂಕ್ಸ್...... ಆದರೆ ಈ ವರ್ಷದ ಸಂಗತಿ ನನಗೆ ದೊಡ್ಡದು ಎನಿಸುತ್ತಿಲ್ಲ. ಮೊದಲಿನಿಂದ ಮಾಡುತ್ತಿರುವ ಎಲ್ಲಾ ಚಿತ್ರಗಳಲ್ಲೂ ಡೇರಿಂಗ್‌, ಡ್ಯಾಶಿಂಗ್‌ ಆಗಿರುವುದೇ ನನ್ನ ನೈಜ ಪ್ರತಿಭೆ. ಹಾಗಾಗಿ ಆ್ಯಕ್ಟಿಂಗ್‌, ಮಾಡೆಲಿಂಗ್‌, ಫ್ಯಾಷನ್‌ ಯಾವುದೇ ಆದರೂ ಬೋಲ್ಡ್ ಆಗಿ ಮುಂದುವರಿಯುತ್ತೇನೆ. ಯಾವುದಕ್ಕೂ ಭಯಪಡದಂಥ ಸ್ವಭಾವ ನನ್ನದು. ನನಗೆ ಸಿಕ್ಕಿದ ಚಿತ್ರಗಳಲ್ಲಿನ ಬಹುತೇಕ ಪಾತ್ರಗಳು ನನ್ನ ವೈಯಕ್ತಿಕ ಜೀವನಕ್ಕೆ, ನನ್ನ ಇಡೀ ವ್ಯಕ್ತಿತ್ವಕ್ಕೆ ಹತ್ತಿರವಾಗೇ ಇವೆ. ಹೀಗಾಗಿ ನನ್ನ ಕೈಲಾದ 100% ಕೊಟ್ಟಿದ್ದೇನೆ, ಅದರ ಪ್ರತಿಫಲವೇ ಈ ಹೆಸರು, ಖ್ಯಾತಿ, ಜನಪ್ರಿಯತೆ.....

ಫ್ಯಾಮಿಲಿ ಬ್ಯಾಕ್ಗ್ರೌಂಡ್ನಿನ್ನ ಎಂಟ್ರಿಗೆ ಸುಲಭವಾಯಿತೇ?

ಸಿನಿಮಾಗೆ ಎಂಟ್ರಿ ಪಡೆಯಲು ಕೌಟುಂಬಿಕ ಸಿನಿ ಹಿನ್ನಲೆ ಖಂಡಿತಾ ದೊಡ್ಡ ಸಹಾಯಕ ಎಂಬುದು ನಿಜ. ಪೂರ್ತಿ ಹೊಸಬರಾಗಿ ಈ ಮಾಯಾಲೋಕದಲ್ಲಿ ಬಂದು ಕಣ್ಣು ಕಣ್ಣು ಬಿಡುವುದಕ್ಕೂ, ತುಸು ಹಿಂದುಮುಂದು ತಿಳಿದಿರುವುದಕ್ಕೂ ವ್ಯತ್ಯಾಸವಿದೆ. ಆದರೆ ಅದೊಂದೇ ನಮ್ಮ ಕೆರಿಯರ್‌ಗೆ ಆಧಾರವಾಗುತ್ತದೆ ಎಂದರೆ ತಪ್ಪಾದೀತು. ಹಾಗೆಂದುಕೊಂಡವರು ಎಷ್ಟೋ ಮಂದಿ ಫ್ಲಾಪ್‌ ಆದ ಉದಾಹರಣೆ ನಿಮ್ಮ ಮುಂದಿದೆ. ನನ್ನ ವಿಷಯದಲ್ಲಿ ಸಂಪೂರ್ಣ ಸ್ವಯಂ ಕೃಷಿ, ಹಿಡಿದ ಹಠ ಸಾಧಿಸುವ ಛಲ, ಅಪಾರ ಧೈರ್ಯದಿಂದ ಮುನ್ನುಗ್ಗಿ ಈ ಹಂತ ತಲುಪಿದ್ದೇನೆ. ಒಂದು ದೃಢವಾದ ಗುರಿ, ಯಶಸ್ಸು ಗಳಿಸಬೇಕೆಂಬ ಹಠವಿದ್ದರೆ ಮುಂದುವರಿಯಲು ಸಾಧ್ಯ.

ನಿನ್ನ ಸಿನಿಮಾ ಕೆರಿಯರ್ಗೆ ತಾಯಿ ತಂದೆಯರ ಪ್ರೋತ್ಸಾಹ?

ನನ್ನ ತಂದೆ ಚಂಕಿ ಪಾಂಡೆ, (ದಶಕಗಳಾಚೆಯ ಯಶಸ್ವೀ ಬಾಲಿವುಡ್‌ ನಟ) ತಾಯಿ ಭಾವನಾ ಪಾಂಡೆ ಇಬ್ಬರೂ ನನ್ನ ಲವ್ಲಿ ಪೇರೆಂಟ್ಸ್! ನಾನು ಸ್ವತಂತ್ರವಾಗಿ ಮುನ್ನುಗ್ಗಲು ಅವರಿಂದ ಎಷ್ಟೋ ಪ್ರೋತ್ಸಾಹ, ಪ್ರೇರಣೆ ಸಿಗುತ್ತದೆ. ಡ್ಯಾಡಿ 90ರ ಕಾಲದಲ್ಲಿ 3 ದಶಕಗಳಿಗೂ ಹೆಚ್ಚಾಗಿ ಬಾಲಿವುಡ್‌ನಲ್ಲಿ ನಾಯಕ, ಪೋಷಕ ಪಾತ್ರಗಳಲ್ಲಿ ಜನಪ್ರಿಯತೆ ಪಡೆದಿದ್ದರು. ನಾನು ಆ್ಯಕ್ಟಿಂಗನ್ನೇ ಕೆರಿಯರ್‌ ಆಗಿ ಪಡೆಯಲು, ನನ್ನದೇ ವಿಶೇಷ ಸ್ಟೈಲ್ ‌ರೂಪಿಸಿಕೊಳ್ಳಲು ಡ್ಯಾಡಿಯ ಚಿತ್ರಗಳು ಹೆಚ್ಚಿನ ಪ್ರೇರಣೆ ನೀಡಿವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ