6 ಅಲ್ಲ 10 ಕಾಲ ಇದು

ಸುಮಾರು 1 ದಶಕದ ಹಿಂದಿನ ಸ್ಟಾರ್‌ಗಳು ತಮ್ಮ ಬಾಡಿ ಬಿಲ್ಡಿಂಗ್‌ ಕುರಿತಾಗಿ ಇಷ್ಟೊಂದು ಚಿಂತಿಸುತ್ತಿರಲಿಲ್ಲ. ಆದರೆ ಇಂದಿನ ತಾರೆಯರು ಆ ಕುರಿತಾಗಿ ಭಲೇ ಟೆನ್ಶನ್‌ನಲ್ಲಿರುತ್ತಾರೆ. ವಿಷಯ ಕೇವಲ ಬಾಡಿ ಬಿಲ್ಡಿಂಗ್‌ಗಷ್ಟೇ ಸೀಮಿತವಾಗಿದ್ದರೆ ಅದೊಂದು ವಿಧ, ಆದರೆ ಟೈಗರ್‌ ಶ್ರಾಫ್‌ ಅದನ್ನೂ ಮೀರಿದ್ದಾನೆ. 6 ಪ್ಯಾಕ್‌ ಆ್ಯಬ್‌ ಮಾಡಿಸಿಕೊಂಡು ಎಲ್ಲರನ್ನೂ ಬೆರಗಾಗಿಸಿದ್ದಾನೆ. ರಣವೀರ್‌ಸಿಂಗ್‌ ಇನ್ನೊಂದು ಹೆಜ್ಜೆ ಮುಂದೆ ಹೋಗಿ 6ರ ಕಾಲ ಹೋಯ್ತು, ಈಗ 10ರ ಕಾಲ ಅಂತಾನೆ! ಇದರಿಂದ ಹಿಟ್‌ ಮಾತ್ರವಲ್ಲ ಫಿಟ್ ಕೂಡ ಅಂತೆ. ಆದರೆ ಬಾಡಿ ಬಿಲ್ಡಿಂಗ್‌ ಒಂದೇ ಕೆರಿಯರ್‌ ಬಿಲ್ಡಿಂಗ್‌ಗೆ ಸಹಾಯವಾಗುವುದೇ ಎಂಬುದನ್ನು ಕಾಲವೇ ಹೇಳಬೇಕು.

ದಬಂಗ್ಕಾರನ ಮಾನವೀಯತೆ

ಸಲ್ಮಾನ್‌ ಖಾನ್‌ ಇದೀಗ ಪನ್‌ವೇವ್‌ನ ಫಾರ್ಮ್ ಹೌಸ್‌ನಲ್ಲಿ ಸಿಲುಕಿರಬಹುದು, ಆದರೆ ದೇಶದ ಪರಿಸ್ಥಿತಿ ಕಡೆ ಪೂರ್ತಿ ಗಮನವಿಟ್ಟಿದ್ದಾನೆ. ಕೊರೋನಾದಿಂದಾಗಿ ಮೊದಲು ಬಾಲಿವುಡ್‌ನ ಸಣ್ಣಪುಟ್ಟ ಕಾರ್ಮಿಕರಿಗೆ ಆರ್ಥಿಕ ಸಹಾಯ ಮಾಡಿದ. ನಂತರ ಗಮನಿಸಿದಾಗ ರಸ್ತೆಗಳ ಬದಿಯಲ್ಲಿ ಕೂಲಿಗಾರರು ಹಸಿವಿನಿಂದ ಚಡಪಡಿಸುತ್ತಾ, ಮುಂಬೈನಿಂದ ತಂತಮ್ಮ ಊರುಗಳಿಗೆ ಹೋಗಲು ಕಷ್ಟಪಡುತ್ತಿರುವುದನ್ನು ಕಂಡು ಅವರಿಗಾಗಿ ಆಹಾರದ ವ್ಯವಸ್ಥೆ ಮಾಡಿದ. ರಾಜಕೀಯದ ಶಿಕಾರಿಗಳಾಗಿ ಕಂಗೆಟ್ಟಿರುವ ಈ ಕೂಲಿಗಾರರಿಗೆ ಸಲ್ಮಾನ್‌ ಮಾನವೀಯತೆ ತೋರಿದ್ದಾನೆ!

OTTಯಲ್ಲಿ ರಿಲೀಸ್ಆಗಲಿವೆ ಚಿತ್ರಗಳು

ಚಿತ್ರ ರಸಿಕರಿಗಾಗಿಯೇ ಇದೀಗ ಹೊಸ ಸಂತಸದ ಸುದ್ದಿ ಎಂದರೆ, ಅವರುಗಳು ಮನೆಯಲ್ಲೇ ಕುಳಿತು ತಮ್ಮ ಪ್ರಿಯ ತಾರೆಯರ ಚಿತ್ರಗಳ ಫಸ್ಟ್ ಡೇ ಫಸ್ಟ್ ಶೋ ನೋಡಬಹುದು. ಆರಂಭದಲ್ಲಿ ಬಿಗ್‌ ಬಿ ಆಯುಷ್ಮಾನ್‌ ನಟಿಸಿರುವ `ಗುಲಾಬೋಸಿತಾಬೋ' ಚಿತ್ರದಿಂದ ಆಗಲಿದೆ. ಈ ಚಿತ್ರ ಈಗ ಅಮೆಜಾನ್‌ ಪ್ರೈಮ್ ನಲ್ಲಿ ಬಿಡುಗಡೆ ಆಗಲಿದೆ. ಇದಾದ ನಂತರ ವಿದ್ಯಾ ಬಾಲನ್‌ಳ `ಶಕುಂತಲಾ ದೇವಿ' ಬಯೋಪಿಕ್‌ O TT ಯಲ್ಲಿ ರಿಲೀಸ್‌ ಆಗಲಿದೆ. ಕೊರೋನಾದಿಂದ ಮಾನವರು ಮನೆಯಲ್ಲೇ ಬಂಧಿಗಳಾದರು. ಹೀಗಾಗಿ ಮನರಂಜನೆ ಚಿತ್ರಮಂದಿರಗಳಿಂದ ಅಭಿಮಾನಿಗಳ ಮನೆ ಬಾಗಿಲು ಬಡಿಯುವಂತಾಗಿದೆ!

ಆನ್ಲೈನ್ಡ್ಯಾನ್ಸ್ ಕಲಿಯುತ್ತಿರುವ ಸುಹಾನಾ

ಕಿಂಗ್‌ ಖಾನ್‌ನನ್ನು ಬೆಳ್ಳಿ ಪರದೆಯಲ್ಲಿ ನೋಡಿ ಎಷ್ಟೋ ವರ್ಷಗಳಾಗಿವೆ. ಇದೀಗ ಆತನ ಮಗಳನ್ನು ಹಿರಿಪರದೆಯಲ್ಲಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದಕ್ಕಾಗಿ ಸುಹಾನಾ ಓಹೋ ಎಂಬಂಥ ತಯಾರಿ ನಡೆಸಿದ್ದಾಳೆ. ಆದರೆ ಯಾವಾಗ ಅವಳು ಬಾಲಿವುಡ್‌ನಲ್ಲಿ ಮಿಂಚಲಿದ್ದಾಳೋ ಈಗಲೇ ಹೇಳಲಾಗದು. ಇತ್ತೀಚೆಗೆ ಸುಹಾನಾ ಬೆಲ್ಲಿ ಡ್ಯಾನ್ಸ್ ಸಹ ಕಲಿಯುತ್ತಿದ್ದಾಳಂತೆ, ಅದೂ ಆನ್‌ಲೈನ್‌ನಲ್ಲಿ! ಅವಳ ಡ್ಯಾನ್ಸ್ ಟೀಚರ್‌ ಸಂಜನಾ ಶಿಷ್ಯೆಯ ಒಂದು ಫೋಟೋವನ್ನು ಇತ್ತೀಚೆಗೆ ಫೇಸ್‌ ಬುಕ್‌ಗೆ ಶೇರ್‌ ಮಾಡಿದರು. ಅಭಿಮಾನಿಗಳಂತೂ ಹುಚ್ಚೆದ್ದು ಕುಣಿದರು. ಚಿತ್ರರಂಗಕ್ಕೆ ಕಾಲಿಡುವ ಮೊದಲೇ ಫೇಸ್‌ ಬುಕ್‌ನಲ್ಲಿ ಆಕೆಯ ಫಾಲೋಯರ್ಸ್‌ ಸಂಖ್ಯೆ ಲಕ್ಷ ದಾಟಿದೆ ಅಂದ್ರೆ, ಇನ್ನು ಅವಳು ಸಿನಿಮಾಗೆ ಎಂಟ್ರಿ ಕೊಟ್ಟರೆ ಅಭಿಮಾನಿಗಳ ಸುನಾಮಿ ಏಳಬಹುದೇ ಎಂದು ವಿಮರ್ಶಕರು ಅಂದಾಜಿಸುತ್ತಿದ್ದಾರೆ.

ಕಾರ್ತಿಕ್ಕೆರಿಯರ್ಮಗುಚುತ್ತಿದೆಯೇ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ