ನಿಸರ್ಗದ ಜೊತೆ ಬದುಕುವ ಖುಷಿ

ಲಾಕ್‌ ಡೌನ್‌ ಹಿಂತೆಗೆದುಕೊಂಡ ಬಳಿಕ ಏನಾಗಬಹುದು? ಎಂಬ ಪ್ರಶ್ನೆ ಪ್ರತಿಯೊಬ್ಬರನ್ನೂ ಕಾಡತೊಡಗಿದೆ. ಜಗತ್ತು ಮೊದಲಿನ ಹಾಗೆ ಬದುಕಿನ ಹಳಿಗೆ ಬರಲಿದೆಯೇ? ಅಥವಾ ಕೊರೋನಾ ವೈರಸ್‌ ಒಂದು ದುಃಸ್ವಪ್ನದ ಹಾಗೆ ಮನಸ್ಸಿನ ಒಂದು ಮೂಲೆಯಲ್ಲಿ ಕುಳಿತು ಮುಂದಿನ ಪೀಳಿಗೆಯ ಮಕ್ಕಳಿಗೆ ಹೇಳಬೇಕಾದ ವಿಷಯ ಆಗಬಹುದೇ? ಅದರ ಪರಿಣಾಮ ಆಗಿಯೇ ಆಗುತ್ತದೆ. ಆ ಪರಿಣಾಮ ಭಾರತದಲ್ಲಿ ಆದ ನೋಟು ರದ್ಧತಿಯಲ್ಲಿ ಕಂಡುಬಂತು. ಆ ಪರಿಣಾಮ ಸದ್ದಾಂ ಹುಸೇನ್‌ ಆಡಳಿತ ಬದಲಾದ ಬಳಿಕ ಕಂಡುಬಂತು. ಈ ಪರಿಣಾಮ ಅದಕ್ಕೂ ಮುಂಚೆ ಮಿಖಾಯೆಲ್ ‌ಗೊರ್ಬೊಚೆಲ್‌ರ ಸೋವಿಯತ್‌ ಯೂನಿಯನ್‌ನಲ್ಲಿ ಆದ ಸುಧಾರಣೆಗಳ ಬಳಿಕ ಕಂಡುಬಂತು.

ಭಾರತದಲ್ಲಿ ನೋಟು ನಿರ್ಬಂಧಕ್ಕಿಂತ ಮುಂಚೆ ಹಾಗೂ ಕೊರೋನಾಗೂ ಮುಂಚೆ ಚಹಾ ಉದ್ಯಮ ಹಾಗೂ ವ್ಯಾಪಾರ ತತ್ತರಿಸಿ ಹೋಗಿತ್ತು.

ನೋಟು ನಿರ್ಬಂಧದಿಂದ 2 ತಿಂಗಳ ಕಾಲ ಬ್ಯಾಂಕ್‌ಗಳ ಮುಂದೆ ಜನರ ಕ್ಯೂ ಕಂಡುಬಂತು. ಆವರೆಗೆ ಹಳೆಯ ನೋಟುಗಳು ಚಲಾವಣೆಯಾದವು. ಆದರೆ ನಗದು ವ್ಯವಹಾರದ ಮೇಲೆ ನಡೆಯುವ ಚಿಲ್ಲರೆ ವಹಿವಾಟಿನ ಪಿಡುಗು ಮಾತ್ರ ವಾಪಸ್‌ ಬರಲಿಲ್ಲ. ವ್ಯಾಪಾರಿಗಳ ಬಳಿ ಉಳಿದ ಹಣ ಬ್ಯಾಂಕುಗಳಲ್ಲಿಯೇ ಸಿಲುಕಿತು. ಇಲ್ಲಿ ನೋಟು ಬದಲಾಯಿಸಲು ಕಮಿಷನ್‌ಗೆ ಖರ್ಚಾಗಿ ಹೋಯಿತು. ಇದರ ಪರಿಣಾಮ ಎಂಬಂತೆ 2012ರ ತನಕ ಮನೆ ಉಳಿತಾಯ ಆದಾಯದ ಶೇ.34.6 ರಷ್ಟಿದ್ದದ್ದು, ನೋಟು ನಿರ್ಬಂಧದ ಬಳಿಕ ಅದು ಶೇ.30ಕ್ಕೆ ಇಳಿಯಿತು. ಈ ಶೇ.4.6 ವ್ಯತ್ಯಾಸ ಬಹಳ ದೊಡ್ಡದು. ಇದೇ ಕೊರತೆಯ ಕಾರಣದಿಂದ ಬ್ಯಾಂಕುಗಳ ವಹಿವಾಟು ಕುಂಠಿತವಾಯಿತು.

ಈಗ ಲಾಕ್‌ ಡೌನ್‌ನ ಕಾರಣದಿಂದ 2-3 ತಿಂಗಳ ಕಾಲ ಯಾವುದೇ ಹೊಸ ಉತ್ಪಾದನೆ ಬರುವುದಿಲ್ಲ. ವೇತನ ದೊರೆಯುವುದಿಲ್ಲ. ತಿಂಗಳಾನುಗಟ್ಟಲೆ ಕಚ್ಚಾವಸ್ತು ಕಾರ್ಖಾನೆ ತನಕ ತಲುಪುವುದಿಲ್ಲ. ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಖರ್ಚಿನಲ್ಲಿ ಮನೆ ನಿರ್ವಹಿಸಬೇಕಾಗುತ್ತದೆ.

ನಗರಗಳಿಂದ ಲಕ್ಷಾಂತರ ಕೂಲಿಕಾರರು ತಮ್ಮ ಊರಿನತ್ತ ಹೊರಟು ಹೋಗಿದ್ದಾರೆ. ಆರೋಗ್ಯದ ಕಾರಣ ಕೊಟ್ಟು ಅವರನ್ನು ನಟ್ಟನಡುವೆ ತಡೆಹಿಡಿಯಲಾಯಿತು. ಲಾಕ್‌ ಡೌನ್‌ ಬಳಿಕ ಅವರು ನಗರಗಳಿಗೆ ಮರಳದೇ ಇರಬಹುದು. ಆಗ ಜೀವನಶೈಲಿ ಬದಲಾಗಿ ಹೋಗಬಹುದು. ಏಕೆಂದರೆ ಮನೆಗೆಲಸಗಾರರು ಸಿಗಲಿಕ್ಕಿಲ್ಲ.

ಈಗ ತಿಂಗಳಾನುಗಟ್ಟಲೆ ಜನರ ದಟ್ಟಣೆ ನಿಯಂತ್ರಿಸಲು ಪ್ರಯತ್ನಿಸಬೇಕಾಗುತ್ತದೆ. ಏಕೆಂದರೆ ಕೊರೋನಾ ವೈರಸ್‌ ಇನ್ನೂ ಸತ್ತಿಲ್ಲ, ಅದಕ್ಕೆ ಔಷಧಿ ಸಹ ಕಂಡುಹಿಡಿದಿಲ್ಲ. ಅದನ್ನು ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತೆ ತಡೆಯಲಾಗಿದೆ, ಅಷ್ಟೇ. ಇದರರ್ಥ ಬಹಳಷ್ಟು ವ್ಯಾಪಾರಗಳು ಬಂದಾಗಲಿವೆ. ಅದಕ್ಕೆ ಸಂಬಂಧಪಟ್ಟ ಕುಟುಂಬಗಳಿಗೆ ಹತ್ತು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು. ಯಾವುದರ ಮೇಲೆ ಎಷ್ಟು ಹೊಡೆತ ಬೀಳಬಹುದು ಎಂದು ಹೇಳಲು ಆಗದು. ಅದನ್ನು ಈಗಲೇ ಅಂದಾಜಿಸಲು ಆಗದು. ಆದರೆ ವ್ಯತ್ಯಾಸ ಆಗುವುದು ಖಚಿತ.ಇದರ ಜೊತೆಗೆ ಕೆಲವು ಒಳ್ಳೆಯ ಪರಿಣಾಮಗಳು ಕಂಡುಬರಬಹುದು. ಜನರು ಒಂದೇ ಮನೆಯಲ್ಲಿ ಒಟ್ಟಿಗೆ ಬಾಳು ಫಾರ್ಮುಲಾ ಕಲಿತುಕೊಳ್ಳಬಹುದು. ಈ ಮುಂಚೆ ಅವರು ಪೂರ್ಪ ಪಶ್ಚಿಮ ಎಂಬಂತಿದ್ದರು. ಬಹುಮಹಡಿ ಕಟ್ಟಡಗಳಲ್ಲಿ ಅಪರಿಚಿತರಂತಿದ್ದ ಕುಟುಂಬಗಳು ಇನ್ಮುಂದೆ ಚಿರಪರಿಚಿತರಾಗಬಹುದು. ಹಾಯ್‌ ಹಲೋಗೆ ಸೀಮಿತವಾಗಿದ್ದ ಕುಟುಂಬಗಳು ಈಗ ಅದನ್ನು ಇದನ್ನು ಕೊಡಲು ಶುರು ಮಾಡಿಕೊಂಡಿದ್ದಾರೆ.

ಈಗ ನಗರಗಳ ವಾಯು ಗುಣಮಟ್ಟ ಸಾಕಷ್ಟು ಸುಧಾರಣೆಯಾಗಿದೆ. ಇನ್ಮುಂದೆ ಅದರ ಮಹತ್ವ ಗೊತ್ತಾಗಬಹುದು. ನಿಸರ್ಗದ ಜೊತೆ ಬದುಕುವ ಕಲೆಯನ್ನು ಮೈಗೂಡಿಸಿಕೊಳ್ಳಬಹುದು. 40 ಅಥವಾ ಅದಕ್ಕೂ ಹೆಚ್ಚಿನ ದಿನಗಳ ಏಕಾಂತ ವಾಸ ಬಹಳಷ್ಟು ಕುಟುಂಬಗಳಿಗೆ ಯಾವುದಾದರೂ ಪಾಠವನ್ನು ಅವಶ್ಯ ಕಲಿಸಿರುತ್ತದೆ. ಆಧುನಿಕ ಥಳುಕು ಬಳುಕಿನ ವಿರುದ್ಧ ಎಂತಹದೊಂದು ಸಂದೇಶ ಸಿಗಬಹುದೆಂದರೆ, ಅದು ದೊಡ್ಡದೊಡ್ಡ ಜಾಹೀರಾತುಗಳಿಂದಲೂ ಸಿಕ್ಕಿರಲಿಲ್ಲ. ಅದೀಗ ಸೂಕ್ಷ್ಮ ವೈರಸ್‌ ಕೊಟ್ಟಿರಬಹುದು. ಪುಸ್ತಕದ ಮಾತುಗಳನ್ನು ಒಪ್ಪದೇ ಇರುವವರು ಲಾಕ್‌ ಡೌನ್‌ ಬಳಿಕ ಅದೇ ಅವರಿಗೆ ಗುರುವಾಗಿ ಪರಿಣಮಿಸಿರಬಹುದು. ಅದು ಗುಪ್ತವಾಗಿದ್ದುಕೊಂಡು, ಯಾವಾಗ ಬೇಕಾದರೂ ಕಪಾಳ ಮೋಕ್ಷಕ್ಕೆ ಬರಲು ಸಜ್ಜಾಗಿರಬಹುದು.

ಇನ್ನು ಮುಂದೆ ದುರ್ದರ ದಿನಗಳು ಹೆಚ್ಚಲಿವೆ

ಲಾಕ್‌ ಡೌನ್‌ ಬಳಿಕ ದೇಶದ ಮೇಲೆ ದೊಡ್ಡ ಆಪತ್ತು ಎದುರಾಗಬಹುದು. ಮೊದಲೇ ಕುಂಟುತ್ತಾ ಸಾಗಿದ್ದ ಮಾರುಕಟ್ಟೆಗಳು, ವ್ಯಾಪಾರಗಳು, ಉದ್ಯಮಗಳು, ಬ್ಯಾಂಕುಗಳು 40 ದಿನ ಬಂದ್‌ ಇದ್ದುದರಿಂದಾಗಿ ಮನೆಮನೆಗಳಿಗೆ ಹಣ ತಲುಪಿಸುವುದು ಬಹಳ ಕಷ್ಟಕರವಾಗಬಹುದು. ಈ ದಿನಗಳಲ್ಲಿ ಯಾವ ಉತ್ಪಾದನೆಗಳು ಬಂದ್‌ ಆಗಿವೆಯೊ, ಅದು ಮೊದಲನೇ ವಿಷಯ, ಅದಕ್ಕೂ ದೊಡ್ಡ ವಿಷಯವೆಂದರೆ, ಸಪ್ಲೈ ಚೇನ್‌ ತುಂಡರಿಸಿದೆ. ಉದ್ಯಮಗಳಲ್ಲಿ ಯಂತ್ರಗಳು ಸ್ಥಗಿತಗೊಂಡಿದ್ದವು. ಇನ್ನು ಶುರುವಾದ ಬಳಿಕ ಹಲವು ದಿನಗಳ ಕಾಲ ಸ್ವಚ್ಛತೆ ಹಾಗೂ ದುರಸ್ತಿ ಕಾರ್ಯ ನಡೆಯುತ್ತದೆ. ಆ ಬಳಿಕ ಕಚ್ಚಾವಸ್ತು ಬರಲು ಶುರುವಾಗುತ್ತದೆ. ಎಲ್ಲಿಯವರೆಗೆ ಸರಕು ಗೋದಾಮಿನಲ್ಲಿ ಸಂಗ್ರಹವಿರುತ್ತದೋ, ಅಲ್ಲಿಯವರೆಗೆ ಕೆಲಸ ಮುಂದುವರಿಯುತ್ತದೆ. ಆ ಬಳಿಕ ಅದರ ಪೂರೈಕೆ ಆಗುವುದು ಕಷ್ಟಕರ ಎನಿಸಬಹುದು.

ಒಂದು ಅಂದಾಜಿನ ಪ್ರಕಾರ ಲಕ್ಷಾಂತರ ಅಲ್ಲ, ಕೋಟ್ಯಂತರ ನೌಕರಿಗಳು ಹೊರಟು ಹೋಗಬಹುದು. ಸರ್ಕಾರಿ ನೌಕರಿಗಳು ಮಾತ್ರ ಸುರಕ್ಷಿತ ಎನ್ನುವ ಭಾವನೆ ಜನರಲ್ಲಿದೆ. ದೇಶದಲ್ಲಿ ಸುಮಾರು 3 ಕೋಟಿ ಜನರು ಸರ್ಕಾರಿ, ಅರೆ ಸರ್ಕಾರಿ ನೌಕರರಾಗಿದ್ದಾರೆ. ಇನ್ನುಳಿದಂತೆ ಜನರು ಯಾವ ಕಂಪನಿಗಳು ಅಸ್ತಿತ್ವದಲ್ಲಿ ಉಳಿಯುತ್ತವೆ ಅವನ್ನೇ ನೆಚ್ಚಿಕೊಂಡಿದ್ದಾರೆ.

40 ದಿನಗಳ ಕಾಲ ಕೆಲಸಕ್ಕೆ ಹೋಗದ ಕಾರಣ ಯಾವ ಉತ್ಪಾದನೆಗೆ ಹಾನಿಯಾಗಿದೆಯೊ, ಅದರಲ್ಲಿ ಕೋಟ್ಯಂತರ ಜನರ ಆದಾಯ ನಿಂತುಹೋಗುತ್ತದೆ. ಈವರೆಗೆ ಮನೆಯನ್ನು ಉಳಿತಾಯದಿಂದ ಮುಂದುವರಿಸಿದರು. ಇನ್ಮುಂದೆ ಶಾಲೆಯ ಫೀ, ಬಾಡಿಗೆ, ಬ್ಯಾಂಕ್‌ಗಳ ಕಂತುಗಳು, ನೀರು, ವಿದ್ಯುತ್‌ ಬಿಲ್ ‌ಇವೆಲ್ಲವನ್ನು ಒಟ್ಟೊಟ್ಟಾಗಿ ಕಟ್ಟಬೇಕಾಗಿ ಬರುತ್ತದೆ. ಅದಕ್ಕಾಗಿ ಹಣ ಹೇಗೆ ಹೊಂದಿಸಬೇಕು ಎಂಬ ಚಿಂತೆ ಕಾಡುತ್ತದೆ. ಪ್ರತಿಯೊಬ್ಬ ಗೃಹಿಣಿ ಲಾಕ್‌ ಡೌನ್‌ ಬಳಿಕ ಬಹಳಷ್ಟು ಕೆಟ್ಟ ದಿನಗಳನ್ನು ಎದುರಿಸಬೇಕಾಗಿ ಬರುತ್ತದೆ. ಹಳೆಯ ಖರ್ಚುಗಳು ಎಲ್ಲಿದ್ದವೋ ಅಲ್ಲಿಯೇ ಉಳಿಯುತ್ತವೆ. ಹೊಸ ಖರ್ಚುಗಳು ತಲೆ ಎತ್ತಿ ನಿಲ್ಲುತ್ತವೆ. ಆದರೆ ಆದಾಯದ ಭರವಸೆ ಇರುವುದಿಲ್ಲ. ವ್ಯಾಪಾರಗಳಿಗಾದ ನಷ್ಟದ ಹೊಣೆಯನ್ನು ಪ್ರತಿಯೊಂದು ಕುಟುಂಬ ಹೊರಬೇಕಾಗಿ ಬರುತ್ತದೆ. ಸರ್ಕಾರಿ ನೌಕರಿಗಳಲ್ಲಿ ಮೇಲಾದಾಯ ಕೂಡ ಕಡಿಮೆಯಾಗುತ್ತದೆ.

ಇದಕ್ಕೊಂದು ಉಪಾಯವೆಂದರೆ, ಸರ್ಕಾರ ನೋಟುಗಳನ್ನು ಮುದ್ರಣ ಮಾಡಿ ಉದ್ಯಮ ಹಾಗೂ ವ್ಯಾಪಾರಗಳಿಗೆ ಆರ್ಥಿಕ ಸಹಾಯ ನೀಡುವುದರ ಮೂಲಕ ಉತ್ಪಾದನೆ ಮತ್ತು ಬೇಡಿಕೆ ಹೆಚ್ಚಿಸಬಹುದು. ಕುಟುಂಬದ ಯಜಮಾನಿಯ ಕೈಗೆ ಹಣ ಸಿಗುವಂತೆ ಮಾಡಲು ಸರ್ಕಾರ ನೋಟು ಮುದ್ರಣ ಮಾಡಿ ಲಾಕ್‌ ಡೌನ್‌ ಸಮಯದಲ್ಲಾದ ಹಾನಿಯನ್ನು ಭರ್ತಿ ಮಾಡಬಹುದು. ಇದರಿಂದ ಬೆಲೆ ಏರಿಕೆ ಆಗಬಹುದು ಮತ್ತು ಬೇಡಿಕೆ ಹೆಚ್ಚಬಹುದು.

ಭಾರತದ ಸರ್ಕಾರ ಸದ್ಯ ಜನತೆಯ ಮೇಲೆ ಪರೋಕ್ಷ ಅಥವಾ ಅಪರೋಕ್ಷ ರೀತಿಯಲ್ಲಿ ತೆರಿಗೆಯ ಹೊರೆ ಹೊರಿಸುತ್ತಿದೆ. ಕಚ್ಚಾ ತೈಲದ ಬೆಲೆ ಕಡಿಮೆಯಾಗಿದೆ. ಆದರೆ ಅದರ ಲಾಭ ಜನರಿಗೆ ಕೊಡುತ್ತಿಲ್ಲ. ಏಕೆಂದರೆ ಸರ್ಕಾರಕ್ಕೆ ಹಣದ ತುರ್ತು ಅಗತ್ಯವಿದೆ. ಸಾಮಾನ್ಯ ಗೃಹಿಣಿಯೊಬ್ಬಳು ತನ್ನ ಬಜೆಟ್‌ನ್ನು ಹೇಗೆ ಸರಿ ಹೊಂದಿಸಿಕೊಳ್ಳುತ್ತಾಳೆ ಎಂಬ ಚಿಂತೆ ಸರ್ಕಾರಕ್ಕಿಲ್ಲ.

ಸರ್ಕಾರದ ಆರ್ಥಿಕ ನೀತಿಗಳಿಂದ ಸಾಮಾನ್ಯ ಕುಟುಂಬವೊಂದು ಹೇಗೆ ತೊಂದರೆಗೆ ಒಳಗಾಗಬಹುದು ಎಂಬ ಅಂಕಿಅಂಶಗಳು ಸರ್ಕಾರದ ಬಳಿ ಇಲ್ಲ. ವ್ಯಾಪಾರ ಉದ್ದಿಮೆಗಳ ಟೆಂಪರೇಚರ್‌ ಸ್ಟಾಕ್‌ ಮಾರ್ಕೆಟ್‌ನ ಏರಿಳಿತದಿಂದ ಗೊತ್ತಾಗುತ್ತದೆ. ಆದರೆ ಮನೆಗಳ ಟೆಂಪರೇಚರ್‌ನ್ನು ಮನೆಯವರೇ ಎದುರಿಸಬೇಕಾಗುತ್ತದೆ. ಸರ್ಕಾರ ಈ ಸಮಯದಲ್ಲಿ ಧರ್ಮ ಅಥವಾ ದೇಶಭಕ್ತಿಯ ವಿಷಯಗಳನ್ನು ಮುಂದಿಟ್ಟುಕೊಂಡು ಜನರ ಗಮನ ಬೇರೆಡೆ ಸೆಳೆಯುತ್ತದೆ. ಏಕೆಂದರೆ ಅಳುತ್ತಿರುವ ಮಗು ಸುಮ್ಮನಾಗಬೇಕು.

vinhangam2

ಲಾವಾದ ಮೇಲೆ ಕುಳಿತ ಪರಿಸ್ಥಿತಿ

ನಿರುದ್ಯೋಗ ಹಾಗೂ ಆರ್ಥಿಕ ದುಃಸ್ಥಿತಿಯ ಸಂದರ್ಭದಲ್ಲಿ ಕುಟುಂಬಗಳ ಸ್ಥಿತಿ ಏನಾಗಬಹುದು? ಇದರ ಬಗ್ಗೆ ಯೋಚಿಸಲು ಇದು ಸಕಾಲವಲ್ಲ. ಆದರೆ ಒಂದು ಮಾತಂತೂ ಸತ್ಯ. ಇಡೀ ದೇಶ ಒಂದು ದೊಡ್ಡ ಲಾವಾದ ಮೇಲೆ ಕುಳಿತಿದೆ. ಅದರಲ್ಲಿ ಭಯಂಕರ ಹಸಿವು, ನಿರುದ್ಯೋಗ, ಹದಗೆಟ್ಟ ಅರ್ಥ ವ್ಯವಸ್ಥೆಯ ಜೊತೆ ಚೂರು ಚೂರಾದ ಕುಟುಂಬಗಳು ಕೂಡ ಇರುತ್ತವೆ. ಈ ಸಮಸ್ಯೆ ಈಗ ಲಾಕ್‌ ಡೌನ್‌ನಿಂದಾಗಿ ಅನಾರೋಗ್ಯ ಪೀಡಿತ ಹಾಗೂ ಸಾಯುವವರ ಹೆಚ್ಚುತ್ತಿರುವ ಸಂಖ್ಯೆಯಿಂದಾಗಿ ಇನ್ನಷ್ಟು ಕಂಗೆಡುವಂತೆ ಮಾಡಿದೆ.

ಈಗ ಸಾವಿರಾರು ಕುಟುಂಬಗಳು ಹೇಗಿವೆಯೆಂದರೆ, ಗಂಡ ಎಲ್ಲೋ ಇದ್ದಾನೆ. ಹೆಂಡತಿ ಮತ್ತೆಲ್ಲೋ ಇದ್ದಾಳೆ. ಅವರಲ್ಲಿ ಮಕ್ಕಳು ಇದ್ದರು, ಇಲ್ಲದವರು ಕೂಡ ಇದ್ದಾರೆ. ಗಂಡನ ಉದ್ಯೋಗದಲ್ಲಿ ಸ್ಥಿರತೆ ಇರದಿದ್ದರೆ, ಹೆಂಡತಿ ಕುಟುಂಬವನ್ನು ಹೇಗೆ ಸಲಹಲು ಸಾಧ್ಯ? ತನ್ನ ಕೋಪವನ್ನು ಏಕೆ ಚೀನಾದಿಂದ ಬಂದ ಕೊರೋನಾ ಮೇಲೆ ತೋರಿಸಬೇಕು? ಆದರೆ ಆಕೆ ಪತಿಯ ಮೇಲೆ ಕೋಪ ಮಾಡಿಕೊಳ್ಳುತ್ತಾಳೆ. ಪ್ರತಿಯೊಬ್ಬ ಪತ್ನಿ ಗಂಡನ ಮೇಲೆಯೇ ಅದರ ಜವಾಬ್ದಾರಿ ಹೊರಿಸುತ್ತಾಳೆ.

ಒಂದೇ ಮನೆ ಅಥವಾ ಬೇರೆ ಬೇರೆ ಕಡೆ ವಾಸಿಸುವ ಗಂಡಹೆಂಡತಿ ಸಾಕಷ್ಟು ಒತ್ತಡದಲ್ಲಿದ್ದಾರೆ. ಸಾಮಾಜಿಕ ಹೊಂದಾಣಿಕೆ ಇಲ್ಲದಿರುವುದು, ಬೇಸರಪಟ್ಟುಕೊಳ್ಳುವುದು, ಮೂರೂ ಹೊತ್ತು ಒಂದೇ ರೀತಿಯ ಆಹಾರ ಸೇವಿಸುವುದರಿಂದ ಅವರ ತಾಳ್ಮೆ ಹೊರಟುಹೋಗುತ್ತಿದೆ. ಅದನ್ನು ಅವರು ಪರಸ್ಪರರ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ.

ಇದರಲ್ಲಿ ಕೇವಲ ಬಡ ರಾಜ್ಯಗಳಿಂದ ನಗರಗಳಿಗೆ ಬಂದ ಕೂಲಿಕಾರರಷ್ಟೇ ಇಲ್ಲ, ವಿದೇಶಗಳಿಗೆ ಒಳ್ಳೆಯ ವೇತನದ ಆಸೆಯಿಂದ ಹೋದವರು ಕೂಡ ಸೇರಿದ್ದಾರೆ. ಕೆಲವು ದಿನಗಳ ಮಟ್ಟಿಗೆಂದು ವಿದೇಶಗಳಿಗೆ ಹೋದವರು ಇನ್ನಷ್ಟು ಒತ್ತಡದಲ್ಲಿರಬಹುದು.

ಮನೋವಿಜ್ಞಾನಿ ಡಾ. ಡಾನ್ನರ್‌ ಲಾಪ್‌ಟೋಸೈ ನಾರ್ಥ್‌ ವೆಸ್ಚ್ ಯೂನಿವರ್ಸಿಟಿಯಲ್ಲಿ ಕ್ಲಿನಿಕ್‌ ಮನೋವಿಜ್ಞಾನದ ವಿಷಯ ಬೋಧಿಸುವವರಾಗಿದ್ದು, ಅವರು ಒತ್ತಾಯಪೂರ್ವಕವಾಗಿ ಬೇರ್ಪಡುವುದು ಭಾವನಾತ್ಮಕ ಅಸುರಕ್ಷತೆ ಮತ್ತು ಭವಿಷ್ಯದ ಬಗ್ಗೆ ಭ್ರಮೆ ಹುಟ್ಟಿಸುತ್ತದೆ ಎನ್ನುತ್ತಾರೆ. ಅದರಿಂದಾಗಿ ಪರಸ್ಪರರ ಮೇಲಿನ ವಿಶ್ವಾಸ ಕಡಿಮೆಯಾಗುತ್ತದೆ. ಪ್ರೀತಿಯ ಬದಲು ಭಯ ಮನೆ ಮಾಡುತ್ತದೆ. ಇಂತಹ ಸ್ಥಿತಿ ಸೇನೆಯಲ್ಲಿ ಸೇವೆ ಸಲ್ಲಿಸುವವರೇ ವಿದೇಶದಲ್ಲಿ ವೀಸಾದ ಸಮಸ್ಯೆಯಿಂದಾಗಿ ಬೇರೆ ಬೇರೆ ಆಗಿರಬೇಕಾಗುತ್ತದೆ. ಲೈಂಗಿಕ ಕೊರತೆ ಕೂಡ ಅವರಲ್ಲಿ ಕೋಪ ಹುಟ್ಟಿಸುತ್ತದೆ.

ಯಾವ ಜೋಡಿಗಳು ಜೊತೆ ಜೊತೆಯಾಗಿದ್ದು ಸಮಯ ಕಳೆಯಲೆಂದು ಹೆಚ್ಚೆಚ್ಚು ಸೆಕ್ಸ್ ಸುಖ ಪಡೆದುಕೊಳ್ಳುತ್ತವೆ, ಆ ಜೋಡಿಗಳಿಗೂ ಕೂಡ ಅದರ ಬಗ್ಗೆ ಹೇಸಿಗೆ ಹುಟ್ಟುತ್ತದೆ. ಅದೇ ಸ್ಥಿತಿ ವೇಶ್ಯೆಯರಿಗೂ ಇರುತ್ತದೆ. ಯಾವುದೇ ಸಮಾಗಮದಿಂದಲೂ ಅವರಿಗೆ ತೃಪ್ತಿಯ ಭಾವನೆ ಇರುವುದಿಲ್ಲ.

ಇದಕ್ಕೆ ಸರ್ಕಾರ ಕಾರಣ ಆಗಿರದೇ ಇರಬಹುದು, ಆದರೆ ಜನರು ಅದನ್ನು ಅನುಭವಿಸಲೇಬೇಕಾಗುತ್ತದೆ. ಮಧ್ಯ ವಯಸ್ಸಿನ ಜೋಡಿಗಳು ಈ ಒತ್ತಡವನ್ನು ಎದುರಿಸಬಹುದು. ಆದರೆ ಯುವ ಜೋಡಿಗಳು 6 ತಿಂಗಳ ಬಳಿಕ ವಿಚ್ಛೇದನ ಕೇಳಿದರೆ ಅಚ್ಚರಿಗೊಳ್ಳಬೇಕಾಗಿಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ