ಪತ್ನಿ : ಎಲ್ಲಿಗೆ ಹೋಗ್ತಾ ಇದ್ದೀರಿ? ಹೊರಗೆ ಓಡಾಡಬಾರದು ಅಂತ ಗೊತ್ತಿಲ್ವೋ... ಎಲ್ಲೆಲ್ಲೂ ಲಾಕ್‌ ಡೌನ್‌!

ಪತಿ : ಒಂದಿಷ್ಟು ಮೈಕೈ ನೋವಿನ ಬಾಮ್ ಕೊಳ್ಳೋಣವೆಂದು ಹೊರಟಿದ್ದೇನೆ. ಲಾಕ್‌ ಡೌನ್‌ನಲ್ಲಿ ಎಲ್ಲೆಲ್ಲೂ ಲಾಠಿ ಚಾರ್ಜ್ ಆಗುತ್ತಿರುವುದರಿಂದ, ಇನ್ನು  ಮುಂದೆ ಸ್ಯಾನಿಟೈಝರ್‌ಗೆ ಡಿಮ್ಯಾಂಡ್‌ ಹೋಗಿ ಇದಕ್ಕೆ ಜಾಸ್ತಿ ಬರುತ್ತೆ ಅನ್ಸುತ್ತೆ.

ಗುಂಡನಿಗೆ ಮೊದಲಿನಿಂದಲೂ ಮನೆಯಲ್ಲಿ ಶೇವಿಂಗ್‌ ಮಾಡಿಕೊಳ್ಳಲು ಬರುತ್ತಿರಲಿಲ್ಲ. ಈಗಂತೂ ಎಲ್ಲೆಲ್ಲೂ ಲಾಕ್‌ ಡೌನ್‌ ಆಗಿ ಸೆಲೂನ್‌ ಮುಚ್ಚಿರುವುದರಿಂದ 2 ತಿಂಗಳಲ್ಲಿ ಗಡ್ಡ ದಾಡಿ, ಉದ್ದುದ್ದ ತಲೆಗೂದಲು ಬೆಳೆಸಿಕೊಂಡು ಬೈರಾಗಿಯಂತೆ ಆಗಿಹೋಗಿದ್ದ. ತರಕಾರಿ ತರಲೆಂದು ರಸ್ತೆಯಲ್ಲಿ ಹೋಗುತ್ತಿದ್ದವನನ್ನು ಬುದ್ಧಿಜೀವಿ ಪತ್ರಕರ್ತನೊಬ್ಬ ಅಡ್ಡಹಾಕುವುದೇ...?

``ಬಾಬಾ ತಗೊಳ್ಳಿ.... ಒಣಗಿದ ದೇಹ ನೋಡಿದ್ರೆ ಊಟ ಮಾಡಿ ಎಷ್ಟು ದಿನವಾಯಿತೋ ಏನೋ....'' ಎಂದು 1 ಪ್ಯಾಕೆಟ್‌ ಆಹಾರ ಕೊಟ್ಟು, ಪಕ್ಕದಲ್ಲಿ ನಿಂತು ಸೆಲ್ಛಿ ಕ್ಲಿಕ್ಕಿಸಿಕೊಂಡ. ಹಾಗಲ್ಲ ಹೀಗೆ ಅಂತ ಗುಂಡ ಎಷ್ಟು ಸಲ ಹೇಳಲು ಯತ್ನಿಸಿದರೂ ಅವನು ಕೇಳಿಸಿಕೊಂಡರೆ ತಾನೇ.....ತರಕಾರಿ ಕೊಂಡು ಗುಂಡ ಮನೆಗೆ ಬಂದು ಫೇಸ್‌ ಬುಕ್‌ ನೋಡುತ್ತಾನೆ, ಅವನ ನೂರಾರು ಗೆಳೆಯರು ಲಿಂಕ್‌ ನೀಡಿ ಇವನು ಬೀದಿಯಲ್ಲಿ ನಿಂತು ಕೈಯಲ್ಲಿ ಆಹಾರ ಪೊಟ್ಟಣ ಹಿಡಿದಿರುವುದರ ಫೋಟೋ ಕೆಳಗೆ `ತಿನ್ನಕ್ಕೆ ಇಲ್ಲಾಂದ್ರೆ ನಮ್ಮ ಮನೆಗೆ ಬರಬಾರದಾ?' ಅಂತ ಕ್ಯಾಪ್ಶನ್‌ ಬೇರೆ ಹಾಕುವುದೇ?

 

ಸಿಬ್ಬಂದಿ : ಸಾರಿ ಸಾರ್‌..... ನಾನು ಲೇಟಾಗಿ ಸ್ನಾನಕ್ಕೆ ಹೋಗಿದ್ದೆ. ಹೀಗಾಗಿ ನೀವು ಫೋನ್‌ ಮಾಡಿದಾಗ ರಿಸೀವ್ ‌ಮಾಡಲು ಆಗಲಿಲ್ಲ.

ಮ್ಯಾನೇಜರ್‌ : ಎಷ್ಟು ದಿನ ಅದೇ ಸುಳ್ಳು ಹೇಳ್ತೀಯ ಬಿಡಯ್ಯ.... ನಿನ್ನ ಹಾಗೇ ನಾನೂ ಪಾತ್ರೆ ಉಜ್ಜುತ್ತಿದ್ದೆ. ನನ್ನದು ಮೊದಲು ಮುಗಿದಿದ್ದರಿಂದ ನಿನ್ನ ವರ್ಕ್‌ ಎಲ್ಲಿತನಕ ಬಂದಿದೆ ಎಂದು ಕೇಳಲು ಫೋನ್‌ ಮಾಡಿದ್ದೆ!

ರೋಗಿ : ನಿನ್ನೆಯಿಂದ ನನಗೆ ಸೋಫಾದಲ್ಲಾಗಲಿ, ಚೇರ್‌ ಮೇಲಾಗಲಿ ಅಥವಾ ಕೆಳಗೆ ನೆಲದಲ್ಲಾಗಲಿ.... ಕೂರಲು ಆಗೋದೇ ಇಲ್ಲ.... ಅಷ್ಟು ನೋವಾಗ್ತಿದೆ!

 

ಡಾಕ್ಟರ್‌ : ಲಾಕ್‌ ಡೌನ್‌ ಇರುವಾಗ ಬೀದಿ ಸುತ್ತಾಟಕ್ಕೆ ಹೋಗಿದ್ರಿ ಅನ್ಸುತ್ತೆ....

ರೋಗಿ : ಹೌದು.... ಆದರೆ ನಾನು ಹೊರಗೆ ಹೋಗಿದ್ದೆ ಅಂತ ನಿಮಗೆ ಹೇಗೆ ಗೊತ್ತಾಯ್ತು? ಓಹೋ.... ಮೇನ್‌ ರೋಡಿಗೆ ನೀವು ಬಂದಿದ್ರಾ?

ಡಾಕ್ಟರ್‌ : ಅದಲ್ಲರೀ ಕರ್ಮ...... 1 ವಾರದಿಂದ ಬರುವ ಪ್ರತಿ ರೋಗಿಯೂ ಇಂಥದ್ದೇ ಕಂಪ್ಲೇಂಟ್‌ ಹೊತ್ಕೊಂಡು ಬರ್ತಿದ್ದಾರೆ.

 

ಗಿರೀಶ್‌ : ಸಾಕಾಯ್ತಪ್ಪ ಈ ಹಾಳು ಲಾಕ್‌ ಡೌನ್‌ ಸಹವಾಸ.... ಮನೆಯಲ್ಲಿ ಇರೋದೂ ಸಾಕು, ಗುಡಿಸುವ ಸಾರಿಸುವ ಅಂತ ಮಾಡೋದಲ್ಲದೆ ಈ ಹಾಳು ಪಾತ್ರೆ ಅದರ ಜಿಡ್ಡು ಉಜ್ಜಿ ಉಜ್ಜಿ ಕೈಗಳು ಬಿದ್ದುಹೋಗಿವೆ....

ಸುರೇಶ್‌: ಅದಕ್ಕೆ ಒಂದು ಉಪಾಯವಿದೆ.... ಹೆಂಡ್ತಿ ಮೇಲೆ ಬೇಜಾರು ಮಾಡಿಕೊಂಡು ಜಗಳ ಆಡಬೇಡ.... ಊಟಕ್ಕೆ ಬರೀ ತಿಳಿಸಾರೇ ಗತಿ ಅಷ್ಟೆ.....

ಗಿರೀಶ್‌: ಮತ್ತೆ ಈ ಹಾಳು ಜಿಡ್ಡು ಪಾತ್ರೆ ಉಜ್ಜೋದು ಹೇಗೆ ಅಂತೀನಿ....

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ