6 ಅಲ್ಲ 10 ಕಾಲ ಇದು

ಸುಮಾರು 1 ದಶಕದ ಹಿಂದಿನ ಸ್ಟಾರ್‌ಗಳು ತಮ್ಮ ಬಾಡಿ ಬಿಲ್ಡಿಂಗ್‌ ಕುರಿತಾಗಿ ಇಷ್ಟೊಂದು ಚಿಂತಿಸುತ್ತಿರಲಿಲ್ಲ. ಆದರೆ ಇಂದಿನ ತಾರೆಯರು ಆ ಕುರಿತಾಗಿ ಭಲೇ ಟೆನ್ಶನ್‌ನಲ್ಲಿರುತ್ತಾರೆ. ವಿಷಯ ಕೇವಲ ಬಾಡಿ ಬಿಲ್ಡಿಂಗ್‌ಗಷ್ಟೇ ಸೀಮಿತವಾಗಿದ್ದರೆ ಅದೊಂದು ವಿಧ, ಆದರೆ ಟೈಗರ್‌ ಶ್ರಾಫ್‌ ಅದನ್ನೂ ಮೀರಿದ್ದಾನೆ. 6 ಪ್ಯಾಕ್‌ ಆ್ಯಬ್‌ ಮಾಡಿಸಿಕೊಂಡು ಎಲ್ಲರನ್ನೂ ಬೆರಗಾಗಿಸಿದ್ದಾನೆ. ರಣವೀರ್‌ಸಿಂಗ್‌ ಇನ್ನೊಂದು ಹೆಜ್ಜೆ ಮುಂದೆ ಹೋಗಿ 6ರ ಕಾಲ ಹೋಯ್ತು, ಈಗ 10ರ ಕಾಲ ಅಂತಾನೆ! ಇದರಿಂದ ಹಿಟ್‌ ಮಾತ್ರವಲ್ಲ ಫಿಟ್ ಕೂಡ ಅಂತೆ. ಆದರೆ ಬಾಡಿ ಬಿಲ್ಡಿಂಗ್‌ ಒಂದೇ ಕೆರಿಯರ್‌ ಬಿಲ್ಡಿಂಗ್‌ಗೆ ಸಹಾಯವಾಗುವುದೇ ಎಂಬುದನ್ನು ಕಾಲವೇ ಹೇಳಬೇಕು.

ದಬಂಗ್ಕಾರನ ಮಾನವೀಯತೆ

ಸಲ್ಮಾನ್‌ ಖಾನ್‌ ಇದೀಗ ಪನ್‌ವೇವ್‌ನ ಫಾರ್ಮ್ ಹೌಸ್‌ನಲ್ಲಿ ಸಿಲುಕಿರಬಹುದು, ಆದರೆ ದೇಶದ ಪರಿಸ್ಥಿತಿ ಕಡೆ ಪೂರ್ತಿ ಗಮನವಿಟ್ಟಿದ್ದಾನೆ. ಕೊರೋನಾದಿಂದಾಗಿ ಮೊದಲು ಬಾಲಿವುಡ್‌ನ ಸಣ್ಣಪುಟ್ಟ ಕಾರ್ಮಿಕರಿಗೆ ಆರ್ಥಿಕ ಸಹಾಯ ಮಾಡಿದ. ನಂತರ ಗಮನಿಸಿದಾಗ ರಸ್ತೆಗಳ ಬದಿಯಲ್ಲಿ ಕೂಲಿಗಾರರು ಹಸಿವಿನಿಂದ ಚಡಪಡಿಸುತ್ತಾ, ಮುಂಬೈನಿಂದ ತಂತಮ್ಮ ಊರುಗಳಿಗೆ ಹೋಗಲು ಕಷ್ಟಪಡುತ್ತಿರುವುದನ್ನು ಕಂಡು ಅವರಿಗಾಗಿ ಆಹಾರದ ವ್ಯವಸ್ಥೆ ಮಾಡಿದ. ರಾಜಕೀಯದ ಶಿಕಾರಿಗಳಾಗಿ ಕಂಗೆಟ್ಟಿರುವ ಈ ಕೂಲಿಗಾರರಿಗೆ ಸಲ್ಮಾನ್‌ ಮಾನವೀಯತೆ ತೋರಿದ್ದಾನೆ!

OTTಯಲ್ಲಿ ರಿಲೀಸ್ಆಗಲಿವೆ ಚಿತ್ರಗಳು

ಚಿತ್ರ ರಸಿಕರಿಗಾಗಿಯೇ ಇದೀಗ ಹೊಸ ಸಂತಸದ ಸುದ್ದಿ ಎಂದರೆ, ಅವರುಗಳು ಮನೆಯಲ್ಲೇ ಕುಳಿತು ತಮ್ಮ ಪ್ರಿಯ ತಾರೆಯರ ಚಿತ್ರಗಳ ಫಸ್ಟ್ ಡೇ ಫಸ್ಟ್ ಶೋ ನೋಡಬಹುದು. ಆರಂಭದಲ್ಲಿ ಬಿಗ್‌ ಬಿ ಆಯುಷ್ಮಾನ್‌ ನಟಿಸಿರುವ `ಗುಲಾಬೋಸಿತಾಬೋ’ ಚಿತ್ರದಿಂದ ಆಗಲಿದೆ. ಈ ಚಿತ್ರ ಈಗ ಅಮೆಜಾನ್‌ ಪ್ರೈಮ್ ನಲ್ಲಿ ಬಿಡುಗಡೆ ಆಗಲಿದೆ. ಇದಾದ ನಂತರ ವಿದ್ಯಾ ಬಾಲನ್‌ಳ `ಶಕುಂತಲಾ ದೇವಿ’ ಬಯೋಪಿಕ್‌ O TT ಯಲ್ಲಿ ರಿಲೀಸ್‌ ಆಗಲಿದೆ. ಕೊರೋನಾದಿಂದ ಮಾನವರು ಮನೆಯಲ್ಲೇ ಬಂಧಿಗಳಾದರು. ಹೀಗಾಗಿ ಮನರಂಜನೆ ಚಿತ್ರಮಂದಿರಗಳಿಂದ ಅಭಿಮಾನಿಗಳ ಮನೆ ಬಾಗಿಲು ಬಡಿಯುವಂತಾಗಿದೆ!

ಆನ್ಲೈನ್ಡ್ಯಾನ್ಸ್ ಕಲಿಯುತ್ತಿರುವ ಸುಹಾನಾ

ಕಿಂಗ್‌ ಖಾನ್‌ನನ್ನು ಬೆಳ್ಳಿ ಪರದೆಯಲ್ಲಿ ನೋಡಿ ಎಷ್ಟೋ ವರ್ಷಗಳಾಗಿವೆ. ಇದೀಗ ಆತನ ಮಗಳನ್ನು ಹಿರಿಪರದೆಯಲ್ಲಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದಕ್ಕಾಗಿ ಸುಹಾನಾ ಓಹೋ ಎಂಬಂಥ ತಯಾರಿ ನಡೆಸಿದ್ದಾಳೆ. ಆದರೆ ಯಾವಾಗ ಅವಳು ಬಾಲಿವುಡ್‌ನಲ್ಲಿ ಮಿಂಚಲಿದ್ದಾಳೋ ಈಗಲೇ ಹೇಳಲಾಗದು. ಇತ್ತೀಚೆಗೆ ಸುಹಾನಾ ಬೆಲ್ಲಿ ಡ್ಯಾನ್ಸ್ ಸಹ ಕಲಿಯುತ್ತಿದ್ದಾಳಂತೆ, ಅದೂ ಆನ್‌ಲೈನ್‌ನಲ್ಲಿ! ಅವಳ ಡ್ಯಾನ್ಸ್ ಟೀಚರ್‌ ಸಂಜನಾ ಶಿಷ್ಯೆಯ ಒಂದು ಫೋಟೋವನ್ನು ಇತ್ತೀಚೆಗೆ ಫೇಸ್‌ ಬುಕ್‌ಗೆ ಶೇರ್‌ ಮಾಡಿದರು. ಅಭಿಮಾನಿಗಳಂತೂ ಹುಚ್ಚೆದ್ದು ಕುಣಿದರು. ಚಿತ್ರರಂಗಕ್ಕೆ ಕಾಲಿಡುವ ಮೊದಲೇ ಫೇಸ್‌ ಬುಕ್‌ನಲ್ಲಿ ಆಕೆಯ ಫಾಲೋಯರ್ಸ್‌ ಸಂಖ್ಯೆ ಲಕ್ಷ ದಾಟಿದೆ ಅಂದ್ರೆ, ಇನ್ನು ಅವಳು ಸಿನಿಮಾಗೆ ಎಂಟ್ರಿ ಕೊಟ್ಟರೆ ಅಭಿಮಾನಿಗಳ ಸುನಾಮಿ ಏಳಬಹುದೇ ಎಂದು ವಿಮರ್ಶಕರು ಅಂದಾಜಿಸುತ್ತಿದ್ದಾರೆ.

ಕಾರ್ತಿಕ್ಕೆರಿಯರ್ಮಗುಚುತ್ತಿದೆಯೇ?

ಇತ್ತೀಚೆಗೆ ಬಿಡುಗಡೆಯಾದ ಕಾರ್ತಿಕ್‌ನ ಚಿತ್ರಗಳು ಅಭಿಮಾನಿಗಳಿಗೆ ಅಂಥ ಇಷ್ಟವಾದಂತಿಲ್ಲ. ಫಿಲ್ಮೀ ಪಂಡಿತರ ಅಭಿಪ್ರಾಯದಲ್ಲಿ ಒರಿಜಿನಲ್ ಚಿತ್ರಗಳಲ್ಲಿ ಮಿಂಚುತ್ತಿರುವಷ್ಟು ಕಾರ್ತಿಕ್‌ ರೀಮೇಕ್‌ ಚಿತ್ರಗಳಲ್ಲಿ ಮಿಂಚುತ್ತಿಲ್ಲವಂತೆ! ಹೀಗಾಗಿ ಕಾರ್ತಿಕ್‌ನ ಮುಂದಿನ ಚಿತ್ರವಾದ `ಭೂಲ್ ‌ಭುಲೈಯಾ’ ಗೋತಾ ಹೊಡೆದರೆ ಕಾರ್ತಿಕ್‌ ಕಥೆ ಗೋವಿಂದಾ ಅಂತಿ….. ಡಿಯರ್‌ ಕಾರ್ತಿಕ್‌, ಕಂಡ ಕಂಡ ಚಿತ್ರ ಒಪ್ಪುವ ಮೊದಲು ಅದರ ಕಥೆ ಕೇಳಲು ಮರೆಯಬೇಡ.

NAWAJUDDIN

ಹಿರಿ ತಾರೆಗಳು ಸಹ ಘೂಮ್ ಕೇತು ಚಿತ್ರದಲ್ಲಿ ಮಿಂಚಲಿದ್ದಾರೆ

ನವಾಜ್‌ದ್ದೀನ್‌ನ ಅದ್ಭುತ ಮಸ್ತಿ ಬಿಂಬಿಸಲಿರುವ `ಘೂಮ್ ಕೇತು’ ಚಿತ್ರದ ಟ್ರೇಲರ್‌ ಇತ್ತೀಚೆಗೆ ಫೇಸ್‌ ಬುಕ್‌ನಲ್ಲಿ ಸಖತ್ತಾಗಿ ಮಿಂಚುತ್ತಿದೆ. ಚಿತ್ರದ ನಿರ್ಮಾಪಕ ನಿರ್ದೇಶಕರಾದ ಅನುರಾಗ್‌ ಕಶ್ಯಪ್‌ ಸಹ ಈ ಚಿತ್ರದಲ್ಲಿ ಇನ್‌ಸ್ಪೆಕ್ಟರ್‌ ಪಾತ್ರ ನಿರ್ವಹಿಸಿದ್ದಾರೆ. ನಂಬಲರ್ಹ ಮೂಲಗಳ ಪ್ರಕಾರ ಇದೀಗ ಅಮಿತಾಬ್ ‌ಹಾಗೂ ಚಿತ್ರಾಂಗದಾ ಸಿಂಗ್‌ ಸಹ ಈ ಚಿತ್ರದಲ್ಲಿ ಅತಿಥಿ ನಕ್ಷತ್ರಗಳಾಗಿದ್ದಾರೆ. ಆಹಾ, ಇದಲ್ಲವೇ ಮಾರ್ಕೆಟ್‌ ವ್ಯಾಲ್ಯೂ ಮಲ್ಟಿಪ್ಲೆಕ್ಸ್ ಓಪನ್‌ ಆದೀತೇ? ಲಾಕ್‌ ಡೌನ್‌ ಕಾರಣದಿಂದ ಬಾಕ್ಸ್ ನಲ್ಲೇ ಕೊಳೆಯುತ್ತಿರುವ ತಮ್ಮ ಚಿತ್ರಗಳ ಬಿಡುಗಡೆಗಾಗಿ OTT ಪ್ಲಾಟ್‌ ಫಾರ್ಮ್ಗೆ ಮೊರೆಹೋಗುತ್ತಿರುವ ನಿರ್ಮಾಪಕ ನಿರ್ದೇಶಕರನ್ನು ಕಂಡು ಮಲ್ಟಿಪ್ಲೆಕ್ಸ್ ಅಸೋಸಿಯೇಶನ್‌ನವರು ವಾರ್ತಾ ಹಾಗೂ ಪ್ರಸರಣಾ ಸಚಿವಾಲಯಕ್ಕೆ ಪತ್ರ ಬರೆದು, ತಮ್ಮ ಮಲ್ಟಿಪ್ಲೆಕ್ಸ್ ತೆರೆಯಲು ಅನುಮತಿ ಕೇಳುತ್ತಿದ್ದಾರೆ. ಸಾರ್ವಜನಿಕರ ಆರೋಗ್ಯಕ್ಕೆ ಧಕ್ಕೆಯಾಗದಂತೆ ಎಲ್ಲಾ ಮುಂಜಾಗರೂಕತಾ ಕ್ರಮ ಕೈಗೊಳ್ಳಲಿದ್ದಾರೆ. ಒಂದು ಪಕ್ಷ ಮಲ್ಟಿಪ್ಲೆಕ್ಸ್ ಓಪನ್‌ ಆದರೆ ಜನ ಮೊದಲು ತಮ್ಮ ಆರೋಗ್ಯಕ್ಕೆ ಆದ್ಯತೆ ಕೊಡುತ್ತಾರೊ ಅಥವಾ ಸಿನಿಮಾಗೋ…. ಕಾಲವೇ ನಿರ್ಣಯಿಸಬೇಕು.

ಮನೀಷ್ನನ್ನು ಹೊಗಳಿದರು ಬಿಗ್ಬಿ

ಮನೀಷ್‌ ಪಾಲ್ ಇತ್ತೀಚೆಗೆ `ವಾಟ್‌ ಇಫ್‌’ ಎಂಬ ಶಾರ್ಟ್‌ ಫಿಲ್ಮ್ ತಯಾರಿಸಿದ. ಇದರ ಮೂಲ ಕಥೆ ಈತನದೇ. ಈ ಚಿತ್ರ ಲಾಕ್ ಡೌನ್‌ಸೆಲ್ಫ್ ಐಸೋಲೇಶನ್‌ ಕುರಿತಾದುದು. ಮನೀಷ್‌ ಈ ಚಿತ್ರ ರೂಪಿಸಿರುವ ಬಗ್ಗೆ ಎಂಥವರೂ ತಲೆದೂಗುವಂತಿದೆ. ಈ ಚಿತ್ರ ಗಮನಿಸಿದ ಬಿಗ್‌ ಬಿ ಮನಸಾರೆ ಮನೀಷ್‌ನನ್ನು ಹೊಗಳತೊಡಗಿದರು. ವಾವ್‌ ಮನೀಷ್‌, ಇಂಥ ಪ್ರಾಮಾಣಿಕ ಪ್ರಯತ್ನಕ್ಕೆ ಹ್ಯಾಟ್ಸ್ ಆಫ್‌!

ಶಕ್ತಿಯ ಮಾಪಿಂಗ್ಡ್ಯಾನ್ಸ್

ಇದೇನಪ್ಪ…. ಮಾಪಿಂಗ್‌ ಅಂದ್ರೆ ನೆಲ ಒರೆಸುವಿಕೆಯೂ ಒಂದು ಡ್ಯಾನ್ಸೇ…..  ಎಂದು ನಿಮಗೆ ಅನಿಸಬಹುದು. ನಾವು ಹಾಗೇನೂ ಹೇಳುತ್ತಿಲ್ಲ. ಅಸಲಿಗೆ ನಟಿ ಶಕ್ತಿ ಈ ಲಾಕ್‌ ಡೌನ್‌ನಲ್ಲಿ ಒಂದು ಮಾದಕ ಮಸ್ತಿ ಡ್ಯಾನ್ಸ್ ಫಾರ್ಮ್ ರೂಪಿಸಿ, ತನ್ನ ಫ್ಯಾನ್ಸ್ ಕಳುಹಿಸಿದ ಮೇವ್ಸ್‌ ಮೂಲಕ ಪ್ರೇರಿತಳಾಗಿ ಪೋಲ್ ‌ಡ್ಯಾನ್ಸ್ ತರಹ ಈ ಮಾಪಿಂಗ್‌ ಡ್ಯಾನ್ಸ್ ರೂಪಿಸಿದ್ದಾಳೆ. ಇದಾದ ಮೇಲೆ ಈ ಡ್ಯಾನ್ಸ್ ನ್ನು ಇವಳು ಫೇಸ್‌ ಬುಕ್‌ಗೆ ಅಪ್‌ ಲೋಡ್‌ ಮಾಡಿ ಫ್ಯಾನ್ಸ್ ನಿಂದ ಶಭಾಷ್‌ಗಿರಿ ಗಿಟ್ಟಿಸಿದಳು. ಅಂದಹಾಗೆ ನಟ ರಾಘ್‌ಲೋನ ಜೊತೆ ಇವಳ ರೊಮ್ಯಾಂಟಿಕ್‌ ಡ್ಯಾನ್ಸ್ ಪಡ್ಡೆಗಳ ಹುಚ್ಚು ಕೆರಳಿಸಿದೆಯಂತೆ!

ಡ್ಯಾಡಿ ಜಾಯದ್ನನ್ನು ವಾಪಸ್ಸು ತರುವರೇ?

ನಟ ಜಾಯದ್‌ ಖಾನ್‌ ತನ್ನ ಕೆರಿಯರ್‌ ಆರಂಭದಲ್ಲಿ ದೊಡ್ಡ ದೊಡ್ಡ ತಾರೆಗಳೊಂದಿಗೆ ಮಿಂಚಿದ್ದೇ ಬಂತು, ಆದರೆ ಆತನ ಕೆರಿಯರ್‌ ಯದ್ವಾತದ್ವಾ ತೋಪಾಯಿತು. ಇದೀಗ ಅವನ ತಂದೆ ಸಂಜಯ್‌ ಖಾನ್‌ ಅವನನ್ನು ವಾಪಸ್ಸು ಕರೆದೇ ತರುತ್ತೇನೆ ಎಂದು ಹಠ ಹೂಡಿದ್ದಾರೆ. ನಂಬಲರ್ಹ ಮೂಲಗಳ ಪ್ರಕಾರ, (ಬಹುತೇಕ) 1857ರ ಪ್ಲಾಸಿ ಕದನದ ಕುರಿತಾಗಿ ಅವರು ಅದ್ಧೂರಿಯಾಗಿ ಚಿತ್ರ ತಯಾರಿಸಲಿದ್ದು, ಬ್ರಿಟಿಷರ ವಿರುದ್ಧ ವೀರಾವೇಶದಿಂದ ಯುದ್ಧಗಳಲ್ಲಿ ಪಾಲ್ಗೊಳ್ಳುವ ಸಿರಾಜ್‌ ಉದ್‌ ದೌಲಾ ಆಗಿ ಜಾಯದ್‌ ಮಿಂಚಲಿದ್ದಾನೆ. ಆಲ್ ದಿ ಬೆಸ್ಟ್ ಜಾಯ್‌!

ರೋಮಾಂಚಕಾರಿ ಪಾತಾಳ್ಲೋಕ್

ಅನುಷ್ಕಾ ಶರ್ಮ ತಯಾರಿಸುತ್ತಿರುವ ವೆಬ್‌ ಸೀರೀಸ್‌ `ಪಾತಾಳ್‌ ಲೋಕ್‌’ ಇತ್ತೀಚೆಗೆ ಬಹು ಚರ್ಚೆಯಲ್ಲಿದೆ. ರೋಮಾಂಚಕಾರಿ ಎನಿಸಿರುವ ಈ ಸೀರೀಸ್‌ ಒಂದು ಕಡೆ ಎಲ್ಲರ ಅಚ್ಚುಮೆಚ್ಚು ಎನಿಸಿದರೆ, ಇನ್ನೊಂದು ಕಡೆ ಇದರಲ್ಲಿ ಬಳಸಲಾಗಿರುವ ಅವಾಚ್ಯ ಶಬ್ದಗಳು ಕರ್ಣಕಠೋರವಂತೆ! ಕಥೆಗೆ ಉಚಿತವೆನಿಸಬಹುದಾದರೂ ಈ ಮಟ್ಟದಲ್ಲಿ ಫ್ಯಾಮಿಲಿ ಶೋಗಾಗಿ ಸಹಿಸಲಸಾಧ್ಯ ಎನ್ನುತ್ತಿದ್ದಾರೆ ಪ್ರೇಕ್ಷಕರು. ಹೀಗಾಗಿಯೂ ಇದರ ಜನಪ್ರಿಯತೆ ಕಡಿಮೆಯಾಗಿಲ್ಲ. ಎಲ್ಲಕ್ಕೂ ವಿಸ್ಮಯಕಾರಿ ವಿಷಯವೆಂದರೆ ಜನಪ್ರಿಯ ಭಜನಕಾರ ಅನೂಪ್‌ ಜೋಟ ಈ ಸೀರೀಸ್‌ನಲ್ಲಿ ಒಂದು ಕೆಟ್ಟ ನೆಗೆಟಿವ್ ‌ಪಾತ್ರಧಾರಿ ಆಗಿರುವುದು! ಡೆಬ್ಯು ಆ್ಯಕ್ಟಿಂಗ್‌ ಆದ ಇಂಥವರ ಬಾಯಲ್ಲಿ ಅಂಥ ಮಾತುಗಳೇ….?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ