ಇತ್ತೀಚೆಗೆ ಎಲ್ಲೆಲ್ಲಿ ನೋಡಿದರೂ ಹೇರ್‌ ಕಲರಿಂಗ್‌ ಕ್ರೇಜ್‌ ಹೆಚ್ಚುತ್ತಿದೆ. ಇದರ ವೈಶಿಷ್ಟ್ಯವೆಂದರೆ ಇದು ಎಂದೂ ಔಟ್‌ ಆಫ್‌ ಟ್ರೆಂಡ್ ಆಗುವುದೇ ಇಲ್ಲ. ನೀವು ಸಹ ನ್ಯೂ ಲುಕ್ಸ್ ಗಾಗಿ ಮೊದಲ ಸಲ ಹೇರ್‌ ಕಲರ್‌ ಮಾಡಬಯಸಿದರೆ, ಯಾವ ಕಲರ್‌ ನಿಮಗೆ ಸರಿಹೋದೀತು, ಹೇರ್‌ ಫಾಲ್ ಆದೀತೇ ಇತ್ಯಾದಿ ಸಂದೇಹಗಳಿಂದ ಕಷ್ಟಪಡುತ್ತಿದ್ದರೆ, ನಾಡಿನ ಪ್ರಸಿದ್ಧ ಹೇರ್‌ ಎಕ್ಸ್ ಪರ್ಟ್ಸ್ ರ ಸಲಹೆಗಳನ್ನು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ. ಅವುಗಳನ್ನು ಅನುಸರಿಸಿ ನಿಮ್ಮ ಚಿಂತೆ ದೂರ ಮಾಡಿಕೊಳ್ಳಿ.

ಕಲರ್ಆಯ್ಕೆ ಹೇಗೆ?

ಹೇರ್‌ ಕಲರಿಂಗ್‌ನ್ನು ಟೀನ್‌ ಮೆಚ್ಯೂರ್ಡ್‌ ಏಜ್‌ ನವರಿಬ್ಬರೂ ಮಾಡಿಕೊಳ್ಳಬಹುದು. ಕಿಶೋರಿಯರಿಗಾಗಿ ಫ್ಯಾಷನೆಬಲ್ ಕಲರ್ಸ್ ಬಳಸಬಹುದು. ಫ್ಯಾಷನ್‌ ಕಲರ್ಸ್‌ನ್ನು ನಾವು ಸಂದರ್ಭಕ್ಕೆ ತಕ್ಕಂತೆ ಆಗಾಗ ಬದಲಿಸಿ ಕೊಳ್ಳಬಹುದು. ಇದರಲ್ಲಿ ರಿಯಲ್ ಕಲರ್‌  ಗಿಂತ ಭಿನ್ನವಾಗಿ ಗೋಲ್ಡನ್‌, ಆ್ಯಶ್‌, ಬ್ಲಾನ್ಡ್, ರೆಡ್‌ ಯಾ ಯಾವುದೇ ಫ್ಯಾಷನ್‌ ಕಲರ್‌ನ್ನು ನಿಮ್ಮ ಕೂದಲಿಗೆ ಹಚ್ಚಿಸಬಹುದು. ಇದನ್ನು ಕಾಲ, ಸಂದರ್ಭ, ಪಾರ್ಟಿ ಉದ್ದೇಶ ಇತ್ಯಾದಿ ಗಮನದಲ್ಲಿರಿಸಿಕೊಂಡು ಆರಿಸಿಕೊಳ್ಳಬೇಕು. ಮೆಚ್ಯೂರ್ಡ್‌ ಹೇರ್‌ ಅಂದ್ರೆ ತುಸು ಪ್ರೌಢತೆಗೆ ತಿರುಗಿರುವ ಗ್ರೇ ಲೈಟ್‌ ಹೇರ್‌ ಉಳ್ಳವರಿಗೆ ರಿಯಲ್ ಕಲರ್ಸ್‌ ಬಳಸಿದರೆ ಸೂಕ್ತ. ಇದಕ್ಕಾಗಿ ಬ್ರೌನ್‌, ಬ್ಲ್ಯಾಕ್‌, ಡಾರ್ಕ್‌ ಬ್ರೌನ್‌ ಕಲರ್‌ ಬಳಸುತ್ತಾರೆ.

ಕಲರ್ಡ್ಕೂದಲಿನ ಆರೈಕೆ

ನೀವು ಫ್ಯಾಷನೆಬಲ್ ಫ್ಯಾನ್ಸಿ ಕಲರ್ಸ್‌ ಬಳಸುತ್ತೀರಾದರೆ, ಸ್ಕಾಲ್ಪ್ ಗಿಂತ 2 ಇಂಚು ಮೇಲೆಯೇ ಮಾಡಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಕೂದಲು ಸೇಫ್‌ ಆಗಿರುತ್ತದೆ. ಕಲರ್‌ ಮಾಡಿಸಿದ ನಂತರ ಕೂದಲಿನ ಕಂಡೀಶನಿಂಗ್‌ ಬಲು ಉತ್ತಮ ರೀತಿಯಲ್ಲಿ ಮಾಡಿಸಬೇಕು. ಇದಕ್ಕಾಗಿ ಉತ್ತಮ ಗುಣಮಟ್ಟದ ಶ್ಯಾಂಪೂ, ಕಂಡೀಶನರ್‌, ಹೇರ್‌ ಸ್ಪಾ ಹಾಗೂ ಆಯ್ಲಿಂಗ್‌ ಅತ್ಯಗತ್ಯ ಬೇಕು. ಹೀಗೆ ಮಾಡುವುದರ ಉದ್ದೇಶ, ಕೂದಲಿನ ಸಹಜ ಬಣ್ಣ ಉಳಿಸಿಕೊಳ್ಳಬೇಕೆಂಬುದು. ಇದರಿಂದ ಕೂದಲು ಎಂದೂ ಡ್ಯಾಮೇಜ್‌ ಆಗದು.

ಗ್ರೇ ಕವರೇಜ್‌ ಮಾಡುವಾಗಲೂ ಕಂಡೀಶನಿಂಗ್‌ ಬಹಳ ಹೆಚ್ಚೇ ಬೇಕಾಗುತ್ತದೆ ಎನ್ನಬಹುದು. ಏಕೆಂದರೆ ಕೆಮಿಕಲ್ಸ್ ನಿಂದ ಕೂದಲಿಗೆ ಹಾನಿ ತಪ್ಪಿದ್ದಲ್ಲ. ಸ್ಕಾಲ್ಪ್ ಕೇರಿಂಗ್‌ಗಾಗಿ, ಕಂಡೀಶನಿಂಗ್‌ ಜೊತೆ ಆಯ್ಲಿಂಗ್‌ ಸಹ ಅತ್ಯಗತ್ಯ. ಕಲರ್‌ ಮಾಡಿಸುವ ಜೊತೆಗೆ ಇದರ ಆರೈಕೆಯತ್ತಲೂ ಅಷ್ಟೇ ಗಮನ ಕೊಡಬೇಕು. ಇದಕ್ಕಾಗಿ ನಿಮ್ಮ ಆಹಾರ ಪದಾರ್ಥಗಳತ್ತ ಎಚ್ಚರವಿರಲಿ. ಇದಕ್ಕಾಗಿ ಉತ್ತಮ ಪೌಷ್ಟಿಕ ಆಹಾರ ಸೇವಿಸಿ. ನಿಮ್ಮ ಡಯೆಟ್‌ನಲ್ಲಿ ಪ್ರೋಟೀನ್‌, ವಿಟಮಿನ್‌, ಮಿನರಲ್ಸ್ ಇರಬೇಕು.

ಬಿಸಿಲಿನಿಂದ ಸುರಕ್ಷೆ

ಬಿಸಿಲಿನಲ್ಲಿ ಓಡಾಡುವಾಗ ಸದಾ ಕಲರ್ಡ್‌ ಹೇರ್‌ನ್ನು ಕವರ್‌ ಮಾಡಿಕೊಳ್ಳಬೇಕು. ಏಕೆಂದರೆ ಫ್ಯಾನ್ಸಿ ಕಲರ್ಸ್‌ ಬೇಗನೆ ಹೋಗಿಬಿಡುತ್ತದೆ. ಅಂದ್ರೆ, ನಾವು ರೆಡ್‌ ಕಲರ್‌ ಬಳಸಿದಾಗ, ಅದು ಕೆಲವೇ ವಾಶ್‌ಗಳ ನಂತರ ಮಾಸಿಬಿಡುತ್ತದೆ. ಹೀಗಾಗಿ ಕಂಡೀಶನಿಂಗ್‌, ಸೀರಮ್ ಹಾಗೂ ಹೆಡ್‌ ಕವರಿಂಗ್‌ ಅತಿ ಅಗತ್ಯದ ವಿಷಯಗಳಾಗಿವೆ. ಮತ್ತೆ ಮತ್ತೆ ವಾಶ್‌ ಬೇಡ ಯಾವ ಹೆಂಗಸರು ಪ್ರತಿ 15 ದಿನಗಳಿಗೊಮ್ಮೆ ಗ್ರೇ ಕವರೇಜ್‌ಗಾಗಿ ಕೂದಲಿಗೆ ಕಲರಿಂಗ್‌ ಮಾಡಿಸುತ್ತಾರೋ ಅಂಥವರು ಕೂಡ ಮತ್ತೆ ಮತ್ತೆ ತಲೆ ಸ್ನಾನಕ್ಕೆ ಹೋಗಬಾರದು. ಏಕೆಂದರೆ ಮತ್ತೆ ಮತ್ತೆ ಕಲರ್‌ ಹೇರ್‌ನ್ನು ತೊಳೆದಷ್ಟೂ, ಅದರ ಕೂದಲಿನ ಬುಡಭಾಗದಲ್ಲಿ ಬಣ್ಣ ಬೇಗ ಬೇಗ ಬಿಟ್ಟುಹೋಗುತ್ತದೆ. ಜೊತೆಗೆ ನಿಮ್ಮ ತಲೆ ಅತಿಯಾಗಿ ಬೆವರುತ್ತಿಲ್ಲ ತಾನೇ ಎಂಬುದನ್ನೂ ಖಾತ್ರಿಪಡಿಸಿಕೊಳ್ಳಿ. ಏಕೆಂದರೆ ಬೆವರು ಹೆಚ್ಚಿದಷ್ಟೂ ಕಲರ್‌ ಫಿನಿಶ್‌ ಆಯಿತೆಂದೇ ಅರ್ಥ.

ಉತ್ತಮ ಗುಣಮಟ್ಟದ ಕಲರ್ಬಳಸಿ

ಉತ್ತಮ ಬ್ರಾಂಡ್‌ನ ಕಲರ್‌ನ್ನಷ್ಟೇ ಬಳಸಿರಿ. ಇದು ನಿಮ್ಮ ಕಲರ್ಡ್‌ ಕೂದಲಿನ ಸುರಕ್ಷೆಗೆ ಪೂರಕ. ಅಗ್ಗದ ಆಸೆಗೆ ಬಿದ್ದು ನಿಮ್ಮ ಕೂದಲನ್ನು ಹಾಳು ಮಾಡಿಕೊಳ್ಳಬೇಡಿ. ಕೂದಲನ್ನು ಸದಾ ಶುಚಿಯಾಗಿಟ್ಟುಕೊಳ್ಳುವುದು ಸಹ ಅತಿ ಮುಖ್ಯ. ನಿಮ್ಮ ತಲೆಗೂದಲಲ್ಲಿ ತುಸು ಮಾತ್ರ ಬಿಳಿ ಕೂದಲಿದ್ದರೂ, ಕೆಮಿಕಲ್ಸ್ ಬಳಸುವುದನ್ನು ತಪ್ಪಿಸಿ. ಜೊತೆಗೆ ತಲೆ ಸ್ನಾನಕ್ಕೆ ಅಗತ್ಯವಾಗಿ ಸೀಗೇಪುಡಿ, ಚಿಗರೆಪುಡಿ, ನೆಲ್ಲಿ, ದಾಸವಾಳದಂಥ ನ್ಯಾಚುರಲ್ ಪದಾರ್ಥಗಳಿಂದ ಕೂದಲನ್ನು ಶುಚಿಯಾಗಿಟ್ಟುಕೊಳ್ಳಬೇಕು, ಆಗ ನಿಮ್ಮ ಕಲರ್‌ಹೆಚ್ಚು ದಿನ ಬಾಳಿಕೆ ಬರುತ್ತದೆ.

ನಿಮಗಾಗಿ ಸಮಯವಿರಲಿ

ಇಂದಿನ ಬಹುತೇಕ ಹೆಂಗಸರು ಸದಾ ಬಿಝಿ ಆಗಿರುವುದರ ಕಾರಣ, ಕೂದಲಿನ ಆರೈಕೆಯತ್ತ ಹೆಚ್ಚಿನ ಗಮನ, ಸಮಯ ಕೊಡಲಾರರು. ಆದರೆ ನೀವು ಕೂದಲನ್ನು ಕಲರ್‌ ಮಾಡಿಸಬೇಕೆಂದು ದೃಢವಾಗಿ ನಿರ್ಧರಿಸಿದ್ದರೆ, ಅದರ ಆರೈಕೆಗಾಗಿ ಒಂದಿಷ್ಟು ಸಮಯ ಮೀಸಲು ಇರಿಸಿಕೊಳ್ಳಬೇಕಾಗುತ್ತದೆ. ಹೇರ್‌ ಕಲರಿಂಗ್‌ ಮಾಡಿದರೆ ಸಾಲದು, ಅದರ ಕೇರಿಂಗ್‌ ಅಷ್ಟೇ ಮುಖ್ಯ. ಹಾಗೆ ಮಾಡಿದಾಗ ಮಾತ್ರ ಕಲರಿಂಗ್‌ ಹೆಚ್ಚು ದಿನ ಬಾಳಿಕೆ ಬರುತ್ತದೆ.

ಗ್ರೇ ಮಾಡಿಸಬೇಡಿ

ಹೈ ಬಿಪಿ ಪೇಶಂಟ್ಸ್ ಮತ್ತು ಗರ್ಭಿಣಿಯರು ಹೇರ್‌ ಕಲರಿಂಗ್‌ ಅವಾಯ್ಡ್ ಮಾಡಿದರೆ ಒಳ್ಳೆಯದು. ಆದರೆ ಕಲರ್‌ ಮಾಡಿಸಲೇಬೇಕಾದ ಅನಿವಾರ್ಯತೆ ಒದಗಿದರೆ, ಕೂದಲಿನ ಬುಡದ ಬಳಿ ಕಲರಿಂಗ್‌ ಮಾಡಿಸಲೇಬೇಡಿ. ಸದಾ ಓಪನ್‌ಏರಿಯಾದಲ್ಲಿ ಕುಳಿತೇ ಕಲರ್‌ ಮಾಡಿಸಬೇಕು, ಗಾಳಿಯಾಡಲು ಸಾಕಷ್ಟು ಅವಕಾಶವಿರಬೇಕು.

ಯಾರನ್ನೂ ನಕಲು ಮಾಡಬೇಡಿ

ನೀವು ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ, ಯಾರೋ ನಿಮ್ಮ ಗೆಳತಿ ಕಲರ್‌ ಮಾಡಿಸಿದಳೆಂದು ನೀವು ಹಾಗೆ ಮಾಡಿಸಿಕೊಳ್ಳಬೇಡಿ. ನಿಮ್ಮ ವಯಸ್ಸು, ವೃತ್ತಿ, ಮುಖ, ಕೂದಲು ಅದಕ್ಕೆ ಬಣ್ಣ ಹೊಂದುತ್ತದೆಯೇ, ಸಮಯ ಸಂದರ್ಭ ಇತ್ಯಾದಿ ಎಲ್ಲಾ ನೋಡಿಕೊಂಡೇ ಕಲರಿಂಗ್‌ ಮಾಡಿಸಲು ನಿರ್ಧರಿಸಿ.

ನ್ಯಾಪ್ಏರಿಯಾದ ಬಳಿ ಟೆಸ್ಟ್

ಯಾವಾಗ ನೀವು ಮೊಟ್ಟ ಮೊದಲಿಗೆ ಹೇರ್‌ ಕಲರಿಂಗ್‌ ಮಾಡಿಸ ಬಯಸುತ್ತೀರೋ 100% ಒಂದೇ ಸಲ ಪೂರ್ತಿ ಕೂದಲಿಗೆ ಕಲರ್‌ ಮಾಡಿಸಬಾರದು. ಮೊದಲು ನ್ಯಾಪ್‌ ಏರಿಯಾದಲ್ಲಿ ತುಸು ಕೂದಲು ತೆಗೆದುಕೊಂಡು ಕಲರ್‌ ಮಾಡಿಸಿ. ಇದರಿಂದ ಎಗ್ಸಾಕ್ಟ್ ಯಾ ಕಲರ್‌ ಬರಲಿದೆ, ಏನೂ ಸೈಡ್‌ ಎಫೆಕ್ಟ್ ಇಲ್ಲ ತಾನೇ ಎಂದು ಸ್ಪಷ್ಟವಾಗುತ್ತದೆ. ಹೀಗಾಗಿ ಕೇವಲ ಎಕ್ಸ್ ಪರ್ಟ್ಸ್ ನೆರವಿನಿಂದ ಮಾತ್ರ ಹೇರ್‌ ಕಲರ್‌ ಮಾಡಿಸಬೇಕು.

ಬ್ಲೀಚ್ಖಂಡಿತಾ ಬೇಡ

ಬಹುತೇಕ ಹೆಂಗಸರು ಹೈಲೈಟ್ಸ್ ನ ಒಳಗಡೆಯೇ ಬ್ಲೀಚ್‌ ಮಾಡಿಸಿಬಿಡುತ್ತಾರೆ, ಇದು ಕೂದಲಿಗೆ ಖಂಡಿತಾ ಹಾನಿಹಾರಕ. ಯಾವ ಕೂದಲಿಗೆ ಬ್ಲೀಚ್‌ ಆಗಿದೆಯೋ, ಅದು ಬೇಗ ಬೆಳ್ಳಗೆ ಆಗುವ ರಿಸ್ಕ್ ಇದ್ದೇ ಇದೆ. ಆದ್ದರಿಂದ ಯಾವಾಗ ಕೂದಲನ್ನು ಹೈಲೈಟ್‌ಮಾಡಿಸಿದರೂ, ಉತ್ತಮ ಕಲರ್‌ನಿಂದಲೇ ಮಾಡಿಸಬೇಕು.

ಸ್ಮಾರ್ಟ್ಟಿಪ್

ನೀವು ಕಲರ್‌ನಲ್ಲಿರುವ ಕೆಮಿಕಲ್ಸ್ ನಿಂದ ಹಾನಿ ಆಗಬಾರದೆಂದು ಬಯಸಿದರೆ, ಕನಿಷ್ಠ 3-4 ದಿನಗಳ ಮೊದಲೇ ಹಾಟ್‌ ಆಯಿಲ್ ಟ್ರೀಟ್‌ಮೆಂಟ್‌ ಮಾಡಿಸಿ.

ಜಿ. ಜ್ಯೋತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ