ಪ್ರಜಾಪ್ರಭುತ್ವಕ್ಕೆ ಜಯವಾಗಲಿ : ಈ ಸಲ ನಮ್ಮ ದೇಶಕ್ಕೆ ವಿಶ್ವಸಂಸ್ಥೆಯಲ್ಲಿ 1 ವರ್ಷದ ಸದಸ್ಯತ್ವ ಸಿಕ್ಕಿದೆ. ನೆಪ ಮಾತ್ರಕ್ಕೆ ಸದಸ್ಯರ ಆಯ್ಕೆಯ ಚುನಾವಣೆ ನಡೆಯಿತು, ಇದೆಲ್ಲ ಮೊದಲೇ ಪೂರ್ವ ನಿರ್ಧಾರಿತ. ಅಶಾಶ್ವತ ಸದಸ್ಯತ್ವದ ಸ್ಥಾನಕ್ಕಾಗಿ ಸಾಮಾನ್ಯವಾಗಿ ಎಲ್ಲಾ ರಾಷ್ಟ್ರಗಳಿಗೂ ಒಂದು ಅವಕಾಶ ಸಿಕ್ಕೇ ಸಿಗತ್ತದೆ. ವಿಶ್ವಸಂಸ್ಥೆಯ ಉಳಿದ ಪದಾಧಿಕಾರಿಗಳ ಸ್ಥಾನಕ್ಕಾಗಿಯೂ ಚುನಾವಣೆ ನಡೆಯಿತು, ಅದು ಕೊರೋನಾ ಭೀತಿ ಮಧ್ಯೆ, ಮೇಲಿನ ಚಿತ್ರ ನೋಡಿ. ಅಮೆರಿಕಾ ನಿವಾಸಿ ಭಾರತೀಯ ಮಹಿಳೆ ತನ್ನ ತವರಿಗಾಗಿ ಮತ ಚಲಾಯಿಸುತ್ತಿದ್ದಾರೆ.

IMG_9094

 

ಇನ್ನಾದರೂ ಭೇದಭಾವ ಬಿಡಿ : ಅಮೆರಿಕಾದಲ್ಲೀಗ ಕೊರೋನಾಗಿಂತಲೂ ಕ್ರೂರವಾಗಿ ಅಟ್ಟಹಾಸ ಮೆರೆಯುತ್ತಿರುವುದು ಅಲ್ಲಿನ ಕರಿಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರದ ಪ್ರಕರಣಗಳು. ಮಿನಿಯಾ ಪೊಲಿಸ್‌ ನಗರದಲ್ಲಿ ಜಾರ್ಜ್‌ ಎಂಬ ಕರಿಯನ ಕುತ್ತಿಗೆಯನ್ನು ಬಿಳಿಯ ಪೊಲೀಸನೊಬ್ಬ ಸತತ 9 ನಿಮಿಷ ಹಿಸುಕಿ ಸಾಯಿಸಿಬಿಟ್ಟ. ಅದಾರೋ ಇದನ್ನು ವಿಡಿಯೋ ಮಾಡಿ ವೈರಲ್ ಮಾಡಿಯೇ ಬಿಟ್ಟರು. ಇದರ ವಿರುದ್ಧ ಈಗ ಇಡೀ ಅಮೆರಿಕಾ ಸಿಡಿದು ನಿಂತಿದೆ. ಅಕ್ಕಪಕ್ಕದ ದೇಶಗಳಿಗೂ ಈ ಬೆಂಕಿಯ ಉರಿ ತಗುಲಿದೆ. ಎಲ್ಲಾ ಕಡೆ ಸಮಾನತೆ ಬೇಕೇಬೇಕೆಂದು ಘೋಷಣೆ ಮೊಳಗುತ್ತಿದೆ. ಕರಿಯ ಬಿಳಿಯರ ಕದನ ದೇಶವಿಡೀ ದಟ್ಟ ವ್ಯಾಪಿಸಿದೆ. ಕೊರೋನಾದಿಂದಲ್ಲ, ಈ ಆಂದೋಲನದ ಕಾರಣ ಎಲ್ಲೆಲ್ಲೂ ಲಾಕ್‌ ಡೌನ್‌ ಆಗಿದೆ. ನಮ್ಮಲ್ಲಿ ಅಸ್ಪೃಶ್ಯರ ಕುರಿತಾಗಿ ಇಂದೂ ಈ ಭೇದಭಾವ ತಪ್ಪಿಲ್ಲ. ಈ ಮಕ್ಕಳ ಮುಗ್ಧ ನಗು ಗಮನಿಸಿ, ಇಲ್ಲಿ ಭೇದಭಾವ ಇದೆಯೇ?

image1170x530cropped

 

 

ಮುಂದೆ ಸಾಗುವುದೇ ಜೀವನ : ಕೊರೋನಾ ಕಾಟ ಪೂರ್ತಿ ತಪ್ಪಿಲ್ಲದಿದ್ದರೂ ಈಗ ವಿಶ್ವವಿಡೀ ಲಾಕ್‌ ಡೌನ್‌ ಸಡಿಲಗೊಂಡು ವ್ಯಾವಹಾರಿಕ ಚಟುವಟಿಕೆ ಕಂಡುಬರುತ್ತಿದೆ. ಇದೇ ಸರಿ, ಇಲ್ಲದಿದ್ದರೆ ಪ್ರವಾಸಿಗರು ಆಸ್ಟ್ರಿಯಾದ ರಾಜಧಾನಿ ವಿಯೆನ್ನಾ ನೋಡುವುದಾದರೂ ಹೇಗೆ? ಈ ಸುಂದರ ಸೊಬಗಿನ ನಗರ ತನ್ನ ಪ್ರವಾಸಿ ತಾಣ, ನಿತ್ಯೋಪಯೋಗಿ ವಸ್ತು, ಆಹಾರದಿಂದಾಗಿ ಖ್ಯಾತಿವೆತ್ತಿದೆ. ಇಂಥ ನಗರ ನೋಡಿ ಬರಲು ನೀವು ಏಕೆ ಸಜ್ಜಾಗಬಾರದು?

Sasha-Lee-Olivier1

ಗೆಲುವಿನ ಕಿರೀಟದ ಬೆಲೆ : ಮಿಸ್‌ ಕಾಂಟೆಸ್ಟ್ ಗೆಲ್ಲುವುದೆಂದರೆ ಒಂದು ದೊಡ್ಡ ವಿಜಯ ಸಾಧಿಸಿದಂತೆ! ಇದು ಸುಮ್ಮನಲ್ಲ, ಸ್ಪರ್ಧಿ ತನ್ನ ದೇಹವನ್ನು ಪ್ರಾಯೋಜಕರಿಗೆ ಅಡವಿಟ್ಟಂತೆಯೇ ಸರಿ. ದ. ಆಫ್ರಿಕಾದ ಮಿಸ್‌ ಶಾಶಾಲಿ ಪ್ರೆಗ್ನೆಂಟ್‌ ಅಲ್ಲ ತಾನೇ ಎಂದೆಲ್ಲ ದಿನಪತ್ರಿಕೆಗಳಲ್ಲಿ ವ್ಯಂಗ್ಯ ಪ್ರಕಟಗೊಳ್ಳುತ್ತಿದೆ. ತನ್ನ ಅತಿ ವೈಯಕ್ತಿಕ ವಿಚಾರದಲ್ಲಿಯೂ ಹೆಣ್ಣು ಈ ಕಾರಣ ಪಬ್ಲಿಕ್‌ ಚರ್ಚೆಗೆ ಒಳಗಾಗಬೇಕಿದೆ. ಪ್ರಾಯೋಜಕರು ಕುಣಿಸಿದಂತೆ ಅವಳು ಕುಣಿಯುತ್ತಿರಬೇಕು, ಸದಾ ಸರ್ವದಾ ಅಲ್ಟ್ರಾ ಮೇಕಪ್‌ನಲ್ಲಿ ಪೋಸ್ ನೀಡುತ್ತಿರಬೇಕು. ಒಳಗೆ ಏನೇ ನೋವಿದ್ದರೂ ಮೇಲೆ ನಗು ತೋರಿಸಬೇಕು. 1 ವರ್ಷದ ನಂತರ ಕಸ ಸರಿಸುಯುವಂತೆ ಇವಳನ್ನು ಬಿಸಾಡಿ, ಮತ್ತೊಬ್ಬಳನ್ನು ಆರಿಸುತ್ತಾರೆ.

fiji_basketball-tournament-for-16-days-credit-caitlin-clifford_675x450-1

 

ಸಾಧನೆ ತಂದ ಸಂತೃಪ್ತಿ : ಈ ಮುಖ ನೋಡಿ ದೇಶೀ ಎನಿಸಿದರೆ ತಪ್ಪಿಲ್ಲ, ಏಕೆಂದರೆ ಫಿಝಿ ದೇಶದ ಬಾಸ್ಕೆಟ್‌ ಬಾಲ್ ತಂಡದಲ್ಲಿ ಅನಾದಿ ಕಾಲದಿಂದಲೂ ಭಾರತೀಯರು ಅಲ್ಲೆ ನೆಲೆಸಿದ್ದು, ಆ ದೇಶದ ಪರವಾಗಿ ಆಡುತ್ತಾರೆ. ಭಾರತದ ಯಾವ ಮೂಲೆಯಿಂದ ತಮ್ಮ ಹಿಂದಿನ ತಲೆಮಾರು ಬಂತೋ ಇವರಿಗೆ ಗೊತ್ತೇ ಇಲ್ಲ. ಕೂಲಿ ಕೆಲಸ ಹುಡುಕಿ ಅಂದಿನ ಆ ಪೀಳಿಗೆ ಹೊರಟಿತ್ತು. ಇಂದು 8-10 ಪೀಳಿಗೆ ನಂತರ ಇವರುಗಳು ಅಲ್ಲಿ ಭದ್ರ ಬೇರೂರಿ ತಮ್ಮದೇ ಐಡೆಂಟಿಟಿ ಸ್ಥಾಪಿಸಿಕೊಂಡಿದ್ದಾರೆ.

2020-04-racism_tcm7-271279

 

ಹೀಗಂತೂ ಏನೂ ಆಗೋಲ್ಲ ಬಿಡಿ : ನೈಜೀರಿಯಾದಲ್ಲಿ ಅತ್ಯಾಚಾರದ ಕುಕೃತ್ಯ ಮೇರೆ ಮೀರಿದೆ. ಅಲ್ಲಿನ ಸರ್ಕಾರದ ಭಗೀರಥ ಪ್ರಯತ್ನಗಳ ನಂತರ ಹೆಚ್ಚಿನ ಬದಲಾವಣೆ ಆಗಿಲ್ಲ. ಅನಾದಿ ಕಾಲದಿಂದಲೂ ಅಲ್ಲಿ ಗಂಡಸು ಹೆಣ್ಣನ್ನು ಭೋಗದ ವಸ್ತುವಿಗಿಂತ ಹೆಚ್ಚಾಗಿ ಗೌರವಿಸುವುದೇ ಇಲ್ಲ, ಇಂದಿಗೂ ಸಹ ಒಬ್ಬ ಸಂತ್ರಸ್ತೆಗೆ ನ್ಯಾಯ ಸಿಗುವುದು ಮಹಾ ಕಷ್ಟಕರ, ಸುರಕ್ಷತೆಯ ಯಾವ ಗ್ಯಾರಂಟಿಯೂ ಇಲ್ಲ. ಅಲ್ಲಿನ ರಾಷ್ಟ್ರೀಯ ಮಾನವ ಹಕ್ಕುಗಳ ಹೋರಾಟ ಸಮಿತಿಯು ಕೊರೋನಾ ಕಾಟದ ಮಧ್ಯದಲ್ಲೂ ಹೆಂಗಸರ ಮೇಲಿನ ಅತ್ಯಾಚಾರ, ಹಿಂಸೆ ವಿರುದ್ಧ ಅಲ್ಲಿನ ಮಂತ್ರಿಗಳಿಗೆ ಡೆಲಿಗೇಶನ್‌ ಮುಟ್ಟಿಸಿದರು. ಇದರಿಂದ ದೊಡ್ಡ ವ್ಯತ್ಯಾಸವೇನೂ ಆಗದು ಎಂಬುದನ್ನು ನಮ್ಮಲ್ಲಿ ನಿರ್ಭಯಾ ಕಾಂಡದಿಂದಲೂ ನೋಡುತ್ತಲೇ ಇದ್ದೇವೆ!

vietnam_wagephoto-uai-652x978

 

ಪ್ರಧಾನ ಪಾತ್ರ : ವಿಯೆಟ್ನಾಂ ಇದೀಗ ಕೆಲವು ವರ್ಷಗಳ ಹಿಂದಷ್ಟೇ ಗಂಭೀರ ಯುದ್ಧ ಎದುರಿಸಿತ್ತು. ಆದರೆ ತಕ್ಷಣ ಚೇತರಿಸಿಕೊಂಡು ಅದೀಗ ಪ್ರಗತಿ ಪಥದತ್ತ ಮುನ್ನುಗ್ಗುತ್ತಿದೆ. ಇದರಲ್ಲಿ ಹೆಂಗಸರ ಪಾತ್ರವೇ ಪ್ರಧಾನ! ಅಲ್ಲಿನ ಕಾರ್ಖಾನೆಗಳಲ್ಲಿ ಹೆಂಗಸರಿಗೆ ಹೆಚ್ಚಿನ ಮನ್ನಣೆ ಉಂಟು. ಸಂಬಳ ನೇರ ಅವರ ಖಾತೆ ತಲುಪುತ್ತಿದ್ದು, ಅವರುಗಳು ಉಳಿತಾಯ ಮಾಡುವಂತಾಗಿದೆ. ಆಗ್ನೇಯ ದೇಶಗಳ ಹೆಂಗಸರು ಬಲು ಸ್ವತಂತ್ರರು, ಬಿಂದಾಸ್‌. ಅಲ್ಲಿನ ಧಾರ್ಮಿಕ ಕಂದಾಚರಣೆಗಳು ನಮ್ಮಷ್ಟು ಕಠೋರವಲ್ಲ, ಹೀಗಾಗಿ ಅಲ್ಲಿನ ಹೆಂಗಸರು ಸಂಪಾದಿಸಿದ್ದನ್ನು ಉಳಿಸಬಲ್ಲರಾಗಿದ್ದಾರೆ.

Untitled-design-1

 

ಒಂದಿಷ್ಟು ಪ್ರಯೋಜನಕಾರಿ ಕೆಲಸ ಮಾಡಿ : `ವುಮನ್‌ ಆಫ್‌ ಇನ್‌ಫ್ಲೂಯೆನ್ಸ್’ ವಿಶ್ವ ವ್ಯಾಪಿ ಸಂಸ್ಥೆಯಾಗಿದ್ದು, ತಮ್ಮ ದೇಶದ ಹೆಂಗಸರ ಏಳಿಗೆಗಾಗಿ ದುಡಿದ ಹೆಂಗಸರನ್ನು ಇದು ಹುಡುಕಾಡುತ್ತಿರುತ್ತದೆ. ಅವರ ಸಾಧನೆ ಕುರಿತು ತನ್ನ ಸಂಸ್ಥೆ ಮೂಲಕ ವಿಶ್ವವಿಡೀ ಪ್ರಚಾರ ನೀಡುತ್ತದೆ. ಇಂಥ ಸಂಸ್ಥೆ ಈ ಮೂಲಕ ಒಂದಿಷ್ಟು ಹಣ ಮಾಡಿಕೊಳ್ಳುತ್ತದೆ ನಿಜ, ಆದರೆ ಪ್ರಾಮಾಣಿಕವಾಗಿ ಸೇವಾ ತತ್ಪರರನ್ನು ಗುರುತಿಸುತ್ತದೆ. ಹೀಗಾಗಿ ಅಂಥ ಮಹಿಳೆಯರು ಒಂದೇ ವೇದಿಕೆ ಮೇಲೆ ಒಟ್ಟುಗೂಡುವಂತಾಗುತ್ತದೆ. ಇಲ್ಲಿರುವವರೆಲ್ಲ ಖಂಡಿತಾ ವಿಭಿನ್ನ ದೇಶಗಳಿಗೆ ಸಂಬಂಧಿಸಿದರು, ತಮ್ಮ ಯಶಸ್ಸಿನಿಂದ ಸಂಭ್ರಮಿಸುತ್ತಿದ್ದಾರೆ! ನಿಮ್ಮ ಸಾಧನೆಯ ಯಶಸ್ಸನ್ನು ಪೂಜೆ ಪುನಸ್ಕಾರಕ್ಕೆ ಮೀಸಲಿಡದೆ, ನಿಮಗೂ ಇತರರಿಗೂ ಇಡೀ ದೇಶ, ವಿಶ್ವಕ್ಕಾಗಿ ಮೀಸಲಿಡಿ. ಕಿಟಿಪಾರ್ಟಿ ಬಿಡಿ, ಹೀಗೆ ದೇಶ ಸೇವೆಗೆ ಹೊರಡಿ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ