ಸೌಂದರ್ಯದ ಮಾರುಕಟ್ಟೆಗೆ ದಿನೇದಿನೇ ಹೊಸ ಹೊಸ ಟೆಕ್ನಿಕ್ಸ್ ಬರುತ್ತಲೇ ಇರುತ್ತವೆ. ಇವು ನಮ್ಮ ಸೌಂದರ್ಯ ಕಾಪಾಡುವಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಹೀಗಾಗಿ ಈ ಹೊಸ ಟೆಕ್ನಿಕ್ಸ್ ಯಾವುದು, ಅದರಿಂದ ಸೌಂದರ್ಯ ವರ್ಧನೆ ಹೇಗಾಗುತ್ತದೆ, ತಿಳಿಯೋಣ.

ರೋಲರ್

71bWwBbODtL._SL1500_

ಇದರ ಹೆಸರಿನಿಂದಲೇ ರೋಲರ್‌ ಎಂದರೆ ಪೇಂಟ್‌ ರೋಲರ್‌ನ ಆಕೃತಿಯ ಒಂದು ಸಾಧನ ಎಂದು ತಿಳಿಯುತ್ತದೆ. ಒಂದು ಅಥವಾ ಎರಡೂ ತುದಿಗಳಲ್ಲಿ  ಅಮೆಥಿಸ್ಟ್ ಸ್ಟೋನ್ಸ್, ರೋಸ್‌ ಕ್ವಾರ್ಟ್ಝ್ ಸ್ಟೋನ್ಸ್ ಅಳನಡಿಸಲ್ಪಟ್ಟಿರುತ್ತವೆ. 7ನೇ ಶತಮಾನದಿಂದಲೇ ಚೀನಾದಲ್ಲಿ ಈ ಟೆಕ್ನಿಕ್‌ ಅನುಸರಿಸಲಾಗಿತ್ತು. ಅಂದಿನಿಂದಲೇ ಮಹಿಳೆಯರು ಇದನ್ನು ಬಳಸತೊಡಗಿದ್ದಾರೆ. ಇತ್ತೀಚೆಗಂತೂ ಈ ಟೆಕ್ನಿಕ್‌ ಹೆಚ್ಚು ಜನಪ್ರಿಯವಾಗುತ್ತಿದೆ. ಕೇನಲ ಚೀನಾದಲ್ಲಷ್ಟೇ ಅಲ್ಲ, ವಿಶ್ವದ ಇತರ ದೇಶಗಳಲ್ಲೂ ಇದರ ಕುರಿತು ಚರ್ಚಿಸುತ್ತಾ, ಬಳಕೆಗೂ ತಂದಿದ್ದಾರೆ. ಆನ್‌ಲೈನ್‌ನಲ್ಲಿ ನಿಮಗೆ ಸುಲಭವಾಗಿ ರೋಲರ್‌ಸಿಗುತ್ತದೆ. ಅಮೆಝಾನ್‌, ನಾಯ್ಕಾ, ಪರ್ಪಲ್ ನಂಥ ವೆಬ್‌ಸೈಟ್ಸ್ ನೆರವು ಪಡೆಯಿರಿ. ಇದರ ಬೆಲೆ 400-1500 ರೂ. ಆಗುತ್ತದೆ.

ರೋಲರ್‌ ಕಾರ್ಯನಿರ್ವಹಣೆ

ಸ್ಕಿನ್‌ ಕೇರ್‌ ಲೋಕದಲ್ಲಿ ಕ್ರಾಂತಿ ಎಬ್ಬಿಸಿರುವ ಈ ರೋಲರ್‌ ಮುಖ್ಯವಾಗಿ ಫೇಶಿಯಲ್ ಮಸಲ್ಸ್ ನ್ನು ರಿಲ್ಯಾಕ್ಸ್  ಡೀಟಾಕ್ಸ್ ಮಾಡಿಸುತ್ತದೆ. ಇದರ ಬಳಕೆಯಿಂದ ಮುಖದ ಚರ್ಮದಲ್ಲಿನ ಎಲ್ಲಾ ಟಾಕ್ಸಿನ್ಸ್ ತೊಲಗುತ್ತದೆ, ಮುಖದಲ್ಲಿನ ರಕ್ತಸಂಚಾರ ಹೆಚ್ಚುತ್ತದೆ, ಪಫ್‌ ನೆಸ್‌ ತಗ್ಗುತ್ತದೆ. ಇದರಿಂದ ಮುಖ ಕಾಂತಿಯುತವಾಗಿ, ತಾಜಾತನ ಎದ್ದು ತೋರುತ್ತದೆ. ಸೌಂದರ್ಯ ತಜ್ಞೆಯರು ಈ ಕುರಿತು ಹೇಳುವುದೆಂದರೆ, ಇದರ ನಿಯಮಿತ ಬಳಕೆಯಿಂದ ಮುಖ ಸ್ಲಿಮ್ ಆಗುತ್ತದೆ, ಕೊಲ್ಯಾಜೆನ್‌ ಸಹಜವಾಗಿ ಹೆಚ್ಚುತ್ತದೆ. ರೋಮರಂಧ್ರಗಳು ಶ್ರಿಂಕ್‌ ಆಗುತ್ತವೆ. ಹೀಗೆ ಇದು ಆ್ಯಂಟಿ ಏಜಿಂಗ್‌ ಪ್ರಕ್ರಿಯೆಯಲ್ಲೂ ಪ್ರಧಾನ ಪಾತ್ರ ವಹಿಸುತ್ತದೆ. ಇದರ ಬಳಕೆಯಿಂದ ಮುಖದ ಮೇಲೆ ಮೂಡಿರುವ ಸುಕ್ಕಿನ ಗೆರೆಗಳು ಸಹ ಕ್ರಮೇಣ ಮಾಯವಾಗುತ್ತವೆ. ಎಲ್ಲಕ್ಕೂ ಮುಖ್ಯ ವಿಷಯವೆಂದರೆ ನೀವೇ ಇದನ್ನು ಪ್ರತಿದಿನ ಬೆಳಗೂ, ಬೈಗೂ ಸುಲಭವಾಗಿ ಬಳಸಬಹುದು, ವ್ಯತ್ಯಾಸ ತಂತಾನೇ ತಿಳಿಯುತ್ತದೆ.

ಇದನ್ನು ಬಳಸುವುದು ಹೇಗೆ?

ನೀವು ಇದನ್ನು ಬೆಳಗ್ಗೆ ಕಾಫಿ ಮುಗಿಸಿದ ನಂತರ ಅಥವಾ ರಾತ್ರಿ ನಿದ್ರಿಸುವ ಮೊದಲು ಬಳಸಿಕೊಳ್ಳಿ. ಎಲ್ಲಕ್ಕೂ ಮೊದಲು ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ. ಮುಖಕ್ಕೆ ಡೇಲಿ ಯಾವುದೇ ಕ್ರೀಂ ಹಚ್ಚುವಿರಾದರೆ, ಇದರಿಂದ ಡಾಟ್ಸ್ ಹಚ್ಚಿರಿ. ನಂತರ ರೋಲರ್‌ನಿಂದ ಮಸಾಜ್‌ ಶುರು ಮಾಡಿ. ಎಲ್ಲಕ್ಕೂ ಮೊದಲು ಕಾಲರ್‌ ಬೋನ್‌ನಿಂದ ಹಾದು ಕುತ್ತಿಗೆ ಬಳಿ ಬನ್ನಿ. ರೋಲರ್‌ ಮೇಲೆ ತುಸು ಪ್ರೆಶರ್‌ ಒತ್ತುತ್ತಾ, ಮೇಲೂ ಕೆಳಗೂ ಆಡಿಸಿ. ನಂತರ ಗಲ್ಲ, ಕೆನ್ನೆ ಬಳಿ ತಂದು ಮುಖ ಪೂರ್ತಿ ಮಸಾಜ್‌ ಮಾಡಿ. ಮೂಗಿನ ಎಲ್ಲಾ ಬದಿಯೂ ಚೆನ್ನಾಗಿ ಓಡಾಡಿಸಿ.

ನಿಮ್ಮ ಮುಖದಲ್ಲಿ ಮೊಡವೆಗಳಿದ್ದರೆ, ಅದರ ಮೇಲೆ ಬಲು ಸಾಫ್ಟ್ ಲೈಟ್‌ ಆಗಿ ಬಳಸಬೇಕು. ಐ ಬ್ರೋ, ಕಂಗಳ ಮೂಲೆ, ಮೂಗಿನ ಎರಡೂ ಬದಿ ಒಂದು ರಿದಮ್ ನಿಂದ ಮಸಾಜ್‌ ಮಾಡಬೇಕು. ತುಟಿಗಳ ಮೇಲೂ ಮಸಾಜ್‌ ಮಾಡಿ, ಅದರ ಗುಲಾಬಿ ರಂಗು ಎದ್ದು ತೋರುತ್ತದೆ. ಡಾರ್ಕ್‌ ಸರ್ಕಲ್ಸ್ ಸರಿಪಡಿಸಲು ಸಣ್ಣ ಸ್ಟೋನ್‌ವುಳ್ಳ ರೋಲರ್‌ನಿಂದಲೇ ಮಸಾಜ್‌ ಮಾಡಬೇಕು. ಪ್ರತಿದಿನದ ಮಸಾಜ್‌ನಿಂದ ನಿಮ್ಮ ಚರ್ಮಕ್ಕೆ ಹೆಚ್ಚಿನ ಆರೋಗ್ಯ, ಕಾಂತಿ ತುಂಬುತ್ತದೆ. ರಾತ್ರಿ ಹೊತ್ತು ಮಾಡುವುದರಿಂದ  ಚೆನ್ನಾಗಿ ನಿದ್ದೆ ಬರುತ್ತದೆ, ಬೆಳಗಿನ ಹೊತ್ತು ಮಾಡುವುದರಿಂದ ಸ್ಕಿನ್‌ ಸ್ಟ್ರೆಸ್‌ ದೂರವಾಗುತ್ತದೆ.

ಗಮನಿಸಿ

ರೋಲಿಂಗ್‌ ಕಾರಣ ಸೆನ್ಸಿಟಿವ್ ‌ಸ್ಕಿನ್‌ ತುಸು ಕೆಂಪಾಗಬಹುದು. ಸ್ವಲ್ಪ ಹೊತ್ತಿಗೆ ಅದು ಸರಿಯಾಗುತ್ತದೆ. ಆದರೆ ಬಹಳ ಹೊತ್ತಾದರೂ ಕೆಂಪು ಬಣ್ಣ ತಿಳಿಯಾಗದಿದ್ದರೆ, ಚರ್ಮ ತಜ್ಞರನ್ನು ಕಾಣಿರಿ.

ರೋಲರ್‌ನ್ನು ಶುಚಿಯಾದ ಜಾಗದಲ್ಲಿಡುವುದು ಬಲು ಅತ್ಯಗತ್ಯ. ಇಲ್ಲದಿದ್ದರೆ ಕೊಳಕಾದ ರೋಲರ್‌ ನಿಮ್ಮ ಚರ್ಮಕ್ಕೆ ಹಾನಿ ಮಾಡಬಹುದು.

ಫೇಸ್‌ ಲಿಫ್ಟ್ ಟೇಪ್‌

batch_molly42215

ಉ. ಕೊರಿಯಾದಿಂದ ಬಂದಿರುವ ಫೇಸ್‌ ಲಿಫ್ಟ್ ಟೇಪ್‌ ಒಂದು ರೀತಿಯಲ್ಲಿ ಇನ್‌ಸ್ಟೆಂಟ್‌ ಫೇಸ್‌ ಲಿಫ್ಟ್ ಮಾಡುತ್ತದೆ. ಇದು ಪಾರದರ್ಶಕ, ನಮ್ಮ ಚರ್ಮಕ್ಕೆ ಅಂಟಿಕೊಳ್ಳುವ ಟೇಪ್‌ ಆಗಿರುತ್ತದೆ. ಇದರ ಜೊತೆಗೆ ಒಂದು ಲೇಸ್‌ ಸಹ ಇರುತ್ತದೆ. ಈ ಟೇಪಿನ ಮೇಲ್ಭಾಗದಲ್ಲಿ ಮೆತ್ತಿರುವ ಪೇಪರ್‌ ತೆಗೆದು, ನಂತರ ಟೇಪನ್ನು ಮುಖಕ್ಕೆ ಅಂಟಿಸಿಕೊಳ್ಳಬೇಕು. ನಂತರ ಇದನ್ನು ಇನ್ನೊಂದು ತುದಿಯಿಂದ ಎಳೆಯುತ್ತಾ, ಇದರ ಇನ್ನೊಂದು ತುದಿಯ ಲೇಸ್‌ಗೆ ಗಂಟು ಹಾಕಿ, ಈ ಟೇಪನ್ನು ನಾವು ನಮ್ಮ ಕೂದಲ ಮರೆಯಲ್ಲಿ ಅಡಗಿಸಬಹುದು. ಇದು ಪಾರದರ್ಶಕವಾದುದರಿಂದ, ಮುಖಕ್ಕೆ ಅಂಟಿಸಿದ್ದಾರೆ ಎಂದು ಕಂಡುಬರದಂತೆ ಇದರ ಮೇಲೆ ಮೇಕಪ್‌ ಮಾಡಬಹುದು. ಈ ಟೇಪುಗಳ ನೆರವಿನಿಂದ ನಾವು ನಮ್ಮ ಜೋತು ಬಿದ್ದಿರುವ ಚರ್ಮ, ಮುಖ್ಯವಾಗಿ ಲಾಫ್‌ ಲೈನ್ಸ್, ಕ್ರೋ ಪಾಸ್‌, ಕಂಗಳ ಮೂಲೆಯ ಲೋಪದೋಷ, ಬ್ರೋ ಬೋನ್‌ ಬಳಿ, ಡಬಲ್ ಚಿನ್‌ ಬಳಿ ಅಂಟಿಸಿಕೊಂಡು ಚರ್ಮ ಸರಿ ಹೋಗಲು ಇದನ್ನು ಮೇಲ್ಭಾಗಕ್ಕೆ ಎಳೆದುಕೊಳ್ಳುತ್ತಾ ಲೇಸ್‌ ಗಂಟು ಹಾಕಿ. ಈ ಟೇಪ್ಸ್ ಬೆಲೆ 350-3500 ರೂ. ವರೆಗೂ ಇದೆ. ಇದನ್ನು ಬಳಸುವುದು ಹೇಗೆ ಎಂದು ತೋರಿಸಿಕೊಡುವ ಅನೇಕ ವಿಡಿಯೋಗಳು ಯೂಟ್ಯೂಬ್‌ನಲ್ಲಿ ಲಭ್ಯ. ಮುಖದ ಯಾವ ಭಾಗಕ್ಕೆ ಅಗತ್ಯವೋ ಅಲ್ಲಿ ಈ ಟೇಪ್‌ನ್ನು ಅಂಟಿಸಿಕೊಂಡು, ಮೇಕಪ್‌ ಮಾಡಿ, ಪಾರ್ಟಿಗೆ ಹೊರಡಿ. ಇದು ಇನ್‌ಸ್ಟೆಂಟ್‌ ಫೇಸ್‌ ಲಿಫ್ಟ್ ಆಗಿ ನೀಟಾಗಿ ಕೆಲಸ ಮಾಡುತ್ತದೆ.

ಗಮನಿಸಿ

ನಿಮ್ಮದು ಹೈಪರ್‌ ಸೆನ್ಸಿಟಿವ್ ‌ಸ್ಕಿನ್‌ ಆಗಿದ್ದರೆ, ಇದನ್ನು ಬಳಸಲೇಬೇಡಿ. ಫೇಸ್‌ ಲಿಫ್ಟ್ ಟೇಪ್‌ನ್ನು ಬಹಳ ಹೊತ್ತು ಹಾಕಿ ಕೊಂಡಿರಬಾರದು. ಇದನ್ನು ಹಾಕಿಕೊಂಡ ಮೇಲೆ ಮರೆತು ನಿದ್ದೆ ಮಾಡಿಬಿಡಬೇಡಿ. ಏಕೆಂದರೆ ಅಷ್ಟು ತಡವಾದ ಮೇಲೆ, ಬಿಡಿಸಲು ಇದನ್ನು ಎಳೆದರೆ, ಅದರ ದುಷ್ಪರಿಣಾಮಗಳು ಮುಖದಲ್ಲಿ ಕಾಣಿಸಬಹುದು. ಹೀಗೆ ಬಹಳ ಹೊತ್ತು ಅಂಟಿಸಿದ್ದನ್ನು ಬಿಟ್ಟೇಬಿಟ್ಟರೆ, ಆ ಭಾಗದ ನರಗಳಲ್ಲಿ ರಕ್ತ ಸಂಚಾರಕ್ಕೆ ಅಡ್ಡಿ ಉಂಟಾದೀತು.

ಶೀಟ್‌ ಮಾಸ್ಕ್

sheet maask

ಬ್ಯೂಟಿ ಲೋಕದಲ್ಲಿ ಶೀಟ್‌ ಮಾಸ್ಕ್ ಇದ್ದಕ್ಕಿದ್ದಂತೆ ಜನಪ್ರಿಯತೆ ಪಡೆದುಕೊಂಡಿದೆ. ಹಿಂದೆಲ್ಲ ಇದು ಕೇವಲ ಉ/ದ ಕೊರಿಯಾದಲ್ಲಿ ಮಾತ್ರ ಬಳಕೆಯಲ್ಲಿತ್ತು. ಆದರೆ ಈಗ ಹಲವು ಭಾರತೀಯ ಕಂಪನಿಗಳೂ ಇದರ ಉತ್ಪಾದನೆಗೆ ತೊಡಗಿವೆ. ಇದು ಒಂದು ಬಗೆಯ ಫೇಸ್‌ ಮಾಸ್ಕ್ ಆಗಿದ್ದು, ತೆಳು ಬಟ್ಟೆ ಅಥವಾ ಟಿಶ್ಯುನ್ನು ಮುಖದ ಆಕಾರದಲ್ಲಿ ಕತ್ತರಿಸಿ, ಚರ್ಮಕ್ಕೆ ಲಾಭಕರ ಆಗುವೆತೆ ಎಸೆನ್ಶಿಯಲ್ ಆಯಿಲ್‌ನಲ್ಲಿ ಡಿಪ್‌ ಮಾಡಿರುತ್ತಾರೆ. ಇದರಿಂದ ಮುಖಕ್ಕೆ ಇನ್‌ಸ್ಟೆಂಟ್‌ ಗ್ಲೋ ಸಿಗುತ್ತದೆ, ಜೊತೆಗೆ ಚರ್ಮಕ್ಕೆ ಉತ್ತಮ ಆರ್ದ್ರತೆಯೂ ದೊರಕುತ್ತದೆ. ಮುಖಕ್ಕೆ ಈಝಿಯಾಗಿ ಅಂಟಿಕೊಳ್ಳುವ ಈ ಮಾಸ್ಕ್ ಹಲವು ವಿಧಗಳಲ್ಲಿ ಲಭ್ಯ. ಉದಾ : ಸೀವೀಡ್‌, ಆ್ಯಲೋವೇರಾ, ಟೀಟ್ರಿ, ಕೋಕನಟ್‌, ಟರ್ಮರಿಕ್‌ ಇತ್ಯಾದಿ. ಇವೆಲ್ಲ ಬೇರೆ ಬೇರೆ ಸ್ಕಿನ್‌ ಟೈಪ್‌ಗೆ ಸೂಟ್ ಆಗುವಂತಿದೆ. ಇದನ್ನು ಬಳಸುವ ಮೊದಲು ನಿಮ್ಮ ಮುಖವನ್ನು ನೀಟಾಗಿ ಶುಚಿಗೊಳಿಸಿ. ತೊಳೆದು ಒರೆಸಿದ ನಂತರ ಟೋನರ್ ಬಳಸಿರಿ. ಒಂದು ಪಕ್ಷ ಟೋನರ್‌ ಇಲ್ಲದಿದ್ದರೆ, ಶೀಟ್‌ ಮಾಸ್ಕ್ನ ಪ್ಯಾಕೆಟ್‌ನಲ್ಲಿರುವ ಸೀರಮ್ ಬಳಸಿಕೊಳ್ಳಿ. ನಂತರ ಮಾಸ್ಕ್ ಧರಿಸಿ 10-12 ನಿಮಿಷ ಹಾಗೇ ಬಿಡಿ.

– ಪ್ರಾರ್ಥನಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ