ಇಂಥ ಪಾರ್ಟಿಗಳಲ್ಲಿ ಸೀರೆ, ದಾವಣಿ, ಲೆಹಂಗಾಗಳ ಜೊತೆ ಈ ಸಲದ ದೀಪಾವಳಿಗೆ ಇಂಡೋವೆಸ್ಟರ್ನ್‌ ಔಟ್‌ಫಿಟ್ಸ್ ಜೊತೆ ನಿಮ್ಮ ಮೇಕಪ್‌ ಹೇಗಿರಬೇಕೆಂದು ಎಕ್ಸ್ ಪರ್ಟ್ಸ್ ಸಲಹೆ ಪಡೆಯೋಣವೇ?

ಫೇಶಿಯಲ್ ಇದಕ್ಕಾಗಿ ನಿಮ್ಮ ನಿಮ್ಮ ಚರ್ಮಕ್ಕೆ ತಕ್ಕಂತೆ ಫೇಶಿಯಲ್ ಮಾಡಿಸಿ. ನಿಮ್ಮ ಚರ್ಮಕ್ಕೆ ಸೂಕ್ತ ಎನಿಸುವುದಾದರೆ ಪ್ರತಿದಿನ ವೈನ್‌ ಫೇಶಿಯಲ್ ಮಾಡಿಸಿ. ಇದರಲ್ಲಿ ಗುಲಾಬಿ ದಳಗಳೊಂದಿಗೆ ಲೈನ್‌ ಬೆರೆಸಿ ಫೇಶಿಯಲ್ ಮಾಡಲಾಗುತ್ತದೆ. ಈ ಫೇಶಿಯಲ್‌ನಿಂದ ಚರ್ಮದ ಡೆಡ್‌ ಸೆಲ್ಸ್ ದೂರವಾಗುತ್ತವೆ ಹಾಗೂ ರಕ್ತ ಸಂಚಾರ ಚುರುಕಾಗುತ್ತದೆ. ರೆಡ್‌ ವೈನ್‌ನಲ್ಲಿರುವ ಕೆಮಿಕಲ್ಸ್ ಪಿಗ್ಮೆಂಟೇಶನ್‌ ಕಡಿಮೆ ಮಾಡಲು ನೆರವಾಗುತ್ತದೆ. ಇದರಿಂದ ಟ್ಯಾನಿಂಗ್‌ ಸಹ ದೂರಾಗುತ್ತದೆ. ಗುಲಾಬಿ ದಳಗಳಿಂದ ಕೆಲವು ದಿನಗಳ ಮೊದಲೇ ಈ ಫೇಶಿಯಲ್ ಮಾಡಿಸಿಕೊಳ್ಳಿ, ಆಗ ದೀಪಾವಳಿ ಹಬ್ಬದಲ್ಲಿ ಮುಖ ಉತ್ತಮ ಗ್ಲೋ ಗಳಿಸುತ್ತದೆ.

ಕ್ಲೆನ್ಸಿಂಗ್‌ನ ಚಮತ್ಕಾರ

ಮೇಕಪ್‌ಗೆ ಮೊದಲು ಚರ್ಮವನ್ನು ಅದಕ್ಕಾಗಿ ಸಿದ್ಧಗೊಳಿಸುವುದು ಬಲು ಅವಶ್ಯಕ. ಇದಕ್ಕಾಗಿ ಮುಖದ ಜೊತೆಗೆ ಕುತ್ತಿಗೆಯನ್ನೂ ಶುಚಿಗೊಳಿಸಬೇಕಾಗುತ್ತದೆ. ಹೀಗಾಗಿ ನೀಟಾಗಿ ಕ್ಲೆನ್ಸಿಂಗ್‌ ಕ್ಲೆನ್ಸರ್‌ ಬಳಸಬಹುದು.

ನಿಮ್ಮ ಚರ್ಮ ಬಹಳ ಡ್ರೈ ಆಗಿದ್ದರೆ, ನೀವು ಮಾಯಿಶ್ಚರೈಸರ್‌ ಕಂಟೆಂಟ್‌ವುಳ್ಳ ಕ್ಲೆನ್ಸರ್‌ನ್ನೇ ಬಳಸಬೇಕು. ಇದರಿಂದ ಚರ್ಮದ ಬ್ಯಾಲೆನ್ಸ್ ಸರಿಯಾಗಿರುತ್ತದೆ, ಸ್ಕಿನ್‌ ಡ್ರೈ ಆಗುವುದಿಲ್ಲ. ನಿಮ್ಮ ಸ್ಕಿನ್‌ ಆಯ್ಲಿ ಆಗಿದ್ದರೆ ನಿಂಬೆ, ಬೇವಿನ ಅಂಶವುಳ್ಳ ಕ್ಲೆನ್ಸರ್ ಬಳಸಬೇಕು.

ಕ್ಲೆನ್ಸಿಂಗ್‌ಗಾಗಿ ಮನೆಮದ್ದು

ಹೋಂ ಮೇಡ್‌ ಕ್ಲೆನ್ಸರ್‌ಗಾಗಿ ಹಸಿ ಹಾಲಿನಲ್ಲಿ ಹತ್ತಿ ಅದ್ದಿಕೊಂಡು ಮುಖ ಮತ್ತು ಕುತ್ತಿಗೆ ಪೂರ್ತಿ ಒರೆಸಿಕೊಳ್ಳಿ. ಇದು ಎಲ್ಲಾ ಬಗೆಯ ಚರ್ಮಕ್ಕೂ ಅನ್ವಯಿಸುತ್ತದೆ. ನಿಮ್ಮ ಚರ್ಮ ಹೆಚ್ಚು ಆಯ್ಲಿ ಆಗಿದ್ದರೆ, ಬಳಸಿದ ಟೀಬ್ಯಾಗ್‌ ಯೂಸ್‌ ಮಾಡಿ. ಟೀ ಬ್ಯಾಗ್‌ ಚರ್ಮದಿಂದ ಹೆಚ್ಚುವರಿ ಜಿಡ್ಡನ್ನು ಹೀರಿಬಿಡುತ್ತದೆ. ಜೊತೆಗೆ 1 ಚಮಚ ನಿಂಬೆ ರಸಕ್ಕೆ 1 ಚಮಚ ಜೇನುತುಪ್ಪ ಬೆರೆಸಿ ಕ್ಲೆನ್ಸರ್‌ ತರಹ ಮುಖಕ್ಕೆ ಹಚ್ಚಿ ಬಳಸಿರಿ.

ಕ್ಲೆನ್ಸಿಂಗ್‌ ನಂತರ ಟೋನಿಂಗ್‌ ಅತಿ ಅಗತ್ಯ. ಇದಕ್ಕಾಗಿ ಗುಲಾಬಿ ಜಲ ಬಳಸಿಕೊಳ್ಳಿ. ಮೇಕಪ್‌ ಬಹಳ ಹೊತ್ತು ಬಾಳಿಕೆ ಬರಬೇಕೆಂದರೆ, ಬೆವರು ಜಿನುಗಬಾರದೆಂದರೆ, ಮುಖವನ್ನು ಐಸ್‌ ಕ್ಯೂಬ್‌ನಿಂದ ನೀಟಾಗಿ ಒರೆಸಬೇಕು. ಐಸ್‌ನ ಕೂಲಿಂಗ್‌ನಿಂದ ಬೆವರು ಜಿನುಗದು. ಇದೂ ಸಹ ಒಂದು ರೀತಿಯಲ್ಲಿ ಟೋನರ್‌ ಕೆಲಸ ಮಾಡುತ್ತದೆ.

ಕ್ಲೆನ್ಸಿಂಗ್‌ ನಂತರ ಮಾಯಿಶ್ಚರೈಸರ್‌ ಯಾವುದೇ ಮೇಕಪ್‌ ಮಾಡುವ ಮೊದಲು ಮಾಯಿಶ್ಚರೈಸರ್‌ ಹಚ್ಚುವುದು ಅತ್ಯಗತ್ಯ. ಇತ್ತೀಚೆಗೆ ಮಾರ್ಕೆಟ್‌ನಲ್ಲಿ ಲಭ್ಯವಿರುವ ಪ್ರಾಡಕ್ಟ್ಸ್ ಪ್ರಕಾರ, ಅವು ಮಾಯಿಶ್ಚರೈಸರ್‌ + ಪ್ರೈಮರ್‌ ಎರಡರ ಕೆಲಸವನ್ನೂ ಮಾಡುತ್ತವೆ. ನೀವು ಬಯಸಿದರೆ ಪ್ರೈಮರ್‌ ಬದಲು ಇಂಥದ್ದನ್ನೇ ಕೊಳ್ಳಬಹುದು.

ಪ್ರೈಮರ್‌ ಮಾಯಿಶ್ಚರೈಸರ್‌ ಮತ್ತು ಪ್ರೈಮರ್‌ ಬಳಕೆಯ ಮಧ್ಯೆ 2-3 ನಿಮಿಷಗಳ ಗ್ಯಾಪ್‌ ಕೊಡಿ. ಪ್ರೈಮರ್‌ನ್ನು ಫಿಂಗರ್‌ ಟಿಪ್‌ನಿಂದ ಹಣೆ, ಕಂಗಳ ಕೆಳಗೆ, ಗಲ್ಲದ ಬಳಿ, ಕಿವಿಗಳ ಮೇಲೆ, ಕುತ್ತಿಗೆ ಬಳಿ…. ಡಾಟ್‌ ಡಾಟ್‌ ಆಗಿ ಇರಿಸುತ್ತಾ, ತೀಡಿ ಅದರಿಂದಲೇ ಬ್ಲೆಂಡ್ ಮಾಡಿ ಸರಿಪಡಿಸಿ. ಪ್ರೈಮರ್‌ನಿಂದ ಸ್ಕಿನ್‌ ಸ್ಮೂತ್‌ ಆದಾಗ, ಮುಖ ಮೇಕಪ್‌ಗಾಗಿ ಸಿದ್ಧವಾಗುತ್ತದೆ. ಮೇಕಪ್‌ ವಾಟರ್‌ ಪ್ರೂಫ್ ಆದರೆ ಇನ್ನೂ ಒಳ್ಳೆಯದು.

ಕನ್ಸೀಲರ್‌ + ಫೌಂಡೇಶನ್‌

ನಿಮ್ಮ ಮುಖದಲ್ಲಿ ಅಲ್ಲಲ್ಲಿ ಕಲೆಗಳಿದ್ದರೆ, ಕನ್ಸೀಲರ್‌ನಿಂದ ಅವನ್ನು ಕನ್ಸೀಲ್ ‌ಮಾಡಿ. ಮಾರ್ಕೆಟ್‌ನಲ್ಲಿ ಕನ್ಸೀಲರ್‌, ಫೌಂಡೇಶನ್ ಹಾಗೂ ಕಾಂಪ್ಯಾಕ್ಟ್ ನ ಸೆಟ್‌ ಸಿಗುತ್ತದೆ. ಇದನ್ನು ನೀವು ಬೇಸ್‌ ಮೇಕಪ್‌ಗಾಗಿ ಸುಲಭವಾಗಿ ಬಳಸಬಹುದು. ಫೌಂಡೇಶನ್‌ ಅಪ್ಲೈ ಮಾಡಲು ಫಿಂಗರ್‌ ಟಿಪ್‌ನಿಂದ ಮುಖದ ಎಲ್ಲಾ ಕಡೆ, ಕಿವಿಗಳ ಮೇಲೆ ಹಾಗೂ ಕುತ್ತಿಗೆ ಬಳಿ ಫೌಂಡೇಶನ್‌ ಹಚ್ಚಿಕೊಳ್ಳಿ. ನಂತರ ಅದನ್ನು ಬೆರಳ ತುದಿಯಿಂದ ಬ್ಲೆಂಡ್‌ ಮಾಡಿ.

ಬೆರಳ ತುದಿಯಿಂದ ಚರ್ಮದ ಮೇಲೆ ಫೌಂಡೇಶನ್‌ ಡ್ಯಾಪ್‌ ಮಾಡುವುದರಿಂದ ಚರ್ಮದ ರೋಮರಂಧ್ರಗಳೂ ನೀಟಾಗಿ ತುಂಬಿಕೊಳ್ಳುತ್ತವೆ.

ಇದರಿಂದ ಏರ್‌ ಬ್ರಶ್‌ನಂಥ ಲುಕ್ಸ್ ಸಿಗುತ್ತದೆ. ಫೌಂಡೇಶನ್‌ನ್ನು ಚೆನ್ನಾಗಿ ಬ್ಲೆಂಡ್‌ ಮಾಡಿ ನಂತರ, ಎರಡೂ ಹಸ್ತಗಳನ್ನು ಪರಸ್ಪರ ಉಜ್ಜಿ ಬೆಚ್ಚಗೆ ಮಾಡಿಕೊಳ್ಳಿ. ನಿಮ್ಮ ಮುಖ ಮತ್ತು ಕುತ್ತಿಗೆಗೆ ಇದರಿಂದ ಉಷ್ಣತೆ ಸಿಗುವಂತೆ ಮಾಡಿ. ಇದರಿಂದ ನಿಮ್ಮ ಮುಖದಲ್ಲಿ ವಿಭಿನ್ನ ಗ್ಲೋ ಬಂದಿರುವುದನ್ನು ಗಮನಿಸಿ.

ನಿಮ್ಮ ಸ್ಕಿನ್‌ ಪ್ಯಾಚಿ ಆಗಿದ್ದರೆ, ಫೌಂಡೇಶನ್‌ ನಂತರ, ಮೇಕಪ್‌ ಬ್ಲೆಂಡರ್‌ನ್ನು ನೀರಿನಲ್ಲಿ ಅದ್ದಿ ಹಿಂಡಿಕೊಂಡು, ಮುಖದ ಚರ್ಮವನ್ನು ಲಘುವಾಗಿ ಕೈಗಳಿಂದ ತಟ್ಟಿ. ಕಂಟೂರಿಂಗ್‌ ಅಗತ್ಯ ಎನಿಸಿದರೆ, ಇದರ ನಂತರ ಕಂಟೂರಿಂಗ್‌ ಮಾಡಿರಿ. ಇದರ ನಂತರ ಲೂಸ್‌ ಪೌಡರ್‌ನಿಂದ ಮುಖದ ಚರ್ಮವನ್ನು ತೀಡಿ, ಮೇಕಪ್‌ ಸೆಟ್‌ ಮಾಡಿ. ನಂತರ ಹೈಲೈಟರ್‌ಬ್ಲಶರ್‌ ಅಪ್ಲೈ ಮಾಡಿ. ಗಮನಿಸಿ, ಹೈಲೈಟರ್‌ಬ್ಲಶರ್‌ ಉತ್ತಮ ರೀತಿಯಲ್ಲಿ ಬ್ಲೆಂಡ್‌ ಆಗಬೇಕು.

ಐ ಮೇಕಪ್‌ ಐ ಬ್ರೋಸ್‌ನ್ನು ಹೈಲೈಟ್‌ಗೊಳಿಸಲು ಐ ಬ್ರೋ ಪೆನ್ಸಿಲ್ ‌ಯಾ ಪೌಡರ್‌ ಬ್ರಶ್‌ ಯಾ ಕ್ರೀಮೀ ಫಾರ್ಮ್ ಬಳಸಿರಿ. ಐ ಬ್ರೋ ಪೆನ್ಸಿಲ್‌ನಿಂದ ಐ ಬ್ರೋಸ್‌ಗೆ ಶೇಡ್‌ ನೀಡುತ್ತಾ, ಹೇರ್‌ ಗ್ರೋಥ್‌ ಡೈರೆಕ್ಷನ್‌ನಲ್ಲಿ ಪೌಡರ್‌ ಬ್ರಶ್‌ ಸಹಾಯದಿಂದ ಪೌಡರ್‌ತುಂಬಿಸಿ. ಪೌಡರ್‌ ಸಮನಾಗಿ ಸೆಟ್‌ ಆಗುವಂತೆ ಬ್ರಶ್‌ ಚಲಾಯಿಸಿ ಅಥವಾ ಕ್ರಿಮಿ ಐ ಬ್ರೋ ಮಸ್ಕರಾ ಅಪ್ಲೈ ಮಾಡಿ.

ನೀವು ನಿಮ್ಮ ಡ್ರೆಸ್‌ಗೆ ತಕ್ಕಂತೆ ಐ ಮೇಕಪ್‌ ಮಾಡಬೇಕು. ನಿಮ್ಮ ಪಾರ್ಟಿ ಡ್ರೆಸ್‌ ತುಂಬಾ ಹೆವಿ ಆಗಿದ್ದರೆ ನ್ಯೂಡ್‌ ಐ ಮೇಕಪ್ ಮಾಡಿ. ಬದಲಿಗೆ ಸೋಬರ್‌ವೈಟ್‌ ಆಗಿದ್ದರೆ ಡಾರ್ಕ್‌ ಐ ಮೇಕಪ್‌ ಮಾಡಿ.

ನ್ಯೂಡ್‌ ಐ ಮೇಕಪ್‌

eye makeup

ಲೈಟ್‌ ಬ್ರೌನ್‌, ಪೀಚ್‌ ಯಾ ಪಿಂಕ್‌ ಐ ಶ್ಯಾಡೋದಿಂದ ಬೇಸ್‌ ರೆಡಿ ಮಾಡಿ ಹಾಗೂ ಕಂಗಳ ಹೊರಭಾಗಕ್ಕೆ ಬ್ಲೂ, ಗ್ರೀನ್‌, ಬ್ಲ್ಯಾಕ್‌ಶೇಡ್ಸ್ ಕೊಡಿ. ಈಗ ಡ್ರೆಸ್‌ ಕಲರ್‌ಗೆ ಮ್ಯಾಚ್‌ ಆಗುವಂಥ ಯಾವುದೇ ಗ್ಲಿಟರ್‌ ಐ ಲೈನರ್‌ನ್ನು ಕಂಗಳ ಔಟರ್‌ ಕಾರ್ನರ್‌ನಲ್ಲಿ ಅಪ್ಲೈ ಮಾಡಿ. ನಂತರ ಕಣ್ಣು ರೆಪ್ಪೆಗಳನ್ನು ಹೆವಿಯಾಗಿ ತೋರಿಸಲು ಕರ್ಲ್ ಮಾಡಿ ಹಾಗೂ ಡಬಲ್ ಕೋಟ್‌ ಮಸ್ಕರಾ ಹಚ್ಚಿರಿ. ಕೊನೆಯಲ್ಲಿ ಕಾಜಲ್ ತೀಡಿ ಐ ಮೇಕಪ್‌ ಪೂರ್ತಿ ಮಾಡಿ.

ಡಾರ್ಕ್‌ ಐ ಮೇಕಪ್‌ ಕಾಪರ್‌, ಬ್ರೌನ್‌ ಯಾ ಬ್ಲ್ಯಾಕ್‌ ಐ ಶ್ಯಾಡೋದಿಂದ ಬೇಸ್‌ ರೆಡಿ ಮಾಡಿ. ಗೋಲ್ಡನ್‌ ಅಥವಾ ನಿಮ್ಮ ಡ್ರೆಸ್‌ಗೆ ಮ್ಯಾಚ್‌ ಆಗುವಂಥ ಯಾವುದೇ ಬಗೆಯ ಬಣ್ಣದ ಸ್ಪಾರ್ಕ್‌ ಡಸ್ಟ್ ನ್ನು ಬೆರಳ ತುದಿಯಿಂದ ಐಬ್ರೋಸ್‌ಮೇಲೆ ಅಪ್ಲೈ ಮಾಡಿ. ಒಂದು ಪಕ್ಷ ನಿಮ್ಮದು ಬಟ್ಟಲು ಕಂಗಳಾಗಿ ಅರಳಿದ್ದರೆ, ಸ್ಪಾರ್ಕ್‌ ಡಸ್ಟ್ ನ್ನು ಕಣ್ಣುಗುಡ್ಡೆಯ ಹೊರಭಾಗದಲ್ಲಿ ಮಾತ್ರ ಸಿಂಪಡಿಸಿ. ನಂತರ ಮ್ಯಾಟ್‌ ಐ ಲೈನರ್‌ ತೀಡಿರಿ. ಕಾಂಬಿನೇಶನ್‌ಗಾಗಿ ಕಂಗಳ ಮೂಲೆಯಲ್ಲಿ ಸ್ಪಾರ್ಕ್‌ ಡಸ್ಟ್ ಕಲರ್‌ನಿಂದ ಮ್ಯಾಚ್‌ ಆಗುವಂಥ ಗ್ಲಿಟರ್‌ ಐ ಲೈನರ್‌ನ್ನು ಬಳಸಿರಿ. ರೆಡ್‌ ಡ್ರೆಸ್‌ ಜೊತೆ ರೆಡ್‌ ಐಶ್ಯಾಡೋ ಎಂದೂ ಬಳಸದಿರಿ.

ಸುಲಭದ ಐ ಮೇಕಪ್‌ಗಾಗಿ ಮಾರ್ಕೆಟ್‌ನಲ್ಲಿ ಲಭ್ಯವಿರುವ ಕ್ರೀಮೀ ಐ ಶ್ಯಾಡೋನ್ನು ಬಳಸಿಕೊಳ್ಳಿ. ಐ ಶ್ಯಾಡೋ ಬಳಸಲು ಇಷ್ಟವಿಲ್ಲವಾದರೆ ಕಲರ್‌ಫುಲ್ ಯಾ ಗ್ಲಿಟರಿ ಐ ಲೈನರ್‌ ಯಾ ಜೆಲೇ ‌ಐ ಲೈನರ್‌ನಿಂದ ಕಂಗಳಿಗೆ ಬ್ಯೂಟಿಫುಲ್ ಟಚ್‌ ಕೊಡಿ.

ಲಿಪ್‌ಸ್ಟಿಕ್‌ ಮಲ್ಟಿ ಪರ್ಪಸ್‌

ಲಿಪ್‌ ಲೈನರ್‌ನಿಂದ ತುಟಿಗಳಿಗೆ ಶೇಪ್‌ ನೀಡಿ ಹಾಗೂ ಮಾಡ್‌ ಶೇಡ್‌ನಲ್ಲಿ ಬ್ರೌನ್‌, ಚಾಕಲೇಟ್‌, ಪೀಚ್‌, ಪಿಂಕ್‌ ಯಾ ವೈನ್‌ಶೇಡ್‌ ಹಚ್ಚಿರಿ. ಡಾರ್ಕ್‌ ಶೇಡ್ಸ್ ಗಾಗಿ ರೆಡ್‌ ಯಾ ಮೆಜೆಂಜಾ ಮ್ಯಾಜಿಕ್‌ ಟ್ರೈ ಮಾಡಿ. ನಿಮ್ಮ ತುಟಿಗಳನ್ನು ಶೈನಿ ಆಗಿಸಬೇಕಿದ್ದರೆ, ಅದರ ನಡುವೆ ಗೋಲ್ಡನ್‌ ಸ್ಪಾರ್ಕ್‌ ಡಸ್ಟ್ ನ್ನು ವೆರಿ ಲೈಟ್‌ ಆಗಿ ಸಿಂಪಡಿಸಿ.

ನಿಮ್ಮ ತುಟಿಗಳ ಹೊರಭಾಗದ ತುದಿ ಗಾಢ ಬಣ್ಣದ್ದಾಗಿದ್ದರೆ, ಡಾರ್ಕ್‌ ಲಿಪ್‌ ಲೈನರ್‌ ಅಪ್ಲೈ ಮಾಡಿ.

ಲಿಪ್‌ಸ್ಟಿಕ್‌ ಬಳಸಿದ ನಂತರ ನಿಮ್ಮಿಷ್ಟದ ಒಂದು ಲೈಟ್‌ಡಾರ್ಕ್‌ ಶೇಡ್‌ನ ಲಿಪ್‌ಸ್ಟಿಕ್‌ ಬಳಸಿರಿ. ಮೇಲ್ದುಟಿಯ ಮೇಲ್ಭಾಗದ ಮೇಲೆ ಒಂದು ಶೇಡ್‌ಹಾಗೂ ಅದರ ಕೆಳಭಾಗದ ಮೇಲೆ ಮತ್ತೊಂದು ಶೇಡ್‌ ಬಳಸಿ ಅದನ್ನು ಮರ್ಜ್‌ ಮಾಡಿ. ಇದೇ ತರಹ ಕೆಳತುಟಿಯ ಮೇಲೂ ಎರಡೂ ಶೇಡ್ಸ್ ನ ಲಿಪ್‌ಸ್ಟಿಕ್‌ ಬಳಸಿರಿ ಹಾಗೂ ಚೆನ್ನಾಗಿ ಮರ್ಜ್‌ ಮಾಡಿ. ಇದರಿಂದ ನಿಮಗೆ ಶೇಡೆಡ್‌ ಲಿಪ್ಸ್ ಸಿಗುತ್ತದೆ.

ಹೇರ್‌ ಸ್ಟೈಲ್ ‌ನೀವು ಬೈತಲೆ ಬೊಟ್ಟು ಧರಿಸುವಿರಾದರೆ, ಸೆಂಟರ್‌ನಿಂದ ಕೂದಲನ್ನು ಪಾರ್ಟಿಶನ್‌ ಮಾಡಿ ಹಾಗೂ ಕೆಳಭಾಗದಲ್ಲಿ ಹೆರಳು ಹೆಣೆಯಿರಿ.

ನೀವು ಬಯಸಿದರೆ ಸೈಡ್‌ ಬನ್‌ ಸಹ ಮಾಡಿಕೊಳ್ಳಬಹುದು. ನೀವು ಕೂದಲನ್ನು ಓಪನ್‌ಆಗಿಯೇ ಇಡಬಯಸಿದರೆ, ಔಟರ್‌ ಯಾ ಕೆಳಭಾಗದ ಕಡೆ ಕರ್ಲ್ ಮಾಡಿ. ಇತ್ತೀಚೆಗೆ ಮ್ಯಾಗಿ ಕರ್ಲ್ ಸಹ ಟ್ರೆಂಡಿ ಎನಿಸಿದೆ. ಶಾರ್ಟ್‌ಹೇರ್‌ ಆಪ್ಶನ್‌ ಸೀರೆಯ ಜೊತೆ ಜ್ಯಾಕೆಟ್‌ ಧರಿಸಿ ಇಂಡೋವೆಸ್ಟರ್ನ್‌ ಲುಕ್ಸ್ ಗಳಿಸಬೇಕೆಂದರೆ, ನಿಮ್ಮ ಶಾರ್ಟ್‌ ಹೇರ್‌ನ್ನು ಲಾಂಗ್‌ ಆಗಿ ತೋರ್ಪಡಿಸಲು, ಮಾರ್ಕೆಟ್‌ನಲ್ಲಿ ಹೇರ್‌ ಎಕ್ಸ್ ಟೆನ್ಶನ್ಸ್ (ಉದಾ : ಚೌರಿ) ಲಭ್ಯವಿವೆ. 250-2500 ರೂ.ಗಳ ಬಜೆಟ್‌ನ ಇವುಗಳಲ್ಲಿ ಬೇಕಾದ್ದನ್ನು ಆರಿಸಿ, ವಿಭಿನ್ನ ಶೇಡ್ಸ್ ನಲ್ಲಿ ಲಭ್ಯ.

ಆಕರ್ಷಕ ನೇಲ್ಸ್ ರಾತ್ರಿ ಹೊತ್ತು ಗ್ಲಿಟರ್‌ವುಳ್ಳ ನೇಲ್ ‌ಪೇಂಟ್‌ ಹಚ್ಚಿ. ಮಧ್ಯದ 2 ಬೆರಳುಗಳ ಮೇಲೆ 1 ಬಗೆ, ಉಳಿದ ಬೆರಳುಗಳಿಗೆ ಬೇರೆ ಬಗೆ ಗ್ಲಿಟರ್‌ ನೇಲ್ ‌ಪೇಂಟ್‌ ಬಳಸಿರಿ, ಮಧ್ಯೆ ಬೀಡ್ಸ್ ಸಹ ಬಳಸಿರಿ. ನೇಲ್ ‌ಮಧ್ಯೆ ಬಾಯ್‌ ಫ್ರೆಂಡ್‌ ಜೊತೆ ನೀವಿರುವ ಫೋಟೋ ಸಹ ಹಾಕಿಸಬಹುದು!

– ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ