ಪಾರ್ಟಿ ಮೇಕಪ್‌ನಲ್ಲೂ ಅನೇಕ ಬಗೆಯ ಮೇಕಪ್‌ಗಳು ಬರುತ್ತವೆ. ಡೇ ಪಾರ್ಟಿ ಮೇಕಪ್‌ ಹಾಗೂ ನೈಟ್‌ ಪಾರ್ಟಿ ಮೇಕಪ್‌. ಇವೆರಡನ್ನೂ ಮಾಡುವ ರೀತಿ ಒಂದೇ. ಆದರೆ ಬಣ್ಣಗಳಲ್ಲಿ ಮಾತ್ರ ವ್ಯತ್ಯಾಸ ಇರುತ್ತದೆ. ಹಗಲಿನಲ್ಲಿ ಲೈಟ್‌ ಮತ್ತು ರಾತ್ರಿ ಡಾರ್ಕ್ ಶೇಡ್ಸ್ ಒಪ್ಪುತ್ತವೆ.

ಮೇಕಪ್‌ಗೆ ಮೊದಲು ಕ್ಲೆನ್ಸಿಂಗ್‌ ಬಹಳ ಅಗತ್ಯ. ಅದರಿಂದ ಮೇಕಪ್‌ಗೆ ಇನ್ನಷ್ಟು ಕಾಂತಿ ಬರುತ್ತದೆ. ಒಂದು ವೇಳೆ ತ್ವಚೆ ಶುಷ್ಕವಾಗಿದ್ದರೆ, ಕ್ಲೆನ್ಸಿಂಗ್‌ ಮಿಲ್ಕ್ ಉಪಯೋಗಿಸಿ. ಆಯಿಲಿ ಆಗಿದ್ದರೆ ಕ್ಲೆನ್ಸರ್‌ ಉಪಯೋಗಿಸಿ. ನಂತರ ಮುಖಕ್ಕೆ ಟೋನರ್‌ ಹಚ್ಚಿ 5 ನಿಮಿಷ ಬಿಟ್ಟು ನಂತರ ಮೇಕಪ್‌ ಶುರು ಮಾಡಿ.ಡೇ ಮೇಕಪ್‌ ಡೇ ಮೇಕಪ್‌ ಕೊಂಚ ಲೈಟ್‌ ಆಗಿರಬೇಕು. ಆದ್ದರಿಂದ ಹಗಲಿನಲ್ಲಿ ಲೈಟ್‌ ಶೇಡ್ಸ್ ನ್ನೇ ಉಪಯೋಗಿಸಿ. ಮುಖದ ಕಲೆಗಳು ಮತ್ತು ಕಣ್ಣುಗಳ ಕೆಳಗಿನ ಕಪ್ಪು ಕಲೆಗಳನ್ನು ಅಡಗಿಸಲು ಆ ಭಾಗದಲ್ಲಿ ಕನ್ಸೀಲರ್‌ ಹಚ್ಚಿ. ಬೇಸಿಗೆಯಲ್ಲಿ ಬೆವರಿನ ಸಮಸ್ಯೆ ಹೆಚ್ಚು. ವಿಶೇಷವಾಗಿ ಬೆಳಗ್ಗೆ ನಿಮ್ಮ ಮೇಕಪ್‌ ಅಂಟಿಕೊಂಡಿರಲು ವಾಟರ್‌ ಪ್ರೂಫ್‌ ಮೇಕಪ್‌ ಮಾಡಿ.

ಕನ್ಸೀಲರ್

ನಂತರ ನಿಮ್ಮ ಸ್ಕಿನ್‌ ಟೋನ್‌ಗೆ ಹೊಂದುವ ವಾಟರ್‌ ಪ್ರೂಫ್‌ ಫೌಂಡೇಶನ್‌ ಹಚ್ಚಿ. ನಂತರ ಐ ಮೇಕಪ್‌ ಸರದಿ. ನಿಮ್ಮ ಡ್ರೆಸ್‌ನ ಬಣ್ಣಕ್ಕೆ ಹೊಂದುವ ಐ ಶ್ಯಾಡೋ ಹಚ್ಚಿ. ಹಗಲಿನಲ್ಲಿ ಶಿಮರ್‌ ಅಥವಾ ಸ್ಪಾರ್ಕ್‌ ಐ ಶ್ಯಾಡೋ ಉಪಯೋಗಿಸಬೇಡಿ. ಐ ಶ್ಯಾಡೋ ನಂತರ ಐ ಲೈನರ್‌ನ ಸಿಂಗಲ್ ಕೋಟ್‌ ಹಚ್ಚಿ. ನಿಮ್ಮ ಡ್ರೆಸ್‌ ಕಲರ್‌ಗೆ ಹೊಂದುವ ಐ ಲೈನರ್‌ ಕೂಡ ಹಚ್ಚಬಹುದು. ನಂತರ ಕಾಜಲ್ ಹಚ್ಚಿ. ಹಗಲಿನಲ್ಲಿ ಲೈಟ್‌ ಕಾಜಲ್ ಮತ್ತು ಮಸ್ಕರಾದ ಒಂದು ಕೋಟ್‌ ಹಚ್ಚಿ.

ಲಿಪ್‌ ಲೈನರ್‌ನಿಂದ ತುಟಿಗಳಿಗೆ ಸರಿಯಾದ ಶೇಪ್‌ ಕೊಡಿ. ತುಟಿಗಳು ತೆಳುವಾಗಿದ್ದರೆ ಔಟ್‌ ಲೈನಿಂಗ್‌ನ್ನು ರೇಖೆಯ ಹೊರಗಿನ ಕಡೆಯಿಂದ ಮಾಡಿ. ಅಕಸ್ಮಾತ್‌ ದಪ್ಪಗಿದ್ದರೆ ಒಳಗಿನಿಂದ ಮಾಡಿ. ಮ್ಯಾಟ್‌ ಲಿಪ್‌ಸ್ಟಿಕ್‌ ಉಪಯೋಗಿಸಿ. ತುಟಿಗಳು ಒಡೆದಿದ್ದರೆ ಲಿಪ್‌ಸ್ಟಿಕ್‌ ಹಚ್ಚುವ ಅರ್ಧಗಂಟೆ ಮೊದಲು ಅವುಗಳ ಮೇಲೆ ಲಿಪ್‌ ಬಾಮ್ ಹಚ್ಚಿ. ನಂತರ ಲಿಪ್‌ಸ್ಟಿಕ್‌ ಹಚ್ಚಿ. ನಂತರ ಕೆನ್ನೆಯ ಮೇಲೆ ವಾಟರ್‌ ಪ್ರೂಫ್‌ ಬ್ಲಶರ್‌ ಹಚ್ಚಿ. ಒಂದು ವೇಳೆ ನಿಮ್ಮ ತ್ವಚೆ ಬಹಳ ಡ್ರೈ ಆಗಿದ್ದರೆ ಕ್ರೀಂ ಬೇಸ್ಡ್ ಬ್ಲಶ್‌ ಆನ್‌ ಹಚ್ಚಿ.

ಮೇಕಪ್‌ನೊಂದಿಗೆ ಪರ್ಫೆಕ್ಟ್ ಹೇರ್‌ ಸ್ಟೈಲ್ ‌ಕೂಡ ಬಹಳ ಅಗತ್ಯ. ನೀವು ಸೀರೆಯೊಂದಿಗೆ ಡಿಸೈನರ್‌ ಜಡೆ ಕೂಡ ಹಾಕಿಕೊಳ್ಳಬಹುದು. ಅಥವಾ ಕೂದಲನ್ನು ಜಡೆ ಹಾಕದೇ ಹಾಗೇ ಬಿಡಬಹುದು.

ನೈಟ್ಮೇಕಪ್

ನೈಟ್‌ ಮೇಕಪ್‌ನಲ್ಲಿ ಎಲ್ಲಕ್ಕೂ ಮೊದಲು ಮುಖಕ್ಕೆ ಕ್ಲೆನ್ಸಿಂಗ್‌ ಮಾಡಿ. ನಂತರ ಕಲೆಗಳು ಹಾಗೂ ಡಾರ್ಕ್‌ ಸರ್ಕಲ್ಸ್ ಮೇಲೆ ಕನ್ಸೀಲರ್‌ ಹಚ್ಚಿ. ರಾತ್ರಿ ನಾರ್ಮಲ್ ಫೌಂಡೇಶನ್‌ ಜಾಗದಲ್ಲಿ ಶಿಮರ್‌ ಇರುವ ಫೌಂಡೇಶನ್‌ ಕೂಡ ಹಚ್ಚಬಹುದು. ಇದು ನೋಡಲು ಚೆನ್ನಾಗಿರುತ್ತದೆ. ರಾತ್ರಿ ಡಾರ್ಕ್‌ ಶೇಡ್ಸ್ ನ ಶ್ಯಾಡೋ ಹಚ್ಚಿ. ಅದರೊಂದಿಗೆ ಹೈಲೈಟರ್‌ ಕೂಡ ಉಪಯೋಗಿಸಿ. ಐಲಿಡ್‌ನ ಮೇಲಿನ ಭಾಗ ಅಂದರೆ ಐಬ್ರೋನ ಕೆಳಗಿನ ಭಾಗದ ಮೇಲೆ ಕಾಪರ್‌, ಸಿಲ್ವರ್‌, ಬ್ಲ್ಯೂ, ಗ್ರೀನ್‌ನಂತಹ ಶೇಡ್ಸ್  ಉಪಯೋಗಿಸಿ. ರಾತ್ರಿ ಹೊತ್ತು ಕಣ್ಣುಗಳಿಗೆ ಸ್ಮೋಕಿ ಲುಕ್‌ ಕೂಡ ಕೊಡಬಹುದು. ನೀವು ಬಯಸಿದರೆ ಐಲಿಡ್‌ ಮೇಲೆ ಶಿಮರ್‌ ಇರುವ ಐ ಶ್ಯಾಡೋ ಕೊಡ ಬಳಸಬಹದು. ಗ್ಲಾಸಿ ಲುಕ್‌ ಪಡೆಯಲು ಐ ಶ್ಯಾಡೋನ ಮೇಲೆ ಬೆರಳುಗಳಿಂದ ಕೊಂಚ ಗ್ಲಾಸ್‌ ಕೂಡ ಹಚ್ಚಿ. ಒಂದು ವೇಳೆ ನೀವು ಮದುವೆ ಇತ್ಯಾದಿ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರೆ ಕಣ್ಣುಗಳ ಎರಡೂ ಹೊರ ಕೋನಗಳಲ್ಲಿ ಸ್ಟೋನ್‌ ಕೂಡ ಅಂಟಿಸಬಹುದು. ಐ ಲೈನರ್‌ ಮತ್ತು ಕಾಜಲ್ ನ ಡಬಲ್ ಕೋಟ್‌ ಹಚ್ಚಿ. ಇದರಿಂದ ಕಣ್ಣುಗಳು ಚೆನ್ನಾಗಿ ಹೈಲೈಟ್‌ಆಗುತ್ತವೆ. ನೈಟ್‌ ಪಾರ್ಟಿಯಲ್ಲಿ ಡಾರ್ಕ್‌ ಬ್ಲಶ್‌ ಆನ್‌ ಮಾಡಿ ಮತ್ತು ಬ್ರಶ್‌ ಸಹಾಯದಿಂದ ಟ್ರ್ಯಾನ್ಸ್ ಪರೆಂಟ್‌ ಪೌಡರ್‌ ಹಚ್ಚಿ.

ರಾತ್ರಿಗಾಗಿ ಡಾರ್ಕ್‌ ಮೇಕಪ್‌ ಮಾಡಿ. ಪಿಂಕ್‌, ಪರ್ಪಲ್, ಮೆರೂನ್‌ ಮತ್ತು ರೆಡ್‌ ಶೇಡ್ಸ್ ಗಳಂತಹ ಡಾರ್ಕ್‌ ಶೇಡ್‌ನ ಲಿಪ್‌ ಸ್ಟಿಕ್ ಕೂಡ ಹಚ್ಚಿ. ಲಿಪ್‌ಸ್ಟಿಕ್‌ನ ಬಣ್ಣ ಆರಿಸುವಾಗ ನಿಮ್ಮ ತ್ವಚೆಯ ಬಣ್ಣವನ್ನೂ ಖಂಡಿತ ಗಮನಿಸಬೇಕು. ಲಿಪ್‌ಸ್ಟಿಕ್‌ ಹಚ್ಚುವ ಮೊದಲು ನಿಮ್ಮ ತುಟಿಗಳಿಗೆ ಲಿಪ್‌ ಲೈನರ್‌ನಿಂದ ಶೇಪ್‌ ಕೊಡಿ.

ನೈಟ್‌ ಪಾರ್ಟಿಯಲ್ಲಿ ಹೇರ್‌ ಸ್ಟೈಲ್ ‌ಕೊಂಚ ವಿಶೇಷವಾಗಿರಬೇಕು. ಅದಕ್ಕೆ ನೀವು ಯಾವುದೇ ಹೇರ್‌ ಸ್ಟೈಲ್ ಮಾಡಿಕೊಂಡು ಅದಕ್ಕೆ ಗ್ಲಿಟರ್‌, ಸ್ಟರ್ಡ್‌ ಅಥವಾ ಯಾವುದೇ ಹೇರ್‌ ಆ್ಯಕ್ಸೆಸರೀಸ್‌ನಿಂದ ಅಲಂಕರಿಸಿ. ನೈಟ್‌ ಪಾರ್ಟಿಗಳಲ್ಲಿ ಕರ್ಲ್ ಕೂಡ ಚೆನ್ನಾಗಿ ಒಪ್ಪುತ್ತದೆ. ಇನ್ನೂ ನೀವು ನಿಮ್ಮ ಕೂದಲಿಗೆ ಟ್ರೈ ಮಾಡಬಹುದು.

ಎಂ. ನೀರಜಾ 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ