ಚಳಿಗಾಲ ಆರಂಭವಾದಾಗಿನಿಂದ ನಿಮ್ಮ ಮೇಕಪ್ ಕಿಟ್‌ನಲ್ಲಿ ಸೀಸನ್‌ಗೆ ತಕ್ಕಂತೆ ಬ್ಯೂಟಿ ಪ್ರಾಡಕ್ಟ್ಸ್ ಇರಬೇಕು, ಆಗ ನಿಮ್ಮ ಸೌಂದರ್ಯ ನಾಲ್ವರಲ್ಲಿ ಎದ್ದು ಕಾಣುತ್ತದೆ. ನೀವು ವಿಂಟರ್ ಬ್ಯೂಟಿ ಎನಿಸುವಿರಿ.
ವಾರ್ಮ್ ಕಲರ್ಸ್ : ಈ ಚುಮುಚುಮು ಚಳಿಯ ದಿನಗಳಿಗೆಂದೇ ಕೆಲವು ವಾರ್ಮ್ ಕಲರ್ಸ್ ಅಂದ್ರೆ ಡೀಪ್ ಬರ್ಗೆಂಡಿಯನ್ನು ನಿಮ್ಮ ಮೇಕಪ್ ಕಿಟ್‌ನಲ್ಲಿ ಇರಿಸಿಕೊಳ್ಳಿ. ಮೇಕಪ್‌ನಲ್ಲಿ ಕಲರ್ ಸೆಲೆಕ್ಷನ್ ಸಮಯದಲ್ಲಿ ನಿಮ್ಮ ಸ್ಕಿನ್ ಟೋನ್ ಕುರಿತು ವಿಶೇಷ ಗಮನವಿರಲಿ. ನಿಮ್ಮ ಸ್ಕಿನ್ ಟೋನಿಗೆ ಹೊಂದುವಂಥ ಲಿಪ್‌ಸ್ಟಿಕ್‌ಐ ಶ್ಯಾಡೋ ಕಲರ್ಸ್‌ನ್ನೇ ಆರಿಸಬೇಕು.
ನೋ ಪ್ಯಾಚಿ ಮೇಕಪ್ : ಚಳಿಗಾಲದಲ್ಲಿ ಚರ್ಮದ ಮೇಲ್ಪದರದ ಕೆಳಗೆ ಇರುವ ತೈಲೀಯ ಗ್ರಂಥಿಗಳು ನಿಷ್ಕ್ರಿಯಗೊಂಡು, ಚರ್ಮ ಶುಷ್ಕಗೊಳ್ಳುತ್ತದೆ. ಹೀಗಾಗಿ ಮೇಕಪ್ ಋತುವಿಗೆ ತಕ್ಕಂತಿರಬೇಕು. ಇದರಿಂದಾಗಿ ಚರ್ಮ ನಿರ್ಜೀವ, ನಿಸ್ತೇಜ ಆಗುವುದಿಲ್ಲ. ಆಗ ಮೇಕಪ್‌ಸಹಜವಾಗಿ ಹೆಚ್ಚಿನ ಕಾಂತಿ ಕೊಡುತ್ತದೆ. ಹೀಗಾಗಿ ಈ ಋತುವಿನಲ್ಲಿ ಬಲು ಎಚ್ಚರಿಕೆಯಿಂದ ಮೇಕಪ್ ಉತ್ಪನ್ನಗಳನ್ನು ಆರಿಸಬೇಕು. ಆಗ ಮಾತ್ರ ಮುಖದ ಮೇಲೆ ಮಾಡಲಾದ ಮೇಕಪ್ ಪ್ಯಾಚಿ, ಕೇಕಿ ಆಗಿ ಕಾಣಿಸಬಾರದು. ಈ ವಿಷಯವನ್ನು ಖಚಿತಪಡಿಸಿಕೊಳ್ಳಲು ಇವರು ಒಂದು ಮಾರ್ಗವೆಂದರೆ, ಶುಷ್ಕಗೊಂಡ ಹಾಗೂ ಆರ್ದ್ರತೆರಹಿತ ಚರ್ಮದ ಮೇಲೂ ಕಾಂತಿ ಚೆಲ್ಲಬಲ್ಲಂಥ ಲಿಪ್‌ಸ್ಟಿಕ್, ಫೌಂಡೇಶನ್, ಐ ಶ್ಯಾಡೋ, ಬ್ಲಶರ್ಸ್ ಬಳಸುತ್ತೀರಾದರೆ ಅದರಲ್ಲಿ ಪೌಡರ್ ಬದಲು ಕ್ರೀಮನ್ನೇ ಬಳಸಬೇಕು, ಇದು ನೋಡಲು ಮಾತ್ರ ಅಂದವಾಗಿರುವುದಲ್ಲದೆ, ಚರ್ಮದ ಆರ್ದ್ರತೆ ಕಾಪಾಡುವಲ್ಲಿಯೂ ಮುಂದಾಗುತ್ತದೆ.
ಸ್ಕಿನ್ ಯಾವ ಬಗೆಯದ್ದೇ ಆಗಿರಲಿ (ನಾರ್ಮಲ್, ಆಯ್ಲಿ, ಡ್ರೈ) ಮೇಕಪ್ ಪ್ರಾಡಕ್ಟ್ಸ್ ಆರಿಸುವುದಕ್ಕೆ ಮೊದಲು ಅದನ್ನು ರೆಡಿ ಮಾಡುವುದು ಅತ್ಯವಶ್ಯಕ. ಇದಕ್ಕಾಗಿ ನೀವು ಎಲ್ಲಕ್ಕೂ ಮೊದಲು ಉತ್ತಮ ಫೇಸ್ ವಾಶ್‌ನಿಂದ ಮುಖವನ್ನು ಶುಚಿಗೊಳಿಸಿ. ನೆನಪಿಡಿ, ನಿಮ್ಮ ಚರ್ಮ ಡಲ್ ಆಗಿದ್ದರೆ ನಿಮ್ಮ ಮೇಕಪ್ ಲುಕ್ಸ್ ಕೂಡ ಡಲ್ ಆಗಿರುತ್ತದೆ. ಇದಾದ ಮೇಲೆ ಚರ್ಮದ ಶುಷ್ಕತೆ ದೂರಗೊಳಿಸಲು ಮಾಯಿಶ್ಚರೈಸರ್ ಬಳಸಿಕೊಳ್ಳಿ. ನಿಮ್ಮ ಮಾಯಿಶ್ಚರೈಸರ್ ಲೈಟ್ ಕನ್ಸಿಸ್ಟೆನ್ಸಿಯದೇ ಆಗಿರಬೇಕೆಂಬುದು ನೆನಪಿರಲಿ, ಆಗ ನಿಮ್ಮ ಚರ್ಮ ಅದನ್ನು ಪೂರ್ತಿಯಾಗಿ ಹೀರಿಕೊಳ್ಳುತ್ತದೆ. ನಿಮ್ಮದು ಸೆನ್ಸಿಟಿವ್ ಸ್ಕಿನ್ ಆಗಿದ್ದರೆ ಟಿಂಟೆಡ್ ಮಾಯಿಶ್ಚರೈಸರ್ ಹಚ್ಚಿರಿ. ಬೇಕಾದರೆ ನೀವು ಮಾಯಿಶ್ಚರೈಸರ್ ಬದಲು ಸ್ಕಿನ್ ಸೀರಂ ಸಹ ಬಳಸಬಹುದು.
ಫೌಂಡೇಶನ್ : ಚಳಿಗಾಲದಲ್ಲಿ ಶುಷ್ಕ ಚರ್ಮಕ್ಕಾಗಿ ಕ್ರೀಂ ಬೇಸ್ಡ್ ಫೌಂಡೇಶನ್ ಮಾತ್ರವೇ ಬಳಸಬೇಕು. ಆಯ್ಲಿ ಚರ್ಮದವರಿಗೆ ಮೇಕಪ್ ಮಾಡಲು ಮಾಯಿಶ್ಚರೈಸರ್ ಬದಲು ಜೆಲ್ ಸೀರಂ ಬಳಸಿರಿ. ಇದಾದ ಮೇಲೆ ಫುಲ್ ಕ್ರೀಂಯುಕ್ತ ಮ್ಯಾಟ್ SPF ಯಾ ವಾಟರ್ ಪ್ರೂಫ್ ಲಿಕ್ವಿಡ್ ಫೌಂಡೇಶನ್ ಹಚ್ಚಿರಿ. ಕೊನೆಯಲ್ಲಿ ಪ್ರೆಸ್ಡ್ ಕಾಂಪ್ಯಾಕ್ಟ್ ಪೌಡರ್ ಬಳಸಿ, ಮೇಕಪ್ ಬೇಸ್‌ನ್ನು ಸಿದ್ಧಪಡಿಸಿ.
ಈ ಋತುವಿನಲ್ಲಿ ಕನ್ಸೀಲರ್ ಸ್ಟಿಕ್ ಬದಲಾಗಿ ಲಿಕ್ವಿಡ್ ಕನ್ಸೀಲರ್ ಬಳಸಿಕೊಳ್ಳಿ. ಕನ್ಸೀಲರ್ ಸ್ಟಿಕ್ ಸಾಕಷ್ಟು ಡ್ರೈ ಆಗಿರುತ್ತದೆ. ಕಂಗಳಿಗೆ ಪೆನ್ಸಿಲ್ ಐ ಲೈನರ್‌ಗೆ ಬದಲಾಗಿ ಲಿಕ್ವಿಡ್ ಯಾ ಜೆಲ್ ಐ ಲೈನರ್ ಬಳಸಿರಿ. ಚಳಿಗಾಲದಲ್ಲಿ ವಾಟರ್ ಪ್ರೂಫ್ ಐ ಲೈನರ್‌ಬಳಸುವುದೇ ಲೇಸು.