ಜಗತ್ತಿನಲ್ಲಿ ನಿಮಗೆ ಯಾವಾಗ, ಯಾರೊಂದಿಗೆ ಪ್ರೀತಿ ಉಂಟಾಗುತ್ತದೆ ಎಂದು ಹೇಳಲಾಗದು. ಮೊದಲು ನಿಮ್ಮ ಕಣ್ಣಿಗೆ ಯಾರೋ ಹಿಡಿಸುತ್ತಾರೆ. ಬಳಿಕ ಅವರು ನಿಮ್ಮ ಮನಸ್ಸಿನಲ್ಲಿ ಕೂತುಬಿಡುತ್ತಾರೆ. ಆ ಬಳಿಕ ಪ್ರೀತಿ ಹೇಗೆ ವ್ಯಕ್ತಪಡಿಸಬೇಕು ಎಂಬ ಕುರಿತಂತೆ ತಮ್ಮೊಂದಿಗೆ ತಾವೇ ಯುದ್ಧದ ಸ್ಥಿತಿ ಉತ್ಪನ್ನವಾಗುತ್ತದೆ. ಪ್ರೀತಿ ಹೇಗೆ ವ್ಯಕ್ತಪಡಿಸಬೇಕು ಎಂಬ ಕುರಿತಂತೆ ನಿಮಗೊಂದಿಷ್ಟು ಸಂಗತಿಗಳು ಇಲ್ಲಿವೆ :

ಡೇ ಆಫ್‌ ಲವ್ : ನಿಮ್ಮ ಪ್ರೇಮಿಯ ಕಣ್ಣಲ್ಲಿ ಮಿನುಗುತ್ತಿರುವ ಪ್ರೀತಿಯನ್ನು ನೀವು ಹಲವು ಬಾರಿ ಕಂಡಿರಬಹುದು. ಆದರೆ ಪ್ರೇಮಿ ನಿಮ್ಮ ಕಣ್ಣೆದುರಿಗೆ ಇಲ್ಲದಿದ್ದಾಗ, ಅವನಿಗೆ ನಿಮ್ಮ ಪ್ರೀತಿಯ ಅನುಭೂತಿಯನ್ನು ಹೇಗೆ ಮಾಡಿಸುತ್ತೀರಿ? ಇದರ ಸರಳ ಸುಲಭ ವಿಧಾನವೆಂದರೆ, ನಿಮ್ಮ ಮನದಾಳದ ಮಾತುಗಳನ್ನು ಎಸ್‌.ಎಂ.ಎಸ್‌ ಮುಖಾಂತರ ರವಾನಿಸಿ. ನಂತರ ನಿಮ್ಮ ಪ್ರೀತಿಯ ಪರಿಮಳ ಹೇಗೆ ಹೊರಸೂಸುತ್ತದೆಂದು ನೋಡಿ.

ಅಂದಹಾಗೆ ಪ್ರತಿದಿನ ವ್ಯಾಲೆಂಟೈನ್ಸ್ ಡೇ ಆಗಬಹುದು. ವ್ಯಕ್ತಪಡಿಸುವ ಪ್ರತಿಯೊಂದು ಪ್ರೀತಿಯ ಮಾತು ಪ್ರೇಮಿಯ ಹೃದಯವನ್ನು ನಿಮ್ಮತ್ತ ಆಕರ್ಷಿಸುವಂತೆ ಮಾಡಬಹುದು. ನಿಮ್ಮ ಬಳಿ ಸಾಕಷ್ಟು ಸಮಯವಿದ್ದರೆ, ವ್ಯಾಲೆಂಟೈನ್ಸ್ ದಿನದಂದು ಪ್ರೀತಿಭರಿತ ಒಂದು ಸಂದೇಶ ಕಳಿಸಿಕೊಡಬಹುದು.

ಮದುವೆ ವಾರ್ಷಿಕೋತ್ಸ : ಮದುವೆ ವಾರ್ಷಿಕೋತ್ಸವದಂದು ನಿಮ್ಮ ಪತ್ನಿಯನ್ನು ಚಕಿತಗೊಳಿಸಲು ಹನಿಮೂನ್‌ಗೆ ಹೋದ ಸ್ಥಳಕ್ಕೆ ಟೂರ್‌ ಹೋಗುವ ಪ್ಯಾಕೇಜ್‌ ಗಿಫ್ಟ್ ಮಾಡಿ. ಅಲ್ಲಿ ಆ ಹಳೆಯ ಮಧುರ ಕ್ಷಣಗಳನ್ನು ನೆನಪಿಸಿಕೊಳ್ಳುತ್ತ, ಈಗ ಪುನಃ ಮೊದಲಿನಂತೆಯೇ ಪ್ರೀತಿ ವ್ಯಕ್ತಪಡಿಸಿ.

ನಿಮ್ಮ ಸಂಗಾತಿಯನ್ನು ಪ್ರಶಂಸೆ ಮಾಡಿ ಹೇಳಿದ ಕೆಲವು ಶಬ್ದಗಳು ಪ್ರೀತಿ ವ್ಯಕ್ತಪಡಿಸಿ ಹೇಳುವ ಶಬ್ದಗಳಿಗಿಂತಲೂ ಕಡಿಮೆ ಏನಲ್ಲ. ಇದರಿಂದ ನೀವು ಅವಳನ್ನು ಅದೆಷ್ಟು ಪ್ರೀತಿಸುತ್ತಿದ್ದೀರಿ ಎಂಬುದನ್ನು ಕೇಳಿ ಆಕೆಗೆ ಖುಷಿಯಾಗುತ್ತದೆ.

ಮದುವೆ ವಾರ್ಷಿಕೋತ್ಸವದಂದು ನಿಮ್ಮ ಸಂಗಾತಿಯ ಇಷ್ಟದ ಹೂಗಳ ಬೊಕೆಯನ್ನು ಗಿಫ್ಟ್ ಮಾಡಿ. ಆ ಹೂಗಳ ಮಧ್ಯದಲ್ಲಿ ಪ್ರೀತಿಯ ಕೆಲವು ಶಬ್ದಗಳನ್ನು ಉಲ್ಲೇಖಿಸಿದ ಚೀಟಿ ಇಡಿ. ಖುಷಿಯ ಕ್ಷಣಗಳನ್ನು ನೀಡಿದ ಸಂಗಾತಿಗೆ ಧನ್ಯವಾದದ ಕೆಲವು ಶಬ್ದಗಳನ್ನೂ ಹೇಳಿ.

ಹುಟ್ಟುಹಬ್ಬ : `ಈ ದಿನ ಜನುಮದಿನ…. ಶುಭಾಶಯ ನನ್ನ ಶುಭಾಶಯ….’ ಈ ರೀತಿಯ ಹಾಡುಗಳನ್ನು ಉಲ್ಲೇಖಿಸಿ. ಇದರಿಂದ ಸಂಗಾತಿಗೆ ನಿಮ್ಮ ಹೃದಯದ ಭಾವನೆ ಏನೆಂದು ತಿಳಿಯುತ್ತದಲ್ಲದೆ, ನೀವು ಆಕೆಯ ಹೃದಯದಲ್ಲಿ ಅದೆಷ್ಟು ಮಹತ್ವ ಹೊಂದಿರುವಿರಿ ಎಂಬುದು ಅರಿವಿಗೆ ಬರುತ್ತದೆ. ಹೀಗಾಗಿ ನಿಮ್ಮ ಪ್ರೀತಿಪಾತ್ರಳಿಗೆ ಈ ಹಾಡನ್ನು ಸಮರ್ಪಿಸಿ.

ನೀವು ವಿವಾಹಿತರಾಗಿರಬಹುದು ಅಥವಾ ಪ್ರೇಮಿಗಳು. ನಿಮ್ಮ ಸಂಗಾತಿಗಾಗಿ ಒಂದು ಸರ್‌ಪ್ರೈಸ್‌ ಪಾರ್ಟಿ ಕೊಡಿ. ಇದರಲ್ಲಿ ಕೆಲವು ವಿಶೇಷ ಸ್ನೇಹಿತರು ಹಾಗೂ ಸಂಬಂಧಿಕರು ಪಾಲ್ಗೊಳ್ಳಲಿ. ನೀವು ಆಕೆಯ ಈ ದಿನವನ್ನು ವಿಶೇಷಗೊಳಿಸಿದರೆ, ಆಕೆಯ ಕಣ್ಣಲ್ಲಿ ಆನಂದದ ಕಣ್ಣೀರು ಬರದೇ ಇದ್ದರೆ ಹೇಳಿ. ಹೀಗೆ ಮಾಡುವುದರಿಂದ ನಿಮಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಅವಶ್ಯಕತೆ ಉಂಟಾಗುವುದಿಲ್ಲ. ಏಕೆಂದರೆ ಹೀಗೆ ಮಾಡುವುದರ ಮೂಲಕ ಏನೂ ಹೇಳದೆಯೇ ನಿಮ್ಮ ಭಾವನೆ ವ್ಯಕ್ತಪಡಿಸಿದ್ದೀರಿ. ಇದರಿಂದ ನಿಮ್ಮಿಬ್ಬರ ನಡುವೆ ಮೊದಲಿಗಿಂತ ಮತ್ತಷ್ಟು ಪ್ರೀತಿ ಹೆಚ್ಚುತ್ತದೆ.

ನಿಮ್ಮ ಸಂಗಾತಿಗೆ ಅತ್ಯುತ್ತಮ ಇಕಾರ್ಡ್ಸ್ ಕೂಡ ಮೇಲ್ ‌ಮಾಡಿ. ಹಲವು ಬಗೆಯ ಇಕಾರ್ಡ್ಸ್ ಮೌಸ್‌ನ ಒಂದು ಕ್ಲಿಕ್‌ ಮೇಲೆ ನಿಮ್ಮ ಕಂಪ್ಯೂಟರ್‌ ಸ್ಕ್ರೀನ್‌ ಮೇಲೆ ಪ್ರತ್ಯಕ್ಷವಾಗುತ್ತವೆ. ಯಾಹೂ ಮೇಲ್ ‌ಆಗಿರಬಹುದು ಅಥವಾ ಗೂಗಲ್ ಡೇ ಆಫ್‌ ಲವ್, ಮದುವೆ ವಾರ್ಷಿಕೋತ್ಸಕ್ಕೆ ಒಂದಕ್ಕಿಂತ ಒಂದು ಇಕಾರ್ಡ್ಸ್ ಲಭ್ಯವಿರುತ್ತವೆ. ಯಾಹೂ ಮೆಸೆಂಜರ್‌ನಲ್ಲಿ 123 ಗ್ರೀಟಿಂಗ್ಸ್ ಮೇಲೆ ಲಾಗ್‌ ಇನ್‌ ಆದರೆ ನಿಮಗೆ ಫ್ರೀ ಗ್ರೀಟಿಂಗ್‌ ಫಾರ್‌ ದಿ ಪ್ಲ್ಯಾನೆಟ್‌ ಮುಖಾಂತರ ಇಕಾರ್ಡ್ಸ್ ಮೇಲ್ ಮಾಡಬಹುದು. ಅದರಲ್ಲಿ ನೀವು ಹುಟ್ಟುಹಬ್ಬದ ಜೊತೆಗೆ ಪ್ರೀತಿಯನ್ನು ಕೂಡ ವ್ಯಕ್ತಪಡಿಸಬಹುದು.

ನಿಮ್ಮ ಗರ್ಲ್ ಫ್ರೆಂಡ್‌ಗೆ ಹುಟ್ಟುಹಬ್ಬವನ್ನು ಜೊತೆಗೆ ಆಚರಿಸಲು ಹೇಳಿ. ಅಲ್ಲಿ ನೀವು ಹಾಗೂ ಆಕೆ ಮಾತ್ರ ಇರಬೇಕು. ಅಲ್ಲಿ ನೀವು ಸಿನಿಮಾ ಸ್ಟೈಲ್ ನಲ್ಲಿಯೇ ಆಕೆಯ ಜನ್ಮದಿನ ಆಚರಿಸಿ. ಮಂಡಿಯೂರಿ ಕುಳಿತು ಆಕೆಗೆ ಶುಭಾಶಯ ಕೋರಿ ಹಾಗೂ ನಿಮ್ಮ ಪ್ರೀತಿ ವ್ಯಕ್ತಪಡಿಸಿ. ರೆಸ್ಟೋರೆಂಟ್‌ನಲ್ಲಿ ಆಕೆಯ ಹುಟ್ಟುಹಬ್ಬಕ್ಕಾಗಿ ವಿಶೇಷ ಹಾಡೊಂದನ್ನು ನುಡಿಸಲು ತಿಳಿಸಿ. ಬಳಿಕ ಅಲ್ಲಿದ್ದವರಿಗೆಲ್ಲ ಕೇಕ್‌ ವಿತರಿಸಿ. ಇದರಿಂದ ಆಕೆ ತನ್ನನ್ನು ತಾನು ವಿಶೇಷ ಎಂದು ಭಾವಿಸುತ್ತಾಳೆ. ಸಾಧ್ಯವಾದರೆ ಕ್ಯಾಂಡಲ್ ಲೈಟ್‌ ಡಿನ್ನರ್ ಮಾಡಿ.

ಮನೆಯವರು ಮದುವೆಗಾಗಿ ಓ.ಕೆ. ಎಂದು ಹೇಳಿದ್ದರೆ, ಹುಟ್ಟುಹಬ್ಬದಂದು ಆಕೆಗೆ ಇದೇ ಉಡುಗೊರೆ ಕೊಡಿ. ಈ ವಿಷಯ ಕೇಳಿ ನಿಮ್ಮ ಗರ್ಲ್ ಫ್ರೆಂಡ್‌ಗೆ ಖುಷಿಯಿಂದ ಮಾತೇ ಹೊರಡುವುದಿಲ್ಲ. ನಿಮ್ಮ ಈ ಅಮೂಲ್ಯ ಉಡುಗೊರೆಯನ್ನು ಆಕೆ ಜೀವನವಿಡೀ ಮರೆಯುವುದಿಲ್ಲ. ಹಿಂದೆ ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಆಕೆ ಹಲವು ಸಾರಿ ನಿಮ್ಮ ಮೇಲೆ ಒತ್ತಡ ಕೂಡ ತಂದಿರಬಹುದು, ನೀವು ಅದಕ್ಕೆ ಒಪ್ಪದೇ ಇದ್ದಿರಬಹುದು ಅಥವಾ ಮೌನಕ್ಕೆ ಶರಣಾಗಿರಬಹುದು. ಮದುವೆಯ ಬಗ್ಗೆ ಹುಟ್ಟುಹಬ್ಬದಂದು ಹಸಿರು ನಿಶಾನೆ ತೋರಿಸಿದ ನಿಮ್ಮ ಈ ನಿರ್ಧಾರವನ್ನು ಆಕೆ ಜೀವನವಿಡೀ ಮರೆಯಲಾರಳು.

– ಶೀಲಾ ಜೈನ್‌

ಪ್ರೀತಿ ವ್ಯಕ್ತಪಡಿಸುವ ವಿನೂತನ ಉಪಾಯಗಳು

ಸೆಕ್ಸಿ ಸಿಂಗರ್‌ ಕ್ರಿಸ್ಟಿನಾ ಆ್ಯಗ್ಯುಲೆರಾಗೆ ಬಾಥ್‌ರೂಮಿನಲ್ಲಿ ತನ್ನ ಪ್ರೀತಿ ವ್ಯಕ್ತಪಡಿಸುವುದು ಬಹಳ ಇಷ್ಟವಾಗುತ್ತದೆ. ಆಕೆ ತನ್ನ ಪ್ರೀತಿ ವ್ಯಕ್ತಪಡಿಸಲು ಲಿಪ್‌ಸ್ಟಿಕ್‌ನ ಗುರುತುಗಳ ಜೊತೆಗೆ ತನ್ನ ಭಾವನೆಗಳಿಗೆ ಸಂಬಂಧಪಟ್ಟ ಚಿಕ್ಕ ಪುಟ್ಟ ನೋಟ್ಸ್ ಬರೆದಿಡುತ್ತಾಳೆ. ಏಕೆಂದರೆ ಪತಿ ಬಾಥ್‌ರೂಮಿಗೆ ಬಂದಾಗ ತನ್ನ ಭಾವನೆಗಳನ್ನು ಅರಿತುಕೊಳ್ಳಲು ಎನ್ನುವುದಾಗಿರುತ್ತದೆ.

ಕೆಲವು ಪ್ರೇಮಿಗಳು ಹೇಗಿರುತ್ತಾರೆಂದರೆ, ಅವರು ತಮ್ಮ ದೇಹದ ಮೇಲೆ ಪ್ರೇಮಿಯ ಹೆಸರನ್ನು ಹಚ್ಚೆ ಹಾಕಿಸುತ್ತಾರೆ. ಸೈಫ್‌ ಅಲಿ ಖಾನ್‌ ತನ್ನ ಗರ್ಲ್ ಫ್ರೆಂಡ್‌ ಕರೀನಾ ಕಪೂರ್‌ಳ ಪ್ರೀತಿಯಲ್ಲಿ ಮುಳುಗಿ ಅವಳ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದ. ಸೈಫ್ ಅಲಿಯಿಂದ ಪ್ರಭಾವಿತನಾದ ಅಫಜಲ್ ಕೂಡ ತನ್ನ ಪ್ರೇಯಸಿ ಅಮೃತಾ ಅರೋರಾಳ ಹೆಸರಿನ ಟ್ಯಾಟೂವನ್ನು ತನ್ನ ಕೈ ಮೇಲೆ ಹಾಕಿಸಿಕೊಂಡಿದ್ದ.

ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯ ಪ್ರಕಾರ, ಲಂಡನ್ನಿನ ಶೇ.62ರಷ್ಟು ಯುವ ಪ್ರೇಮಿಗಳು ಪ್ರೀತಿ ವ್ಯಕ್ತಪಡಿಸಲು ಮೊಬೈಲ್ ಬಳಸುತ್ತಾರೆ. ಅವರ ಪ್ರಕಾರ ಪ್ರೀತಿ ವ್ಯಕ್ತಪಡಿಸಲು ಕೇವಲ `ಐ ಲವ್ ಯೂ’ ಎಂದು ಹೇಳುವುದಷ್ಟೇ ಸಾಕಾಗುವುದಿಲ್ಲ. ಇದರ ಬದಲು `ಐ ಕೇರ್‌ ಫಾರ್‌ ಯೂ’ ಎಂಬ ಭಾವನೆ ನಿಮ್ಮ ಮನದಾಳದಿಂದ ಹೊರಹೊಮ್ಮಬೇಕು.

`ಡೇ ಆಫ್‌ ಲವ್’ದಂದು ಜಗತ್ತಿನಾದ್ಯಂತ ಜನರು ತಮ್ಮದೇ ಆದ ರೀತಿಯಲ್ಲಿ ಪ್ರೀತಿ ವ್ಯಕ್ತಪಡಿಸುತ್ತಾರೆ. ಆದರೆ ಮೆಕ್ಸಿಕೋದ ಪ್ರೀತಿ ತುಂಬಿದ ಹೃದಯಗಳು ತುಟಿಗಳಿಂದ ತಮ್ಮ ಅಪೇಕ್ಷೆಯ ದಾಖಲೆ ಬರೆದರು. ಈ ಸಂದರ್ಭದಲ್ಲಿ ಸುಮಾರು 40,000 ಜೋಡಿಗಳು ಚುಂಬಿಸುವುದರ ಮೂಲಕ ಹೊಸದೊಂದು ದಾಖಲೆ ನಿರ್ಮಿಸಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ