``ಪ್ರೀತಿಗೆ ಮಾತೇ ಇಲ್ಲ, ಅದಕ್ಕೂ ಮಿಗಿಲಾಗಿ ಅದಕ್ಕೆ ಮಾತೇ ಬೇಕಿಲ್ಲ,'' ಎಂದು ಅನೇಕರು ಹೇಳುತ್ತಾರೆ. ಪ್ರೀತಿಯ ತರಂಗಗಳು ಮೌನವಾಗಿಯೇ ಗಾಳಿಯಲ್ಲಿ ತೇಲುತ್ತಿರುತ್ತವೆ. ಕೆಲವೊಮ್ಮೆ ದೃಷ್ಟಿ, ಮತ್ತೊಮ್ಮೆ ಹೃದಯ ಇದಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ. ನೈಜ ಪ್ರೀತಿ ಸಿಗುವುದು ಅಪರೂಪ. ಹಾಗೊಮ್ಮೆ ಸಿಕ್ಕ ಬಳಿಕ ಮನುಷ್ಯನಿಗೆ ಅದಕ್ಕಿಂತ ಹಿರಿದಾದುದು ಮತ್ತೊಂದಿಲ್ಲ ಎನಿಸುತ್ತದೆ. ಯಾವ ಯಾವ ವೈಶಿಷ್ಟ್ಯಗಳು ಈ ಪ್ರೀತಿಯನ್ನು ಇಷ್ಟು ಸುಂದರಗೊಳಿಸಿವೆ ಎಂಬುದನ್ನು ತಿಳಿದುಕೊಳ್ಳುವುದು ಅತ್ಯವಶ್ಯ.

shah2-1

ಬಂಧನಗಳಿಂದ ಮುಕ್ತ ಪ್ರೀತಿ : ಪ್ರೀತಿಯೆನ್ನುವುದು ಜಾತಿ, ಧರ್ಮ ಮತ್ತು ಗಡಿಯ ಗೋಡೆಯನ್ನು ದಾಟಿಯೂ ಚಿಗುರುತ್ತದೆ. 18 ವರ್ಷದವನಿದ್ದಾಗ ಶಾರೂಖ್‌ 14 ವರ್ಷದ ಗೌರಿಯನ್ನು ನೋಡಿದ್ದ. ಆತ ಆಗಲೇ ಮದುವೆಯಾದರೆ ಇವಳನ್ನೇ ಎಂದು ನಿರ್ಧರಿಸಿಬಿಟ್ಟಿದ್ದ. ಧರ್ಮದ ಗೋಡೆಗಳು ಅವರ ಮಧ್ಯೆ ಬರಲಿಲ್ಲ. ಅವರು ಪರಸ್ಪರ ಒಂದಾದರು.

KiranRao_-with-amirkhan_2

ಅದೇ ರೀತಿ ನರ್ಗೀಸ್‌ ಸುನೀಲ್ ‌ದತ್‌, ರಾಜೀವ್ ‌ಸೋನಿಯಾ, ಶರ್ಮಿಳಾ ಪಟೌಡಿ, ಸೈಫ್‌ ಕರೀನಾ, ಇಮ್ ರೋಜ್‌ ಅಮೃತಾ ಹೀಗೆ ಅನೇಕ ಜೋಡಿಗಳು ಬೇರೆ ಬೇರೆ ಧರ್ಮದವರಾಗಿಯೂ ಕೂಡ ತಮ್ಮ ಸಂಗಾತಿಯ ಸಂಗ ತೊರೆಯಲಿಲ್ಲ. ಸಮಾಜವನ್ನು ಎದುರಿಸಿಯೂ ಪ್ರೀತಿಯಲ್ಲಿ ಗೆಲವು ಸಾಧಿಸಿದರು.

ಹೆಸರಾಂತ ಲೇಖಕ ಚೇತನ್‌ ಭಗತ್‌ ಅವರ ಕಥೆ ಕೂಡ ಕಡಿಮೆ ಸ್ವಾರಸ್ಯದ್ದೇನಲ್ಲ. ಬೇರೆ ರಾಜ್ಯದ ಹುಡುಗಿ ಅವರನ್ನು  ಪ್ರೀತಿಸಿದಳು. ಹಲವು ಅಡ್ಡಿ ಆತಂಕಗಳ ನಡುವೆಯೂ ಅವರು ಆಕೆಯನ್ನು ವರಿಸಿದರು.

dharmendra_hema-malini_329062

ಸೌರವ್ ಗಂಗೂಲಿ ಡೋನಾ ಉದಾಹರಣೆ ನೋಡಿ. ಇಬ್ಬರೂ ನೆರೆಮನೆಯವರು. ಬಾಲ್ಯದಿಂದಲೇ ಇಬ್ಬರೂ ಪರಸ್ಪರರನ್ನು ಇಷ್ಟಪಡುತ್ತಿದ್ದರು. ಆದರೆ ಇಬ್ಬರ ಜಾತಿ ಬೇರೆ ಬೇರೆಯಾಗಿತ್ತು. ಗಂಗೂಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದರೆ, ಡೋನಾ ಬ್ರಾಹ್ಮಣೇತರ ವರ್ಗಕ್ಕೆ ಸೇರಿದ್ದಳು. ಸೌರವ್ ಮನೆಯವರು ಬೇರೆ ಜಾತಿಯ ಡೋನಾಳನ್ನು ಸೊಸೆಯಾಗಿ ಸ್ವೀಕರಿಸಲು ಸ್ಪಷ್ಟವಾಗಿ ನಿರಾಕರಿಸಿದ್ದರು. ಇಂತಹ ಸಂದರ್ಭದಲ್ಲಿ  ಸೌರವ್ ಧೈರ್ಯದಿಂದ ಕಾರ್ಯಪ್ರವೃತ್ತರಾದರು. ಮೊದಲು ಕೆರಿಯರ್ ಬಗ್ಗೆ ಹೆಚ್ಚು ಗಮನಕೊಟ್ಟರು. ಒಂದು ಹಂತಕ್ಕೆ ತಲುಪಿದ ಬಳಿಕ ಅಂದರೆ 23ನೇ ವಯಸ್ಸಿನಲ್ಲಿ 20 ವರ್ಷದ ಡೋನಾಳೊಂದಿಗೆ ಮನೆಯವರಿಗೆ ಗೊತ್ತಿಲ್ಲದಂತೆಯೇ ರಿಜಿಸ್ಟರ್ಡ್‌ ಮದುವೆಯಾದರು. ಬಳಿಕ ಎರಡೂ ಕುಟುಂಬದವರು ಅವರ ಮದುವೆಗೆ ಹಸಿರು ನಿಶಾನೆ ತೋರಿಸಿದರು.

kurbaan-wallpapers-jpg-3

ಧರ್ಮ, ಜಾತಿಯ ಹೊರತಾಗಿ ಪ್ರೀತಿಯಲ್ಲಿ ವಯಸ್ಸಿನ ಅಂತರ ಗೌಣ ಎಂಬಂತೆ ಕಂಡು ಬರುತ್ತದೆ. ಸೈಫ್‌ ಕರೀನಾರ ಜೋಡಿಯನ್ನೇ ನೋಡಿ. ಅವರಿಬ್ಬರಲ್ಲಿ 10 ವರ್ಷ ಅಂತರ ಇದ್ದರೂ ಅದು ಅವರ ಪ್ರೀತಿಯಲ್ಲಿ ಅಡ್ಡ ಬರಲಿಲ್ಲ. ಸಾಮಾನ್ಯವಾಗಿ ಪ್ರೀತಿ ಮಾಡಿ ಮದುವೆ ಮಾಡಿಕೊಳ್ಳುವವರಲ್ಲಿ ಹುಡುಗಿಗಿಂತ ಹುಡುಗನ ವಯಸ್ಸೇ ಹೆಚ್ಚಿರುತ್ತದೆ. ಕೆಲವರು ಸಮವಯಸ್ಕರೂ ಇರುತ್ತಾರೆ. ಕೆಲವು ಅಪರೂಪದ ಉದಾಹರಣೆಗಳೂ ಇವೆ. ಯುವಕನಿಗಿಂತ ಯುವತಿಯ ವಯಸ್ಸು ಹೆಚ್ಚಾಗಿರುತ್ತದೆ. ಸಚಿನ್‌ಗಿಂತ ಅಂಜಲಿ 4 ವರ್ಷ ದೊಡ್ಡವಳು. ಆದರೂ ಅವರ ಜೋಡಿ ಸೂಪರ್‌ ಹಿಟ್‌ ಆಗಿದೆ. ಸುನಿಲ್ ‌ದತ್‌ ಕೂಡ ನರ್ಗೀಸ್‌ಗಿಂತ ಎಷ್ಟೋ ವರ್ಷ ಚಿಕ್ಕವರಾಗಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ