ಜಗತ್ತಿನಲ್ಲಿ ನಿಮಗೆ ಯಾವಾಗ, ಯಾರೊಂದಿಗೆ ಪ್ರೀತಿ ಉಂಟಾಗುತ್ತದೆ ಎಂದು ಹೇಳಲಾಗದು. ಮೊದಲು ನಿಮ್ಮ ಕಣ್ಣಿಗೆ ಯಾರೋ ಹಿಡಿಸುತ್ತಾರೆ. ಬಳಿಕ ಅವರು ನಿಮ್ಮ ಮನಸ್ಸಿನಲ್ಲಿ ಕೂತುಬಿಡುತ್ತಾರೆ. ಆ ಬಳಿಕ ಪ್ರೀತಿ ಹೇಗೆ ವ್ಯಕ್ತಪಡಿಸಬೇಕು ಎಂಬ ಕುರಿತಂತೆ ತಮ್ಮೊಂದಿಗೆ ತಾವೇ ಯುದ್ಧದ ಸ್ಥಿತಿ ಉತ್ಪನ್ನವಾಗುತ್ತದೆ. ಪ್ರೀತಿ ಹೇಗೆ ವ್ಯಕ್ತಪಡಿಸಬೇಕು ಎಂಬ ಕುರಿತಂತೆ ನಿಮಗೊಂದಿಷ್ಟು ಸಂಗತಿಗಳು ಇಲ್ಲಿವೆ :

ಡೇ ಆಫ್‌ ಲವ್ : ನಿಮ್ಮ ಪ್ರೇಮಿಯ ಕಣ್ಣಲ್ಲಿ ಮಿನುಗುತ್ತಿರುವ ಪ್ರೀತಿಯನ್ನು ನೀವು ಹಲವು ಬಾರಿ ಕಂಡಿರಬಹುದು. ಆದರೆ ಪ್ರೇಮಿ ನಿಮ್ಮ ಕಣ್ಣೆದುರಿಗೆ ಇಲ್ಲದಿದ್ದಾಗ, ಅವನಿಗೆ ನಿಮ್ಮ ಪ್ರೀತಿಯ ಅನುಭೂತಿಯನ್ನು ಹೇಗೆ ಮಾಡಿಸುತ್ತೀರಿ? ಇದರ ಸರಳ ಸುಲಭ ವಿಧಾನವೆಂದರೆ, ನಿಮ್ಮ ಮನದಾಳದ ಮಾತುಗಳನ್ನು ಎಸ್‌.ಎಂ.ಎಸ್‌ ಮುಖಾಂತರ ರವಾನಿಸಿ. ನಂತರ ನಿಮ್ಮ ಪ್ರೀತಿಯ ಪರಿಮಳ ಹೇಗೆ ಹೊರಸೂಸುತ್ತದೆಂದು ನೋಡಿ.

ಅಂದಹಾಗೆ ಪ್ರತಿದಿನ ವ್ಯಾಲೆಂಟೈನ್ಸ್ ಡೇ ಆಗಬಹುದು. ವ್ಯಕ್ತಪಡಿಸುವ ಪ್ರತಿಯೊಂದು ಪ್ರೀತಿಯ ಮಾತು ಪ್ರೇಮಿಯ ಹೃದಯವನ್ನು ನಿಮ್ಮತ್ತ ಆಕರ್ಷಿಸುವಂತೆ ಮಾಡಬಹುದು. ನಿಮ್ಮ ಬಳಿ ಸಾಕಷ್ಟು ಸಮಯವಿದ್ದರೆ, ವ್ಯಾಲೆಂಟೈನ್ಸ್ ದಿನದಂದು ಪ್ರೀತಿಭರಿತ ಒಂದು ಸಂದೇಶ ಕಳಿಸಿಕೊಡಬಹುದು.

ಮದುವೆ ವಾರ್ಷಿಕೋತ್ಸ : ಮದುವೆ ವಾರ್ಷಿಕೋತ್ಸವದಂದು ನಿಮ್ಮ ಪತ್ನಿಯನ್ನು ಚಕಿತಗೊಳಿಸಲು ಹನಿಮೂನ್‌ಗೆ ಹೋದ ಸ್ಥಳಕ್ಕೆ ಟೂರ್‌ ಹೋಗುವ ಪ್ಯಾಕೇಜ್‌ ಗಿಫ್ಟ್ ಮಾಡಿ. ಅಲ್ಲಿ ಆ ಹಳೆಯ ಮಧುರ ಕ್ಷಣಗಳನ್ನು ನೆನಪಿಸಿಕೊಳ್ಳುತ್ತ, ಈಗ ಪುನಃ ಮೊದಲಿನಂತೆಯೇ ಪ್ರೀತಿ ವ್ಯಕ್ತಪಡಿಸಿ.

ನಿಮ್ಮ ಸಂಗಾತಿಯನ್ನು ಪ್ರಶಂಸೆ ಮಾಡಿ ಹೇಳಿದ ಕೆಲವು ಶಬ್ದಗಳು ಪ್ರೀತಿ ವ್ಯಕ್ತಪಡಿಸಿ ಹೇಳುವ ಶಬ್ದಗಳಿಗಿಂತಲೂ ಕಡಿಮೆ ಏನಲ್ಲ. ಇದರಿಂದ ನೀವು ಅವಳನ್ನು ಅದೆಷ್ಟು ಪ್ರೀತಿಸುತ್ತಿದ್ದೀರಿ ಎಂಬುದನ್ನು ಕೇಳಿ ಆಕೆಗೆ ಖುಷಿಯಾಗುತ್ತದೆ.

ಮದುವೆ ವಾರ್ಷಿಕೋತ್ಸವದಂದು ನಿಮ್ಮ ಸಂಗಾತಿಯ ಇಷ್ಟದ ಹೂಗಳ ಬೊಕೆಯನ್ನು ಗಿಫ್ಟ್ ಮಾಡಿ. ಆ ಹೂಗಳ ಮಧ್ಯದಲ್ಲಿ ಪ್ರೀತಿಯ ಕೆಲವು ಶಬ್ದಗಳನ್ನು ಉಲ್ಲೇಖಿಸಿದ ಚೀಟಿ ಇಡಿ. ಖುಷಿಯ ಕ್ಷಣಗಳನ್ನು ನೀಡಿದ ಸಂಗಾತಿಗೆ ಧನ್ಯವಾದದ ಕೆಲವು ಶಬ್ದಗಳನ್ನೂ ಹೇಳಿ.

ಹುಟ್ಟುಹಬ್ಬ : `ಈ ದಿನ ಜನುಮದಿನ.... ಶುಭಾಶಯ ನನ್ನ ಶುಭಾಶಯ....' ಈ ರೀತಿಯ ಹಾಡುಗಳನ್ನು ಉಲ್ಲೇಖಿಸಿ. ಇದರಿಂದ ಸಂಗಾತಿಗೆ ನಿಮ್ಮ ಹೃದಯದ ಭಾವನೆ ಏನೆಂದು ತಿಳಿಯುತ್ತದಲ್ಲದೆ, ನೀವು ಆಕೆಯ ಹೃದಯದಲ್ಲಿ ಅದೆಷ್ಟು ಮಹತ್ವ ಹೊಂದಿರುವಿರಿ ಎಂಬುದು ಅರಿವಿಗೆ ಬರುತ್ತದೆ. ಹೀಗಾಗಿ ನಿಮ್ಮ ಪ್ರೀತಿಪಾತ್ರಳಿಗೆ ಈ ಹಾಡನ್ನು ಸಮರ್ಪಿಸಿ.

ನೀವು ವಿವಾಹಿತರಾಗಿರಬಹುದು ಅಥವಾ ಪ್ರೇಮಿಗಳು. ನಿಮ್ಮ ಸಂಗಾತಿಗಾಗಿ ಒಂದು ಸರ್‌ಪ್ರೈಸ್‌ ಪಾರ್ಟಿ ಕೊಡಿ. ಇದರಲ್ಲಿ ಕೆಲವು ವಿಶೇಷ ಸ್ನೇಹಿತರು ಹಾಗೂ ಸಂಬಂಧಿಕರು ಪಾಲ್ಗೊಳ್ಳಲಿ. ನೀವು ಆಕೆಯ ಈ ದಿನವನ್ನು ವಿಶೇಷಗೊಳಿಸಿದರೆ, ಆಕೆಯ ಕಣ್ಣಲ್ಲಿ ಆನಂದದ ಕಣ್ಣೀರು ಬರದೇ ಇದ್ದರೆ ಹೇಳಿ. ಹೀಗೆ ಮಾಡುವುದರಿಂದ ನಿಮಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಅವಶ್ಯಕತೆ ಉಂಟಾಗುವುದಿಲ್ಲ. ಏಕೆಂದರೆ ಹೀಗೆ ಮಾಡುವುದರ ಮೂಲಕ ಏನೂ ಹೇಳದೆಯೇ ನಿಮ್ಮ ಭಾವನೆ ವ್ಯಕ್ತಪಡಿಸಿದ್ದೀರಿ. ಇದರಿಂದ ನಿಮ್ಮಿಬ್ಬರ ನಡುವೆ ಮೊದಲಿಗಿಂತ ಮತ್ತಷ್ಟು ಪ್ರೀತಿ ಹೆಚ್ಚುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ