ತಾಯಿಯಾಗ ಬಯಸುವ ಪ್ರತಿ ಮಹಿಳೆಯ ಮನದಲ್ಲಿ ತನ್ನ ಮಗು ಆರೋಗ್ಯವಾಗಿ ಇರುತ್ತದೆಯೋ ಇಲ್ಲವೋ ಎಂಬ ಪ್ರಶ್ನೆ ಆಗಾಗ್ಗೆ ಏಳುತ್ತದೆ. ಇದು ಬಹಳ ಸ್ವಾಭಾವಿಕ. ವೈಜ್ಞಾನಿಕ ಸಂಶೋಧನೆಗಳಿಂದ ಅದರ ಬಗ್ಗೆ ಮಾಹಿತಿ ಸುಲಭವಾಗಿ ಸಿಗುತ್ತದೆ.
ವೈದ್ಯರು ತಾಯಿ ಹಾಗೂ ತಂದೆಯ ಬಳಿ ಕೆಲವು ಪ್ರಶ್ನೆಗಳನ್ನು ಕೇಳಿ ಪ್ರೆಗ್ನೆನ್ಸಿ ಕಾಲದಲ್ಲಿನ ಕೆಲವು ಪರೀಕ್ಷೆಗಳ ಮೂಲಕ ಡೆಲಿವರಿಗೆ ಸಂಬಂಧಿಸಿದ ಬಹಳಷ್ಟು ಕಾಯಿಲೆಗಳಿಂದ ಪಾರಾಗಬಹುದು.
ಸಾಮಾನ್ಯವಾಗಿ ಶೇ.70ರಷ್ಟು ಮಹಿಳೆಯರಲ್ಲಿ ಈ ಸಮಸ್ಯೆಗಳು ಏಕೆ ಉಂಟಾಗುತ್ತೆಂದು ಕಾರಣ ತಿಳಿಯುವುದಿಲ್ಲ. ಏಕೆಂದರೆ ತಾಯಿಯಲ್ಲಿ ಇರಬಹುದಾದ ಡಯಾಬಿಟೀಸ್, ಥೈರಾಯಿಡ್ ಇತ್ಯಾದಿ ಕಾಯಿಲೆಗಳಿಂದ ಅನೇಕ ದೋಷಗಳು ಉಂಟಾಗುತ್ತವೆ. ಕೆಲವು ಕಾಯಿಲೆಗಳು ತಾಯಿಯ ದೋಷಪೂರಿತ ಜೀನ್‌ನಿಂದಲೂ ಉಂಟಾಗುತ್ತವೆ. ಅವನ್ನು ಕೆಲವು ಟೆಸ್ಟ್ ಗಳಿಂದ ಪತ್ತೆ ಮಾಡಬಹುದು.
ದೋಷಗಳ ಸಂಭಾವ್ಯತೆ ನಮ್ಮ ದೇಹದಲ್ಲಿ 48 ಸೆಕ್ಸ್ ಕ್ರೋಮೋಸೋಮ್ ಗಳು ಇರುತ್ತವೆ. ಇವುಗಳಲ್ಲಿ 2 ಕ್ರೋಮೋಸೋಮ್ ಮಹಿಳೆಯರಲ್ಲಿ ಮತ್ತು ಪುರುಷರಲ್ಲಿ ಇರುತ್ತದೆ. ಅಂಡಾಣು ಮತ್ತು ವೀರ್ಯಾಣುಗಳ ಮಿಲನದಿಂದ ಹುಟ್ಟುವ ಮಗುವಲ್ಲಿ ಅರ್ಧ ಕ್ರೋಮೋಸೋಮ್ ತಾಯಿಯಿಂದ ಬರುತ್ತದೆ ಮತ್ತು ಅರ್ಧ ತಂದೆಯಿಂದ ಬರುತ್ತದೆ. ವಿಜ್ಞಾನದಲ್ಲಿ ಉಂಟಾದ ಪ್ರಗತಿಯಿಂದಾಗಿ ನಮ್ಮ ದೇಹದಲ್ಲಿ 25-35 ಸಾವಿರ ಜೀನ್‌ಗಳು ಇರುತ್ತವೆ. ಇವುಗಳಲ್ಲಿ ಒಂದು ಜೀನ್‌ನಲ್ಲಿ ದೋಷವಿದ್ದರೂ ಹುಟ್ಟು ಮಗುವಿನಲ್ಲಿ ವೈಕಲ್ಯವುಂಟಾಗುತ್ತದೆ.
ಈ ಸಮಸ್ಯೆಗಳಿಂದ ಪಾರಾಗಲು ವೈದ್ಯರು ಮೊದಲ ಹಾಗೂ ಎರಡನೆಯ ಟ್ರೈಮೆಸ್ಟರ್‌ನಲ್ಲಿ ಬೇರೆ ಬೇರೆ ರೀತಿಯ ಪರೀಕ್ಷೆಗಳನ್ನು ಮಾಡುತ್ತಾರೆ. ಅದರಿಂದ ಮಗುವಿನಲ್ಲಿ ವೈಕಲ್ಯ ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಅನೇಕ ಬಾರಿ ತಾಯಿ ಮತ್ತು ತಂದೆ ಇಬ್ಬರೂ ನಾರ್ಮಲ್ ಜೀನ್ ಹೊಂದಿದ್ದರೂ ನವಜಾತ ಶಿಶುವಿನಲ್ಲಿ ಯಾವುದಾದರೂ ಕಾಯಿಲೆ ಇರಬಹುದು. ಅದಕ್ಕೆ ಕಾರಣ ಮಗುವಿನ ಗರ್ಭಾವಸ್ಥೆಯಲ್ಲಿ ಔಷಧಗಳ ಕಾರಣದಿಂದ ಜೀನ್‌ನಲ್ಲಿ ಬಂದ ಬದಲಾವಣೆ ಆಗಿರಬಹುದು.
ಮಕ್ಕಳಲ್ಲಿ ವೈಕಲ್ಯ ಉಂಟು ಮಾಡುವ ಕಾಯಿಲೆಗಳು ಮುಖ್ಯವಾಗಿ ಕೆಳಕಂಡಂತಿವೆ :
ಸಿಕ್ಸ್ ಸೆಲ್ ಅನೀಮಿಯಾ
ಶ್ವಾಸಕೋಶಗಳಲ್ಲಿ ಸಿಸ್ಟಿಕ್ ಫೈಬ್ರೋಸಿಸ್
ಫ್ಯಾಮಿಲಿಯ್ ಡಿಸ್ ಟೋನಿಯಾ
ಮೇನಿಂಗೋಸೀಸ್ (ಮೆದುಳಿನ ಲೇಯರ್ಸ್ ಮೆದುಳಿನಿಂದ ಹೊರಬರುವಿಕೆ)
ತಲೆ ಚಿಕ್ಕದಾಗುವುದು.
ತಲೆ ಬೆಳೆಯದಿರುವುದು, ತಲೆ ದಪ್ಪಗಾಗುವುದು
ಬೆನ್ನು ಮೂಳೆಯಲ್ಲಿ ಗಾಯಂಟಾಗುವುದು.
ಕರುಳುಗಳು ಹೊರಬರುದು
2 ತಲೆ ಉಂಟಾಗುವಿಕೆ ಹೀಮೋಫೀಲಿಯಾ
ಥಿಲ್ಯಾಸೀಮಿಯಾ
ಯಾವ ಮಹಿಳೆಯರಿಗೆ ಜೆನೆಟಿಕ್ ಟೆಸ್ಟ್ ಅಗತ್ಯ?
35 ವರ್ಷಕ್ಕೂ ಹೆಚ್ಚು ವಯಸ್ಸಾದವರಿಗೆ ಮೊದಲ ಮಗುವಿಗೆ ಹುಟ್ಟಿನಿಂದ ಯಾವುದಾದರೂ ಕಾಯಿಲೆ ಇರುವಿಕೆ.
ಮೊದಲ 3 ತಿಂಗಳುಗಳಲ್ಲಿ ಯಾವುದಾದರೂ ಔಷಧ ಉಪಯೋಗಿಸಿರಬೇಕು ಅಥವಾ ಗರ್ಭಧಾರಣೆಗೆ ಮುಂಚೆ ಸಕ್ಕರೆ ಕಾಯಿಲೆ ಇರುವವರು.
ಪದೇ ಪದೇ ಗರ್ಭಪಾತವಾಗಿರುವವರು
ಪ್ರಿಮೆಚ್ಯೂರ್ ಮಗು ಹುಟ್ಟಿರುವುದು
ಮೊದಲ ಟ್ರೈಮೆಸ್ಟರ್‌ನಲ್ಲಿ ಮಾಡುವ ಟೆಸ್ಟ್ ಅಲ್ಚ್ರಾಸೌಂಡ್ :
ಅಲ್ಟ್ರಾಸೌಂಡ್ 5-6 ವಾರಗಳಲ್ಲಿ ಮಾಡುವುದರಿಂದ ಡೌನ್ ಸಿಂಡ್ರೋಮ್ ಬಗ್ಗೆ ತಿಳಿಯಬಹುದು. ಈ ಅಲ್ಟ್ರಾಸೌಂಡ್‌ನಲ್ಲಿ ಮಗುವಿನ ಕೆನ್ನೆಯ ಚರ್ಮದ ಪ್ರಮಾಣವನ್ನು ತಿಳಿಯಬಹುದು. ಅದು 4 ಮಿ.ಮೀ.ಗಿಂತ ಹೆಚ್ಚಿದ್ದರೆ ಡೌನ್ ಸಿಂಡ್ರೋಮ್ ಆಗಿರುತ್ತದೆ.
ಇದಲ್ಲದೆ 2 ಮೆಟರ್ನ್ ಸೀರಮ್ ಟೆಸ್ಟ್, ಒಂದು ಪ್ರಕಾರದ ರಕ್ತ ಪರೀಕ್ಷೆಯಾಗಿರುತ್ತದೆ. ಅವನ್ನೂ ಈ ಸಮಯದಲ್ಲಿ ಮಾಡಲಾಗುತ್ತದೆ. ಈ ಎಲ್ಲ ಟೆಸ್ಟ್ ಗಳ ಮೂಲಕ ಡೌನ್ ಸಿಂಡ್ರೋಮ್ ಮತ್ತು ಟ್ರೈಸೋಮಿ 18 ಮತ್ತು ಟ್ರೈಸೋಮಿ 13ನ್ನು ಪತ್ತೆ ಮಾಡಬಹುದು.
ಈ ಟೆಸ್ಟ್ ಗಳಲ್ಲಿ ಯಾವುದಾದರೂ ತೊಂದರೆಯಾದರೆ ಕೋರಿ ಓನಿಕ್ ವಿಲಸ್ ಸ್ಯಾಂಪ್ಲಿಂಗ್ ಮತ್ತು ಸೆಂಟೆಸಿಸ್‌ಮಾಡಿಸಲಾಗುತ್ತದೆ.
ಆ್ಯಮ್ನೋಸೆಂಟೆಸಿಸ್ : ಗರ್ಭಿಣಿಯರ ಅಲ್ಟ್ರಾಸೌಂಡ್‌ನಲ್ಲಿ ಯಾವುದಾದರೂ ಹುಟ್ಟಿನಿಂದ ಬಂದ ಕಾಯಿಲೆಯ ಬಗ್ಗೆ ಸಂದೇಹವಾದರೆ ಅವರ ಗರ್ಭಾಶಯದಿಂದ ಕೊಂಚ ನೀರು ತೆಗೆದುಕೊಂಡು ಪರೀಕ್ಷಿಸಿದರೆ ಅನೇಕ ಹುಟ್ಟು ಕಾಯಿಲೆಗಳ ಬಗ್ಗೆ ತಿಳಿಯಬಹುದು.
ಕೋರಿ ಓನಿಕ್ ವಿಲಸ್ ಸ್ಯಾಂಪ್ಲಿಂಗ್‌ನಂತಹ ಇನ್ನಷ್ಟು ಪರೀಕ್ಷೆಗಳನ್ನೂ ಮಾಡಿಸಬಹುದು. ಇದನ್ನು ಕ್ರೋಮೋಸೋಮ್ ಪರೀಕ್ಷೆಗೂ ಮಾಡಿಸಬಹುದು. ಇದರಲ್ಲಿ ಅಂಬಿಲಿಕ್ ಕಾರ್ಡ್‌ನಿಂದ ರಕ್ತ ಪರೀಕ್ಷೆ ಮಾಡಿಸಬಹುದು.ಎರಡನೇ ಟ್ರೈಮೆಸ್ಟರ್‌ನಲ್ಲಿ ಮಾಡಿಸುವ ಟೆಸ್ಟ್ ಇದರಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತದೆ. 16-18 ವಾರದ ಪ್ರೆಗ್ನೆನ್ಸಿಯೊಳಗೆ ಅನೇಕ ಬ್ಲಡ್ ಟೆಸ್ಟ್ ಮಾಡಲಾಗುತ್ತದೆ. ಅವನ್ನು ಟ್ರಿಪ್ ಮಾರ್ಕರ್ ಟೆಸ್ಟ್ ಎಂದೂ ಹೇಳುತ್ತಾರೆ.
ಇದರಲ್ಲಿ ಸಾಮಾನ್ಯ ಪರೀಕ್ಷೆಯಲ್ಲದೆ ಟ್ರಿಪ್ ಟೆಸ್ಟ್ ಮಾಡಲಾಗುತ್ತದೆ. ಇದರಲ್ಲಿ 3 ರೀತಿಯ ಹಾರ್ಮೋನ್‌ಗಳನ್ನು ಪರೀಕ್ಷಿಸಲಾಗುತ್ತದೆ. ಈ ಪರೀಕ್ಷೆಯಿಂದ ಮಗುವಿನಲ್ಲಿ ಉಂಟಾಗುವ ಅನೇಕ ರೀತಿಯ ದೋಷಗಳ ಬಗ್ಗೆ ತಿಳಿಯುತ್ತದೆ. ಉದಾ: ಮಗುವಿನ ಮೆದುಳು ವಿಕಸಿತವಾಗದಿರುವುದು ಅಥವಾ ಮಗುವಿನ ದೇಹದಲ್ಲಿ ಬೆನ್ನುಮೂಳೆಯಲ್ಲಿ ದೋಷ ಇತ್ಯಾದಿ ತಿಳಿಯುತ್ತದೆ.
ಈ ಮೂಲಕ ಡೌನ್ ಸಿಂಡ್ರೋಮ್ ಮತ್ತು ಕ್ರೋಮೋಸೋಮ್ ಗಳ ಅನೇಕ ದೋಷಗಳೊಂದಿಗಿನ ಅವಳಿ ಮಕ್ಕಳ ಸಂಭಾವ್ಯತೆಯ ಬಗ್ಗೆಯೂ ತಿಳಿಯಬಹುದು. ಇದಲ್ಲದೆ ಗ್ಲೂಕೋಸ್ ಟಾಲರೆನ್ಸ್ ಟೆಸ್ಟ್ 24-28 ವಾರಗಳ ಪ್ರೆಗ್ನೆನ್ಸಿಯ ಕಾಲದಲ್ಲಿ ಮಾಡಿಸಬಹುದು. ಅದರಿಂದ ಗರ್ಭಿಣಿ ಡಯಾಬಿಟಿಕ್ ಆಗಿರುವ ಬಗ್ಗೆ ತಿಳಿಯುತ್ತದೆ. ಜೊತೆಗೆ ಮಗುವನ್ನು ಯಾವುದೇ ರೀತಿಯ ಅಪಾಯದಿಂದ ಪಾರು ಮಾಡುವ ಉಪಾಯ ಮಾಡಲಾಗುತ್ತದೆ.
– ಡಾ. ಆಶಾ ಶರ್ಮ