ಜನ ಉರಿ ಬಿಸಿಲಿನಲ್ಲಿ ನಿಶ್ಚಿಂತೆಯಿಂದ ಹೊರಟುಬಿಡುತ್ತಾರೆ. ಈ ನಿರ್ಲಕ್ಷ್ಯತೆಯ ಪರಿಣಾಮವನ್ನು ಅವರ ತ್ವಚೆ ಅನುಭವಿಸಬೇಕಾಗುತ್ತದೆ. ಬಿಸಿಲು ಎಲ್ಲ ವಯೋಮಾನದವರ ಮೇಲೆ ಪ್ರಭಾವ ಬೀರುತ್ತದೆ. ಹೆಸರಾಂತ ಸೌಂದರ್ಯ ತಜ್ಞೆ ಶಹನಾಜ್ ಹುಸೇನ್, ನಮಗೆ ಬಿಸಿಲಿನಿಂದ ಅನೇಕ ಲಾಭಗಳು ಸಿಗುತ್ತವೆ, ಜೊತೆಗೆ ಅದರಿಂದ ನಮ್ಮ ತ್ವಚೆಗೆ ಹಾನಿಯೂ ಉಂಟಾಗುತ್ತದೆ. ತ್ವಚೆಗೆ ಬಿಸಿಲಿನಿಂದ ಉಂಟಾಗುವಷ್ಟು ಹಾನಿ ಬೇರಾವುದರಿಂದಲೂ ಆಗುವುದಿಲ್ಲ ಎನ್ನುತ್ತಾರೆ.
ಬಿಳಿಯ ಬಣ್ಣದವರಿಗೆ ಬಿಸಿಲಿನಿಂದ ಹೆಚ್ಚು ಹಾನಿ ಎಂದು ಶಹನಾಜ್ ಹುಸೇನ್ ಹೇಳುತ್ತಾರೆ. ತ್ವಚೆ ಕಪ್ಪಗಿದ್ದಷ್ಟೂ ಅದು ಬಿಸಿಲಿನ ಹಾನಿಕಾರಕ ಪ್ರಭಾವವನ್ನು ಅಷ್ಟೇ ಸಮರ್ಥವಾಗಿ ಎದುರಿಸುತ್ತದೆ. ಆದರೆ ಬಿಸಿಲಿನ ಪ್ರಭಾವ ಕಪ್ಪು ತ್ವಚೆಯ ಮೇಲೂ ಉಂಟಾಗುತ್ತದೆ. ಕಪ್ಪು ತ್ವಚೆಯಲ್ಲಿ ಅಧಿಕ ಮೆಲನಿನ್ ಇರುವುದರಿಂದ ಸೂರ್ಯನ ಕಿರಣಗಳಿಂದ ರಕ್ಷಣೆ ಸಿಗುತ್ತದೆ. ಸೂರ್ಯನ ಕಿರಣಗಳು ನಮ್ಮ ತ್ವಚೆಯ ಆಳದವರೆಗೆ ಹೋಗುತ್ತದೆ. ಇದರಿಂದ ತ್ವಚೆಯ ಮೇಲಿನ ಪದರಕ್ಕೆ ಹಾನಿಯಾಗುವುದಿಲ್ಲ. ಆದರೆ ಒಳಗಿನ ತ್ವಚೆಯ ಜೀವಂತ ಊತಕಗಳಿಗೆ ಹಾನಿ ತರುತ್ತದೆ. ಯಾರಾದರೂ ಸತತವಾಗಿ ಬಿಸಿಲಿನಲ್ಲಿದ್ದರೆ ಅವರ ತ್ವಚೆಯ ಮೇಲೆ ವೃದ್ಧಾಪ್ಯದ ಲಕ್ಷಣಗಳು ಪ್ರಕಟವಾಗುತ್ತವೆ. ಅತ್ಯಧಿಕ ಬಿಸಿಲಿನಲ್ಲಿ ಇರುವುದರಿಂದ ಸ್ಕಿನ್ ಕ್ಯಾನ್ಸರ್ ಕೂಡ ಆಗಬಹುದು. ಬಿಸಿಲಿನ ಅತ್ಯಂತ ದೊಡ್ಡ ಹಾನಿಕಾರಕ ಪ್ರಭಾವ ತ್ವಚೆಯ ಆರ್ದ್ರತೆ ಕಡಿಮೆ ಮಾಡುವುದಾಗಿದೆ. ಇದರಿಂದ ತ್ವಚೆ ಒಣಗಿ ಒರಟಾಗಿ ಸುಕ್ಕುಗಳಾಗುತ್ತವೆ. ಮುಖದಲ್ಲಿ ಕಪ್ಪು ಕಲೆಗಳುಂಟಾಗುತ್ತವೆ. ಇಷ್ಟೇ ಅಲ್ಲ, ರಕ್ತನಾಳಗಳಿಗೂ ಹರಡಿಕೊಳ್ಳುತ್ತವೆ. ಅದರಿಂದ ಚರ್ಮ ಕೆಂಪಾಗಿ ಕಾಣುತ್ತದೆ.
ಸನ್ ಬರ್ನ್ ಏಕಾಗುತ್ತದೆ?
ಸೂರ್ಯನ ಕಿರಣಗಳಲ್ಲಿರುವ ಅಲ್ಟ್ರಾ ವೈಯ್ಲೆಟ್ ಕಿರಣಗಳು ನೇರವಾಗಿ ತ್ವಚೆಯ ಸಂಪರ್ಕಕ್ಕೆ ಬಂದಾಗ ನಮಗೆ ನವೆ ಅಥವಾ ಉರಿಯಾಗುತ್ತದೆ. ಅಲ್ಲಿ ಕೆಂಪು ಗುಳ್ಳೆಗಳು, ಕಲೆಗಳು ಮತ್ತು ಸುಕ್ಕುಗಳಾಗುತ್ತವೆ. ಅಲ್ಟ್ರಾ ವೈಯ್ಲೆಟ್ ಕಿರಣಗಳು ತ್ವಚೆಯ ಮೆಲನಿನ್‌ನನ್ನು ನಷ್ಟಗೊಳಿಸುತ್ತವೆ. ಅದರಿಂದ ತ್ವಚೆ ಶ್ಯಾಮಲ ವರ್ಣ ಅಥವಾ ಕಪ್ಪವಾಗುತ್ತದೆ. ಬಿಸಿಲಿನಲ್ಲಿ ಒಂದೇ ಸಮನೆ ಕೆಲಸ ಮಾಡುವುದರಿಂದ ಫೋಟೋ ಏಜಿಂಗ್‌ನ ಸಮಸ್ಯೆ ಹೆಚ್ಚಾಗುತ್ತದೆ. ತ್ವಚೆಗೆ ಅಕಾಲದಲ್ಲಿ ಸುಕ್ಕುಗಳು ಬೀಳುತ್ತವೆ. ಚಳಿಗಾಲಕ್ಕೆ ಹೋಲಿಸಿದರೆ ಬೇಸಿಗೆಯಲ್ಲಿ ಜನ ಸನ್ ಬರ್ನ್‌ಗೆ ಬೇಗ ಬಲಿಯಾಗುತ್ತಾರೆ. ಏಕೆಂದರೆ ಆಗ ಸೂರ್ಯನ ಉಷ್ಣತೆ ತುಟ್ಟತುದಿಯಲ್ಲಿರುತ್ತದೆ. ಮಕ್ಕಳು, ಮಹಿಳೆಯರು, ಪುರುಷರು ಎಲ್ಲರೂ ಇದರಿಂದ ಬೇಸತ್ತು ಹೋಗುತ್ತಾರೆ.
ತ್ವಚೆಯ ತಜ್ಞರು ಬೇಸಿಗೆಯಲ್ಲಿ ಸನ್ ಬರ್ನ್ ಜೊತೆಗೆ ಸ್ಕಿನ್ ಅಲರ್ಜಿಯುಂಟಾಗುವುದು ಮಾಮೂಲಿ ಎನ್ನುತ್ತಾರೆ. ಇದುವರೆಗೆ ಅಲ್ಟ್ರಾ ವೈಯ್ಲೆಟ್ ಮತ್ತು `ಬಿ' ಕಿರಣಗಳು ಮಾತ್ರ ಭೂಮಿಯವರೆಗೆ ಬರುತ್ತಿದ್ದವು. ಆದರೆ ಈಗ ಅಲ್ಟ್ರಾ ವೈಯ್ಲೆಟ್ `ಸಿ' ಕಿರಣಗಳು ಸಹ ನಮ್ಮನ್ನು ತಲುಪುವುದರಿಂದ ತ್ವಚೆಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳುಂಟಾಗುತ್ತವೆ.
ಇನ್‌ಫೆಕ್ಷನ್‌ನಿಂದಲೂ ಸನ್ ಬರ್ನ್ ಡಿಯೋಡರೆಂಟ್, ಸೋಪು, ಪರ್ಫ್ಯೂಮ್, ಔಷಧಗಳು ಮತ್ತು ಬೆಳ್ಳುಳ್ಳಿಯಿಂದಲೂ ಸನ್ ಬರ್ನ್ ಉಂಟಾಗುತ್ತದೆ ಎಂದು ಚರ್ಮ ತಜ್ಞರು ಹೇಳುತ್ತಾರೆ. ಡಿಯೋಡರೆಂಟ್ ಮತ್ತು ಸೋಪಿನಲ್ಲಿರುವ ಟಿಬಿಎಸ್ ಏಜೆಂಟ್‌ನಿಂದಾಗಿ ಒಮ್ಮೊಮ್ಮೆ ಬಿಸಿಲಿನ ಸಂಪರ್ಕಕ್ಕೆ ಬರುವುದರಿಂದ ಫೋಟೋ ಕಾಂಟ್ಯಾಕ್ಟ್ ಅಲರ್ಜಿಯುಂಟಾಗುತ್ತದೆ. ಆದರೆ ಪರ್ಫ್ಯೂಮ್ ನಲ್ಲಿ ಸಿಗುವ ಸಿಕ್ಸ್ ಮೀಥೈಲ್ ಕ್ಯುಮಾರಿನ್ ಸಬ್ ಸ್ಟೆಂಟ್ ಅಲರ್ಜಿಗೆ ಕಾರಣವಾಗುತ್ತದೆ ಮತ್ತು ಬಿಸಿಲಿನ ಸಂಪರ್ಕಕ್ಕೆ ಬಂದಾಗ ತ್ವಚೆಯಲ್ಲಿ ನವೆ ಅಥವಾ ಉರಿ ಉಂಟು ಮಾಡುತ್ತದೆ.