ಮದುಮಗಳ ಅಲಂಕಾರ ಆಗಬೇಕು. ಬ್ಯೂಟೀಷಿಯನ್‌ಗಾಗಿ ಕಾಯ್ತಾ ಇದ್ದಳು. ಎಷ್ಟು ಹೊತ್ತಾದರೂ ಬರಲಿಲ್ಲ. ಎಲ್ಲರಿಗೂ ಆತಂಕ. ಮದುಮಗಳು ಕಾಯ್ತಾ ಇದ್ದಳು. ಕಡೆಗೂ ಆಕೆ ಬಂದರು. ಎಲ್ಲರ ಮೊಗದಲ್ಲೂ ನಿರಾಳಭಾವ. ಹುಡುಗಿಗೆ ಕ್ಯಾಮರಾಮನ್‌ಅರ್ಜೆಂಟ್ ಮಾಡ್ತಿದ್ದು ಹುಡುಗನೂ ರೆಡಿ ಆಗಿದ್ದು ಆಗಿತ್ತು. ಇನ್ನೊಂದೆಡೆಗೆ ಹೋಗಬೇಕಾದ್ದರಿಂದ ಬಂದ ಆ ಬ್ಯೂಟೀಷಿಯನ್‌ತರಾತುರಿಯಲ್ಲಿ ತನ್ನ ಕೆಲಸ ಪೂರೈಸಿ ಹೊರಟೇಬಿಟ್ಟರು. ಮೇಕಪ್ ಸುಮಾರಾಗಿದೆ ಎಂದು ಯಾರೋ ಸಣ್ಣ ದನಿಯಲ್ಲಿ ಹೇಳಿದ್ದು, ನಂತರ ಹುಡುಗಿ ಮೂಡ್ ಆಫ್ ಆಗಿದ್ದು, ನಂತರ ಫೋಟೋ ನೋಡಲೂ ಸಹ ಹುಡುಗಿ ನಿರಾಕರಿಸಿದ್ದು ನಡೆಯಿತು.
ರಿಸೆಪ್ಷನ್ ಆ ಹುಡುಗಿಯ ಬಾಳಿನಲ್ಲಿ ಒಂದು ಕಹಿ ಘಟನೆಯಾಗಿ ಉಳಿಯಿತು. ಬೆಳಗ್ಗಿನಿಂದ ಇದ್ದ ಆ ಹುರುಪು ಹುಮ್ಮಸ್ಸು ರಾತ್ರಿಯ ಹೊತ್ತಿಗೆ ಇರಲಿಲ್ಲ. ಇಂತಹ ಘಟನೆಗಳು ನಡೆದಾಗ, ಮನೆಯವರಿಗೆ ಬಂದವರನ್ನು ಉಪಚರಿಸುವುದೋ ಅಥವಾ ಹುಡುಗಿಗೆ ಸಾಂತ್ವನ ಹೇಳುವುದೋ ತಿಳಿಯದಾಗುತ್ತದೆ. ಆದರೆ ಇವೆಲ್ಲಕ್ಕೂ ಮೀರಿ ಸಿಂಪಲ್ ಅಂಡ್ ಬ್ಯೂಟಿಫುಲ್ ಆಗಿಸುವ ಉತ್ತಮ ಬ್ಯೂಟೀಷಿಯನ್ ಹಾಗೂ ಸೌಂದರ್ಯತಜ್ಞೆ ಒಬ್ಬರು ನಮ್ಮಲ್ಲೇ ಇದ್ದಾರೆ, ಅವರೇ ಅನುರಾಧಾ ನಾರಾಯಣಮೂರ್ತಿ.
ಹೆಣ್ಣು ಸೌಂದರ್ಯಪ್ರಿಯಳು. ಅಲಂಕಾರ ಯಾರಿಗೆ ಇಷ್ಟ ಇಲ್ಲ ಹೇಳಿ. ದಿನಕ್ಕೊಂದು ಮೇಕಪ್, ದಿನಕ್ಕೊಂದು ಹೇರ್‌ಸ್ಟೈಲ್, ನೇಲ್ ಆರ್ಟ್ ಹೀಗೆ ಇವತ್ತಿನ ಟ್ರೆಂಡ್ ಬಹಳಾನೇ ಛೇಂಜ್ ಆಗ್ತಿದೆ. ಹಿಂದೆಲ್ಲ ಹಣೆಗೆ ಶಿಂಗಾರ್ ಒಂದಿದ್ದರೆ ಸಾಕಾಗಿತ್ತು. ಈಗ ಹಾಗಲ್ಲ, ಫುಟ್ ಪಾತ್‌ನಿಂದ ಹಿಡಿದು ಸುಸಜ್ಜಿತ ಹವಾ ನಿಯಂತ್ರಿತ ಅಂಗಡಿಗಳವರೆವಿಗೂ ಅಲಂಕಾರ ಸಾಮಗ್ರಿಗಳು ಎಲ್ಲ ತೆರನಾದ ಮಹಿಳೆಯರಿಗೆ ದೊರಕುವ ಕಾಲ ಬಂದಿದೆ.
ಹಾದಿಗೊಂದು ಬೀದಿಗೊಂದು ಪಾರ್ಲರ್‌ಗಳು…. ಅಲ್ಲ ಅಲ್ಲ ಸ್ಪಾಗಳು! ಮಹಿಳೆ ಓವರ್ ಸ್ಮಾರ್ಟ್ ಆಗ್ತಿದ್ದಾಳೋ ಅಥವಾ ಪ್ರತಿಯೊಂದು ವ್ಯವಹಾರಿಕ ಆಗುತ್ತಿದೆಯೋ ತಿಳಿಯದಷ್ಟು ಗೊಂದಲಮಯವಾಗಿದೆ. ನಾಟಿ ಔಷಧಿ, ಆಯುರ್ವೇದಗಳೂ ಏನೂ ಹಿಂದೆ ಬಿದ್ದಿಲ್ಲ. ಅವುಗಳೂ ಪೈಪೋಟಿಯಲ್ಲಿ ಸಾಗುತ್ತಿವೆ.
ಆ ನಿಟ್ಟಿನಲ್ಲಿ ಇಲ್ಲೊಂದು ಸೌಂದರ್ಯ ಸದನ ಆತ್ಮೀಯವಾಗಿ ಕಾಣುವ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಅನೂಸ್ ಪಾರ್ಲರ್ ಕೆಲಸ ನಿರ್ವಹಿಸುತ್ತಿದೆ. ಬಂದವರನ್ನು ಆತ್ಮೀಯವಾಗಿ ಕಾಣುವ ಶುದ್ಧತೆಯನ್ನು ಕಾಪಾಡುತ್ತ ಹರ್ಬಲ್ ಗಳಿಂದಲೇ ಸೌಂದರ್ಯ ಹೆಚ್ಚಿಸುವ ಅನೂಸ್‌ನ ಅನುರಾಧಾ ನಾರಾಯಣಮೂರ್ತಿಯವರ ಬಗ್ಗೆ ಹಾಗೂ ಚರ್ಮ ಮತ್ತು ಕೂದಲಿನ ಆರೈಕೆಗಳ ಬಗ್ಗೆ ಟಿಪ್ಸ್ ಗಳು ಇಲ್ಲಿವೆ.
“ಈಗ್ಗೆ 18 ವರ್ಷಗಳ ಕೆಳಗೆ ಪಿಯುಸಿ ಓದುತ್ತಿದ್ದ ವೇಳೆ. ಒಂದು ಶುಭ ಸಮಾರಂಭಕ್ಕೆ ಹೋಗಿದ್ದಾಗ ಅಲ್ಲಿ ಒಬ್ಬ ಮಹಿಳೆ ಮಾಡುತ್ತಿದ್ದ ಮೇಕಪ್ ನೋಡಿ ಇಷ್ಟು ಕೆಟ್ಟದಾಗಿಯೂ ಮೇಕಪ್ ಮಾಡಬಹುದೇ ಎಂದು ತಿಳಿದು ನಾನೂ ಏಕೆ ಈ ಬ್ಯೂಟಿಷಿಯನ್‌ಕೋರ್ಸ್ ಕಲಿಯಬಾರದು? ಮಹಿಳೆಯರಿಗೇಕೆ ಉತ್ತಮ ಸೇವೆ ನೀಡಬಾರದೆಂದು ಆಲೋಚಿಸಿದೆ. ಅಂದು ತೆಗೆದುಕೊಂಡ ನಿರ್ಧಾರ ಇಂದು ನನ್ನನ್ನು ಬಹಳ ಉತ್ತುಂಗದಲ್ಲಿ ನಿಲ್ಲಿಸಿದೆ. ಓದಿದ್ದು ಪಿಯುಸಿ ಆದರೂ ಕಲಿತದ್ದು ಅಪಾರ,” ಇದು ಅನೂಸ್‌ರವರ ಮಾತು.
ಬೆಂಗಳೂರಿನ ಮಲ್ಲೇಶ್ವರದ ಮುಖ್ಯ ರಸ್ತೆಯಲ್ಲಿರುವ `ಅನೂಸ್’ ಎಲ್ಲರಿಗೂ ಚಿರಪರಿಚಿತ. ಮದುವೆ ಹೆಣ್ಣಿನ ಅಲಂಕಾರಕ್ಕೆ ತೆರಳಿದರೆ ಅಲ್ಲೇ 5-6 ಜನ ಬುಕ್ ಮಾಡಿರ್ತಾರೆ. ಅದಂತೂ ಖಡಾಖಂಡಿತ. ಇವರ ಮೇಕಪ್ ಟಚ್‌ನಲ್ಲಿ ಮದುಮಗಳು ಮತ್ತಷ್ಟು ಸುಂದರವಾಗಿ ಮುದ್ದಾಗಿ ಕಾಣುವುದಂತೂ ಗ್ಯಾರಂಟಿ. ಇದಕ್ಕೆಲ್ಲ ಇವರ ಅನುಭವವೇ ಕಾರಣ. 1200ಕ್ಕೂ ಅಧಿಕ ವಧುಗಳಿಗೆ ಅಲಂಕಾರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಈಗ ಚಳಿಗಾಲ ಮುಗಿದು ಬೇಸಿಗೆ ಪ್ರಾರಂಭವಾಗಿದೆ. ಎಳ್ಳು ತಿನ್ನುತ್ತಾ, ಎಳ್ಳೆಣ್ಣೆ ಹಚ್ಚಿಕೊಳ್ಳುತ್ತ ಸ್ಕಿನ್‌ನ್ನು ಕಾಪಾಡಿಕೊಂಡ ಕಾಲ ಮುಗಿದಿದೆ. ಸದಾ ಮೊಗದಲ್ಲಿ ಜಿಡ್ಡು ಮನೆ ಮಾಡಿಕೊಂಡು ಸಾಕಾಗಿದೆ. ಈಗ ನಮ್ಮ ತ್ವಚೆಯ ರಕ್ಷಣೆ ಹಾಗೂ ಕೇಶದ ರಕ್ಷಣೆಯನ್ನು ಹೇಗೆ ಕಾಪಾಡಿಕೊಳ್ಳುವುದು ಎಂದು ಮುಂದಿನ ಟಿಪ್ಸ್ ಗಳಲ್ಲಿ ತಿಳಿಯೋಣ. ಸುಸಜ್ಜಿತ ಪಾರ್ಲರ್, ಆತ್ಮೀಯರಾಗಿ ಬಂದವರನ್ನು ಕಾಣುವ ಶಿಲ್ಪಾ, ಅರುಣ, ಮೇರಿ, ಅಶ್ವಿನಿ, ಸಾರಿಕಾರಂತಹ ಸ್ಟಾಫ್ ಇವರ ಬಳಿ ಇದೆ. ಆಂಟಿ, ಅಕ್ಕಾ, ಮೇಡಂ ಎನ್ನುತ್ತ ಎಲ್ಲರನ್ನೂ ಉಪಚರಿಸುತ್ತ ಬಂದವರಿಗೆ ಇಷ್ಟವಾಗುವಂತೆ ಅವರ ಸೇವೆ ಮಾಡುತ್ತಾರೆ.
ಒಳ್ಳೆಯ ಟ್ರೇನಿಂಗ್ ನೀಡುವಲ್ಲಿ ಪಾರ್ಲರ್‌ನ ಓನರ್ ಅನುರವರ ಪರಿಶ್ರಮ ಅಪಾರ. 18 ವರ್ಷದಿಂದ ಇಂದಿನವರೆವಿಗೂ ಇವರ ಕಸ್ಟಮರ್ಸ್ ಕೆಲವರು ಇಂದಿಗೂ ಇವರಲ್ಲಿಗೇ ಬರುತ್ತಾರೆ. ಅವರಲ್ಲೊಬ್ಬರು ರತ್ನಾ ಆಂಟಿ. ಅವರ ಕುಟುಂಬಕ್ಕೆಲ್ಲ ಪರ್ಮನೆಂಟ್ ಬ್ಯೂಟೀಷಿಯನ್ ಇವರೇ. ಇವರ ಸೇವೆ, ಸ್ನೇಹಪರ ವರ್ತನೆ, ಆತ್ಮೀಯತೆ ನಮಗೆ ಇಷ್ಟವಾಗಿದೆ ಹಾಗಾಗಿ ನಾವು ಇವರನ್ನು ಬಿಟ್ಟಿಲ್ಲ ಎನ್ನುತ್ತಾರೆ. ಇವರಂತೆ ಮಂಜುಳಾ, ಮಂದಾರಾ, ಗೀತಾ ಹೀಗೆ ಇವರ ಲಿಸ್ಟ್ ಬೆಳೆಯುತ್ತ ಸಾಗುತ್ತೆ.
ಇದಲ್ಲದೆ ಅನುರವರು ಮದುವೆ ಸಮಾರಂಭಕ್ಕೆ ಬೇಕಾದ ಅಲಂಕಾರ ಸಾಮಗ್ರಿಗಳನ್ನು ಮಾಡಿಕೊಡುತ್ತಾರೆ. ಗೌರಿ ಪೂಜೆ, ವಧು ಹಾಗೂ ವರನಿಗೆ ಸ್ವಾಗತ, ಸಪ್ತಪದಿ, ಭೂಮದೂಟ ಹೀಗೆ ಎಲ್ಲದಕ್ಕೂ ಇವರ ಬಳಿ ಅಲಂಕಾರಿಕ ಸಾಮಗ್ರಿಗಳು ಇರುತ್ತವೆ. ವರಲಕ್ಷ್ಮಿ ಹಾಗೂ ಗೌರಿ ಗಣೇಶ ಹಬ್ಬಗಳಲ್ಲೂ ದೇವರಿಗೆ ಅಲಂಕಾರ, ಮಂಟಪ ಅಲಂಕಾರ ಮಾಡಿಕೊಡುತ್ತಾರೆ. ಸೌಂದರ್ಯ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ.
ಕೆಲವು ಬಡ ಹೆಣ್ಣುಮಕ್ಕಳಿಗೆ ಉಚಿತವಾಗಿ ಕೋರ್ಸ್‌ನ್ನು ಹೇಳಿಕೊಟ್ಟು ಅವರಿಗೆ ದಾರಿ ತೋರಿದ್ದಾರೆ. ಮನೆಯಲ್ಲಿ ತಯಾರಿಸಿದ ಫೇಷಿಯಲ್ಸ್ ಉಪಯೋಗಿಸುವುದು ಇವರ ಒಂದು ವೈಶಿಷ್ಟ್ಯ. ಜೊತೆಗೆ ಹಲವಾರು ಉತ್ತಮ ಕಂಪನಿಗಳ, ಹರ್ಬಲ್ ಫೇಷಿಯಲ್ಸ್ ಸಹ ಮಾಡುತ್ತಾರೆ. ಹಾಲು, ರವೆ, ಫ್ರೂಟ್, ಪಲ್ಪ್ಸ್, ತರಕಾರಿ, ಬೆಣ್ಣೆ, ಸಕ್ಕರೆ ಉಪ್ಪು, ನಿಂಬೆ ಹೀಗೇ ಮನೆಯಲ್ಲೇ ಸಿಗುವ ಸಾಮಗ್ರಿಗಳಲ್ಲಿ ಸ್ಕಿನ್ ಟ್ರೀಟ್‌ಮೆಂಟ್ ನೀಡುತ್ತಾರೆ. ಮದುಮಗಳ ಮೇಕಪ್‌ನಲ್ಲಿ ಸ್ಪೆಷಲಿಸ್ಟ್. ಸುಮಾರು 60ಕ್ಕೂ ಹೆಚ್ಚು ಬಗೆಯ ಕೇಶಾಲಂಕಾರ ಬಲ್ಲರು.
ಇದಲ್ಲದೆ ವಾಸವಿ ಲಲಿತ ಕಲಾ ಶಾಲೆಯಲ್ಲಿ ಸದಸ್ಯತ್ವ ಪಡೆದು ವಾಸವಿಗೆ ಜಡೆ ಹೆಣೆಯುವುದು, ಸೀರೆ ಉಡಿಸುವುದು ಮುಂತಾದ ದೇವತಾ ಕಾರ್ಯಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಗೈಡ್ಸ್ ನಲ್ಲಿದ್ದುಕೊಂಡು ತಿರುಪತಿಯಲ್ಲಿ ಸುಮಾರು 60 ದಿನಗಳಿಗೂ ಅಧಿಕವಾಗಿ ಸೇವೆ ಸಲ್ಲಿಸಿದ್ದಾರೆ. ಕೆಲವು ದಿನ ಲಯನೆಸ್ ಆಗಿಯೂ ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ.
ಕೆಲವು ಟಿಪ್ಸ್
ವೈಟ್ ಹೆಡ್ಸ್ : ಹಾಲಿನಿಂದ ಕ್ಲೆನ್ಸ್ ಮಾಡಬೇಕು. ಚಿರೋಟಿ ರವೆ/ಓಟ್ಸ್ನ್ನು ಹಾಲು/ನೀರಿನಲ್ಲಿ ಬೆರೆಸಿ ಆ ಜಾಗಕ್ಕೆ 5 ನಿಮಿಷ ಮಸಾಜ್ ಮಾಡಬೇಕು. ನಂತರ ಬಿಸಿಯಾದ ಟವೆಲ್‌ನಿಂದ ಆ ಭಾಗವನ್ನು ಒತ್ತಬೇಕು. ಆಗ ವೈಟ್ ಹೆಡ್ಸ್ ಟವೆಲಿಗೆ ಅಂಟಿಕೊಳ್ಳುತ್ತದೆ. ಕೊನೆಗೆ ಟರ್ಕಿ ಟವೆಲ್‌ನಿಂದ ಒತ್ತುತ್ತಾ ಹೋದರೆ ಉಳಿದವು ಬಂದುಬಿಡುತ್ತವೆ.
ನಮ್ಮ ಚರ್ಮ ಎಲ್ಲೆಲ್ಲಿ ಎಕ್ಸ್ ಪೋಸ್ ಆಗುತ್ತೋ ಆ ಜಾಗಗಳಿಗೆಲ್ಲ ಕ್ಲೆನ್ಸರ್‌ನಿಂದ ಸ್ವಚ್ಛ ಮಾಡಿ ನಂತರ ಅಕ್ಕಿಹಿಟ್ಟು + ಮಸೂರ್ ದಾಲ್ + ಬಟಾಣಿಹಿಟ್ಟು + ಟೊಮೇಟೊ ಜೂಸ್‌ನ ಮಿಶ್ರಣವನ್ನು ಹಚ್ಚಿ. ಒಣಗಿದ ಮೇಲೆ ಮತ್ತೆ ಒದ್ದೆ ಮಾಡಿ ವೃತ್ತಾಕಾರವಾಗಿ ಉಜ್ಜಿ ನಂತರ ತೊಳೆಯಿರಿ.
ಸಮ್ಮರ್‌ನಲ್ಲಿ ಮೇಕಪ್ ಮಾಡಿಕೊಳ್ಳುವಾಗ ಇಡೀ ಮುಖಕ್ಕೆ ಐಸ್ ಕ್ಯೂಬ್‌ನಿಂದ ಜೆಂಟಲ್ ಆಗಿ ರಬ್ ಮಾಡಿ, ಹಾಗೇ ಆರಲು ಬಿಡಿ. ನಂತರ ಮೇಕಪ್ ಮಾಡಿಕೊಳ್ಳುವಾಗ ವಾಟರ್ ಬೇಸ್ಡ್ ಫೌಂಡೇಶನ್ ಹಾಕಿ, ಕಾಂಪ್ಯಾಕ್ಟ್ ಬಳಸಿ ಮೇಕಪ್ ಮಾಡಿದಲ್ಲಿ ಅದು ಬಹಳ ಹೊತ್ತು ನಿಲ್ಲುತ್ತದೆ.
ಹೊರಗೆ ಹೋಗಿ ಬಂದಾಗ ಮನೆಯಲ್ಲಿ ಸದಾ ಸಿಗುವ ಹಾಲಿನಿಂದ ಕ್ಲೆನ್ಸ್ ಮಾಡಿಕೊಳ್ಳಬಹುದು.
ಜೇನುತುಪ್ಪ ಒಣಚರ್ಮದವರಿಗೆ ಬಹಳ ಒಳ್ಳೆಯದು. ಗ್ಲಿಸರಿನ್ + ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷದ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಬೇಕು.
ಒಳ್ಳೆಯ ಕೂದಲಿನ ಬಣ್ಣ ಬರಲು ಮೆಹಂದಿ + ಬೀಟ್ ರೂಟ್ ರಸ + ಕತ್ತಾ ಪೌಡರ್ (ಗ್ರಂದಿಗೆ ಅಂಗಡಿಯಲ್ಲಿ ಸಿಗುತ್ತೆ) ಬೆರೆಸಿ, ಇಡೀ ರಾತ್ರಿ ನೆನೆಸಿ ಬೆಳಗ್ಗೆ ಕೂದಲಿಗೆ ಹಚ್ಚಿಕೊಂಡರೆ ಒಳ್ಳೆಯ ಕಲರ್ ಗ್ಯಾರಂಟಿ.
ಡ್ರೈನೆಸ್ ತಡೆಗಟ್ಟಲು ಕಂಡೀಶನರ್‌ಗಳನ್ನು ಬಳಸಬಹುದು. ಮನೆಯಲ್ಲೇ ಮಾಡಿಕೊಳ್ಳಬಹುದಾದ ಕಂಡೀಶನರ್‌ಗಳು :
ಒಂದು ನಿಂಬೆಹಣ್ಣಿನ ರಸ/ ಒಂದು ಕಪ್ ಸ್ಟ್ರಾಂಗ್ ಟೀ ವಾಟರ್‌ನ್ನು ಅರ್ಧ ಬಕೆಟ್ ನೀರಿನಲ್ಲಿ ಕಲಸಿ. ಶ್ಯಾಂಪೂನಿಂದ ತಲೆ ತೊಳೆದು ನಂತರ ಕೊನೆಯಲ್ಲಿ ಇದರಿಂದ ಕೂದಲು ತೊಳೆದಲ್ಲಿ ಕೂದಲು ಸ್ಮೂತ್ ಆಗಿ ಮತ್ತು ಶೈನಿಂಗ್ ಆಗಿ ಇರುವುದು.
ಮೊಟ್ಟೆ ಕಂಡೀಶನರ್ : ಮೊಸರು + ಆಲ್ಮಂಡ್ ಆಯಿಲ್ + ಅರ್ಧ ನಿಂಬೆರಸ + ಮೊಟ್ಟೆಯ ಹಳದಿ ಭಾಗ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಶ್ಯಾಂಪೂ ಆದನಂತರ ಈ ಮಿಕ್ಸ್ ಚರ್‌ನ್ನು ಕೂದಲಿಗೆ ಚೆನ್ನಾಗಿ ಹಚ್ಚಿ. 10-15 ನಿಮಿಷದ ನಂತರ ನೀರಿನಿಂದ ಚೆನ್ನಾಗಿ ತೊಳೆಯಿರಿ.
4 ಬೆಟ್ಟದ ನೆಲ್ಲಿಕಾಯಿ, 2 ಟೇಬಲ್ ಸ್ಪೂನ್ ಹಾಲು, 1 ಹಿಡಿ ಮೆಹಂದಿ ಎಲೆಗಳು, ಎಲ್ಲವನ್ನೂ ರುಬ್ಬಿ ಪೇಸ್ಟ್ ತರಹ ಮಾಡಿ ತಲೆಯ ಬುಡಕ್ಕೆ ಹಚ್ಚಿ 20 ನಿಮಿಷಗಳ ನಂತರ ಚೆನ್ನಾಗಿ ನೀರಿನಿಂದ ತೊಳೆಯಿರಿ.
ವಾರಕ್ಕೆ 2 ಬಾರಿ ಎಣ್ಣೆಯ ಮಸಾಜ್ ಮಾಡುವುದರಿಂದಲೂ ಡ್ರೈನೆಸ್ ತಡೆಗಟ್ಟಬಹುದು.
ಹರಳೆಣ್ಣೆ + ಆಲಿವ್ ಆಯಿಲ್ + ಕೊಬ್ಬರಿ ಎಣ್ಣೆ ಈ ಮೂರನ್ನು ಸಮಪ್ರಮಾಣದಲ್ಲಿ ಮಿಕ್ಸ್ ಮಾಡಿ ರಾತ್ರಿ ಮಲಗುವ ಮುನ್ನ ಸುಮಾರು ಬೆಚ್ಚಗೆ ಮಾಡಿ ಅದನ್ನು ತಲೆಯ ಬುಡದಿಂದ ಕೂದಲ ತುದಿಯವರೆಗೆ ಹಚ್ಚಿ, ಬೆಳಗ್ಗೆ ಹಾಟ್ ಟವೆಲ್ ಸ್ಟೀಮ್ ನೀಡಿ, 15 ನಿಮಿಷದ ನಂತರ ಶೀಕಾಕಾಯಿ ಶ್ಯಾಂಪೂನಿಂದ ತಲೆಗೂದಲನ್ನು ತೊಳೆಯಿರಿ.
– ಸವಿತಾ ನಾಗೇಶ್