ಮದುಮಗಳ ಅಲಂಕಾರ ಆಗಬೇಕು. ಬ್ಯೂಟೀಷಿಯನ್‌ಗಾಗಿ ಕಾಯ್ತಾ ಇದ್ದಳು. ಎಷ್ಟು ಹೊತ್ತಾದರೂ ಬರಲಿಲ್ಲ. ಎಲ್ಲರಿಗೂ ಆತಂಕ. ಮದುಮಗಳು ಕಾಯ್ತಾ ಇದ್ದಳು. ಕಡೆಗೂ ಆಕೆ ಬಂದರು. ಎಲ್ಲರ ಮೊಗದಲ್ಲೂ ನಿರಾಳಭಾವ. ಹುಡುಗಿಗೆ ಕ್ಯಾಮರಾಮನ್‌ಅರ್ಜೆಂಟ್‌ ಮಾಡ್ತಿದ್ದು ಹುಡುಗನೂ ರೆಡಿ ಆಗಿದ್ದು ಆಗಿತ್ತು. ಇನ್ನೊಂದೆಡೆಗೆ ಹೋಗಬೇಕಾದ್ದರಿಂದ ಬಂದ ಆ ಬ್ಯೂಟೀಷಿಯನ್‌ತರಾತುರಿಯಲ್ಲಿ ತನ್ನ ಕೆಲಸ ಪೂರೈಸಿ ಹೊರಟೇಬಿಟ್ಟರು. ಮೇಕಪ್‌ ಸುಮಾರಾಗಿದೆ ಎಂದು ಯಾರೋ ಸಣ್ಣ ದನಿಯಲ್ಲಿ ಹೇಳಿದ್ದು, ನಂತರ ಹುಡುಗಿ ಮೂಡ್‌ ಆಫ್‌ ಆಗಿದ್ದು, ನಂತರ ಫೋಟೋ ನೋಡಲೂ ಸಹ ಹುಡುಗಿ ನಿರಾಕರಿಸಿದ್ದು ನಡೆಯಿತು.

ರಿಸೆಪ್ಷನ್‌ ಆ ಹುಡುಗಿಯ ಬಾಳಿನಲ್ಲಿ ಒಂದು ಕಹಿ ಘಟನೆಯಾಗಿ ಉಳಿಯಿತು. ಬೆಳಗ್ಗಿನಿಂದ ಇದ್ದ ಆ ಹುರುಪು ಹುಮ್ಮಸ್ಸು ರಾತ್ರಿಯ ಹೊತ್ತಿಗೆ ಇರಲಿಲ್ಲ. ಇಂತಹ ಘಟನೆಗಳು ನಡೆದಾಗ, ಮನೆಯವರಿಗೆ ಬಂದವರನ್ನು ಉಪಚರಿಸುವುದೋ ಅಥವಾ ಹುಡುಗಿಗೆ ಸಾಂತ್ವನ ಹೇಳುವುದೋ ತಿಳಿಯದಾಗುತ್ತದೆ. ಆದರೆ ಇವೆಲ್ಲಕ್ಕೂ ಮೀರಿ ಸಿಂಪಲ್ ಅಂಡ್‌ ಬ್ಯೂಟಿಫುಲ್ ಆಗಿಸುವ ಉತ್ತಮ ಬ್ಯೂಟೀಷಿಯನ್‌ ಹಾಗೂ ಸೌಂದರ್ಯತಜ್ಞೆ ಒಬ್ಬರು ನಮ್ಮಲ್ಲೇ ಇದ್ದಾರೆ, ಅವರೇ ಅನುರಾಧಾ ನಾರಾಯಣಮೂರ್ತಿ.

DSC03719

ಹೆಣ್ಣು ಸೌಂದರ್ಯಪ್ರಿಯಳು. ಅಲಂಕಾರ ಯಾರಿಗೆ ಇಷ್ಟ ಇಲ್ಲ ಹೇಳಿ. ದಿನಕ್ಕೊಂದು ಮೇಕಪ್‌, ದಿನಕ್ಕೊಂದು ಹೇರ್‌ಸ್ಟೈಲ್‌, ನೇಲ್ ಆರ್ಟ್‌ ಹೀಗೆ ಇವತ್ತಿನ ಟ್ರೆಂಡ್‌ ಬಹಳಾನೇ ಛೇಂಜ್‌ ಆಗ್ತಿದೆ. ಹಿಂದೆಲ್ಲ ಹಣೆಗೆ ಶಿಂಗಾರ್‌ ಒಂದಿದ್ದರೆ ಸಾಕಾಗಿತ್ತು. ಈಗ ಹಾಗಲ್ಲ, ಫುಟ್‌ ಪಾತ್‌ನಿಂದ ಹಿಡಿದು ಸುಸಜ್ಜಿತ ಹವಾ ನಿಯಂತ್ರಿತ ಅಂಗಡಿಗಳವರೆವಿಗೂ ಅಲಂಕಾರ ಸಾಮಗ್ರಿಗಳು ಎಲ್ಲ ತೆರನಾದ ಮಹಿಳೆಯರಿಗೆ ದೊರಕುವ ಕಾಲ ಬಂದಿದೆ.

ಹಾದಿಗೊಂದು ಬೀದಿಗೊಂದು ಪಾರ್ಲರ್‌ಗಳು.... ಅಲ್ಲ ಅಲ್ಲ ಸ್ಪಾಗಳು! ಮಹಿಳೆ ಓವರ್‌ ಸ್ಮಾರ್ಟ್‌ ಆಗ್ತಿದ್ದಾಳೋ ಅಥವಾ ಪ್ರತಿಯೊಂದು ವ್ಯವಹಾರಿಕ ಆಗುತ್ತಿದೆಯೋ ತಿಳಿಯದಷ್ಟು ಗೊಂದಲಮಯವಾಗಿದೆ. ನಾಟಿ ಔಷಧಿ, ಆಯುರ್ವೇದಗಳೂ ಏನೂ ಹಿಂದೆ ಬಿದ್ದಿಲ್ಲ. ಅವುಗಳೂ ಪೈಪೋಟಿಯಲ್ಲಿ ಸಾಗುತ್ತಿವೆ.

ಆ ನಿಟ್ಟಿನಲ್ಲಿ ಇಲ್ಲೊಂದು ಸೌಂದರ್ಯ ಸದನ ಆತ್ಮೀಯವಾಗಿ ಕಾಣುವ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಅನೂಸ್‌ ಪಾರ್ಲರ್‌ ಕೆಲಸ ನಿರ್ವಹಿಸುತ್ತಿದೆ. ಬಂದವರನ್ನು ಆತ್ಮೀಯವಾಗಿ ಕಾಣುವ ಶುದ್ಧತೆಯನ್ನು ಕಾಪಾಡುತ್ತ ಹರ್ಬಲ್ ಗಳಿಂದಲೇ ಸೌಂದರ್ಯ ಹೆಚ್ಚಿಸುವ ಅನೂಸ್‌ನ ಅನುರಾಧಾ ನಾರಾಯಣಮೂರ್ತಿಯವರ ಬಗ್ಗೆ ಹಾಗೂ ಚರ್ಮ ಮತ್ತು ಕೂದಲಿನ ಆರೈಕೆಗಳ ಬಗ್ಗೆ ಟಿಪ್ಸ್ ಗಳು ಇಲ್ಲಿವೆ.

``ಈಗ್ಗೆ 18 ವರ್ಷಗಳ ಕೆಳಗೆ ಪಿಯುಸಿ ಓದುತ್ತಿದ್ದ ವೇಳೆ. ಒಂದು ಶುಭ ಸಮಾರಂಭಕ್ಕೆ ಹೋಗಿದ್ದಾಗ ಅಲ್ಲಿ ಒಬ್ಬ ಮಹಿಳೆ ಮಾಡುತ್ತಿದ್ದ ಮೇಕಪ್‌ ನೋಡಿ ಇಷ್ಟು ಕೆಟ್ಟದಾಗಿಯೂ ಮೇಕಪ್‌ ಮಾಡಬಹುದೇ ಎಂದು ತಿಳಿದು ನಾನೂ ಏಕೆ ಈ ಬ್ಯೂಟಿಷಿಯನ್‌ಕೋರ್ಸ್‌ ಕಲಿಯಬಾರದು? ಮಹಿಳೆಯರಿಗೇಕೆ ಉತ್ತಮ ಸೇವೆ ನೀಡಬಾರದೆಂದು ಆಲೋಚಿಸಿದೆ. ಅಂದು ತೆಗೆದುಕೊಂಡ ನಿರ್ಧಾರ ಇಂದು ನನ್ನನ್ನು ಬಹಳ ಉತ್ತುಂಗದಲ್ಲಿ ನಿಲ್ಲಿಸಿದೆ. ಓದಿದ್ದು ಪಿಯುಸಿ ಆದರೂ ಕಲಿತದ್ದು ಅಪಾರ,'' ಇದು ಅನೂಸ್‌ರವರ ಮಾತು.

DSC03742

ಬೆಂಗಳೂರಿನ ಮಲ್ಲೇಶ್ವರದ ಮುಖ್ಯ ರಸ್ತೆಯಲ್ಲಿರುವ `ಅನೂಸ್‌' ಎಲ್ಲರಿಗೂ ಚಿರಪರಿಚಿತ. ಮದುವೆ ಹೆಣ್ಣಿನ ಅಲಂಕಾರಕ್ಕೆ ತೆರಳಿದರೆ ಅಲ್ಲೇ 5-6 ಜನ ಬುಕ್‌ ಮಾಡಿರ್ತಾರೆ. ಅದಂತೂ ಖಡಾಖಂಡಿತ. ಇವರ ಮೇಕಪ್‌ ಟಚ್‌ನಲ್ಲಿ ಮದುಮಗಳು ಮತ್ತಷ್ಟು ಸುಂದರವಾಗಿ ಮುದ್ದಾಗಿ ಕಾಣುವುದಂತೂ ಗ್ಯಾರಂಟಿ. ಇದಕ್ಕೆಲ್ಲ ಇವರ ಅನುಭವವೇ ಕಾರಣ. 1200ಕ್ಕೂ ಅಧಿಕ ವಧುಗಳಿಗೆ ಅಲಂಕಾರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ