ಆಕೆ ಇಂಡೋ ಯೂರೋಪಿಯನ್‌ ಚೇಂಬರ್‌ ಆಫ್‌ ಕಾಮರ್ಸ್‌ ಇಂಡಸ್ಟ್ರಿಯ ಸಂಸ್ಥಾಪಕಿ ಹಾಗೂ ದಕ್ಷ ನಿರ್ದೇಶಕಿ ಎನಿಸಿದ್ದಾರೆ. ಆಕೆ ಮಧ್ಯಪ್ರದೇಶದ ಪ್ರವಾಸೋದ್ಯಮ ಇಲಾಖೆಯ ಸ್ಟ್ಯಾಂಡಿಂಗ್‌ ಕಮಿಟಿಯ ಸದಸ್ಯರು ಹಾಗೂ ಎ. ಸಿಂಘಯಿ ಅಸೋಸಿಯೇಟ್‌ನ ಮುಖ್ಯಸ್ಥೆಯೂ ಆಗಿದ್ದಾರೆ. ಆಕೆ ತಮ್ಮ ಸ್ವಂತ ಸಾಮರ್ಥ್ಯದಿಂದ ಕಂಪನಿ ಸೆಕ್ರೆಟರಿಯ ಕೋರ್ಸ್‌ ಮುಗಿಸಿ, ವಿವಿಧ ಬಗೆಯ ಹಣಕಾಸು ವಿಭಾಗಗಳ ಅನುಭವ ಪಡೆದರು, ಅದನ್ನೇ ಆಧರಿಸಿ ಈಗ ಸಲಹಾಕಾರರಾಗಿದ್ದಾರೆ.

ತಮ್ಮ ತಂದೆ ಒಂದು ಗಂಭೀರ ಕಾಯಿಲೆಗೆ ತುತ್ತಾಗಿ ತೀರಿಕೊಂಡಾಗ, ಈಕೆಗಿನ್ನೂ 10 ವರ್ಷ ಅಷ್ಟೆ. ಆಕೆಯ ನಾಜೂಕು ಹೆಗಲಿಗೆ ಒಮ್ಮೆಲೇ ಹಿರಿಯ ಜವಾಬ್ದಾರಿ ಹೊರಿಸಲಾಯಿತು, ಮುಖ್ಯ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕಿತ್ತು. ಹೈಸ್ಕೂಲು ಮುಗಿಸಿದ್ದೇ ಕಾಲೇಜಿಗೆ ಸೇರಲು, ತಾವೇ ಟ್ಯೂಷನ್‌ ನೀಡಿ ಹಣ ಸಂಪಾದಿಸತೊಡಗಿದರು. ಕಂಪನಿ ಸೆಕ್ರೆಟರಿಯ ಕೋರ್ಸ್‌ಪೂರೈಸಿದ ತಕ್ಷಣ ಅನುರಾಧಾ ತಮ್ಮದೇ ಕೆಲಸ ಶುರು ಮಾಡಿದರು. ಒಂದು ಸಣ್ಣ ಕೋಣೆಯಲ್ಲಿ ಒಂದು ಬಾಡಿಗೆ ಕಂಪ್ಯೂಟರ್‌ಹಿಡಿದು ಕೆಲಸ ಆರಂಭಿಸಿದರು. 2002ರಲ್ಲಿ ಆಕೆ ಈ ಸಂಸ್ಥೆಯನ್ನು ಸ್ಥಾಪಿಸಿದರು. ಆರ್ಥಿಕ ಸ್ವಾವಲಂಬನೆ, ವಿತ್ತೀಯ ಮತ್ತು ಔದ್ಯೋಗಿಕ ವಿಕಾಸ ಹಾಗೂ ಸಾಮಾಜಿಕ, ಆರ್ಥಿಕ ಪ್ರಗತಿ ಸಾಧಿಸುವುದು ಮುಖ್ಯವಾಗಿತ್ತು.

ತುಂಬಿ ತುಳುಕುವ ಆತ್ಮವಿಶ್ವಾಸ

`ನನ್ನ ಹಿಂದೆ ಯಾವುದೇ ಗಾಡ್‌ ಫಾದರ್‌ ಅಥವಾ ಮಾರ್ಗದರ್ಶನದ ಕೈಗಳಿರಲಿಲ್ಲ. ಈ ಕಮರ್ಷಿಯಲ್ ಸಿಸ್ಟಮ್ ನ್ನು ಅರ್ಥೈಸಿಕೊಳ್ಳಲಿಕ್ಕೇ ಸುಮಾರು ವರ್ಷಗಳಾಯಿತು. ನಾನು ಹೋದ ಕಡೆಯೆಲ್ಲ ನನ್ನ ಪ್ರಸ್ತಾವನೆಗಳನ್ನು ತಿರಸ್ಕರಿಸಲಾಗುತ್ತಿತ್ತು. ನನ್ನ ಐಡಿಯಾಗಳನ್ನು ಯಾರೂ ಪುರಸ್ಕರಿಸುತ್ತಿರಲಿಲ್ಲ. ಜನ ಧಾರಾಳವಾಗಿ ನನ್ನನ್ನು ಟೀಕಾಸ್ತ್ರಗಳಿಂದ ಆಡಿಕೊಳ್ಳುತ್ತಿದ್ದರು. ಇದರಿಂದ ನಾನು ಹತಾಶಳಾಗಿ ಎದೆಗುಂದದೆ, ಪ್ರೋತ್ಸಾಹದ ನುಡಿಗಳಾಗಿ ಸ್ವೀಕರಿಸಿ ಮುನ್ನುಗ್ಗುತ್ತಿದ್ದೆ.'

ಕೆಲವು ವರ್ಷಗಳ ಶ್ರಮ ಅನುರಾಧಾ ಪಾಲಿಗೆ ಉತ್ತಮ ಫಲ ನೀಡತೊಡಗಿತು. ಆಕೆ ಈ ಸಂಸ್ಥೆ ಸ್ಥಾಪಿಸಿ, ಅದರ ಉದ್ದೇಶವನ್ನು ಜನಸಾಮಾನ್ಯರಿಗೆ, ಮುಖ್ಯವಾಗಿ ಇಂಡಸ್ಟ್ರಿ ಸೆಕ್ಟರ್‌ನಲ್ಲಿ ತೋರಿಸಿಕೊಟ್ಟಾಗ, ಜನ ಆಕೆಯ ಕೆಲಸ ಕಾರ್ಯಗಳತ್ತ ಮೆಚ್ಚುಗೆ ಸೂಚಿಸತೊಡಗಿದರು.

ತಮ್ಮನ್ನು ತಾವು ಸ್ಥಾಪಿಸಿಕೊಂಡು ಒಂದು ಪ್ರತ್ಯೇಕ ಐಡೆಂಟಿಟಿ ತಂದುಕೊಂಡ ನಂತರ ಸಹ ಅನುರಾಧಾ ಸುಮ್ಮನೆ ಕೂರಲಿಲ್ಲ. ಆಕೆಗೆ ಮಹಿಳೆಯರ ಸ್ವಾಭಿಮಾನ ಹಾಗೂ ಅವರಿಗೆ ಸಲ್ಲಬೇಕಾದ ಗೌರವಾದರಗಳ ಕಳಕಳಿ ಅಪಾರವಾಗಿತ್ತು. ಈ ನಿಟ್ಟಿನಲ್ಲಿ ಆಕೆ `ಪರ್ಪಲ್ ಮಾರ್ಚ್‌' ಅಭಿಯಾನವನ್ನು ಆರಂಭಿಸಿದರು. ಆಕೆ ಹೇಳುವುದೆಂದರೆ ಈ ಸಂಘಟನೆಯ ಮುಖ್ಯ ವೈಶಿಷ್ಟ್ಯವೆಂದರೆ, ಇದರಲ್ಲಿ ಹೆಂಗಸರು ಹಾಗೂ ಗಂಡಸರು ಇಬ್ಬರನ್ನೂ ಸೇರಿಸಿಕೊಳ್ಳಲಾಗುವುದು. ಒಟ್ಟಾರೆ ಮುಖ್ಯ ಉದ್ದೇಶ ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ಗೌರವಾನ್ವಿತ ಸ್ಥಾನ ದೊರಕಿಸಿಕೊಡುವುದು.

ಇಲ್ಲಿಯವರೆಗೆ ಸುಮಾರು 8500 ಮಂದಿಗೆ, (ಇವರಲ್ಲಿ 5225 ಮಹಿಳೆಯರು) ಅನುರಾಧಾ ಈಗಾಗಲೇ ತರಬೇತಿ ನೀಡಿದ್ದಾರೆ. ಟೂರಿಸಂ, ಹ್ಯಾಂಡಿ ಕ್ರಾಫ್ಟ್, ಗಾರ್ಮೆಂಟ್ಸ್ ಹಾಗೂ ಕೃಷಿಗೆ ಸಂಬಂಧಿಸಿದಂತೆ ಈಕೆ ಉದ್ಯೋಗ ಪ್ರಾಪ್ತಿಗೆ ಅನುಕೂಲವಾಗುವಂತೆ ತರಬೇತಿ ಕೊಡಿಸುತ್ತಾರೆ, ಅಭ್ಯರ್ಥಿಗಳಿಗೆ ಇದು ದೀರ್ಘಕಾಲೀನ ಲಾಭ ತಂದುಕೊಡುತ್ತದೆ.  ಹೀಗಾಗಿ ಅನುರಾಧಾ ಸಿಂಘಯಿ ವರ್ಲ್ಡ್ ರಿಯಲ್ ವುಮನ್‌ ಎಂಬುದರಲ್ಲಿ ಎರಡು ಮಾತಿಲ್ಲ, ಏಕೆಂದರೆ ಆ ಪ್ರಮಾಣದಲ್ಲಿ ಆತ್ಮವಿಶ್ವಾಸ ತುಂಬಿದೆ. ಆಕೆ ಸದಾ ಸಕಾರಾತ್ಮಕ ಹಾಗೂ ಅಭಿವೃದ್ಧಿಯ ಕುರಿತಾದ ಮಾತುಗಳನ್ನೇ ಆಡುತ್ತಾರೆ ಹಾಗೂ ಅದಕ್ಕಾಗಿ ಅಹರ್ನಿಶಿ ವಿವಿಧ ಮಾರ್ಗಗಳನ್ನು ಅನ್ವೇಷಿಸುತ್ತಿರುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ