ಖ್ಯಾತ ಕೊರಿಯೋಗ್ರಾಫರ್‌ ಫರಾ ಖಾನ್‌ರನ್ನು ಒಂದು ರಿಯಾಲಿಟಿ ಶೋನ ಸಂದರ್ಭದಲ್ಲಿ ಮಗುವೊಂದು ಆಂಟಿ ಎಂದು ಕರೆದಾಗ ಅವರು ಕೂಡಲೇ ಪ್ಲೀಸ್‌, ಡೋಂಟ್‌ ಕಾಲ್ ‌ಮಿ ಆಂಟಿ. ನಾನು 3 ಮಕ್ಕಳ ತಾಯಿ ಒಪ್ಪುತ್ತೇನೆ. ನೀನು ನನ್ನನ್ನು ಆಂಟಿ ಎಂದು ಕರೆಯುವಷ್ಟು ನನಗೆ ವಯಸ್ಸಾಗಿಲ್ಲ. ನನ್ನನ್ನು ಅಕ್ಕ ಎಂದು ಕರೆದರೆ ಚೆನ್ನಾಗಿರುತ್ತದೆ ಎಂದರು.

3 ಮಕ್ಕಳ ತಾಯಿ ಅಕ್ಕ ಎಂದು ಕರೆಸಿಕೊಳ್ಳಲು ಇಷ್ಟಪಡುವುದು, ಅದೂ ಮಕ್ಕಳಿಂದ. ಇದಕ್ಕೆ ಏನು ಹೇಳುವುದು? ಹೆಚ್ಚುತ್ತಿರುವ ವಯಸ್ಸಿನ ಬಗ್ಗೆ ಇಂತಹ ಚಂಚಲತೆ ಸೆಲೆಬ್ರಿಟಿಗಳಲ್ಲಷ್ಟೇ ಅಲ್ಲ, ಸಾಮಾನ್ಯ ಮಹಿಳೆಯರಲ್ಲೂ ಕಂಡುಬರುತ್ತದೆ. ಅಂದಹಾಗೆ ಇದೊಂದು ಮನೋರೋಗವಾಗಿದ್ದು ಇದನ್ನು `ಆಂಟಿ ಸಿಂಡ್ರೋಮ್’ ಎನ್ನುತ್ತಾರೆ.

ವಯಸ್ಸನ್ನು ರಿಸರ್ವ್ ಗೇರ್‌ನಲ್ಲಿ ಹಾಕುವುದು ಅಸಾಧ್ಯ

ಮುಷ್ಠಿಯಲ್ಲಿ ಹಿಡಿದ ಮರಳಿನಂತೆ ವಯಸ್ಸು ನಿಧಾನವಾಗಿ ಜಾರುತ್ತಿರುತ್ತದೆ. ವಯಸ್ಸನ್ನು ರಿವರ್ಸ್ ಗೇರ್‌ನಲ್ಲಿ ಹಾಕುವಂತಹ ಯಾವ ಉಪಾಯವೂ ಇಲ್ಲ. ಇದು ಬದುಕಿನ ಸಿದ್ಧಾಂತವಾಗಿದ್ದು ಅದನ್ನು ಬದಲಿಸಲಾಗುವುದಿಲ್ಲ. ಆದರೂ ವಯಸ್ಸು ಹೆಚ್ಚುತ್ತಿರುವ ಫೋಬಿಯಾ ಮಹಿಳೆಯರನ್ನು ಹೆದರಿಸುತ್ತದೆ. ಈ ಫೋಬಿಯಾದಿಂದಾಗಿ ಆಂಟಿ ಸಿಂಡ್ರೋಮ್ ನ ಹಿಡಿತದಿಂದ ಪಾರಾಗಲು ಅವರು ಪ್ರಯಾಸಪಡುತ್ತಾರೆ. ಹೆಚ್ಚುತ್ತಿರುವ ವಯಸ್ಸನ್ನು ತಡೆಯುವುದು ನಮ್ಮ ಕೈಯಲ್ಲಿಲ್ಲ. ಆದರೆ ನಮ್ಮ ವ್ಯಕ್ತಿತ್ವವನ್ನು ನಿರಂತರವಾಗಿ ಉತ್ತಮವಾಗಿಸಿಕೊಂಡು ಬದುಕಿಗೆ ಸುಂದರ ಆಯಾಮ ಕೊಡುವುದು ನಮ್ಮ ಕೈಯಲ್ಲಿದೆ.

ಜನ ನಿಮ್ಮನ್ನು ಆಂಟಿ ಎಂದು ಕರೆಯುತ್ತಿದ್ದರೆ ಅವರ ಮೇಲೆ ಕೋಪಿಸಿಕೊಳ್ಳುವ ಬದಲು ಅವರಿಗೆ ಕೃತಜ್ಞತೆ ಹೇಳಿ. ಏಕೆಂದರೆ ನಿಮಗೆ ಅವರಿಂದಲೇ ತಿಳಿದಿದ್ದು ನೀವು ಆಂಟಿಯಂತಿದ್ದೀರೆಂದು. ಈಗ ನೀವು ಗಂಭೀರವಾಗಿ ನಿಮ್ಮನ್ನು ಗಮನಿಸಲು ಶುರು ಮಾಡಿ. ಫಿಟ್‌ ಅಂಡ್‌ ಫೈನ್‌ ಆಗಿ ಕಂಡುಬರಲು ಇಚ್ಛಿಸಿದರೂ ಅದಕ್ಕೆ ಪ್ರಯತ್ನ ಪಡದಿರುವ ಮಹಿಳೆಯರನ್ನೇ ಆಂಟಿ ಎಂದು ಕರೆಯುತ್ತಾರೆ. ನಿಮ್ಮ ಇಚ್ಛೆ ಹಾಗೂ ಕ್ರಿಯೆಯ ಮಧ್ಯೆ ಎಷ್ಟು ಅಂತರ ಹೆಚ್ಚುತ್ತದೋ ಸ್ಟ್ರೆಸ್‌ ಲೆವಲ್ ‌ಸಹ ಅಷ್ಟೇ ಹೆಚ್ಚಾಗುತ್ತದೆ ಮತ್ತು ಈ ಮನೋರೋಗ ಹೆಚ್ಚಾಗುತ್ತದೆ.

ಫಿಟ್‌ನೆಸ್‌ ಕ್ರೇಝ್

ವರ್ಷ ದಾಟಿದ್ದರೂ ಕೆಲವು ಮಹಿಳೆಯರು ಫಿಟ್‌ ಅಂಡ್‌ ಫೈನ್ ಆಗಿ ಕಾಣುತ್ತಾರೆ. ಅವರನ್ನು ಕಂಡು ಎಲ್ಲರಿಗೂ ಅಸೂಯೆಯಾಗುತ್ತದೆ. ಸೌಂದರ್ಯದ ಆಧಾರ ಸ್ತ್ರೀತ್ವವೇ ಎಂದು ಒಂದು ಸಂಶೋಧನೆಯಿಂದ ತಿಳಿದುಬಂದಿದೆ. ವಯಸ್ಸು ಎಷ್ಟೇ ಹೆಚ್ಚಾಗಲಿ, ಸ್ತ್ರೀತ್ವ ಸೌಂದರ್ಯವನ್ನು ಯಾವಾಗಲೂ ಯೌವನಾಸ್ಥೆಯಲ್ಲಿಡುತ್ತದೆ. ನೀವು ಸಹಜವಾಗಿ ಸರಸತೆಯಿಂದ ಕೂಡಿದ್ದು, ಫಿಟ್‌ನೆಸ್‌ ಕ್ರೇಝಿ ಆಗಿದ್ದು ಸೌಂದರ್ಯದಲ್ಲಿ ಹೆಚ್ಚಳವನ್ನು ಕಾಣಬಹುದು.

ಮುಖ ಸುಂದರವಾಗಿದ್ದರೂ ನೀವು ಆಕರ್ಷಕವಾಗಿ ಕಾಣಿಸುತ್ತೀರೆಂದೇನಲ್ಲ. ಕಣ್ಣುಗಳು ಸರಿಯಾಗಿದ್ದರೂ ಮುಖದಲ್ಲಿ ಕಠೋರತೆ ಇದ್ದರೆ ಸ್ತ್ರೀತ್ವದ ಕೋಮಲತೆಗೆ ಗ್ರಹಣ ಹಿಡಿದಂತಾಗುತ್ತದೆ. ಬಾಡಿ ಲ್ಯಾಂಗ್ವೇಜ್‌ ಮತ್ತು ಫಿಟ್‌ನೆಸ್‌ ಕ್ರೇಝಿ ಆಗಿರುವುದರ ಜೊತೆಗೆ ನಿಮ್ಮ ಡ್ರೆಸ್‌ ನಿಮ್ಮ ವಯಸ್ಸು ಹಾಗೂ ನಿಮ್ಮ ಮೇಕಪ್‌ಗೆ ಅನುಗುಣವಾಗಿರಬೇಕು.

ವಯಸ್ಸನ್ನು ಕಡಿಮೆ ಹೇಳಿ ಡ್ರೆಸ್‌ ಹಾಗೂ ಸ್ಟೈಲ್‌ನಲ್ಲಿ ಚಿಕ್ಕ ವಯಸ್ಸಿನ ಫ್ಯಾಷನ್‌ಗೆ ಮೊರೆ ಹೋದರೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಸುಂದರವಾಗಿ ಕಾಣುವ ಇಚ್ಛೆ ಗೀಳಾಗದಿರಲಿ

ವೇಗವಾಗಿ ಹೆಚ್ಚುತ್ತಿರುವ ಬ್ಯೂಟಿ ಬಿಸ್‌ನೆಸ್‌ ಮತ್ತು ಮೀಡಿಯಾ ಇಂಡಸ್ಟ್ರಿ ಸಾಮಾನ್ಯರವರೆಗೆ ತಲುಪಿಸುತ್ತಿರುವ ಗ್ಲಾಮರ್‌ ವರ್ಲ್ಡ್ ನ ಹೇಳಿಕೆಯಂತೆ ಮಹಿಳೆಯರಲ್ಲಿ ಸೌಂದರ್ಯದ ಬಗ್ಗೆ ಆಸಕ್ತಿ ಹೆಚ್ಚಾಗಿದೆ. ಜನ ಸಣ್ಣ ಪರದೆಯ ಹಾಗೂ ದೊಡ್ಡ ಪರದೆಯ ಸ್ಟಾರ್ ಗಳೊಂದಿಗೆ ತಮ್ಮನ್ನು ಹೋಲಿಸಿಕೊಳ್ಳುತ್ತಾರೆ. ಫಿಟ್‌ ಅಂಡ್‌ ಫೈನ್‌ ಆಗಿ ಕಾಣಲು (ಆಗಲು ಅಲ್ಲ) ಉತ್ಸಾಹಿತರಾಗಿದ್ದಾರೆ. ಸುಂದರವಾಗಿ ಕಾಣುವ ಇಚ್ಛೆಯನ್ನು ಪ್ರಬಲಗೊಳಿಸಿ ಅದನ್ನು ಪೂರೈಸಿಕೊಳ್ಳಲು ಪ್ರಯತ್ನಿಸಿ. ಆದರೆ ಇದನ್ನೊಂದು ಗೀಳಾಗಿ ಮಾಡಿಕೊಳ್ಳಬೇಡಿ. ಪರ್ಸನಾಲಿಟಿ ಗ್ರೂಮಿಂಗ್‌ ಆಸೆಯೇನೋ ಸರಿ. ಆದರೆ ಪ್ರಾಕೃತಿಕ ವಾಸ್ತತೆಯನ್ನು ಮರೆಮಾಚುವ ಗೀಳು ಸರಿಯಲ್ಲ. ಸತ್ಯವನ್ನು ಮುಚ್ಚಿಡುವ ಭರದಲ್ಲಿ ನಿಮ್ಮ ವಯಸ್ಸಿನ ಬಗ್ಗೆ ಸುಳ್ಳು ಹೇಳುವ ಅಭ್ಯಾಸ ಉಂಟಾಗುತ್ತದೆ. ಜನ ಆಂಟಿ ಎಂದು ಕರೆಯತೊಡಗಿದಾಗ ಮನೋರೋಗ ಶುರುವಾಗುತ್ತದೆ.

ಬದಲಾವಣೆಯನ್ನು ಸ್ವೀಕರಿಸಿ

ಜೀವನದಲ್ಲಿ ತಿರಸ್ಕಾರ ಅನುಭವಿಸಿರುವ ಹಾಗೂ ಕೀಳರಿಮೆ ಹೊಂದಿರುವ ಮಹಿಳೆಯರಲ್ಲಿ ವಯಸ್ಸು ಹೆಚ್ಚಾಗುತ್ತಿರುವ ಒತ್ತಡ ಇರುತ್ತದೆ. ಆತ್ಮವಿಶ್ವಾಸದ ಕೊರತೆ ಇರುತ್ತದೆ. ನಿಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಮತ್ತು ಸೌಂದರ್ಯಕ್ಕಾಗಿ ಬದಲಾವಣೆಯನ್ನು ಸಹಜವಾಗಿ ಸ್ವೀಕರಿಸಿ.

ಸೌಂದರ್ಯ ನಿಮ್ಮ ವರ್ತನೆಯಲ್ಲಿರುತ್ತದೆ. ನಿಮ್ಮ ವಯಸ್ಸಿಗೂ ಇದಕ್ಕೂ ವಿಶೇಷ ಸಂಬಂಧವಿಲ್ಲ. ಪರ್ಸನಾಲಿಟಿ ವೈಬ್ರೆಂಟ್ ಆಗಿದ್ದು, ಆಟಿಟ್ಯೂಡ್‌ ಉತ್ಸಾಹಭರಿತವಾಗಿದ್ದರೆ ನೀವು ಹೆಚ್ಚು ವಯಸ್ಸಿನವರಾಗಿದ್ದೂ ಆಕರ್ಷಕರಾಗಿರುತ್ತೀರಿ. ವಯಸ್ಸು ಹೆಚ್ಚಾಗಿ ಮೊದಲಿನಂತೆ ಕಾಣುತ್ತಿಲ್ಲವೆಂದು ಮನದಲ್ಲಿ ದುಃಖಿಸುತ್ತಿದ್ದರೆ ಸಹಜ ಸೌಂದರ್ಯ ಮರೆಯಾಗುತ್ತದೆ. ಕೂದಲಿಗೆ ಬಣ್ಣ ಹಚ್ಚುವುದು, ದುಬಾರಿ ಸೌಂದರ್ಯ ಪ್ರಸಾಧನಗಳನ್ನು ಬಳಸುವುದು ಮತ್ತು ಸ್ಪೆಷಲ್ ಸ್ಕಿನ್‌ ಟ್ರೀಟ್‌ಮೆಂಟ್‌ ಪಡೆಯುವುದರಿಂದ ಏನೂ ಉಪಯೋಗವಿಲ್ಲ. ಸೌಂದರ್ಯ ನಿಮ್ಮ ದೇಹದಿಂದಲ್ಲ, ಮನಸ್ಸಿನಿಂದ ಚಿಗುರೊಡೆಯಬೇಕು. ಮುಖನ್ನು ಸಹಜವಾಗಿ ಶಾಂತವಾಗಿಟ್ಟುಕೊಂಡು ಮುಗುಳ್ನಗೆ ಹೊರಸೂಸಿ. ನಿಮಗೆ ನೀವು ಅಗಣಿತ ಪ್ರೀತಿ ವ್ಯಕ್ತಪಡಿಸಿ. ಇನ್ನೊಬ್ಬರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳುವುದನ್ನು ನಿಲ್ಲಿಸಿ. ಪಾರ್ಲರ್‌ಗೆ, ಜಿಮ್ ಗೆ ಹೋಗಿ. ಆದರೆ ನಿಮ್ಮ ಗ್ರೂಮಿಂಗ್‌ನ್ನು ನಿರ್ಲಕ್ಷಿಸಬೇಡಿ.

– ಸುಧಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ