ART ಎಂಬುದು ವೈದ್ಯಕೀಯವಾಗಿ `ಅಸಿಸ್ಟೆಡ್‌ ರೀಪ್ರೊಡಕ್ಟಿವ್ ಟೆಕ್ನಿಕ್‌’ ವಿಧಾನವಾಗಿದ್ದು, ಇಂದು ಇದು ಅಪರಿಚಿತ ಚಿಕಿತ್ಸೆಯಾಗಿ ಉಳಿದಿಲ್ಲ. ಬಂಜೆತನದ ನಿವಾರಣೆಗಾಗಿ ಇಂದಿನ ದಿನಗಳಲ್ಲಿ ಖ, IVFಗಿಂತ ಇದು ಮಿಗಿಲಾದುದು. ವಿಶ್ವಾದ್ಯಂತ ಸಾವಿರಾರು ಸಂತಾನಹೀನ ದಂಪತಿಗಳು ಈ ವಿಧಾನದ ಮೂಲಕ ಮಕ್ಕಳನ್ನು ಪಡೆದಿದ್ದಾರೆ.

ನಗರಗಳಲ್ಲಿ ದಿನೇದಿನೇ ಹೆಚ್ಚುತ್ತಿರುವ ವಾಯು/ಜಲ ಮಾಲಿನ್ಯಗಳು, ಆಹಾರದಲ್ಲಿ ಬೆರೆತುಕೊಳ್ಳುವ ರಾಸಾಯನಿಕ ಪೆಸ್ಟಿಸೈಡ್ ಉಳಿಕೆಗಳು ಆಧುನಿಕ ಜೀವನಶೈಲಿಯಿಂದಾಗಿ ಹೆಚ್ಚು ಮಾನಸಿಕ ಒತ್ತಡ, ಉದ್ವಿಗ್ನತೆಗಳು, ಬಹಳ ತಡವಾದ ಮದುವೆಗಳು ಇತ್ಯಾದಿ ನಾನಾ ಕಾರಣಗಳು ಸೇರಿ, ವಿಶ್ವಾದ್ಯಂತ ಶೇ.20ರಷ್ಟು ಬಂಜೆತನ ಹೆಚ್ಚುತ್ತಿದೆ ಎಂದು ಸಮೀಕ್ಷೆಗಳಿಂದ ತಿಳಿದುಬಂದಿದೆ. ದುಬಾರಿ ಚಿಕಿತ್ಸೆಗಳಿಗೆ ಶರಣಾಗಿ ಸಂತಾನಹೀನ ದಂಪತಿಗಳು ತಮ್ಮ ಕನಸಿನ ಕೂಸನ್ನು ನನಸಾಗಿಸಲು ಸತತ ಶ್ರಮಿಸುತ್ತಿದ್ದಾರೆ.  ದಕ್ಷಿಣ ಭಾರತದಲ್ಲಿ ಮುಖ್ಯವಾಗಿ ಬೆಂಗಳೂರು, ಹೈದರಾಬಾದ್‌, ಚೆನ್ನೈ ಮುಂತಾದ ಕಡೆ ಇಂಥ ಹಲವಾರು ಕೇಂದ್ರಗಳು ಹರಡಿದ್ದು, ಹಲವು ಗೈನಕಾಲಜಿಕ್‌ ಸೆಟ್‌ ಅಪ್ಸ್, ನರ್ಸಿಂಗ್‌ ಹೋಮ್ ಗಳು ಈ ದಿಶೆಯಲ್ಲಿ ಕಾರ್ಯೋನ್ಮುಖವಾಗಿ ಆಧುನಿಕ ಚಿಕಿತ್ಸಾ ವಿಧಾನಗಳ ಮೂಲಕ ಸಂತಾನಹೀನ ದಂಪತಿಗಳ ಆಶಾಕಿರಣ ಎನಿಸಿವೆ.

ಮುಖ್ಯವಾಗಿ ಹೈದರಾಬಾದ್‌ನ ಫರ್ಟಿಲಿಟಿ ಕೇಂದ್ರಗಳು ಈ ನಿಟ್ಟಿನಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಿವೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ IVF ಚಿಕಿತ್ಸೆಗಳಲ್ಲಿ ಕೇbಲ ಶೇ.30 ಮಾತ್ರ ಯಶಸ್ವಿ ಎನಿಸಿದ್ದರೆ, ಹೈದರಾಬಾದ್‌ನಲ್ಲಿ ಅದು ಶೇ.60 ರಷ್ಟು ಯಶಸ್ಸು ಕಂಡಿದೆ. ಇವು ಟೆಸ್ಟ್ ಟ್ಯೂಬ್‌ ಬೇಬಿ ವಿಧಾನಗಳೆಂದು ಜನಪ್ರಿಯಾಗಿವೆ, ಇನ್ನಷ್ಟು ಹೊಸ ಹೊಸ IVF ವಿಧಾನಗಳು ಬೆಳಕು ಕಾಣುತ್ತಿವೆ.

photo-3

ಡಾ. ಪದ್ಮಜಾ ಸರೋಗೆಸಿ ಕೇಂದ್ರ ಈ ನಿಟ್ಟಿನಲ್ಲಿ ಅನುಪಮ ಸೇವೆ ಸಲ್ಲಿಸುತ್ತಿದೆ. ಕನಿಷ್ಠ ಒಂದು ಆರೋಗ್ಯಕರ ಮಗು ಹೆತ್ತಿರುವ 25-30 ವರ್ಷದೊಳಗಿನ ಬಾಡಿಗೆ ತಾಯಂದಿರನ್ನು (ಸರೋಗೇಟ್‌ ಮದರ್ಸ್‌) ಆರಿಸಿಕೊಂಡು ಅವರ ಆರೋಗ್ಯದ ಪೂರ್ವೇತಿಹಾಸ ಪರಿಶೀಲಿಸಿ, ಎಲ್ಲಾ ವಿಧದಲ್ಲೂ ತೃಪ್ತಿಕರವೆನಿಸಿದ ನಂತರವೇ, ಈ ಆಸ್ಪತ್ರೆಯ ಬಳಿಯಲ್ಲೇ ಇರುವಂತೆ ವಸತಿ ಕಲ್ಪಿಸಿ, ಅವರಿಗೆ ಪೌಷ್ಟಿಕ ಆಹಾರ, ನಿಯಮಿತ ಆ್ಯಂಟೆನೆಟ್‌ ಚೆಕಪ್ಸ್ ಸ್ಕ್ಯಾನ್‌ ಇತ್ಯಾದಿಗಳನ್ನು ಒದಗಿಸಿ ಡೆಲಿವರಿ ಆಗುವವರೆಗೂ ಮುತುವರ್ಜಿಯಿಂದ ನೋಡಿಕೊಳ್ಳುತ್ತದೆ.

ಅಂಥ ಬಾಡಿಗೆ ತಾಯಂದಿರ ಕುಟುಂಬದವರು ಆಕೆಯನ್ನು ಅಲ್ಲೇ ಬಂದು ನೋಡಿಕೊಂಡು ಹೋಗಬಹುದು, ಆಕೆ ಮನೆಗೆ ಹೋಗುವಂತಿಲ್ಲ. ಇಂಥ ಪ್ರತಿ ಐವರಲ್ಲಿ ಮೂವರಾದರೂ ಯಶಸ್ವೀ ಇಂಪ್ಲ್ಯಾನ್‌ಟೇಷನ್‌ಗೆ ನೆರವಾಗುತ್ತಾರೆ. ಈ ಇಡೀ ಪ್ರಕ್ರಿಯೆ ಸಂತಾನಹೀನ ದಂಪತಿಗಳಿಗೆ ಕೈಗೆಟುಕುವ ದರದಲ್ಲಿ ಒದಗಿಸಲಾಗುತ್ತದೆ. ಇಂಥ ದಂಪತಿಗಳು ತಮಗೆ ಸಂಬಂಧಿಸಿದ ಸರೋಗೇಟ್‌ ಮದರ್‌ ಜೊತೆ ಮಾತುಕಥೆ ನಡೆಸಿ, ಊಟ ಮಾಡಿ, ದೈನಂದಿನ ವ್ಯವಹಾರದಲ್ಲಿ ತೊಡಗಿಕೊಂಡು ಮಾನಸಿಕ ಸಾಮೀಪ್ಯ, ಆತ್ಮೀಯ ನಿಕಟತೆ ಪಡೆಯಬಹುದು.

ಮಾಸದ ಮುಗುಳ್ನಗು, ಪ್ರಾಮಾಣಿಕತೆ, ವಚನಬದ್ಧತೆ ಇಲ್ಲಿನ ಸಿಬ್ಬಂದಿಯ ವ್ಯವಹಾರವಾಗಿದೆ. `ಸಂತಾನಹೀನ ದಂಪತಿಗಳ ಕನಸನ್ನು ನನಸಾಗಿಸುವುದೇ ನಮ್ಮ ಗುರಿ!’ ಎನ್ನುತ್ತಾರೆ ಈ ಕೇಂದ್ರದ ವ್ಯವಸ್ಥಾಪಕಿ ಡಾ. ಪದ್ಮಜಾ ದಿವಾಕರ್‌. ಅವರ 2 ಟೆಸ್ಟ್ ಟ್ಯೂಬ್‌ ಬೇಬಿ ಕೇಂದ್ರಗಳು ಹೈದರಾಬಾದ್‌ನ ಹಬೀಸ್‌ಗುಡ ಹಾಗೂ ಭಾನ್‌ಗೀರ್‌ಗಳಲ್ಲಿ ಹೆಸರುವಾಸಿಯಾಗಿವೆ. ನುರಿತ ಗೈನಕಾಲಜಿಸ್ಟ್ ಆದ ಆಕೆ ಇನ್‌ಫರ್ಟಿಲಿಟಿ ಮೆಡಿಸಿನ್‌ ಕ್ಷೇತ್ರದಲ್ಲಿ ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ದಿನಕ್ಕೆ 16 ತಾಸಿಗೂ ಹೆಚ್ಚು ದುಡಿಯುವ ಈಕೆ ರೋಗಿಗಳ ಆಶಾಕಿರಣ ಎನಿಸಿದ್ದಾರೆ. ಇವರ ಜೊತೆ 100 ಜನಕ್ಕೂ ಹೆಚ್ಚಿನ ನುರಿತ ಸಿಬ್ಬಂದಿ ಇದ್ದಾರೆ. `ಸರೋಗೆಸಿ ಅಬ್ರಾಡ್‌ ಐಎನ್‌ಸಿ’ ಮೂಲಕ ವಿದೇಶೀ ಕ್ಲೈಂಟ್ಸ್ ಸಹ ಈಕೆಯ ಅಭಿಮಾನಿಗಳೆನಿಸಿದ್ದಾರೆ. ಇಲ್ಲಿಗೆ ದಿನೇದಿನೇ ಎಡತಾಕುವ ದಂಪತಿಗಳಿಗಂತೂ ಲೆಕ್ಕವಿಲ್ಲ.

ಅತ್ಯಾಧುನಿಕ ಉಪಕರಣಗಳಿಂದ ಸುಸಜ್ಜಿತ ಈ ಕ್ಲಿನಿಕ್‌ನಲ್ಲಿ  IVF/ಪ್ಯಾಥೋ/ಹಾರ್ಮೋನ್‌ ಲ್ಯಾಬ್ಸ್, ದಿನೇದಿನೇ ಅಪ್‌ ಡೇಟ್ ಆಗುತ್ತಿರುತ್ತವೆ. ಆಸ್ಪತ್ರೆಯ ನಿರ್ವಹಣಾ ಮಟ್ಟವಂತೂ ಅಂತಾರಾಷ್ಟ್ರೀಯ ಸ್ತರಗಳಿಗೆ ಹೋಲಿಸಬಹುದಾಗಿದೆ. ಅತ್ಯಾಧುನಿಕ ಇಮೇಜಿಂಗ್‌ ಟೆಕ್ನಿಕ್ಸ್, ಅಂತಾರಾಷ್ಟ್ರೀಯ ಮಟ್ಟದ ಸ್ಟೆರಿಲೈಝೇಷನ್‌ಇನ್‌ಫೆಕ್ಷನ್‌ ಕಂಟ್ರೋಲ್ ಪ್ರೊಟೋಕಾಲ್ಸ್, ಓಟಿ, ಐಸಿಯು, ಇನ್‌ಪೇಷೆಂಟ್‌ ಕೋಣೆಗಳಿಂದ ಈ ಕೇಂದ್ರ ವ್ಯವಸ್ಥಿತವಾಗಿದೆ. ಫಾರ್ಮಸಿ ಹಾಗೂ ತುರ್ತು ಸೇವೆ ಸತತ 24 ತಾಸುಗಳಿರುತ್ತವೆ. ಅಲ್ಟ್ರಾ ಮಾಡರ್ನ್ಡ್ ಲ್ಯಾಬ್‌ಗಳ, IVF ಚಿಕಿತ್ಸಾ ವಿಧಾನಗಳಿಗೆಂದೇ ಮೀಸಲಾಗಿವೆ.

ನೈಕಾಲ್‌/ಒಲಿಂಪಸ್‌ ಮೈಕ್ರೋ ಮ್ಯಾನಿಪುವೇಟರ್ಸ್‌ ಮೈಕ್ರೋಸ್ಕೋಪ್‌ಗಳಿಂದ ಶೇ.100ರಷ್ಟು ಪರಿಪೂರ್ಣತೆ ಬಯಸಬಹುದಾಗಿದೆ.

ಹೆಚ್ಚಿನ ವಿರಗಳಿಗಾಗಿ ಸಂಪರ್ಕಿಸಿ : ಡಾ. ಪದ್ಮಜಾ ಫರ್ಟಿಲಿಟಿ ಸೆಂಟರ್‌, ಹೈದರಾಬಾದ್‌. ಹಬೀಸ್‌ ಗುಡ: 09553507755 ಭಾನ್‌ಗೀರ್‌ : 09948044665

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ