ಅಂದು ರಾತ್ರಿ ಜೋರಾಗಿ ಮಳೆ ಸುರಿಯುತ್ತಿತ್ತು. ರಾಜು ಗಾಢವಾದ ನಿದ್ದೆಯಲ್ಲಿ ಮುಳುಗಿದ್ದ. ಯಾರೋ ಜೋರಾಗಿ ಬಾಗಿಲು ಬಡಿದ ಸದ್ದಾಗಲು, ನಿದ್ರಾಭಂಗದಿಂದ ಸಿಡುಕುತ್ತಾ ರಾಜು ಬಾಗಿಲು ತೆರೆದು ಕೇಳಿದ, “ಏನ್ರಿ ಅದು ಇಷ್ಟು ಹೊತ್ತಿನಲ್ಲಿ?”

“ಸಾರ್‌ ಬಹಳ ಕಷ್ಟ ಆಗ್ತಿದೆ, ದಯವಿಟ್ಟು ಸ್ವಲ್ಪ ತಳ್ಳಿಬಿಡ್ತೀರಾ?” ಅಪರಿಚಿತನೊಬ್ಬ ತಲೆ ಕೆರೆಯುತ್ತಾ ಕೇಳಿದ.

“ಸುಮ್ನೆ ಹೋಗ್ರಿ, ನಿಮ್ಮ ಕಾರು ಕಟ್ಕೊಂಡು ನನಗೇನಾಗ್ಬೇಕು?” ಎಂದು ಗೊಣಗುತ್ತಾ ಹೋಗಿ ಮಲಗಿಬಿಟ್ಟ 10 ನಿಮಿಷ ನಿದ್ರಿಸಿದವನಿಗೆ ಥಟ್ಟನೆ ಎಚ್ಚರವಾಯಿತು. ತಾನೂ ಮುಂದೊಂದು ದಿನ ಹೀಗೆ ಮಳೆಯಲ್ಲಿ ಸಿಕ್ಕಿಹಾಕಿಕೊಂಡರೆ ತನ್ನ ಕಾರಿನ ಗತಿಯೇನು? ಮಾನವೀಯತೆ ಮರೆಯಬಾರದು ಎಂದು ಅಪರಿಚಿತನಿಗೆ ಸಹಾಯ ಮಾಡಲು ಧಾವಿಸಿ ಬಂದ. ಬಾಗಿಲು ತೆರೆದು, ಪೋರ್ಟಿಕೋದಲ್ಲಿ ನಿಂತು ಕೇಳಿದ, “ಏನ್ರಿ, ಈಗಲೂ ಸ್ವಲ್ಪ ತಳ್ಳಬೇಕು ಅಂತೀರಾ? ಆದರೆ ನೀವೆಲ್ಲಿದ್ದೀರಿ… ಕಾಣಿಸ್ತಾ ಇಲ್ಲ…..?” ಎಂದು ಕೇಳಿದ.

ಇವನ ಮನೆಯ ವಿಶಾಲ ಕಾಂಪೌಂಡನ ಮೂಲೆಯಲ್ಲಿದ್ದ ಉಯ್ಯಾಲೆ ಮೇಲೆ ಕುಳಿತಿದ್ದ ವ್ಯಕ್ತಿ, “ಹೌದು, ಸ್ವಲ್ಪ ಉಯ್ಯಾಲೆ ತಳ್ಳಿ ಹೆಲ್ಪ್ ಮಾಡ್ತೀರಾ ಅಂತ ಕೇಳ್ತಿದ್ದೆ….” ಎನ್ನುವುದೇ?

ಯಾವುದೋ ಕಾರಣಕ್ಕೆ ಜಗಳವಾಡಿಕೊಂಡು ಪತ್ನಿ ಪತಿಯಿಂದ ದೂರಾದಳು. 1-2 ತಿಂಗಳ ವಿರಹದ ಬಳಿಕ ಆಕೆ ಗಂಡನಿಗೆ ಹೀಗೊಂದು sms ಕಳುಹಿಸಿದಳು : `ನಿನದೇ ನೆನಪು ದಿನ ಮನದಲ್ಲಿ…. ಏನಿಲ್ಲವೆಂದರೂ ನನ್ನ ಬಟ್ಟೆ ಒಗೆಯುತ್ತಿದ್ದೆ ಡೇಲಿ ಡೇಲಿ…’

ಕವಿತಾ : ನಾವು ಕಣ್ಣು ಮುಚ್ಚಿಕೊಂಡು ಇರುವಾಗ, ಯಾರ ಮುಖ ನಮಗೆ ಕಾಣಿಸುತ್ತದೋ ಅವರನ್ನೇ ನಾವು ಇಷ್ಟಪಡ್ತೀವಿ ಅಂತ ಹೇಳ್ತಾರೆ.

ಸವಿತಾ : ಹ್ಞೂಂ, ನಾನೂ ಇದರ ಬಗ್ಗೆ ಹೀಗೇ ಕೇಳಿದ್ದೀನಿ.

ಕವಿತಾ : ಆದರೆ ನಾನು ಏನಾದರೂ ನೆನೆಸಿಕೊಂಡು ಕಣ್ಣು ಮುಚ್ಚಿಕೊಂಡರೆ, ತಕ್ಷಣ ಗಾಢ ನಿದ್ದೆ ಆರಿಸುತ್ತದೆ.

ಸವಿತಾ : ಹಿಂದಿನ ಜನ್ಮದಲ್ಲೆಲ್ಲೋ ಕುಂಭಕರ್ಣನ ಹೆಂಡತಿ ಆಗಿರಬೇಕು.

ಗ್ರಾಹಕ : ಏನ್ರಿ, ನಿಮ್ಮ ಸ್ಟೋರ್ಸ್‌ನಲ್ಲಿ `ಹಸ್ಬೆಂಡ್‌ : ದಿ ಮಾಸ್ಟರ್‌ ಆಫ್‌ ಲೈಫ್‌’ ಪುಸ್ತಕ ಇದೆಯೇ?

ಸೇಲ್ಸ್ ಗರ್ಲ್ : ಸಾರ್‌, ಕಾಮಿಕ್ಸ್ ಡಿಪಾರ್ಟ್‌ಮೆಂಟ್‌ ಫಸ್ಟ್ ಫ್ಲೋರ್‌ನಲ್ಲಿದೆ ನೋಡಿ.

ಗಂಡ : ನೋಡು, ಪಕ್ಕದ ಮನೆ ದಂಪತಿಗಳು ಎಷ್ಟು ಅನ್ಯೋನ್ಯವಾಗಿದ್ದಾರೆ. ಆತ ಹೊರಗಿನಿಂದ ಮನೆಗೆ ಬಂದಾಗ ಪ್ರತಿ ಸಲ, ಆತನ ಹೆಂಡತಿ ಅವನನ್ನು ಮರೆಯದೆ ಕಿಸ್‌ ಮಾಡುತ್ತಾಳೆ. ಪ್ರೀತಿ ಅಂದ್ರೆ ಹಾಗಿರಬೇಕು.

ಹೆಂಡತಿ : ಇದರಲ್ಲಿ ಪ್ರೀತಿಪ್ರೇಮ ಅಂತ ಯಾವ ಮಣ್ಣೂ ಇಲ್ಲ. ಆತ ಹೊರಗಿನಿಂದ ಬಂದಾಗೆಲ್ಲ ಆಕೆ ಆತನ ಬಳಿ ಡ್ರಿಂಕ್ಸ್ ಅಥವಾ ಲೇಡೀಸ್‌ ಪರ್ಫ್ಯೂಮ್ ವಾಸನೆ ಇಲ್ಲ ತಾನೇ ಎಂದು ಹಾಗೆ ಪರೀಕ್ಷಿಸುತ್ತಾಳೆ, ಅಷ್ಟೇ!

ಒಂದು ದಿನ ಮಹೇಂದ್ರನ ಬಳಿ ಯಾವುದೋ ಅಪರಿಚಿತ ನಂಬರ್‌ನಿಂದ ಫೋನ್‌ ಬಂದಿತು. ಅದರಲ್ಲಿ ಯಾರೋ ಹುಡುಗಿ ಮಾತನಾಡುತ್ತಿದ್ದಳು.

ಹುಡುಗಿ : ಹಲೋ…. ನಿಮಗಿನ್ನೂ ಮದುವೆ ಆಗಿಲ್ಲ ತಾನೇ?

ಮಹೇಂದ್ರ : ಹೌದು, ಆಗಿಲ್ಲ. ಅದು ಸರಿ, ನೀವ್ ಯಾರು ಮಾತನಾಡುತ್ತಿರುವುದು?

ಹುಡುಗಿ : ನಾನು ನಿಮ್ಮ ಹೆಂಡ್ತಿ ಕಣ್ರಿ ಮಾತಾಡ್ತಿದ್ದೀನಿ. ಇವತ್ತು ಮನಿಗೆ ಬನ್ನಿ, ಸರಿಯಾಗಿ ಮಾಡ್ತೀನಿ!

ಅದಾದ ಸ್ವಲ್ಪ ಹೊತ್ತಿಗೆ ಮಹೇಂದ್ರನಿಗೆ ಮತ್ತೊಂದು ಅಪರಿಚಿತ ಫೋನ್‌ ನಂಬರ್‌ನಿಂದ ಇನ್ನೊಂದು ಕಾಲ್ ಬಂತು. ಅದರಲ್ಲೂ ಒಬ್ಬ ಹುಡುಗಿ ಇದ್ದಳು.

ಹುಡುಗಿ : ನಿಮಗೆ ಮದುವೆ ಆಗಿದೆಯೇ?

ಮಹೇಂದ್ರ : ಹ್ಞೂಂ, ಆಗಿದೆ. ಅದು ಸರಿ ನೀವ್ ಯಾರು?

ಹುಡುಗಿ : ನಿನ್ನ ಗರ್ಲ್ ಫ್ರೆಂಡ್‌…ಛೀ! ನನಗೆ ಮೋಸ ಮಾಡಬಾರದಿತ್ತು.

ಮಹೇಂದ್ರ : ಸಾರಿ ಬೇಬಿ… ಬಹುಶಃ ನನ್ನ ಹೆಂಡತಿಯೇ ಫೋನ್‌ ಮಾಡಿದ್ದು ಅಂದುಕೊಂಡೆ.

ಹುಡುಗಿ : ರೀ…. ನಾನು ನಿಮ್ಮ ಹೆಂಡ್ತೀನೇ ಮಾತಾಡ್ತಾ ಇರೋದು. ಇವತ್ತು ಮವೆಗೆ ಬನ್ನಿ, ನಿಮಗೆ ಇದೆ!

ಪತ್ನಿ : ಇವತ್ತು ನಮ್ಮ ಮ್ಯಾರೇಜ್‌ ಆ್ಯನಿವರ್ಸರಿ. ಕೋಳಿ ತನ್ನಿ, ಒಳ್ಳೆ ಚಿಕನ್‌ ಪಾಯ ಮಾಡ್ತೀನಿ.

ಪತಿ : ನಾವಿಬ್ಬರು ಎಂದೋ ಮಾಡಿದ ತಪ್ಪಿಗೆ, ಇಂದು ಆ ಕೋಳಿಗೇಕೆ ಶಿಕ್ಷೆ ಕೊಡ್ತೀಯಾ?

ಹಳ್ಳಿಯಿಂದ ಪುಟ್ನಂಜ ಮೊದಲ ಬಾರಿ ಗೆಳೆಯನ ಮನೆಗೆಂದು ಬೆಂಗಳೂರು ಪೇಟೆಗೆ ಬಂದಿದ್ದ. ಅವನನ್ನು  ಲಾಲ್‌ಬಾಗ್‌, ಕಬ್ಬನ್ ಪಾರ್ಕ್‌ ಸುತ್ತಾಡಿಸಿ ಗೆಳೆಯ ಒಂದು ಪಾಷ್‌ ಹೋಟೆಲ್‌ಗೆ ಕರೆದುಕೊಂಡು ಹೋದ.

ಗೆಳೆಯ : ಏನಪ್ಪ, ಇಲ್ಲಿ ನೀನೇನು ತಗೋತೀಯಾ?

ಪುಟ್ನಂಜ : (ಬಲು ಸಂಕೋಚದಿಂದ) ನೀನೇನು ತಗೋತೀಯೋ ಅದೆ….

ಗೆಳೆಯ : ವೆಯ್ಟರ್‌, ಮೆನು ಕೊಡಪ್ಪ.

ಪುಟ್ನಂಜ : ನನಗೂ ಅದನ್ನೇ ಕೊಡಿಸಪ್ಪ.

ಪುಟ್ನಂಜಿ ತನ್ನ ಮೂರು ಮಕ್ಕಳನ್ನು ಕರೆದುಕೊಂಡು ಬಸ್ಸಿನಲ್ಲಿ ತವರೂರಿಗೆ ಹೊರಟಿದ್ದಳು. ಬಸ್‌ ಒಳಗೆ `3 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಕಡ್ಡಾಯ ಟಿಕೆಟ್‌ ಪಡೆಯಬೇಕು’ ಎಂಬ ಸೂಚನೆ ಇತ್ತು. ಆ ಪ್ರೈವೇಟ್‌ ಬಸ್ಸಿನ ಕಂಡಕ್ಟರ್‌ ಸರದಿ ಪ್ರಕಾರ ಪುಟ್ನಂಜಿ ಬಳಿ ಬಂದು ಟಿಕೆಟ್‌ ಕೊಳ್ಳುವಂತೆ ಹೇಳಿದ.

ಪುಟ್ನಂಜಿ : ಇಲ್ಲಿಂದ ಸಾತನೂರಿಗೆ ಒಂದು ಟಿಕೆಟ್‌ ಕೊಡಿ.

ಕಂಡಕ್ಟರ್‌ : ಮತ್ತೆ ಈ ಮಕ್ಕಳ ಟಿಕೆಟ್‌….

ಪುಟ್ನಂಜಿ : ಈ ಕಡೆ ಕೂಸಿಗೆ ಎರಡು ವರ್ಷ, ಮಧ್ಯದವಳಿಗೆ ಎರಡೂವರೆ ವರ್ಷ, ದೊಡ್ಡವನಿಗೆ ಮುಂದಿನ ತಿಂಗಳು 3 ತುಂಬುತ್ತೆ. ಮತ್ಯಾಕೆ ಇವಕ್ಕೆ ಟಿಕೆಟ್‌? ಬೋರ್ಡ್‌ ನೋಡಿ, ನಂಗೂ ತಿಳಿಯುತ್ತದೆ!

ಕಂಡಕ್ಟರ್‌ : ಅಮ್ಮ ತಾಯಿ, ಈ ಮಕ್ಕಳೆಲ್ಲ ನಿನ್ನವೆನಾ?

ಪುಟ್ನಂಜಿ : ಯಾಕಯ್ಯಾ ಅಂಗ್‌ ಕೇಳ್ತೀಯಾ? ನಾನೇನು ಕಂಡೋರ ಮಕ್ಕಳನ್ನು ಕದ್ಗೊಂಡು ಹೋಗ್ತೀನಾ?

ಕಂಡಕ್ಟರ್‌ : ಮಕ್ಕಳ ವಯಸ್ಸು ಬೇಕಾದರೆ ಕಡಿಮೆ ಹೇಳು ತಾಯಿ, ಅವರ ವಯಸ್ಸಿನ ನಡುವೆ ಗ್ಯಾಪ್‌ನ್ನೂ ಕಡಿಮೆ ಹೇಳಬೇಕೇ?

ತಂದೆ : ಗುಂಡ, ನಿನ್ನ ಮೊಬೈಲ್ ಫೋನ್‌ ಕೊಡಿಲ್ಲಿ…

ಗುಂಡ : ಬಂದೆ ಅಪ್ಪ, ಆನ್‌ ಮಾಡ್ತಿದ್ದೀನಿ, ಕೊಡ್ತೀನಿ.

3ನೇ ಸಲ 10ನೇ ತರಗತಿ ಫೇಲಾದ ಮಗರಾಯ ಬೇಗ ಬೇಗ ಮೊಬೈಲ್‌ನಲ್ಲಿನ ತನ್ನ ಫೇಸ್‌ ಬುಕ್‌ ಲಾಗ್‌ ಆಫ್‌ ಮಾಡಿ, ಮೆಸೇಜ್‌ ವಾಟ್ಸ್ ಅಪ್‌ ಚ್ಯಾಟ್‌ ಡೆಲಿಟ್‌ ಮಾಡಿ, ಗ್ಯಾಲರಿ ಸರಿ ಮಾಡಿ ತಂದೆಯ ಕೈಗೆ ಫೋನ್‌ ನೀಡುತ್ತಾ, ತಗೊಳಪ್ಪ…. ನಿನ್ನ ಫೋನ್‌ನಲ್ಲಿ ಔಟ್‌ ಗೋಯಿಂಗ್‌ ಹೋಗ್ತಿಲ್ವೆನೋ?

ತಂದೆ : ಅದಲ್ಲ… ನನ್ನ ಮೊಬೈಲ್‌‌ನಲ್ಲಿ ಪೂರ್ತಿ ಚಾರ್ಜ್‌ ಹೋಗಿದೆ, ಕರೆಂಟೂ ಇಲ್ಲ. ನಿನ್ನ ಮೊಬೈಲ್‌‌ನಲ್ಲಿ ಟೈಂ ನೋಡೋಣ ಅಂತ.

ಮ್ಯಾನೇಜರ್‌ : ಸಾರಿ, ನಾನು ನಿಮಗೆ ಯಾವುದೇ ಜಾಬ್‌ ಕೊಡಲಾಗುವುದಿಲ್ಲ. ನಮ್ಮ ಬಳಿ ಈಗ ನಿಮಗೆ ಕೊಡಲಿಕ್ಕೆ ಯಾವುದೇ ಕೆಲಸ ಇಲ್ಲ.

ಹುಡುಗಿ : ಸಾರ್‌, ನೀವು ಚಿಂತೆ ಮಾಡ್ಬೇಡಿ, ನನಗೆ ಜಾಬ್‌ ನೀಡಿ ಸಂಬಳ ಹೇಳಿಬಿಡಿ ಸಾಕು. ಆಮೇಲೆ ಕೆಲಸ ಕೊಡಿ ಎಂದು ನಾನೆಂದೂ ನಿಮ್ಮನ್ನು ಪೀಡಿಸುವುದಿಲ್ಲ.

ಹುಡುಗಿಯೊಬ್ಬಳು ತನಗಾಗಿ ಡ್ರೆಸ್‌ ಖರೀದಿಸಲು ಅಂಗಡಿಗೆ ಹೋದಳು.

ಹುಡುಗಿ : ಈ ಡ್ರೆಸ್‌ನ ಬೆಲೆ ಎಷ್ಟು?

ಸೇಲ್ಸ್ ಬಾಯ್‌ : 1,500 ರೂ. ಅಷ್ಟೆ.

ಹುಡುಗಿ : ಓ…. ಅದೇ ಆ ಪಿಂಕ್‌ ಡ್ರೆಸ್‌ಗೆ ಎಷ್ಟು?

ಸೇಲ್ಸ್ ಬಾಯ್‌ : 2 ಬಾರಿ ಓ…. ಅನ್ನೋಷ್ಟು

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ