ಅಂದು ರಾತ್ರಿ ಜೋರಾಗಿ ಮಳೆ ಸುರಿಯುತ್ತಿತ್ತು. ರಾಜು ಗಾಢವಾದ ನಿದ್ದೆಯಲ್ಲಿ ಮುಳುಗಿದ್ದ. ಯಾರೋ ಜೋರಾಗಿ ಬಾಗಿಲು ಬಡಿದ ಸದ್ದಾಗಲು, ನಿದ್ರಾಭಂಗದಿಂದ ಸಿಡುಕುತ್ತಾ ರಾಜು ಬಾಗಿಲು ತೆರೆದು ಕೇಳಿದ, ``ಏನ್ರಿ ಅದು ಇಷ್ಟು ಹೊತ್ತಿನಲ್ಲಿ?''

``ಸಾರ್‌ ಬಹಳ ಕಷ್ಟ ಆಗ್ತಿದೆ, ದಯವಿಟ್ಟು ಸ್ವಲ್ಪ ತಳ್ಳಿಬಿಡ್ತೀರಾ?'' ಅಪರಿಚಿತನೊಬ್ಬ ತಲೆ ಕೆರೆಯುತ್ತಾ ಕೇಳಿದ.

``ಸುಮ್ನೆ ಹೋಗ್ರಿ, ನಿಮ್ಮ ಕಾರು ಕಟ್ಕೊಂಡು ನನಗೇನಾಗ್ಬೇಕು?'' ಎಂದು ಗೊಣಗುತ್ತಾ ಹೋಗಿ ಮಲಗಿಬಿಟ್ಟ 10 ನಿಮಿಷ ನಿದ್ರಿಸಿದವನಿಗೆ ಥಟ್ಟನೆ ಎಚ್ಚರವಾಯಿತು. ತಾನೂ ಮುಂದೊಂದು ದಿನ ಹೀಗೆ ಮಳೆಯಲ್ಲಿ ಸಿಕ್ಕಿಹಾಕಿಕೊಂಡರೆ ತನ್ನ ಕಾರಿನ ಗತಿಯೇನು? ಮಾನವೀಯತೆ ಮರೆಯಬಾರದು ಎಂದು ಅಪರಿಚಿತನಿಗೆ ಸಹಾಯ ಮಾಡಲು ಧಾವಿಸಿ ಬಂದ. ಬಾಗಿಲು ತೆರೆದು, ಪೋರ್ಟಿಕೋದಲ್ಲಿ ನಿಂತು ಕೇಳಿದ, ``ಏನ್ರಿ, ಈಗಲೂ ಸ್ವಲ್ಪ ತಳ್ಳಬೇಕು ಅಂತೀರಾ? ಆದರೆ ನೀವೆಲ್ಲಿದ್ದೀರಿ... ಕಾಣಿಸ್ತಾ ಇಲ್ಲ.....?'' ಎಂದು ಕೇಳಿದ.

ಇವನ ಮನೆಯ ವಿಶಾಲ ಕಾಂಪೌಂಡನ ಮೂಲೆಯಲ್ಲಿದ್ದ ಉಯ್ಯಾಲೆ ಮೇಲೆ ಕುಳಿತಿದ್ದ ವ್ಯಕ್ತಿ, ``ಹೌದು, ಸ್ವಲ್ಪ ಉಯ್ಯಾಲೆ ತಳ್ಳಿ ಹೆಲ್ಪ್ ಮಾಡ್ತೀರಾ ಅಂತ ಕೇಳ್ತಿದ್ದೆ....'' ಎನ್ನುವುದೇ?

ಯಾವುದೋ ಕಾರಣಕ್ಕೆ ಜಗಳವಾಡಿಕೊಂಡು ಪತ್ನಿ ಪತಿಯಿಂದ ದೂರಾದಳು. 1-2 ತಿಂಗಳ ವಿರಹದ ಬಳಿಕ ಆಕೆ ಗಂಡನಿಗೆ ಹೀಗೊಂದು sms ಕಳುಹಿಸಿದಳು : `ನಿನದೇ ನೆನಪು ದಿನ ಮನದಲ್ಲಿ.... ಏನಿಲ್ಲವೆಂದರೂ ನನ್ನ ಬಟ್ಟೆ ಒಗೆಯುತ್ತಿದ್ದೆ ಡೇಲಿ ಡೇಲಿ...'

ಕವಿತಾ : ನಾವು ಕಣ್ಣು ಮುಚ್ಚಿಕೊಂಡು ಇರುವಾಗ, ಯಾರ ಮುಖ ನಮಗೆ ಕಾಣಿಸುತ್ತದೋ ಅವರನ್ನೇ ನಾವು ಇಷ್ಟಪಡ್ತೀವಿ ಅಂತ ಹೇಳ್ತಾರೆ.

ಸವಿತಾ : ಹ್ಞೂಂ, ನಾನೂ ಇದರ ಬಗ್ಗೆ ಹೀಗೇ ಕೇಳಿದ್ದೀನಿ.

ಕವಿತಾ : ಆದರೆ ನಾನು ಏನಾದರೂ ನೆನೆಸಿಕೊಂಡು ಕಣ್ಣು ಮುಚ್ಚಿಕೊಂಡರೆ, ತಕ್ಷಣ ಗಾಢ ನಿದ್ದೆ ಆರಿಸುತ್ತದೆ.

ಸವಿತಾ : ಹಿಂದಿನ ಜನ್ಮದಲ್ಲೆಲ್ಲೋ ಕುಂಭಕರ್ಣನ ಹೆಂಡತಿ ಆಗಿರಬೇಕು.

ಗ್ರಾಹಕ : ಏನ್ರಿ, ನಿಮ್ಮ ಸ್ಟೋರ್ಸ್‌ನಲ್ಲಿ `ಹಸ್ಬೆಂಡ್‌ : ದಿ ಮಾಸ್ಟರ್‌ ಆಫ್‌ ಲೈಫ್‌' ಪುಸ್ತಕ ಇದೆಯೇ?

ಸೇಲ್ಸ್ ಗರ್ಲ್ : ಸಾರ್‌, ಕಾಮಿಕ್ಸ್ ಡಿಪಾರ್ಟ್‌ಮೆಂಟ್‌ ಫಸ್ಟ್ ಫ್ಲೋರ್‌ನಲ್ಲಿದೆ ನೋಡಿ.

ಗಂಡ : ನೋಡು, ಪಕ್ಕದ ಮನೆ ದಂಪತಿಗಳು ಎಷ್ಟು ಅನ್ಯೋನ್ಯವಾಗಿದ್ದಾರೆ. ಆತ ಹೊರಗಿನಿಂದ ಮನೆಗೆ ಬಂದಾಗ ಪ್ರತಿ ಸಲ, ಆತನ ಹೆಂಡತಿ ಅವನನ್ನು ಮರೆಯದೆ ಕಿಸ್‌ ಮಾಡುತ್ತಾಳೆ. ಪ್ರೀತಿ ಅಂದ್ರೆ ಹಾಗಿರಬೇಕು.

ಹೆಂಡತಿ : ಇದರಲ್ಲಿ ಪ್ರೀತಿಪ್ರೇಮ ಅಂತ ಯಾವ ಮಣ್ಣೂ ಇಲ್ಲ. ಆತ ಹೊರಗಿನಿಂದ ಬಂದಾಗೆಲ್ಲ ಆಕೆ ಆತನ ಬಳಿ ಡ್ರಿಂಕ್ಸ್ ಅಥವಾ ಲೇಡೀಸ್‌ ಪರ್ಫ್ಯೂಮ್ ವಾಸನೆ ಇಲ್ಲ ತಾನೇ ಎಂದು ಹಾಗೆ ಪರೀಕ್ಷಿಸುತ್ತಾಳೆ, ಅಷ್ಟೇ!

ಒಂದು ದಿನ ಮಹೇಂದ್ರನ ಬಳಿ ಯಾವುದೋ ಅಪರಿಚಿತ ನಂಬರ್‌ನಿಂದ ಫೋನ್‌ ಬಂದಿತು. ಅದರಲ್ಲಿ ಯಾರೋ ಹುಡುಗಿ ಮಾತನಾಡುತ್ತಿದ್ದಳು.

ಹುಡುಗಿ : ಹಲೋ.... ನಿಮಗಿನ್ನೂ ಮದುವೆ ಆಗಿಲ್ಲ ತಾನೇ?

ಮಹೇಂದ್ರ : ಹೌದು, ಆಗಿಲ್ಲ. ಅದು ಸರಿ, ನೀವ್ ಯಾರು ಮಾತನಾಡುತ್ತಿರುವುದು?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ