ಭಾರತೀಯ ಸುಸಂಸ್ಕೃತಿಯ ಪ್ರತೀಕವಾದ ಸೀರೆ ಸರ್ವ ಕಾಲಕ್ಕೂ ಹೆಣ್ಣಿನ ಮೊದಲ ಆಯ್ಕೆ ಎನಿಸಿದೆ. ಉ.ಭಾರತದಲ್ಲಿ ಬನಾರಸ್ ಸೀರೆಯ ವರ್ಚಸ್ಸು ಹೆಚ್ಚಿದ್ದರೆ ದ. ಭಾರತದಲ್ಲಿ ಕಾಂಜೀವರಂ ರೇಷ್ಮೆ ಸೀರೆಗೆ ಸರಿಸಾಟಿ ಮತ್ತೊಂದಿಲ್ಲ. ಭಾರತೀಯ ಸಿನಿಮಾಗಳಲ್ಲಿ ಅಂದಿನ ಕಾಲದ ಹೇಮಾ, ಶ್ರೀದೇವಿಯವರಿಂದ ಇಂದಿನ ರಮ್ಯಾ, ರಾಧಿಕಾ ಪಂಡಿತ್‌ವರೆಗೂ ಸೀರೆಯಲ್ಲಿ ಮಿಂಚದ ನಾಯಕಿಯರಿಲ್ಲ.
ರೇಷ್ಮೆ ಸೀರೆಗಳ ಭಾರಿ ಸೆರಗಿನ ಬೆಡಗು ಒಂದೆಡೆಯಾದರೆ, ಕಾಟನ್ ಸೀರೆಗಳ ಸರಳ ರಮ್ಯತೆ ಮತ್ತೊಂದೆಡೆ. ಇಷ್ಟಲ್ಲದೆ ಪೂ. ಭಾರತದ ಟ್ಯಾಂಜೈಲ್, ಬಂಗಾಳಿ ಸೀರೆ, ಅದರಲ್ಲಿನ ಕಾಂತಾ ವರ್ಕ್, ಗುಜರಾತ್‌ನ ಘರ್ ಚೋಲಾ ಅಥವಾ ಪಾಟ್ನಾದ ಪಟೋಲ ಸೀರೆಗಳ ಐಸಿರಿಯ ಕುರಿತು ಏನೆಂದು ಹೇಳುವುದು? ತಾಯಿಯಿಂದ ಮಗಳಿಗೆ ಸಾಂಪ್ರದಾಯಿಕ ಪರಂಪರೆಯ ಉಡುಗೊರೆಯಾಗಿ ಸಿಗುವ ರೇಷ್ಮೆ ಸೀರೆಗಳು ರೂಪುಗೊಳ್ಳಲು ಕೆಲವು ತಿಂಗಳು ಮಾತ್ರವಲ್ಲ ಒಮ್ಮೊಮ್ಮೆ 12 ವರ್ಷಗಳೇ ಬೇಕಾಗುತ್ತವೆ.
ಭಾರತದಲ್ಲಂತೂ ಸೀರೆ ಎಂಬುದು ಒಂದೇ, ಆದರೆ ಅದರ ರೂಪ ಅತಿ ವಿಶಿಷ್ಟ, ಅನೇಕ. ಇದನ್ನು ಒಪ್ಪ ಓರಣದಿಂದ ನಾಜೂಕಾಗಿ ಉಡುವ ಕ್ರಮ ಸೀರೆಯಲ್ಲಿನ ಸರಿಸಾಟಿಯಿಲ್ಲದ ಬೆಡಗಿಗೆ ಸಾಕ್ಷಿ.
ಆಧುನಿಕ ರೆಡಿಮೇಡ್ ಸೀರೆ
ಇದನ್ನು ಅಂಗವಸ್ತ್ರ, ಪಂಚೆಯಂತೆ ಉಡುವ ಕ್ರಮ ಇರುವಂತೆಯೇ, ಸೆರಗು ಇಳಿಬಿಟ್ಟು, ಬ್ರೊಕೇಡ್ ಸಿಗಿಸುವ ನಯನಾಜೂಕು ಸಹ ಉಂಟು. ಸದಾ ಹಿಂಭಾಗದಲ್ಲಿ ಸೆರಗನ್ನು ಇಳಿ ಬಿಡುವುದು ಸಾಮಾನ್ಯವಾದರೆ, ಕೆಲವು ಕಡೆ ಮುಂಭಾಗದಲ್ಲೂ ಇರುತ್ತದೆ. ಒಮ್ಮೊಮ್ಮೆ 2 ಬಟ್ಟೆಗಳನ್ನು ಹೊಲಿದು ಸಿದ್ಧಪಡಿಸಿರುವುದೂ ಉಂಟು. ಇತ್ತೀಚಿನ ಆಧುನಿಕ ಟ್ರೆಂಡ್‌ಗೆ ತಕ್ಕಂತೆ ರೆಡಿಮೇಡ್ ಸೀರೆಗಳೂ ದೊರೆಯುತ್ತಿವೆ. ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ನಿರ್ವಹಿಸುವ ಎಗ್ಸಿಕ್ಯೂಟಿವ್ಸ್ ಸಹ, ಅಫಿಶಿಯಲ್ ಸೂಟ್ ತರಹ ಬಲು ನಾಜೂಕಾಗಿ 5 ಗಜದ ಫೋಲ್ಡ್ ಸ್ಟಿಚ್ಡ್ ಸೀರೆಯನ್ನು ರೆಡಿಮೇಡ್ ಪ್ಯಾಂಟ್ ತರಹ ಬಳಸುತ್ತಿದ್ದಾರೆ. ಉಡಲು ಬಳಸಲು ಬಲು ಆರಾಮದಾಯಕ ಎನಿಸುವ ಈ ಸೀರೆ, ಯಾವುದೇ ರಗಳೆ ಇಲ್ಲದೆ ಕಂಫರ್ಟೆಬಲ್ ಎನಿಸುತ್ತದೆ. ಕಾರ್ಪೊರೇಟ್ ಜಗತ್ತು ಇದಕ್ಕೆ ಒಂದು ಹೊಸ ಸ್ವರೂಪವನ್ನೇ ನೀಡಿದೆ. ಇದರ ಮೂಲ ರೂಪ ಸೀರೆಯ ತರಹವೇ ಇದ್ದರೂ, ತುಸು ಕ್ರಿಯೇಟಿವ್ ಬದಲಾವಣೆಗಳು ಅಗತ್ಯವಾಗಿವೆ. ಇದರಲ್ಲಿ ಜಿಪ್ ಆನ್ ಸೀರೆ, ಜೀನ್ಸ್ ಮೇಲೆ ಸೀರೆ, ಸೀರೆ ವಿತ್ ಜ್ಯಾಕೆಟ್ ಇತ್ಯಾದಿ ವಿಶಿಷ್ಟವೆನಿಸುತ್ತವೆ.
ಸೀರೆ ವಿತ್ ಜ್ಯಾಕೆಟ್‌ನಲ್ಲಿ, ಸೀರೆ ಪ್ಲೇನ್ ಬಣ್ಣದ್ದಾಗಿದ್ದರೆ…. ಅದರ ಮೇಲಿನ ಜ್ಯಾಕೆಟ್ ಕಾಂಟ್ರಾಸ್ಟ್ ಬಣ್ಣದ್ದು. ಪಾಕೆಟ್‌ನಲ್ಲಿ ಬಟನ್‌ಅಥವಾ ಪ್ಲೇವರ್ ಫ್ರಂಟ್ ಇರುತ್ತದೆ. ಎಲ್ಲಕ್ಕೂ ಮೇಲೆ ಕುತ್ತಿಗೆಯಲ್ಲಿ ಪ್ಲೇವರ್ ಸ್ಕಾರ್ಫ್ ಉಂಟು. ಇದರಲ್ಲಿ ಮುಂಭಾಗದಿಂದ ಕ್ಲೋಸ್ ಆಗಿರುವ ಜ್ಯಾಕೆಟ್ ಮತ್ತು ಬಟನ್‌ವುಳ್ಳ ಜ್ಯಾಕೆಟ್ ಸಹ ಉಂಟು.
ಇಂಡೋವೆಸ್ಟರ್ನ್ ಫ್ಯೂಷನ್ ಕಾರ್ಪೊರೇಟ್ ಜಗತ್ತು ಸೀರೆಗೆ ಕೊಟ್ಟಿರುವ ಮತ್ತೊಂದು ವಿಕಲ್ಪ ಎಂದರೆ, ಸೀರೆಗೆ ಸೆರಗನ್ನು ಬೇರೆಯಾಗಿ ಜೋಡಿಸುವ ಅವಕಾಶ! ಇದು ಒಂದು ವಿಧದಲ್ಲಿ ಕ್ಲಾಸಿಕ್ ಬಿಸ್‌ನೆಸ್ ಜ್ಯಾಕೆಟ್‌ಸ್ಕರ್ಟ್‌ನ ಕಾಂಬಿನೇಷನ್ ಆಗಿದೆ. ಇದರಲ್ಲಿ ಮುಂಭಾಗದಿಂದ ಸೆರಗನ್ನು ಎಡ ಭುಜದ ಕಡೆಗೆ ಬರುವಂತೆ ಮಾಡಲಾಗಿದೆ. ಇಂಡೋವೆಸ್ಟರ್ನ್ ಫ್ಯೂಷನ್‌ವುಳ್ಳ ಈ ಸೀರೆಗಳನ್ನು ಕರೋಲ್ ಬಾಗ್ ಸ್ಯಾರಿ ಹೌಸ್ ಮಳಿಗೆಯು ಕಾರ್ಪೊರೇಟ್ ಜಗತ್ತಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಡಿಸೈನರ್‌ಗಳ ಪ್ರಕಾರ ಸೀರೆ ಎಂಬುದು ಒಂದು ಅಮೂಲ್ಯ ಉಡುಗೊರೆ, ಇದನ್ನು ವಿಭಿನ್ನ ವಿಧಾನಗಳಲ್ಲಿ ಉಡಬಹುದಾಗಿದೆ. ಅವರ ಪ್ರಕಾರ ಸ್ಟಿಚಿಂಗ್ ಎಂಬುದು ಯೂರೋಪಿನ ಸಂಸ್ಕೃತಿಯ ಶೋಧವಾದರೆ ಕಸೂತಿ ಕಲೆ, ಸೀರೆ ಡ್ರೇಪಿಂಗ್ ಮುಂತಾದ ಭಾರತ, ಈಜಿಪ್ಟ್, ಯೂನಾನ್, ರೋಮ್ ಇತ್ಯಾದಿಗಳದ್ದು. ಈ ಸ್ಥಳಗಳಲ್ಲಿ ವಸ್ತ್ರವನ್ನು ದೇಹದ ಸುತ್ತಲೂ ಸುತ್ತಲಾಗುತ್ತಿತ್ತು. ಭಾರತದಲ್ಲಂತೂ ಸೀರೆಯನ್ನು ರವಿಕೆ ತೊಡದೆ ಉಡಲಾಗುತ್ತಿತ್ತು. ಇಂದಿಗೂ ಆದಿವಾಸಿ ಮೂಲದ ಮಹಿಳೆಯರು ಸೀರೆಯನ್ನು ಹೀಗೇ ಉಡುತ್ತಾರೆ.
ಸೀರೆಯ ಸಂರಕ್ಷಣೆ
ಹೊರಗಿನಿಂದ ಬಂದಾಗ ಸೀರೆಯನ್ನು ಕಳಚಿ, ಅದನ್ನು 1-2 ತಾಸು ಗಾಳಿ ಬೀಸುವ ಕಡೆ ತೂಗು ಹಾಕಬೇಕು. ಇದರಿಂದ ಅದರಲ್ಲಿನ ಬೆವರು ವಾಸನೆ ಹೋಗುತ್ತದೆ.
ಸಾಮಾನ್ಯವಾಗಿ ಸೀರೆ ಫಾಲ್ಸ್ ಕಾರಣ ಹರಿಯುತ್ತದೆ. ಆದ್ದರಿಂದ ಸೀರೆ ಬಿಚ್ಚಿದ ನಂತರ, ಸಣ್ಣ ಬ್ರಶ್‌ನ ನೆರವಿನಿಂದ ಫಾಲ್ಸ್ ಗೆ ತಗುಲಿರುವ ಧೂಳು ಕೊಡವಿರಿ
ಸೀರೆಗೆ ಬಾಲ್ ಪೆನ್ ಕಲೆ ತಗುಲಿದ್ದರೆ, ನೇಲ್ ಪಾಲಿಶ್ ರಿಮೂವರ್‌ನಿಂದ ಅದರ ಕಲೆ ನಿವಾರಿಸಿ. ಆದರೆ ಬಟ್ಟೆಯ ಟೆಕ್ಸ್ಚರ್ ಮತ್ತು ಕಲರ್ ಕಡೆ ನಿಮ್ಮ ಗಮನವಿರಲಿ.
ಟಿಶ್ಯೂ ಮೂಲದ ಜರಿ ಹಾಗೂ ಕ್ರೇಪ್, ಶಿಫಾನ್, ಚಿನಾನ್ ಸೀರೆಗಳು ಹೈ ಟ್ವಿಸ್ಟ್ ಶ್ರೇಣಿಯಲ್ಲಿ ಬರುತ್ತದೆ. ಇದರ ಮೇಕ್ ಹೇಗಿರುತ್ತದೆಂದರೆ ಪರಸ್ಪರ ಎಳೆಗಳು ಸಿಕ್ಕಿಹಾಕಿಕೊಂಡು ಇವು ಒಂದನ್ನೊಂದು ಕತ್ತರಿಸುತ್ತವೆ. ಆದರಿಂದ ಇವನ್ನು ಪದರ ಪದರವಾಗಿ ಮಡಿಸಿಡಬೇಡಿ, ಆದಷ್ಟೂ ರೋಲ್ ಮಾಡಿಡಿ.
ಎಂದೂ ಹ್ಯಾಂಗರ್‌ನಲ್ಲಿ ತೂಗು ಬಿಡಬೇಡಿ. ಹಾಗೆ ಮಾಡಿದರೆ ಮಧ್ಯದ ಫೋಲ್ಡ್‌ನಿಂದ ಇವು ಹರಿಯುತ್ತವೆ.
ಜರಿ ಸೀರೆಗಳ ನಡುವೆ ನುಸಿಗುಳಿಗೆ ಹಾಕಿಡಬೇಡಿ. ಇದರಿಂದ ಸೀರೆ ಬಣ್ಣ ಕ್ರಮೇಣ ಕಪ್ಪು ಅಥವಾ ಕಳಪೆ ಆದೀತು.
ಕಾಟನ್ ಸೀರೆಗಳನ್ನು ಒಗೆದು ಜಾಲಿಸಿದ ನಂತರ, ಅಗತ್ಯ ಅದಕ್ಕೆ ಸ್ಟಾರ್ಚ್ ಸೇರಿಸಬೇಕು. ಸಾಧ್ಯವಾದರೆ ಇವನ್ನು ಮಖಮಲ್ ಬಟ್ಟೆಗಳ ಮಧ್ಯೆ ಸುತ್ತಿಡಿ.
ಇತ್ತೀಚೆಗೆ ಮಾರುಕಟ್ಟೆಯಲ್ಲಿ ಸೀರೆಗಳಿಗೆಂದೇ ವಿಶೇಷ ಬಗೆಯ ಕವರ್ಸ್ ಸಿಗುತ್ತವೆ. ಇದರಲ್ಲಿ ಸೀರೆಗಳನ್ನು ಸಂಗ್ರಹಿಸಿಡಿ. ಮೇಲಿನಿಂದ ಕವರ್ ಮಾಡಿಬಿಡಿ. ಸೈಡ್‌ನ ಮೂಲೆಗಳಲ್ಲಿ ತುಸು ಟಕ್ ಹಾಕಿಡಿ. ಇದರಿಂದ ಕ್ರಿಮಿ ಕೀಟದ ಬಾಧೆಯಿಲ್ಲ, ಸೀರೆಗಳು ಹೊಸತಾಗಿರುತ್ತವೆ.
ನೀವು ಸೀರೆಗಳನ್ನು ಕಟ್ಟಿಗೆಯ ಕಪಾಟು ಅಥವಾ ಬಾಕ್ಸ್ ನಲ್ಲಿ ಇರಿಸುತ್ತಿದ್ದರೆ, ಅದರಲ್ಲಿ ಕ್ರಿಮಿ ಕೀಟದ ಬಾಧೆ ಇಲ್ಲ ತಾನೇ ಎಂದು ಪರೀಕ್ಷಿಸಿ. ನಂತರ ಅವುಗಳ ಅರೆಗಳಲ್ಲಿ ಬಿಸಿಲಲ್ಲಿ ಚೆನ್ನಾಗಿ ಒಣಗಿದ ಬೇವಿನೆಲೆ ಇರಿಸಿ. ನಂತರ ಅವುಗಳ ಮೇಲೆ ಹ್ಯಾಂಡ್ ಮೇಡ್ ಅಥವಾ ಬ್ರೌನ್ ಪೇಪರ್ ಹರಡಬೇಕು. ಇದರಿಂದ ಕ್ರಿಮಿಕೀಟದ ಬಾಧೆ ಇರುವುದಿಲ್ಲ.
ಸೀರೆಗಳಿಗೆ ದುರ್ವಾಸನೆ ಬರಬಾರದು ಎಂದರೆ ಅದಕ್ಕೆ ಸುಗಂಧಿತ ಗಿಡಮೂಲಿಕೆ, ಒಣಹೂವು ಎಲೆ ಮುಂತಾದುವನ್ನು ಇರಿಸಬೇಕು. ಲವಂಗ, ಕಾಳು ಮೆಣಸಿನ ಸುವಾಸನೆ ಈ ಕ್ರಿಮಿಕೀಟಗಳನ್ನು ದೂರ ಇರಿಸುತ್ತವೆ.
ಭಾರಿ ಎನಿಸುವಂಥ ಸೀರೆಗಳನ್ನು ಮಖಮಲ್ ಬಟ್ಟೆಯಲ್ಲಿ ಸುತ್ತಿರಿಸುವುದು ಒಳ್ಳೆಯದು. ಆದರೆ ಇರಿಸಿದ ನಂತರ ಅದನ್ನು ಮರೆತುಬಿಡಬೇಡಿ. ವರ್ಷದಲ್ಲಿ 1-2 ಸಲ ಅವನ್ನು ತೆಗೆದು ಗಾಳಿಗೆ ಹರಡಿ. ಇಲ್ಲದ್ದಿದರೆ ಅಡಿಭಾಗದಲ್ಲಿ ಅವು ಬಣ್ಣಗೆಡುತ್ತವೆ.
ಮಳೆಗಾಲದಲ್ಲಿ ಸಾಮಾನ್ಯವಾಗಿ ಸೀರೆಗಳು ಜೌಗು ಹಿಡಿಯತ್ತವೆ. ಹೀಗಾಗಿ ಮಳೆಗಾಲದ ದಿನಗಳಲ್ಲಿ ನಡುನಡುವೆ ಬೀರು ತೆರೆದು ಅವುಗಳ ಮೇಲೆ ಕಣ್ಣು ಹಾಯಿಸಬೇಕು. ಏನಾದರೂ ವ್ಯತ್ಯಾಸ ಕಂಡುಬಂದರೆ ತಕ್ಷಣ ಕ್ರಮ ಕೈಗೊಳ್ಳಬೇಕು.
ಬೀರು ಒಳಭಾಗಕ್ಕೆ ಜೌಗು ತಗುಲಬಾರದು. ನಡುನಡುವೆ ಅದನ್ನು ತೆಗೆಸಿ ಬಿಸಿಲಿಗೆ ಒಡ್ಡಬೇಕು. ಇಲ್ಲದಿದ್ದರೆ ಪೂರ್ತಿ ವಸ್ತ್ರಗಳು ಹಾಳಾಗುತ್ತವೆ.
ಜರುಗಿಸಲಾಗದು ಎನಿಸಿದರೆ, ಅದನ್ನು ತೆರೆದಿಟ್ಟು ಫ್ಯಾನ್ ಗಾಳಿ ತಾಕಿಸಿ.
ಭಾರಿ ಕಸೂತಿ ಇರುವ ಸೀರೆಗಳನ್ನು ಉಲ್ಟಾ ಮಡಿಸಿಡಬೇಕು. ಅವನ್ನು ಆಗಾಗ ಉಡುತ್ತಿದ್ದರೆ ಹ್ಯಾಂಗರ್‌ನಲ್ಲಿ ಹಾಕಿಡಿ, ಇಲ್ಲದಿದ್ದರೆ ವುಡನ್ ರಾಡ್ ಮೇಲೆ ಸುತ್ತಿಡಿ, ಆಗ ಕಸೂತಿ ಬಿಟ್ಟುಕೊಳ್ಳುವುದಿಲ್ಲ.
ಹಳೆಯ ಫ್ಯಾಷನ್ ಹೊಸ ಸ್ಟೈಲ್
ಫ್ಯಾಷನ್ ಪ್ರಿಯರು ತಮ್ಮನ್ನು ತಾವು ಅಪ್ ಡೇಟ್ ಆಗಿರಿಸಿಕೊಳ್ಳಲು, ಸದಾ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿರುತ್ತಾರೆ. ಕಾಲಕ್ಕೆ ತಕ್ಕಂತೆ ಅಪ್ ಡೇಟ್ ಆಗುವುದು ಒಳ್ಳೆಯ ಲಕ್ಷಣ. ಫ್ಯಾಷನ್ ರಿಪೀಟ್ ಆಗುತ್ತಿರುತ್ತದೆ ಎಂಬುದು ನಿಜ, ಹಳೆಯ ಫ್ಯಾಷನ್ ಮರಳಿ ಹೊಸ ಸ್ಟೈಲ್‌ನಲ್ಲಿ ಬರುತ್ತಿರುತ್ತದೆ. ಹಳೆಯ ಹೊಸತರ ಸಂಗಮವಿದ್ದರೆ ಸೊಗಸು, ಇದನ್ನು ನೀವು ಪತ್ರಿಕೆ, ಟಿವಿ ಕಾರ್ಯ ಕ್ರಮಗಳಿಂದ ತಿಳಿಯಬಹುದು. ಕರೀನಾ ಕಪೂರ್ ಹೀಗೆ ಮಾಡಿದಳಂತೆ. ಅವಳು ತನ್ನತ್ತೆ ಶರ್ಮಿಳಾ ಟ್ಯಾಗೋರ್‌ರ 50 ವರ್ಷಗಳ ಹಳೆಯ ಮದುವೆಯ ಉಡುಗೆಯನ್ನು ಇಂದಿನ ಕಾಲಕ್ಕೆ ತಕ್ಕಂತೆ ಹೊಸ ಫ್ಯಾಷನ್ ಪ್ರಕಾರ ಬದಲಾಯಿಸಿ ತನ್ನ ವೆಡ್ಡಿಂಗ್ ರಿಸೆಪ್ಶನ್‌ಗೆ ಬಳಸಿಕೊಂಡಳು. ನೀವು ಸಹ ನಿಮ್ಮ ಮನೆಯ ಹಿರಿಯರಾದ ತಾಯಿ, ಅತ್ತೆ, ಅಜ್ಜಿಯರ ಹಳೆ ಕಾಲದ ಸೀರೆಗಳನ್ನು ಇಂದಿನ ಫ್ಯಾಷನ್‌ಗೆ ತಕ್ಕಂತೆ ಬದಲಾಯಿಸಿ ಬಳಸಬಾರದೇಕೆ?
ಫ್ಯಾಷನೆಬಲ್ ಲುಕ್ಸ್
ಆಧುನಿಕ ಡಿಸೈನರ್‌ಗಳ ಪ್ರಕಾರ, ದಿನನಿತ್ಯ ಹೊಸ ಹೊಸ ಫ್ಯಾಷನ್ನಿನ ಈ ಕಾಲದಲ್ಲಿ, ಜನ ಸ್ಟೈಲಿಶ್ ಆಗಿರಲು, ಹಲವು ಪ್ರಯಾಸಗಳನ್ನು ಪಡುತ್ತಾರೆ. ನೀವು ಸಹ ಮನೆಯಲ್ಲೇ ಕುಳಿತು ಸ್ಟೈಲಿಶ್ ಹಾಗೂ ಡಿಫರೆಂಟ್ ಡ್ರೆಸ್‌ಗಳ ಕುರಿತು ಹೊಸ ಹೊಸ ಐಡಿಯಾ ಮಾಡಬಹುದು.
ಯುವಜನತೆಗಾಗಿ ಹಳೆಯ ಸೀರೆಗಳಲ್ಲಿ ನೀವು ಶಿಫಾನ್, ಜಾರ್ಜೆಟ್‌ನ ಪ್ಲೇವರ್‌ಪ್ರಿಂಟ್‌ನ ಸೀರೆಗಳಿಂದ ಮ್ಯಾಕ್ಸಿ, ಲಾಂಗ್ ಸ್ಕರ್ಟ್, ಲಂಗ ದಾವಣಿ, ಫ್ರಾಕ್ ಸಹ ಮಾಡಿಸಿಕೊಳ್ಳಬಹುದು. ಇತ್ತೀಚೆಗಂತೂ ಶಿಫಾನ್, ಜಾರ್ಜೆಟ್‌ನ ಟಾಪ್ಸ್ ಬಹಳ ಚಾಲ್ತಿಯಲ್ಲಿವೆ. ಇದರಲ್ಲಿ ನೀವು ಪ್ಲೇನ್ ಅಥವಾ ಪ್ರಿಂಟೆಡ್ ಏನಾದರೂ ಮಾಡಿಸಬಹುದು. ಇಷ್ಟಲ್ಲದೆ ಈಗೆಲ್ಲ ಪ್ಲಾರೋ ಪ್ಯಾಂಟ್ಸ್ ಸಹ ಟ್ರೆಂಡ್‌ನಲ್ಲಿದೆ. ಇವು ಸಹ ಶಿಫಾನ್, ಜಾರ್ಜೆಟ್ ವಸ್ತ್ರಗಳದ್ದಾಗಿವೆ. ನೀವು ಪ್ರಿಂಟೆಡ್, ಪ್ಲೇನ್ ಹೀಗೆ ನಿಮ್ಮ ಆಯ್ಕೆಗೆ ತಕ್ಕಂತೆ ಸಿದ್ಧಪಡಿಸಿಕೊಳ್ಳಿ.
ಮಹಿಳೆಯರಿಗಾಗಿ ಸಾಮಾನ್ಯವಾಗಿ ಮಹಿಳೆಯರು ತಮ್ಮ ಸೀರೆ ಹಳೆಯದಾದಂತೆ ಅದರಿಂದ ಸಲ್ವಾರ್ ಸೂಟ್, ಚೂಡೀದಾರ್ ಹೊಲಿಸುತ್ತಾರೆ. ಅದನ್ನು ನೋಡುತ್ತಲೇ ಹಳೆಯ ಸೀರೆಯ ಬಟ್ಟೆಗಳದು ಎಂದು ತಿಳಿದುಬಿಡುತ್ತದೆ. ಆದರೆ ಇವನ್ನು ಹೀಗೆ ಸಿದ್ಧಪಡಿಸುವ ಸಮಯದಲ್ಲಿ ಸ್ವಲ್ಪ ಸ್ಟೈಲಿಶ್ ಮಾಡಿಸಿದರೆ, ಇದು ಹೊಸ ಮಾಡ್ ಡ್ರೆಸ್ ಆಗಿಬಿಡುತ್ತದೆ. ಸೀರೆಯಿಂದ ಸೂಟ್ ಮಾಡಿಸಬೇಕಿದ್ದರೆ, ಕೇವಲ ಕುರ್ತಾ ಮಾತ್ರ ಮಾಡಿಸಿ. ಲೆಗ್ಗಿಂಗ್ಸ್ ಬೇರೆಯಾಗಿ ತೆಗೆದುಕೊಳ್ಳಿ. ಇದರಿಂದ ಸೂಟ್ ಸ್ಟೈಲಿಶ್ ಆಗಿ ಕಾಣುವುದಲ್ಲದೆ, ಸೀರೆಯಿಂದ ಮಾಡಿಸಿದ್ದು ಎಂದು ತಕ್ಷಣ ಗೊತ್ತಾಗುವುದಿಲ್ಲ. ಹೆವಿ ಸೆರಗು ಇರುವಂಥ ಸೀರೆಗಳಿಂದ ಅದರ ಸೆರಗು ಬೇರ್ಪಡಿಸಿ, ಅದರಿಂದ ಬ್ಲೌಸ್ ಸಿದ್ಧಪಡಿಸಿ. ಅಂಥ ಬ್ಲೌಸ್‌ನ್ನು ಪ್ಲೇನ್ ಶಿಫಾನ್ ಸೀರೆ ಜೊತೆಗೆ ತೊಡಪೇಕು. ಪ್ಲೇನ್ ಸೀರೆ ಜೊತೆ ಹೆವಿ ಬ್ಲೌಸ್‌ನ ಈ ಸ್ಟೈಲ್ ಬಹಳ ಕ್ಯೂಟ್ ಎನಿಸುತ್ತದೆ. ಇಷ್ಟು ಮಾತ್ರವಲ್ಲದೆ, ಎಂಬ್ರಾಯಿಡರಿಯುಳ್ಳ ಸೆರಗಿನ ಲೆಹಂಗಾ ಜೊತೆ ಧರಿಸಲು ಕುರ್ತಿ ಸಹ ಮಾಡಿಸಬಹುದು. ಬಾರ್ಡರ್‌ವುಳ್ಳ ಸೀರೆಗಳ ಬಾರ್ಡರ್ ಬೇರ್ಪಡಿಸಿ, ಯಾವುದೇ ಪ್ಲೇನ್ ಸೀರೆಯೊಂದಿಗೆ ಬಳಸಿಕೊಳ್ಳಿ. ಇದರಿಂದ ಸೀರೆಯ ಅಂದಚೆಂದ ಸಹಜವಾಗಿ ಹೆಚ್ಚುತ್ತದೆ.
ಅಕಸ್ಮಾತ್ ಹಳೆಯ ಪ್ರಿಂಟೆಡ್ ಸೀರೆಗಳು ತುಸು ಹರಿದಿದ್ದರೆ, ಆ ಹರಿದ ಭಾಗ ಬೇರ್ಪಡಿಸಿ, ಆ ಜಾಗದಲ್ಲಿ ಬೇರೊಂದು ಪ್ಲೇನ್ ಸೀರೆಯನ್ನು ಹೊಂದಿಸಿಬಿಡಿ. ಪ್ರಿಂಟ್ಸ್ ನ್ನು ನೆರಿಗೆಯ ಭಾಗದಲ್ಲಿ ತೋರಿಸಿದರಿ, ಇದೊಂದು ಹೊಸ ಡಿಸೈನರ್ ಸೀರೆ ಎನಿಸುತ್ತದೆ. ಇದೇ ತರಹ ಪ್ಲೇನ್ ಸಿಲ್ಕ್ ಸೂಟ್ ಅಥವಾ ಬ್ಲೌಸ್‌ನಲ್ಲೂ ಸೀರೆಯ ಬಾರ್ಡರ್‌ನ್ನು ಸೀರೆಗಳ ಸ್ಟೋಲ್ ಸಹ ಮಾಡಿಸಬಹುದು, ಇವು ಯಾವುದೇ ಡ್ರೆಸ್‌ನೊಂದಿಗೂ ಹೊಂದುತ್ತವೆ. ನೆಟೆಡ್ ಸೀರೆ ಇದ್ದರೆ, ಅದರ ಶ್ರಗ್ಸ್ ಮಾಡಿಸಬಹುದು, ಇನ್ನು ಯಾವುದೇ ಡ್ರೆಸ್ ಜೊತೆ ಕ್ಯಾರಿ ಮಾಡಬಹುದು.
ಯಾವುದೇ ವಸ್ತುವಿಗೆ ಹೀಗೆ ಹೊಸ ಸ್ಟೈಲ್ ಒದಗಿಸಲು ಹೆಚ್ಚಿನ ಬುದ್ಧಿವಂತಿಕೆಯ ಅಗತ್ಯವಿದೆ, ಆಗ ಅದು ಹೆಚ್ಚು ಸ್ಟೈಲಿಶ್ ಎನಿಸುತ್ತದೆ. ನೀವು ಹೆವಿ ವರ್ಕ್ ಸೀರೆಗಳಿಂದ ದುಪಟ್ಟಾ ಸಹ ಮಾಡಿಸಿ, ಪ್ಲೇನ್ ಸೂಟ್ ಜೊತೆ ಧರಿಸಬಹುದು. ಪ್ರಿಂಟೆಡ್ ಸೀರೆಗಳ ದುಪಟ್ಟಾ ಮಾಡಿಸುವುದಿದ್ದರೆ, ಅವನ್ನು ಪ್ಲೇನ್ ಸೂಟ್‌ಗಳ ಜೊತೆ ಕ್ಯಾರಿ ಮಾಡಬಹುದು. ದೇವಿಕಾ ಯಾದವ್ ಸ್ಟೈಲಿಶ್ ಡ್ರೆಸ್‌ಗಾಗಿ ಟಿಪ್ಸ್ ಯಾವುದೇ ಡ್ರೆಸ್‌ನ್ನು ಸ್ಟೈಲಿಶ್‌ಗೊಳಿಸಲು ಅದರಲ್ಲಿ ಬ್ಯೂಟಿಫುಲ್ ಬಟನ್ಸ್ ಸ್ಟೋನ್ಸ್ ಬಳಸಿರಿ.
ಯಾವುದೇ ಡ್ರೆಸ್‌ಗೆ ಮ್ಯಾಚಿಂಗ್ ಲೇಸ್‌ಎಂಬ್ರಾಯಿಡರಿ ಮಾಡಿಸಿ, ಅದಕ್ಕೆ ಡಿಫರೆಂಟ್ ಲುಕ್ಸ್ ಒದಗಿಸಬಹುದು.
ಯಾವುದೇ ಡ್ರೆಸ್‌ನ್ನು ಒಂದೇ ಬಣ್ಣದ್ದಾಗಿ ಮಾಡಿಸಬೇಡಿ, ಏಕೆಂದರೆ ಈಗೆಲ್ಲ ಬಗೆಬಗೆಯ ಬಣ್ಣಗಳು ಹೆಚ್ಚು ಬಳಕೆಯಲ್ಲಿವೆ.
ಪ್ಯಾಚ್ ವರ್ಕ್‌ನಿಂದಲೂ ಡ್ರೆಸ್‌ನ್ನು ಬ್ಯೂಟಿಫುಲ್ ಮಾಡಿಸಬಹುದು.
ಡ್ರೆಸ್ ದೃಷ್ಟಿಯಿಂದ ತೆಳು ಅಥವಾ ಅಗಲದ ಗೋಲ್ಡನ್ ಸಿಲ್ವರ್ ಬಾರ್ಡರ್‌ಗಳನ್ನೂ ಬಳಸಿಕೊಳ್ಳಬಹುದು.