ದೀಪಾವಳಿಯೆಂದರೆ ಢಂ! ಢಮಾರ್‌!! ಸ್ಛೋಟಗಳು ಹಾಗೂ ಮೋಜು ಮಜಾ. ಮಕ್ಕಳು ಹಾಗೂ ಯುವಜನತೆ ಸಂಪೂರ್ಣ ಜೋಶ್‌ನಲ್ಲಿರುತ್ತಾರೆ. ಅವರನ್ನು ನಿಯಂತ್ರಿಸುವುದು ಬಹಳ ಕಷ್ಟ. ಆದರೆ ಮನೆಯ ಪರಿಸ್ಥಿತಿ ಮತ್ತು ಸೂಕ್ಷ್ಮತೆ ನೋಡಿದರೆ ಒಳ್ಳೆಯದು ಕೆಟ್ಟದ್ದನ್ನು ತಿಳಿದುಕೊಳ್ಳುವುದು ಬರೀ ದೊಡ್ಡವರ ಕರ್ತವ್ಯ ಎಂದು ಯುವಕರಿಗೆ ಅನಿಸುತ್ತದೆ. ನಿಮ್ಮ ಕುಟುಂಬದವರೊಂದಿಗೆ ಹ್ಯಾಪಿ ದೀಪಾವಳಿ ಆಚರಿಸಲು ಬಯಸಿದರೆ ಸಾಧಾರಣವಾಗಿ ಎಲ್ಲರೂ ಮಾಡುವ ಈ 9 ತಪ್ಪುಗಳನ್ನು ಮಾಡದಿರಿ.

9-sujhav

ದೀಪಾವಳಿಯಲ್ಲಿ ಅತ್ಯಂತ ಹೆಚ್ಚು ಅಪಘಾತಗಳು ಬಾಣ, ಬಿರುಸುಗಳನ್ನು, ಪಟಾಕಿಗಳನ್ನು ಮತ್ತು ಫ್ಲವರ್‌ ಪಾಟ್‌ಗಳನ್ನೂ ಅಂಟಿಸುವಾಗ ಉಂಟಾಗುತ್ತವೆ. ಮಕ್ಕಳು ಅವನ್ನು ಅಂಟಿಸುವಾಗ ಹಿರಿಯರು ಅವರ ಜೊತೆಯಲ್ಲಿರುವುದು ಬಹಳ ಅಗತ್ಯ. ಅವರು ಮಕ್ಕಳಿಗೆ ಪಟಾಕಿ ಅಂಟಿಸುವ ಸರಿಯಾದ ವಿಧಾನ ತೋರಿಸುತ್ತಾರೆ. ಏನಾದರೂ ತಪ್ಪು ಸಂಭವಿಸಿದರೆ ಸಂಭಾಳಿಸುವುದು ಸುಲಭ. ಯಾವುದಾದರೂ ಪಟಾಕಿ ಅಥವಾ ಬಾಂಬ್‌ ಸಿಡಿಯದಿದ್ದರೆ ಹತ್ತಿರ ಹೋಗಿ ನೋಡಬೇಡಿ. ಮತ್ತೆ ಅದಕ್ಕೆ ಬೆಂಕಿ ಹಚ್ಚುವ ತಪ್ಪು ಮಾಡಬೇಡಿ. ಮನೆಯ ಒಳಗೆ, ಇಕ್ಕಟ್ಟಾದ ಗಲ್ಲಿಗಳಲ್ಲಿ ಪಟಾಕಿಗಳನ್ನು ಹಚ್ಚಬಾರದು. ಪಟಾಕಿಗಳನ್ನು ಹಚ್ಚುವಾಗ ಹತ್ತಿರದಲ್ಲಿ ವಾಹನಗಳು, ಒಣಗಿದ ಕಟ್ಟಿಗೆ, ಗ್ಯಾಸ್‌ ಇತ್ಯಾದಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳು ಇರಬಾರದು. ಪಟಾಕಿ ಹಚ್ಚುವಾಗ ರೇಶ್ಮೆ ಬಟ್ಟೆ, ಲಂಗಾ, ದಾವಣಿಯಂತಹ ಸಡಿಲವಾದ ಬಟ್ಟೆಗಳನ್ನು ಧರಿಸಿರಬಾರದು.

ಕಾಯಿಲೆಯವರು, ವಯಸ್ಸಾದವರು, ಎಳೆಯ ಮಕ್ಕಳು ಮತ್ತು ಸಾಕು ಪ್ರಾಣಿಗಳ ಸುತ್ತಮುತ್ತ ಪಟಾಕಿಗಳನ್ನು ಹಚ್ಚಬೇಡಿ. ಜೋರಾದ ಶಬ್ದ ಹಾಗೂ ತೀಕ್ಷ್ಣ ಬೆಳಕಿನಿಂದ ಅವರಿಗೆ ಹಾಗೂ ಪ್ರಾಣಿಗಳಿಗೆ ತೊಂದರೆಯಾಗುತ್ತದೆ. ಪ್ರಾಣಿಗಳು ನಿಯಂತ್ರಣವಿಲ್ಲದೇ ಯಾವುದಾದರೂ ಅನಾಹುತಕ್ಕೆ ಗುರಿಯಾಗುತ್ತವೆ.

836245-01-02

ತೊಂದರೆ ಎಂದಿಗೂ ಬಾಗಿಲನ್ನು ತಟ್ಟಿ ಬರುವುದಿಲ್ಲ. ಅದು ಕರೆಯದೇ ಬಂದ ಅತಿಥಿಯಂತೆ ನಮ್ಮ ಮುಂದೆ ಎರಗುತ್ತದೆ. ಆಗ ನಾವು ಯಾವುದಾದರೂ ಒಂದು ರೀತಿ ಅದನ್ನು ನಿಭಾಯಿಸಬೇಕು. ದೀಪಾವಳಿಯಲ್ಲಿ ಅಪಘಾತಗಳ ಸಂಖ್ಯೆ ಸಾಕಷ್ಟು ಹೆಚ್ಚುತ್ತಲೇ ಇದೆ. ಈ ಅಪಘಾತಗಳಿಂದ ರಕ್ಷಿಸಿಕೊಳ್ಳಲು ಪ್ರಥಮ ಚಿಕಿತ್ಸೆಗೆ ಮನೆಯಲ್ಲಿ ಸಾಕಷ್ಟು ಔಷಧಿಗಳು, ನೀರು ತುಂಬಿದ ಬಕೆಟ್‌ಗಳು, ಫ್ರಿಜ್‌ನಲ್ಲಿ ಮಂಜುಗಡ್ಡೆ ಇತ್ಯಾದಿ ಅಗತ್ಯವಾಗಿ ಇರಬೇಕು. ವಯಸ್ಸಾದವರು ಮತ್ತು ಮಕ್ಕಳು ಇವರು ಮನೆಯಲ್ಲಿ ಪ್ರಥಮ ಚಿಕಿತ್ಸೆಯ ವ್ಯವಸ್ಥೆ ಅತ್ಯಂತ ಅಗತ್ಯ.

ದೀಪಾವಳಿಯ ಸಂತಸವನ್ನು ಅತ್ಯಂತ ಹೆಚ್ಚು ಪ್ರಭಾವಿತಗೊಳಿಸುವುದು ಹುರಿದ ಕರಿದ ಆಹಾರ ಮತ್ತು ಹೊರಗಿನ ಸಿಹಿತಿಂಡಿಗಳು. ರುಚಿಯಾಗಿದೆ ಎಂದು ಅವನ್ನು ಹೆಚ್ಚು ತಿನ್ನಬೇಡಿ. ವಿಶೇಷವಾಗಿ ನಿಮ್ಮ ಮನೆಯಲ್ಲಿ ಯಾರಾದರೂ ವೃದ್ಧರು, ಡಯಾಬಿಟೀಸ್‌, ಆಸ್ತಮಾ ಪೀಡಿತರು ಇದ್ದರೆ ಅವರ ಆರೋಗ್ಯ ಕೆಡುತ್ತದೆ. ನಂತರ ಆಸ್ಪತ್ರೆ ಓಡಾಟದಲ್ಲಿ ಇಡೀ ದೀಪಾವಳಿ ಹಬ್ಬ ಸಪ್ಪಗಾಗುತ್ತದೆ. ಜೊತೆಗೆ ಬಜೆಟ್‌ ಕೂಡ ಏರುಪೇರಾಗುತ್ತದೆ.

838463-01-02

ಸಾಮಾನ್ಯವಾಗಿ ದೀಪಾವಳಿಯ ವ್ಯವಸ್ತತೆಯಲ್ಲಿ ನಾವು ಶಾಪಿಂಗ್‌ನ್ನು ಮುಂದೆ ಹಾಕುವ ತಪ್ಪನ್ನು ಮಾಡುತ್ತೇವೆ. ಆ ವಸ್ತುವಿನ ಅಗತ್ಯ ಬಂದಾಗ ಅದನ್ನು ಎಷ್ಟೇ ಬೆಲೆ ಕೊಟ್ಟಾದರೂ ಖರೀದಿಸಲೇಬೇಕಾಗುತ್ತದೆ. ದುಬಾರಿ ಬೆಲೆಯ ಈ ದಿನಗಳಲ್ಲಿ ಬಜೆಟ್‌ ಬಹಳ ಹೆಚ್ಚಾಗುತ್ತದೆ. ಮಾರುಕಟ್ಟೆಯಲ್ಲಿನ ಜನಜಂಗುಳಿ ಮತ್ತು ಧಾವಂತದಿಂದ ಉಂಟಾಗುವ ಆಯಾಸದಿಂದಲೂ ಪಾರಾಗಬಹುದು. ದೀಪಾವಳಿಯಲ್ಲಿ ತಾಜಾತನದ ಅನುಭವ ಪಡೆಯಬಹುದು.

775448-01-02

 

ದೀಪಾವಳಿಯ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಸೇಲ್ ‌ಹಾಗೂ ಅಗ್ಗದ ವಸ್ತುಗಳ ಮಾರಾಟದ ಭರಾಟೆ ಶುರುವಾಗುತ್ತದೆ. ಒಂದು ಕೊಂಡರೆ ಒಂದು ಉಚಿತ ಆಫರ್‌ನ ಆಮಿಷದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಗ್ರಾಹಕರನ್ನು ಸೆಳೆಯಲು ವ್ಯಾಪಾರಿಗಳು ಏನೇನೋ ಮಾಡುತ್ತಾರೆ. ದೀಪಾವಳಿಯ ಬಂಪರ್‌ ಸೇಲ್‌ನ ಭರಾಟೆಯಲ್ಲಿ ಸಮಾಧಾನವಾಗಿ ಏನನ್ನೂ ನೋಡಲು ಸಾಧ್ಯವಿಲ್ಲ.

SM104994

ಒಮ್ಮೊಮ್ಮೆ ನಾವು ಯಾಮಾರಿ ಹೆಚ್ಚು ಹಣ ಕಳೆದುಕೊಂಡೇ ಮನೆಗೆ ಹೋಗುತ್ತೇವೆ. ಇವನ್ನು ಹಬ್ಬಗಳಲ್ಲಂತೂ ಹೆಚ್ಚುವರಿ ಖರ್ಚು ಬೀಳುತ್ತದೆ. ಆದ್ದರಿಂದ ಬಜೆಟ್‌ಗಿಂತ ಹೆಚ್ಚು ಖರ್ಚು ಮಾಡಬೇಡಿ.

ಉರಿಯುತ್ತಿರುವ ದೀಪಗಳನ್ನು ಮನೆಯ ಪರದೆಗಳಿಂದ, ದಹ್ಯ ವಸ್ತುಗಳಿಂದ ಸಾಧ್ಯವಾದಷ್ಟೂ ದೂರ ಇಡಿ.

ದೀಪಾವಳಿಯಂದು ಮದ್ಯ ಸೇವನೆ, ಜೂಜಾಡುವುದು ಇತ್ಯಾದಿಗಳನ್ನು ಧರ್ಮದೊಂದಿಗೆ ಬೆರೆಸಿ ನೋಡಬೇಡಿ. ಯಾವುದೇ ಧರ್ಮ ಇಂತಹ ಮನೆ ಹಾಳುಮಾಡುವ, ವೈಮನಸ್ಸು ಉಂಟು ಮಾಡುವ ವ್ಯರ್ಥ ಅಭ್ಯಾಸಗಳಿಗೆ ಬೆಂಬಲ ಕೊಟ್ಟಿಲ್ಲ. ಆದ್ದರಿಂದ ನಿಮ್ಮ ಪರಿಶ್ರಮದ ಸಂಪಾದನೆಯನ್ನು ಜೂಜು ಮತ್ತು ಮದ್ಯಗಳಿಗೆ ಪೋಲು ಮಾಡದೆ ಆ ಹಣವನ್ನು ಯಾವುದಾದರೂ ಒಳ್ಳೆಯ ಯೋಜನೆಯಲ್ಲಿ ತೊಡಗಿಸಿದರೆ ಭವಿಷ್ಯದಲ್ಲಿ ನಿಮಗೆ ಸಹಾಯವಾಗುತ್ತದೆ.

diwali-par

ಇಂದು ಜನ ಹೊರಗಿನ ಥಳುಕು ಬಳುಕಿನ ಮೇಲೆ ಹೆಚ್ಚು ನಂಬಿಕೆ ಇಡುತ್ತಾರೆ. ಇಷ್ಟವಿಲ್ಲದಿದ್ದರೂ ಅಕ್ಕಪಕ್ಕದವರು ಮಾಡುತ್ತಿರುವುದನ್ನೇ ಮಾಡುತ್ತಾರೆ. ಯಾರೂ ತಮ್ಮನ್ನು ಕಡಿಮೆ ಎಂದುಕೊಳ್ಳುವುದಿಲ್ಲ. ಅದಕ್ಕಾಗಿ ತಮ್ಮ ಜೇಬಿಗೆ ಎಷ್ಟೇ ಹೊರೆಯಾದರೂ ಪರವಾಗಿಲ್ಲ. ಆದ್ದರಿಂದ ಉಡುಗೊರೆಗಳನ್ನು ಕೊಡುವುದು, ಅಲಂಕಾರ, ಪಟಾಕಿಗಳನ್ನು ನಿಮ್ಮ ಬಜೆಟ್‌ಗಿಂತ ಹೆಚ್ಚಾಗಿ ಖರೀದಿಸುವ ತಪ್ಪು ಮಾಡಬೇಡಿ. ಬಂಧುಗಳು, ಮಿತ್ರರು ಹಾಗೂ ಅಕ್ಕಪಕ್ಕದವರೊಂದಿಗೆ ಸರಳವಾಗಿ ಬೆಳಕಿನ ಹಬ್ಬವನ್ನು ಆಚರಿಸಿ.

– ಪಿ. ವಿಶಾಲಾಕ್ಷಿ.  

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ