ಒಂದು ಸಲ ಒಬ್ಬ ಹುಡುಗಿ ಕಾರಿನಿಂದ ಅಮಿತ್‌ನನ್ನು ಗುದ್ದಿ ಅಪಘಾತ ಮಾಡಿಸಿದಳು. ಗಾಯದ ತಪಾಸಣೆಗೆ ಅವನು ಡಾಕ್ಟರ್ ಬಳಿ ಬಂದ. ಬ್ಯಾಂಡೇಜ್ ಕಟ್ಟುತ್ತಾ ಡಾಕ್ಟರ್ ಕೇಳಿದರು, “ಕಾರನ್ನು ಯಾರೋ ಒಬ್ಬ ಹುಡುಗಿ ಓಡಿಸುತ್ತಿದ್ದಾಳೆ ಅಂತ ಗೊತ್ತಾದ ಮೇಲೆ ಇನ್ನಷ್ಟು ಎಚ್ಚರಿಕೆಯಿಂದ ರಸ್ತೆ ಬದಿಗೆ ಸರಿದು ಹೋಗಬಾರದೇ?”
ಅಮಿತ್ ಯಾವುದೋ ಲೋಕದಲ್ಲಿದವನಂತೆ ಹೇಳಿದ, “ಡಾಕ್ಟರ್…. ಯಾವ ರಸ್ತೆ… ಎಂಥ ರಸ್ತೆ… ನಾನಂತೂ ಪಾರ್ಕ್‌ನಲ್ಲಿ ಅವಳ ಮಡಿಲಲ್ಲಿ ಒರಗಿ ಕನಸು ಕಾಣುತ್ತಿದ್ದೆ….”
ಅಪಘಾತ ಯಾಕಾಯಿತು ಎಂದು ಡಾಕ್ಟರ್‌ಗೆ ಅರ್ಥವಾಗದೆ ಇರುತ್ತದೆಯೇ?
ಬಹಳ ಹೊತ್ತಿನಿಂದ ಸುದರ್ಶನ್ ಒಂಟಿಯಾಗಿ ಪಾರ್ಕ್‌ನಲ್ಲಿ ಕುಳಿತಿದ್ದಾನೆಂದು ಅರಿತ ಅವನ ಗೆಳೆಯ ಕೇಳಿದ.
ರಾಹುಲ್ : ಯಾಕೆ ಹೀಗೆ ಸಮಯ ಹಾಳು ಮಾಡುತ್ತಿದ್ದಿ?
ಸುದರ್ಶನ್ : ನಾನೀಗ ಸೇಡು ತೀರಿಸಿಕೊಳ್ಳುತ್ತಿದ್ದೀನಿ…..
ರಾಹುಲ್ : ಯಾರ ಮೇಲೆ ಎಂಥ ಸೇಡು?
ಸುದರ್ಶನ್ : ಈ ಕೆಟ್ಟ ಕಾಲ ನನ್ನನ್ನು ಹಾಳು ಮಾಡಿತು. ಈಗ ಅದನ್ನು ಹಾಳು ಮಾಡುತ್ತಾ ನಾನು ಸೇಡು ತೀರಿಸಿಕೊಳ್ತಿದ್ದೀನಿ!
ಆ ದಿನ ಮಹೇಶ ಆಫೀಸಿಗೆ ರಜೆ ಹಾಕಿದ್ದ. ಅವನು ತಿಂಡಿ ಕಾಫಿ ಮುಗಿಸಿ ಹಾಯಾಗಿ ಟಿ.ವಿ. ನೋಡುತ್ತಾ ಕುಳಿತಿದ್ದ. ಅಷ್ಟರಲ್ಲಿ ಫೋನ್ ರಿಂಗಾಯಿತು. ಅವನು ರಿಸೀವರ್ ತೆಗೆದುಕೊಂಡ. ಹಲೋ ಎಂದು ಹೇಳುವ ಮೊದಲೇ, ಆ ಕಡೆಯಿಂದ ಹೇಳಿದ ಮಾತೇ ಎರಡೆರಡು ಸಲ ಕೇಳಿಬಂತು. ಅದನ್ನು ಕೇಳಿಸಿಕೊಂಡು ಮಹೇಶ್ ರೇಗಾಡಿಬಿಟ್ಟ, “ಏಯ್…. ಸರಿಯಾದ ಮುಠ್ಠಾಳ ನೀನು! ನನ್ನನ್ನೇನು ಕಸ ಗುಡಿಸುವ ಕಾರ್ಪೋರೇಷನ್ನಿನವನು ಅಂದುಕೊಂಡ್ಯಾ?”
ಆಗ ಅವನ ಹೆಂಡತಿ ಪ್ರೀತಿಯಿಂದ ಕೇಳಿದಳು, “ಯಾರ್ರೀ ಅದು ಫೋನ್‌ನಲ್ಲಿ….?”
“ಯಾವನಿಗ್ಗೊತ್ತು? ಯಾವನೋ ಬೇಕೂಫ ಫೋನ್ ಮಾಡಿ `ದಾರಿ ಕ್ಲೀನ್‌ಕ್ಲಿಯರ್ ತಾನೇ?’ ಅಂತ ನನ್ನನ್ನು ಕೇಳ್ತಾನಲ್ಲ?” ಎಂದು ಸಿಡುಕಿದ.
ಗಂಗವ್ವ ಮೊದಲ ಸಲ ಹಳ್ಳಿಯಿಂದ ಬೆಂಗಳೂರಿನ ಕಡೆಗೆ ರೈಲು ಹತ್ತಿದ್ದಳು. ಆಕಸ್ಮಿಕವಾಗಿ ಆಕೆ ರೈಲಿನ ಮೇಲೆ ಬರೆದಿದ್ದ ಒಂದು ಸೈನ್ ಬೋರ್ಡ್ ಗಮನಿಸಿದಳು. ಅದನ್ನು ಓದಿ ಆಕೆಗೆ ಬಹಳ ಕೋಪ ಬಂದಿತು. ಅದರಲ್ಲಿ ಹೀಗೆ ಬರೆಯಲಾಗಿತ್ತು, `ಟಿಕೆಟ್ ಇಲ್ಲದೆ ಪ್ರಯಾಣಿಸುವವರೇ… ಎಚ್ಚರ!’
“ಓಹೋ…. ಇದರರ್ಥ ಟಿಕೆಟ್ ಪಡೆದು ಪ್ರಯಾಣಿಸುವವರು ಹಾಳಾಗಿಹೋಗಲಿ ಅಂತ್ಲೇನು?” ಎಂದು ಗುಡುಗಿದಾಗ ಕಂಪಾರ್ಟ್‌ಮೆಂಟ್‌ನಲ್ಲಿದ್ದವರೆಲ್ಲ ಬೆಚ್ಚಿಬಿದ್ದರು.
ವೀಣಾ ತನ್ನ ಗೆಳತಿ ಪ್ರೇಮಾಳಿಗೆ, ತಾನು ಮದುವೆಯಾಗಲಿದ್ದ ಹುಡುಗನನ್ನು ಪರಿಚಯಿಸಿದಳು. ನಂತರ ಅವನ ಕುರಿತಾಗಿ ಹರಟತೊಡಗಿದರು.
ಪ್ರೇಮಾ : ಹುಡುಗ ಏನೋ ಪರವಾಗಿಲ್ಲ, ಆದರೆ ಅವನು ನಗುವಾಗ ಅವನ ಉಬ್ಬಲ್ಲು ಮಾತ್ರ ನೋಡೋಕ್ಕಾಗಲ್ಲ….
ವೀಣಾ : ಈಗೊಂದಿಷ್ಟು ಹಲ್ಲು ಕಿಸಿಯಲಿ ಬಿಡು, ಮದುವೆ ಆದಮೇಲೆ ಆ ಪ್ರಾಣಿಗೆ ನಾನೆಲ್ಲಿ ನಗುವ ಅವಕಾಶ ಕೊಡ್ತೀನಿ….!
ಹೊಸದಾಗಿ ಮದುವೆಯಾಗಿ ಮನೆತುಂಬಿದ ಸೊಸೆಗೆ ಅತ್ತೆ ತಮ್ಮ ಮನೆಯ ಪರಿಚಯ ಮಾಡಿಕೊಟ್ಟರು, “ನೋಡಮ್ಮ… ನಾನು ಈ ಮನೆಯ ಗೃಹಮಂತ್ರಿ, ಜೊತೆಗೆ ಹಣಕಾಸು ಮಂತ್ರಿ ಕೂಡ. ನಿನ್ನ ಮಾವ ಮನೆಯ ವಿದೇಶಾಂಗ ಮಂತ್ರಿ. ನನ್ನ ಮಗ ಅಂದ್ರೆ ನಿನ್ನ ಗಂಡ ಈ ಮನೆಯ ರಾಜ್ಯಪಾಲ. ನನ್ನ ಮಗಳು ಈ ಮನೆಯ ಮುಖ್ಯಮಂತ್ರಿ. ಈಗ ನೀನು ಹೇಳು… ನಿನಗೆ ಯಾವ ಖಾತೆ ಬೇಕು?”
ಸೊಸೆ ನಸುನಗುತ್ತಾ ಹೇಳಿದಳು, “ನೀವುಗಳು ಇಷ್ಟೆಲ್ಲ ಆಡಳಿತ ವಹಿಸಿಕೊಂಡ ಮೇಲೆ ನಾನು ವಿರೋಧಪಕ್ಷದ ನಾಯಕಿ ಆಗ್ತೀನಿ ಬಿಡಿ.”
ಮನೋಹರ್: ಹೆಂಡತಿಗೆ ಡೈವೋರ್ಸ್ ಕೊಟ್ಟ ಮೇಲೆ ಈಗ ನಿನಗೆ ಬಹಳ ಕಷ್ಟ ಆಗಿರಬೇಕು ಅಲ್ವೇ?
ಸುಧಾಕರ್ : ಛೇ ….ಛೇ! ಈಗ ನಾನು ಸುಖವಾಗಿದ್ದೀನಿ. ಮುಂಚೆ ಇಬ್ಬಿಬ್ಬರ ಅಡುಗೆ, ಪಾತ್ರೆ ಬಟ್ಟೆ ಅಂತ ಕಷ್ಟಪಡ್ತಿದ್ದೆ. ಈಗ ಒಬ್ಬನಿಗೇ ಮಾಡಿಕೊಳ್ಳೋದು ಏನು ಮಹಾ ಕಷ್ಟ….. ಆರಾಮವಾಗಿದೆ.
ಟೀಚರ್ : ನೀನು ದೊಡ್ಡವಳಾಗಿ ಏನು ಮಾಡ್ತೀಯಾ?
ಕಮಲಿ : ಮದುವೆ ಆಗ್ತೀನಿ.
ಟೀಚರ್ : ಅದಲ್ಲ, ನಾನು ಕೇಳಿದ್ದು ಏನು ಆಗ್ತೀಯಾ?
ಕಮಲಿ : ಮದುಮಗಳು.
ಟೀಚರ್ : ಅದಲ್ಲ, ಐ ಮೀನ್, ದೊಡ್ಡನಳಾಗಿ ಏನನ್ನು ಗಳಿಸಲು ಬಯಸುವೆ?
ಕಮಲಿ : ಮದುಮಗ.
ಟೀಚರ್ : ಅದಲ್ಲ, ದೊಡ್ಡನಳಾದ ಮೇಲೆ ಅಮ್ಮಅಪ್ಪನಿಗಾಗಿ ಏನು ಮಾಡಲಿದ್ದಿ?
ಕಮಲಿ : ಅಳಿಯನ್ನ ತರ್ತೀನಿ.
ಟೀಚರ್ : ಅದಲ್ಲ, ನಿನ್ನ ತಾಯಿತಂದೆ ಏನು ಬಯಸುತ್ತಾರೆ?
ಕಮಲಿ : ಮೊಮ್ಮಕ್ಕಳನ್ನು……
ಟೀಚರ್ : ಏ ಪೆದ್ದಿ! ನಿನ್ನ ಜೀವನದ ಉದ್ದೇಶವೇನು?
ಕಮಲಿ : ನಾವಿಬ್ಬರು…. ನಮಗಿಬ್ಬರು…. ಕ್ಲಾಸ್‌ನಲ್ಲಿ ಟೀಚರ್ ತಲೆ ತಿರುಗಿ ಬಿದ್ದುಬಿಟ್ಟರೆಂದು ಬೇರೆ ಮಕ್ಕಳು ನೀರು ತರಲು ಹೋದರು.
ಬಹುದಿನಗಳ ನಂತರ ಬಸ್ ಸ್ಟಾಪ್ ಬಳಿ ಸಿಕ್ಕಿದ ಗೆಳೆಯ ರಾಮಣ್ಣನನ್ನು ಸೋಮಣ್ಣ ಕಳಕಳಿಯಿಂದ, “ಏನಯ್ಯ, ನಿನಗಾದರೂ ಶಾಂತಿ, ನೆಮ್ಮದಿ, ಸೌಖ್ಯ ಇತ್ಯಾದಿಗಳ ಪರಿಚಯ ಇದೆಯೇ?” ಎಂದು ಕೇಳಿದರು.
“ನಮ್ಮಂಥ ವಿವಾಹಿತರಿಗೆ ಇದರರ್ಥ ಹೇಗೆ ತಾನೇ ತಿಳಿಯಬೇಕು? ಅಲ್ಲಿ ಬ್ಯಾಚುಲರ್ಸ್ ಹಾಸ್ಟೆಲ್ ಇದೆಯಲ್ಲ, ಆ ಹುಡುಗರನ್ನು ಕೇಳೋಣ ಬಾ. ಅವರಿಗೆ ಖಂಡಿತಾ ಗೊತ್ತಿರುತ್ತೆ,” ಎನ್ನುವುದೇ?
ಮಹಾಜಿಪುಣ ಮಹಾಬಲಯ್ಯ ಮರಣಶಯ್ಯೆಯಲ್ಲಿದ್ದರು.
ಮಹಾಬಲಯ್ಯ : ಏನೇ…. ಎಲ್ಲಿ ಹಾಳಾಗಿ ಹೋದೆಯೇ?
ರತ್ನಮ್ಮ : ನಾನು ಇಲ್ಲೇ ಇದ್ದೀನಿ ಕಣ್ರಿ.
ಮಹಾಬಲಯ್ಯ : ಬೇರೆಯವರೆಲ್ಲ ಎಲ್ಲಿದ್ದಾರೆ ಅಂತೀನಿ?
ಇತರರು : ಎಲ್ಲರೂ ಇಲ್ಲೇ ಇದ್ದೀವಿ ಅಪ್ಪಾಜಿ.
ಮಹಾಬಲಯ್ಯ : ಎಲ್ಲಾ ಇಲ್ಲೇ ಸಾಯ್ತಿದ್ದೀರಿ ಅಂದ್ಮೇಲೆ ಮುಠ್ಠಾಳರೇ, ಆ ಪಕ್ಕದ ರೂಮಲ್ಲಿ ಫ್ಯಾನ್ ಯಾಕೆ ಓಡ್ತಿದೆ?
ಒಬ್ಬ ಮಾಡರ್ನ್ ಹುಡುಗಿ ಹುಡುಗನಿಗೆ ಫೋನ್ ಮಾಡಿದಳು.
ಹುಡುಗಿ : ಹಲೋ ಬೇಬಿ….
ಹುಡುಗ : ಹಾಯ್ ಡಿಯರ್….. ಹೇಳು.
ಹುಡುಗಿ : ಎಲ್ಲಿದ್ದಿ ಡಾರ್ಲಿಂಗ್, ಬೆಳಗ್ಗಿನಿಂದ ಏನೂ ಸುದ್ದೀನೇ ಇಲ್ಲ.
ಹುಡುಗ : ನಾನಂತೂ ನಿನ್ನದೇ ನೆನಪಿನಲ್ಲಿ ಮುಳುಗಿಹೋಗಿದ್ದೇನೆ.
ಹುಡುಗಿ : ಈಗೇನು ಮಾಡ್ತಿದ್ದಿ?
ಹುಡುಗ : ನಿನ್ನ ಫೋಟೋ ನೋಡುತ್ತಿದ್ದೇನೆ. ನನಗೆ ಬೇರೆ ಕಡೆ ಮನಸ್ಸೇ ನಿಲ್ಲುತ್ತಿಲ್ಲ.
ಹುಡುಗಿ : ನಾನಂತೂ ನಿನಗೆ ಯಾವ ಫೋಟೋನೂ ಕೊಟ್ಟಿಲ್ಲವಲ್ಲ….?
ಹುಡುಗ : ಅರೆ, ನನ್ನ ಹೃದಯದಲ್ಲಿದೆಯಲ್ಲ…. ಅದಕ್ಕಿಂತಲೂ ಬೇಕಾ? ಹಲವು ವರ್ಷಗಳಿಂದ ಅದು ಅಲ್ಲೇ ಇದೆ.
ಹುಡುಗಿ : ಅರೆ, ನಾವು ಮೀಟ್ ಮಾಡಿದ್ದೇ ಮೊನ್ನೆ!
ಹುಡುಗ : ನೀನಿಲ್ಲದ ಒಂದೊಂದು ಕ್ಷಣ ಒಂದೊಂದು ವರ್ಷ ಪಿಂಕಿ….
ಹುಡುಗಿ : ಯಾರದು ಪಿಂಕಿ? ನಾನು ರಿಂಕಿ!
ಹುಡುಗ : ನಿನ್ನೊಂದಿಗೆ ಮಾತನಾಡುವಾಗ ನಾನೆಲ್ಲ ಮರೆತುಬಿಡ್ತೀನಿ….
ಹುಡುಗಿ : ನೀನು ಸಂಜು ತಾನೇ…?
ಹುಡುಗ : ನಾನು ಮಂಜುನೇ ಇರಲಿ, ಇನ್ನು ಮುಂದೆ ಸಂಜು ಆಗ್ತೀನಿ. ಮನೆಯವರು ಹಾಗೆ ಕರೆದರೇನು… ನೀನು ಹೀಗೇ ಕರಿ.
ಹುಡುಗಿ : ನಿನ್ನ ನಂಬರ್ 1234567890 ತಾನೇ?
ಹುಡುಗ : ಇದುರೆಗೂ ಆಗಿರಲಿಲ್ಲ, ಈಗ ಹಾಗೇಂತ ಬದಲಾಯಿಸಿಕೊಳ್ಳಲೇ?