ಸೌಮ್ಯಾಳನ್ನು ಪ್ರತಿದಿನ ಇತರ ಹೆಂಗಸರು ಗಮನಿಸುತ್ತಿರುತ್ತಾರೆ, ಮುಖ್ಯವಾಗಿ ಅವಳು ಸೋನ್‌ಳನ್ನು ಶಾಲೆಗೆ ಬಿಡಲು ಹೋಗುವಾಗ. ಅವರಲ್ಲಿ ಒಬ್ಬ ಮಹಿಳೆ ಅಂದು ಸೌಮ್ಯಾಳನ್ನು ನೀವು ಮಗುವಿಗೆ ಚಿಕ್ಕಮ್ಮ ಆಗಬೇಕೇ ಎಂದು ಕೇಳಿದರು. ಸೌಮ್ಯಾ ನಸುನಕ್ಕು ಸೋನ್ ತನ್ನ ಮಗಳೆಂದು ತಿಳಿಸಿ ಅವರನ್ನು ಬೆರಗಾಗಿಸಿದಳು.
ಅಸಲಿಗೆ 32 ವರ್ಷದ ಸೌಮ್ಯಾ 7 ವರ್ಷದ ಸೋನ್‌ಳ ತಾಯಿ. ಆದರೆ ಅಷ್ಟು ವಯಸ್ಸಾದರೂ ಸೌಮ್ಯಾಳ ಚರ್ಮ ಗಮನಿಸಿದರೆ, ಅವಳ ವಯಸ್ಸನ್ನು ಊಹಿಸಲಾಗದು. ಏಕೆಂದರೆ ಸೌಮ್ಯಾ ತನ್ನ ಚರ್ಮದ ಆರೈಕೆಯನ್ನು ಅಷ್ಟೇ ಎಚ್ಚರಿಕೆಯಿಂದ ಮಾಡುತ್ತಾಳೆ. ಈ ಕಾರಣದಿಂದಲೇ ಅವಳನ್ನು ಎಲ್ಲರೂ ಸೋನ್‌ಳ ಅಕ್ಕಾ ಅಥವಾ ಚಿಕ್ಕಮ್ಮ ಎಂದುಕೊಳ್ಳುತ್ತಾರೆ. ಇದನ್ನು ಕೇಳಿಸಿಕೊಂಡ ಸೌಮ್ಯಾ ತನ್ನ ಚರ್ಮದ ಸೌಂದರ್ಯ ಕಾಪಾಡಿಕೊಳ್ಳುವಲ್ಲಿ 2 ಪಟ್ಟು ಎಚ್ಚರಿಕೆ ವಹಿಸುತ್ತಾಳೆ. ಅವಳು ಮನೆಯಿಂದ ಹೊರಗೆ ಹೊರಡುವ ಮೊದಲು ಆ್ಯಂಟಿ ಏಜಿಂಗ್ ಕ್ರೀಂ ಹಚ್ಚಿಕೊಳ್ಳಲು ಎಂದೂ ಮರೆಯುವುದಿಲ್ಲ. ಏಕೆಂದರೆ, ಬಿಸಿಲಿನಲ್ಲಿ ಬಹಳ ಹೊತ್ತು ಓಡಾಡುವುದರಿಂದ ಚರ್ಮದ ಜೀವಕೋಶಗಳು ಹಾನಿಗೊಳಗಾಗಿ ಸುಕ್ಕು, ಸನ್ ಬರ್ನ್, ಅಲರ್ಜಿಗಳಂಥ ಸಮಸ್ಯೆ ಎದುರಿಸಬೇಕೆಂದು ಅವಳಿಗೆ ಗೊತ್ತು. ಸೌಮ್ಯಾಳ ತರಹವೇ ಎಲ್ಲಾ ಮಹಿಳೆಯರಿಗೂ ತಾವು ಪ್ರೌಢ ವಯಸ್ಸಿನಲ್ಲಿಯೂ ಸೌಂದರ್ಯವತಿಯಾಗಿ ಕಾಣಿಸಿಕೊಳ್ಳಬೇಕೆಂಬ ಹಂಬಲವಿರುತ್ತದೆ. ಆದರೆ ಹೆಚ್ಚುತ್ತಿರುವ ವಯಸ್ಸಿನಿಂದಾಗಿ ಎದುರಾಗುವ ಸೌಂದರ್ಯ ಸಮಸ್ಯೆಗಳು ಅವರ ಈ ಹಂಬಲಕ್ಕೆ ಅಡ್ಡಿಯಾಗುತ್ತವೆ. ಆದರೆ ಪ್ರತಿದಿನ ತ್ವಚೆಯ ಅಗತ್ಯಕ್ಕೆ ತಕ್ಕಂತೆ ಅದರ ವಿಶೇಷ ಆರೈಕೆಗೆ ತೊಡಗಿದರೆ ಅವರ ಈ ಹಂಬಲ ಸುಲಭವಾಗಿ ಪೂರೈಸುತ್ತದೆ.
ಅಂದು ಅನಿಲ್ ತನ್ನ ಟಿಫನ್ ಬಾಕ್ಸ್ ಕೊಂಡೊಯ್ಯಲು ಮರೆತಾಗ, ನಯನಾ ತಾನೇ ಅವನಿಗೆ ಟಿಫನ್ ಬಾಕ್ಸ್ ಕೊಟ್ಟು ಬರಲು ಅವನ ಆಫೀಸಿಗೆ ಹೊರಟಳು. ತಾನು ಅಂದುಕೊಂಡಂತೆಯೇ ಲಂಚ್ ಟೈಮಿಗೆ ಸ್ವಲ್ಪ ಹೊತ್ತು ಮುಂಚೆ ಅವಳು ಅನಿಲನ ಆಫೀಸ್ ತಲುಪಿದ್ದಳು. ಅವಳು ರಿಸೆಪ್ಶನ್‌ನಲ್ಲಿ ಕುಳಿತು ಅನಿಲ್‌ಗಾಗಿ ಕಾಯುತ್ತಿದ್ದಾಗ, ಯಾವುದೋ ನೆಪದಲ್ಲಿ ಆಫೀಸಿನ ಸಿಬ್ಬಂದಿಯೆಲ್ಲ ಆ ಕಡೆ ಬಂದು ಅವಳತ್ತ ಕಣ್ಣುಹಾಯಿಸಿ ಹೋದರು. ಬಹುಶಃ ನಯನಾ ಯಾರೋ ಹೊಸ ಟ್ರೇನಿ ಇರಬೇಕು ಅಥವಾ ಬಾಸ್‌ಗೆ ಹೊಸ ಸೆಕ್ರೆಟರಿ ಇರಬಹುದು ಎಂದುಕೊಂಡರು.
ಆದರೆ ಆಮೇಲೆ ಅನಿಲ್ ಆಕೆ ತನ್ನ ಪತ್ನಿ ಎಂದು ಎಲ್ಲರಿಗೂ ಪರಿಚಯಿಸಿದಾಗ, ಅವರೆಲ್ಲ ಒಮ್ಮೆಲೇ ಆಶ್ಚರ್ಯಗೊಂಡರು. 45ರ ಅನಿಲ್‌ನ ಪತ್ನಿ ಇಷ್ಟು ಯಂಗ್ ಇರಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಬಹುಶಃ ಆಕೆಗೆ 25 ವರ್ಷ ಇರಬಹುದೆಂದು ಎಲ್ಲರೂ ತರ್ಕಿಸಿದರು. ಆದರೆ ನಯನಾಳಿಗಾಗಲೇ 43 ನಡೆದಿತ್ತು. ಈ ವಿಷಯ ತಿಳಿದಾಗ ಅಲ್ಲಿನ ಮಹಿಳಾ ಸಿಬ್ಬಂದಿ ತಮ್ಮನ್ನು ತಾವು ತಡೆಯಲಾಗದೆ, ನೇರ ಆಕೆ ಬಳಿ ಬಂದು ಬ್ಯೂಟಿ ಟಿಪ್ಸ್ ಬಗ್ಗೆ ವಿಚಾರಿಸತೊಡಗಿದರು. ಆಗ ನಯನಾ ಅವರೆಲ್ಲರಿಗೂ ಹೆಚ್ಚುತ್ತಿರುವ ವಯಸ್ಸಿನವರು ಅಗತ್ಯವಾಗಿ ಸ್ಕಿನ್ ಎಕ್ಸ್ಫಾಲಿಯೇಷನ್ ಮಾಡಿಸಿಕೊಳ್ಳಬೇಕೆಂದು ಹೇಳಿದಳು. ಇದರಿಂದ ಡೆಡ್ ಸ್ಕಿನ್ ತೊಲಗಿಹೋಗುತ್ತದೆ, ಅದರಿಂದ ರಕ್ತಸಂಚಾರ ಚುರುಕಾಗುತ್ತದೆ.
ನಿಮ್ಮ ಚರ್ಮಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ವಿಭಿನ್ನ ಬಗೆಯ ಆ್ಯಂಟಿ ಏಜಿಂಗ್ ಕ್ರೀಂ ಲಭಿಸುತ್ತದೆ. ಅದರೊಂದಿಗೆ ತ್ವಚೆ ಮೃದುವಾಗಿರಲು ನೈಟ್ ಕ್ರೀಂ ಬಳಸುವುದು ಲೇಸು. ಅದರಲ್ಲಿ ಅಲ್ಟ್ರಾ ಹೈಡ್ರಾಕ್ಸಿ ಆ್ಯಸಿಡ್ ಇರುವುದರಿಂದ, ಈ ಕ್ರೀಂ ಚರ್ಮವನ್ನು ಮಾಯಿಶ್ಚರೈಸ್‌ಗೊಳಿಸುವ ಜೊತೆ ಜೊತೆಯಲ್ಲೇ ಏಜಿಂಗ್ ಸಮಸ್ಯೆಯನ್ನೂ ದೂರಗೊಳಿಸುತ್ತದೆ.
ದೆಹಲಿಯ ಒಂದು ಮೀಡಿಯಾ ಆಫೀಸ್‌ನಲ್ಲಿ ಕೆಲವು ಹೊಸ ಭರ್ತಿಗಳಾಗಿವೆ. ಹೊಸ ಸಿಬ್ಬಂದಿಯಲ್ಲಿ ಬಹುತೇಕ ಅವಿವಾಹಿತ ಹುಡುಗಿಯರೇ ಹೆಚ್ಚು. ಅಲ್ಲಿನ ಮಹಿಳಾ ಸಿಬ್ಬಂದಿಯಲ್ಲಿ ಬಹುತೇಕ 30-50 ವರ್ಷದವರೇ ಹೆಚ್ಚು. ಇವರಲ್ಲಿ ಒಂದು ಮುಖವಂತೂ ಬಹಳ ಯಂಗ್‌ಬ್ಯೂಟಿಫುಲ್, ಆಕೆ ಪೂಜಾ. ಹೊಸಬರಿಗಂತೂ ಆಕೆ ನವಿವಾಹಿತೆ ಎನಿಸುತ್ತಾಳೆ. ಆದರೆ ಆಕೆ 32ರ ಗಡಿ ದಾಟಿ, 1 ಮಗುವಿನ ತಾಯಿ ಎಂದರೆ ಯಾರೂ ನಂಬೋಲ್ಲ. ಈ ಬ್ಯೂಟಿಯ ರಹಸ್ಯ ಏನೆಂದು ಕೇಳಿದಾಗ, ಕಂಗಳ ಸುತ್ತಮುತ್ತಲಿನ ಕಪ್ಪು ಉಂಗುರ, ಸುಕ್ಕು, ಅನ್ ಈವೆನ್ ಸ್ಕಿನ್ ಟೋನ್ ಹೆಚ್ಚುತ್ತಿರುವ ವಯಸ್ಸಿನ ಮುಖ್ಯ ಸಮಸ್ಯೆಯಾದ್ದರಿಂದ, ಕಂಗಳ ಕೆಳಗೆ ಉತ್ತಮ ಗುಣಮಟ್ಟದ ಸೀರಮ್ ಹಚ್ಚುವುದರಿಂದ ಈ ಸಮಸ್ಯೆ ದೂರವಾಗುತ್ತದೆ ಎಂದಳು ಪೂಜಾ. ಆಕೆ ಎಂದೂ ನೈಟ್ ಕ್ರೀಂ ಹಚ್ಚಲು ಮರೆಯುವುದಿಲ್ಲ. ಅದು ಚರ್ಮವನ್ನು ಸ್ವಸ್ಥಗೊಳಿಸಿ, ಕಾಂತಿ ಚಿಮ್ಮಿಸುತ್ತದೆ. ಇದು ನೈಸರ್ಗಿಕವಾಗಿ ಪೋಷಿಸುವುದರಿಂದ, ಎಂದೂ ಸುಕ್ಕು ಕಲೆ ಉಂಟಾಗುವುದಿಲ್ಲ,