ಹಬ್ಬಗಳು ನಮಗೆ ಹೊಸ ಉತ್ಸಾಹ ನೀಡುತ್ತವೆ. ಜೀವನಕ್ಕೆ ಹೊಸ ತಿರುವು ಕೊಡುತ್ತವೆ ಎಂದರೂ ತಪ್ಪೇನಿಲ್ಲ.
ಪ್ರತಿ ವರ್ಷದಂತೆ ಈ ವರ್ಷ ಹಬ್ಬಕ್ಕಾಗಿ ಮನೆ ಸ್ವಟ್ಠತೆ, ಅಲಂಕಾರ, ಉಡುಗೊರೆಗಳ ಖರೀದಿ ಎಲ್ಲವನ್ನೂ ಮಾಡಿ ಮುಗಿಸಿರಬಹುದು. ಆದರೆ ನೀವು ಈ ಸಲ ನಿಮ್ಮ ಕುಟುಂಬದವರ ಆರೋಗ್ಯದ ಜವಾಬ್ದಾರಿಯನ್ನು ಕೂಡ ವಹಿಸಿಕೊಂಡಿರುವಿರಾ? ಒಂದು ವೇಳೆ `ಇಲ್ಲ’ ಎಂದಾದರೆ ಈಗಲಾದರೂ ನಿಮ್ಮ ಹಾಗೂ ಇಡೀ ಕುಟುಂಬದ ಆರೋಗ್ಯದ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳಿ. ಅದಕ್ಕಾಗಿ ನೀವು ನಿಮ್ಮ ಅಡುಗೆಮನೆಯ ಮೇಕ್‌ಓವರ್ ಮಾಡಿ. ಏಕೆಂದರೆ ನಿಮ್ಮ ಮನೆಯ ಅಡುಗೆಮನೆ ಸ್ವಚ್ಛವಾಗಿದ್ದರೆ ಮತ್ತು ಒಳ್ಳೆಯ ವಾತಾವರಣ ಹೊಂದಿದ್ದರೆ ಇಡೀ ಕುಟುಂಬದ ಆರೋಗ್ಯ ಚೆನ್ನಾಗಿರುತ್ತದೆ.
ಅದಕ್ಕಾಗಿ ಇಂಟೀರಿಯರ್ ಡಿಸೈನರ್‌ಗಳ ಮೇಕ್‌ಓವರ್ ಟಿಪ್ಸ್ ಗಮನಿಸೋಣ.
ಕಿಚನ್ ಸ್ಮಾರ್ಟ್ ಆಗಿರಲಿ
ನೀವು ನಿಮ್ಮ ಹಳೆಯ ಅಡುಗೆಮನೆಯಿಂದ ಬೋರ್ ಆಗಿದ್ದರೆ, ಅದಕ್ಕೆ ಹೊಸ ಲುಕ್ ಕೊಡ ಬಯಸಿದ್ದರೆ, ಹಬ್ಬದ ಈ ಸಂದರ್ಭ ನಿಮಗೊಂದು ಒಳ್ಳೆಯ ಅವಕಾಶವೆಂದೇ ಭಾವಿಸಿ. ಅಂದಹಾಗೆ ಬಹುತೇಕ ದೊಡ್ಡ ಹಬ್ಬಗಳ ಸಂದರ್ಭದಲ್ಲಿ ಹಲವು ಕಂಪನಿಗಳು ಅನೇಕ ಆಫರ್‌ಗಳನ್ನು ಕೊಡುತ್ತವೆ. ಈ ಆಫರ್‌ಗಳನ್ನು ಗಮನದಲ್ಲಿಟ್ಟುಕೊಂಡು ನೀವು ಎಕ್ಸ್ ಚೇಂಜ್ ಆಫರ್ ಅನ್ವಯ ಹಳೆಯ ಸಲಕರಣೆಗಳನ್ನು ಕೊಟ್ಟು ಹೊಸ ಸಲಕರಣೆಗಳನ್ನು ಖರೀದಿಸಬಹುದು.
ಅಡುಗೆಮನೆಯಲ್ಲಿ ಹಳೆಯ ಸಲಕರಣೆಗಳನ್ನು ನಿರಂತರವಾಗಿ ಬಳಸುತ್ತಿರುವುದರಿಂದ ಅವು ಇನ್ನಷ್ಟು ಹಳೆಯದಾಗುತ್ತವೆ. ಜೊತೆಗೆ ಅವುಗಳಲ್ಲಿ ಏನಾದರೊಂದು ಕೊಳೆ ಮೆತ್ತಿಕೊಳ್ಳುತ್ತದೆ. ಆ ಬಳಿಕ ಅವನ್ನು ಎಷ್ಟೇ ಸ್ವಚ್ಛಗೊಳಿಸಿದರೂ ಅವು ಎಷ್ಟಿರಬೇಕೊ ಅಷ್ಟು ನೈರ್ಮಲ್ಯಕರಣವಾಗಿ ಉಳಿಯುವುದಿಲ್ಲ. ಆದರೆ ಹೊಸ ಉಪಕರಣದ ಜೊತೆ ಹೀಗಾಗುವುದಿಲ್ಲ. ನೀವು ಹಳೆಯ ಉಪಕರಣಗಳ ಬದಲಿಗೆ ಒಂದಿಷ್ಟು ಹಣ ಖರ್ಚು ಮಾಡಿ ಲೇಟೆಸ್ಟ್ ಡಿಸೈನಿನ ಪಾತ್ರೆಗಳನ್ನು ಕೊಂಡುಕೊಳ್ಳಬಹುದು.
ಗೃಹಿಣಿಯರ ಬಜೆಟ್ ಹಾಗೂ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಅಂಗಡಿಯವರು ಕೆಲವು ವಿಶೇಷ ಬಗೆಯ ಪಾತ್ರೆಗಳನ್ನು ತಂದಿದ್ದಾರೆ. ಅದರಲ್ಲಿ ನಾನ್‌ಸ್ಟಿಕ್‌ಕಡಾಯಿ, ತವಾ, ಫ್ರೈಯಿಂಗ್ ಪ್ಯಾನ್ ಮುಂತಾದ ಮುಖ್ಯವಾಗಿವೆ. ಈ ಪಾತ್ರೆಗಳಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯಿದೆ. ಇದರ ಹೊರತಾಗಿ ಇಂಡಕ್ಷನ್ ಕುಕ್‌ವೇರ್‌ಗಳಿಗೂ ಬೇಡಿಕೆಯಿದೆ. ಇವುಗಳ ನಿರ್ವಹಣೆ ತುಂಬಾ ಸುಲಭ, ಜೊತೆಗೆ ಫ್ಯಾಷನ್‌ಗೆ ತಕ್ಕಂತೆಯೂ ಇವೆ.
ಮಾಡರ್ನ್ ಕಿಚನ್ ಅಪ್ಲಯೆನ್ಸಸ್
ಮಾಡರ್ನ್ ಕಿಚನ್ ಅಪ್ಲಯೆನ್ಸಸ್ ಮಿತವ್ಯಯವಂತೂ ಆಗಿರುತ್ತವೆ. ಜೊತೆಗೆ ಇವುಗಳ ಲುಕ್ ಕೂಡ ಮಾಡ್ಯುಲರ್ ಕಿಚನ್‌ಗೂ ಚೆನ್ನಾಗಿ ಮ್ಯಾಚ್ ಆಗುತ್ತವೆ. ಈಗ ಮನೆಗಳಲ್ಲಿ ಇಂಡಕ್ಷನ್ ಕುಕಿಂಗ್‌ನ ಹೆಚ್ಚುತ್ತಿರುವ ಬಳಕೆಯಿಂದಾಗಿ ಅಪ್ಲಯೆನ್ಸಸ್‌ಗಳ ಮಾರುಕಟ್ಟೆ ಕೂಡ ತನ್ನ ವ್ಯಾಪ್ತಿ ಹೆಚ್ಚಿಸಿಕೊಂಡಿದೆ.
ನಾನ್‌ಸ್ಟಿಕ್ ಫ್ರೈಯಿಂಗ್ ಪ್ಯಾನ್ : ಹೊಸ ಪಾತ್ರೆಗಳಲ್ಲಿ ನಾನ್‌ಸ್ಟಿಕ್ ಫ್ರೈಯಿಂಗ್ ಪ್ಯಾನ್ ತೆಗೆದುಕೊಳ್ಳಬಹುದು. ಇದರಲ್ಲಿ ಕಡಿಮೆ ತುಪ್ಪ ಮತ್ತು ಎಣ್ಣೆಯಲ್ಲಿ ಪದಾರ್ಥಗಳನ್ನು ಕರಿಯಬಹುದು. ಇವುಗಳಲ್ಲಿ ತಯಾರಿಸಲಾದ ಆಹಾರ ನಿಮ್ಮ ಆರೋಗ್ಯಕ್ಕೂ ಹಿತಕರವಾಗಿರುತ್ತದೆ. ಏಕೆಂದರೆ ಇದರಲ್ಲಿ ತಯಾರಿಸಲಾದ ಆಹಾರಗಳಿಂದ ನೀವು ಹೆಚ್ಚುವರಿ ಕ್ಯಾಲೋರಿ ಮತ್ತು ಕೊಬ್ಬಿನಿಂದ ರಕ್ಷಿಸಿಕೊಳ್ಳಬಹುದು.
ಇಂಡಕ್ಷನ್ ಕುಕ್ಕರ್ : ಹಬ್ಬಗಳ ಈ ಸಂದರ್ಭದಲ್ಲಿ ನೀವು ಇಂಡಕ್ಷನ್ ಕುಕ್ಕರ್‌ನ್ನು ಮನೆಗೆ ತೆಗೆದುಕೊಂಡು ಬನ್ನಿ. ಇದರ ಬಳಕೆಯಿಂದ ಗ್ಯಾಸ್ ಮತ್ತು ವಿದ್ಯುಚಕ್ತಿ ಬಳಕೆ ಕಡಿಮೆಯಾಗುವುದರ ಜೊತೆಗೆ 1 ಗಂಟೆಯಲ್ಲಿಯೇ ಹಲವರಿಗೆ ಅತ್ಯಂತ ಸುಲಭವಾಗಿ ಅಡುಗೆ ಮಾಡಬಹುದು.
ಟೆಫ್ಲಾನ್ ಶೀಟ್ : ಟೆಫ್ಲಾನ್ ಶೀಟ್‌ನ ಪಾತ್ರೆಗಳು ಈಗ ಜೀವನದ ಮುಖ್ಯ ಭಾಗಗಳೇ ಆಗಿಬಿಟ್ಟಿವೆ. ಇವು ನಾನ್‌ಸ್ಟಿಕ್ ಟೆಫ್ಲಾನ್ ಕೋಟಿಂಗ್ ಇದ್ದು, ಬೇಗ ಅಡುಗೆ ಮಾಡಲು ಹಾಗೂ ಸುಲಭವಾಗಿ ಸ್ವಚ್ಛಗೊಳಿಸಲು ಅನುಕೂಲಕರಾಗಿವೆ. ಇವು ನೋಡಲು ಅಷ್ಟೇ ಆಕರ್ಷಕ ಕೂಡ ಆಗಿರುತ್ತವೆ.
ಗ್ರಿಲ್ಲಿಂಗ್ ಪ್ಯಾನ್ : ಈ ಸಲ ನೀವು ಯೂರೋ ಕುಕ್ ಗ್ರಿಲ್ಲಿಂಗ್ ಪ್ಯಾನ್ ಜೊತೆ ಜೊತೆಗೆ ಗ್ರಿಲ್ಡ್ ಫುಡ್‌ನ ಮಜ ಪಡೆದುಕೊಳ್ಳಬಹುದು. ಇದೊಂದು ಒಳ್ಳೆಯ ಕುಕ್ ವೇರ್ ಆಗಿದ್ದು, ಇದರಲ್ಲಿ ಟೆಫ್ಲಾನ್ ಡ್ರಾಫ್ಟ್ ಕೋಟಿಂಗ್ ಮಾಡಲಾಗಿದೆ. ಸಾಮಾನ್ಯ ಕುಕ್ ವೇರ್‌ಗೆ ಹೋಲಿಸಿದರೆ ಇದರಲ್ಲಿ ಕಡಿಮೆ ತುಪ್ಪ ಮತ್ತು ಎಣ್ಣೆ ಬಳಸಬಹುದಾಗಿದೆ.
ಹ್ಯಾಂಡ್ ಬ್ಲೆಂಡರ್ : ಇದೊಂದು ಮಲ್ಟಿಪರ್ಪಸ್ ಗ್ಯಾಜೆಟ್ ಆಗಿದ್ದು, ಇದರಿಂದ ನೀವು ಬೆಣ್ಣೆ ಕಡಿದು ತುಪ್ಪವನ್ನು ತೆಗೆಯಬಹುದು. ಅಷ್ಟೇ ಅಲ್ಲ ಸೂಪ್, ಲಸ್ಸಿ ಮುಂತಾದವುಗಳನ್ನು ಚೆನ್ನಾಗಿ ತಯಾರಿಸಿಕೊಳ್ಳಬಹುದು. ಇದು ನಿಮ್ಮ ಕುಕಿಂಗ್ ಸ್ಟೈಲ್‌ನ್ನು ಸರಳಗೊಳಿಸುತ್ತದೆ.
ಹುಡ್ಸ್ (ಚಿಮಣಿ) : ಈಗ ಮಾರುಕಟ್ಟೆಯಲ್ಲಿ ಒಂದಕ್ಕಿಂತ ಒಂದು ಎಲೆಕ್ಟ್ರಾನಿಕ್ ಹುಡ್ಸ್ ಬಂದಿವೆ. ಇವು ನಿಮ್ಮ ಅಡುಗೆಮನೆಯನ್ನು ಹೊಗೆ ಹಾಗೂ ಕೊಳಕಿನಿಂದ ರಕ್ಷಿಸುತ್ತವೆ. ನಿಮ್ಮ ಅಡುಗೆಮನೆಯಲ್ಲಿ ಚಿಮಣಿಯನ್ನು ಗ್ಯಾಸ್ ಅಥವಾ ಕುಕಿಂಗ್ ಟಾಪ್ಸ್ ಮೇಲೆ ಅಳವಡಿಸಿಕೊಳ್ಳಿ. ಇದು ಅಡುಗೆಮನೆಯಲ್ಲಿ ಹರಡುವ ಹೊಗೆಯಿಂದ ಹಾಳಾಗುವ ಗೋಡೆಗಳನ್ನು ಸ್ವಚ್ಛಗೊಳಿಸಲು ನೆರವಾಗುತ್ತದೆ.
ಮೈಕ್ರೋವೇವ್ : ನಿಮಗೆ ನಿಮ್ಮ ಕುಟುಂಬದವರ ಆರೋಗ್ಯದ ಬಗ್ಗೆ ಕಾಳಜಿ ಇದ್ದಲ್ಲಿ ಒಂದು ಮೈಕ್ರೋವೇವ್ ತೆಗೆದುಕೊಂಡು ಬನ್ನಿ. ಇದರಿಂದ ಅಡುಗೆ ಬೇಗ ತಯಾರಿಸಿಕೊಳ್ಳಬಹುದು. ಜೊತೆಗೆ ತಯಾರಾದ ಆಹಾರ ಪೌಷ್ಟಿಕವಾಗಿರುತ್ತದೆ. ಇದರಲ್ಲಿ ಹಲವು ಬಗೆಯ ರುಚಿಕರ ತಿಂಡಿಗಳನ್ನು ತಯಾರಿಸಬಹುದಾಗಿದೆ.
ಇಕೋಫ್ರೆಂಡ್ಲಿ ಇಂಡಕ್ಷನ್ ಒಲೆ : ಇಂಡಕ್ಷನ್ ಒಲೆಯನ್ನು ಖರೀದಿಸಿ ಆಧುನಿಕ ತಂತ್ರಜ್ಞಾನವನ್ನು ನಿಮ್ಮದಾಗಿಸಿಕೊಂಡ ಹೆಮ್ಮೆಯನ್ನು ಇತರರ ಮುಂದೆ ನಿಮ್ಮದಾಗಿಸಿಕೊಳ್ಳಬಹುದು. ಇದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗದು. ಇದು ನಿಮ್ಮ ಹಣವನ್ನೂ ಉಳಿಸುತ್ತದೆ. ಕಡಿಮೆ ಜಾಗ ಇರುವ ಮನೆಗಳಿಗೆ ಇದು ಅತ್ಯಂತ ಸೂಕ್ತ.
ಫ್ಯಾಟ್ ಬಾಟಮ್ ಹಾಬ್ಸ್ (ಒಲೆ) : ಮಾರುಕಟ್ಟೆಯಲ್ಲಿ ಇಂಥ ಗ್ಯಾಸ್ ಒಲೆಯ ಸಾಕಷ್ಟು ವೆರೈಟಿಗಳು ಲಭ್ಯವಿವೆ. ಈಗ ಕಪ್ಪಾಗದಂತಹ ಬರ್ನರ್‌ಗಳು ಬಂದಿದ್ದು, ಅವನ್ನು ಲೋಹದಿಂದ ತಯಾರಿಸಲಾಗಿರುತ್ತದೆ.
ನೈಫ್ ಸೆಟ್ : ಹಣ್ಣು ಹಾಗೂ ತರಕಾರಿಗಳ ಪೋಷಕಾಂಶ ಕಾಯ್ದುಕೊಂಡು ಹೋಗಲು ನಿಮ್ಮ ಬಳಿ ಎಷ್ಟು ಒಳ್ಳೆಯ ನೈಫ್ ಸೆಟ್ ಇರುತ್ತದೊ, ಅಷ್ಟೂ ಒಳ್ಳೆಯದು. ಸಿಪ್ಪೆ ತೆಗೆಯುವ ಚಾಕುವಿನಿಂದ ಹಿಡಿದು ಪ್ರತಿಯೊಂದು ಬಗೆಯ ಕಟಿಂಗ್‌ಗೂ ಬೆಸ್ಟ್ ನೈಫ್ ಗಳಿರುತ್ತವೆ.
ಕಟ್ಲೆರಿ ಸೆಟ್ : ಈಗ ಮಾರುಕಟ್ಟೆಯಲ್ಲಿ ಹಲವು ಬಗೆಯ ಕಟ್ಲೆರಿ ಸೆಟ್‌ಗಳು ದೊರೆಯುತ್ತಿದ್ದು, ಅವನ್ನು ನೀವು ನಿಮ್ಮ ಆಸಕ್ತಿಗನುಗುಣವಾಗಿ ಖರೀದಿಸಬಹುದು.
ಕಟಿಂಗ್ ಬೋರ್ಡ್ : ತರಕಾರಿ ಕತ್ತರಿಸಲು ನೀವು ಮರದ ಚಾಪಿಂಗ್ ಬೋರ್ಡ್ ಖರೀದಿಸಬಹುದು. ಅದರ ಮೇಲೆ ತರಕಾರಿ ಕತ್ತರಿಸುವ ಮಜವೇ ಬೇರೆಯಾಗಿರುತ್ತದೆ.
ಮಾಡ್ಯುಲರ್ ಕಿಚನ್ ಕ್ಯಾಬಿನೆಟ್ : ನಿಮ್ಮ ಅಡುಗೆಮನೆಯಲ್ಲಿ ಒಂದು ಮಾಡ್ಯುಲರ್ ಕಿಚನ್ ಕ್ಯಾಬಿನೆಟ್ ಇದ್ದರೆ, ಅಡುಗೆಮನೆ ಅತ್ಯಂತ ಸ್ವಚ್ಛ ಹಾಗೂ ಸುಂದರವಾಗಿ ಕಾಣಿಸುತ್ತದೆ. ಇದು ಕೇವಲ ನಿಮ್ಮ ಅಡುಗೆಮನೆಯನ್ನು ಶಿಸ್ತುಬದ್ಧಗೊಳಿಸುವುದಲ್ಲದೆ, ಹಲವು ಕಂಪಾರ್ಟ್‌ಮೆಂಟ್‌ಗಳಿಂದ ಮತ್ತು ಕಪಾಟುಗಳಿಂದ ವಸ್ತುಗಳನ್ನು ಸಮರ್ಪಕವಾಗಿ ಇಡಲು ನೆರವಾಗುತ್ತದೆ. ಒಂದು ಮಾಡ್ಯುಲರ್ ಕಿಚನ್‌ನಲ್ಲಿ ರಾಕ್, ಕ್ಯಾಬಿನೆಟ್, ವರ್ಕ್ ಟಾಪ್, ಚಿಮಣಿ, ಎಗ್ಸಾಸ್ಟ್ ಫ್ಯಾನ್, ಡಿಶ್ ವಾಶರ್ ಎಲ್ಲವೂ ಇರುತ್ತವೆ.
ಕ್ಯಾಬಿನೆಟ್‌ನ್ನು ಬದಲಿಸಿ : ನೀವು ನಿಮ್ಮ ಕ್ಯಾಬಿನೆಟ್‌ನ್ನು ಬದಲಿಸಿ ಅದರಲ್ಲಿ ಲೇಯರ್ಡ್ ಗ್ಲಾಸ್ ಅಳವಡಿಸಬಹುದು. ಈ ಗ್ಲಾಸ್‌ಗಳು ಬೇರೆ ಬೇರೆ ವರ್ಣಗಳಲ್ಲಿ ದೊರೆಯುತ್ತಿವೆ. ಒಂದು ವೇಳೆ ನಿಮ್ಮ ಕ್ಯಾಬಿನೆಟ್‌ನ ಕೆಳಭಾಗದಲ್ಲಿ ಜಾಗವಿದ್ದರೆ, ಅಲ್ಲಿ ನೀವು ಬಾಕ್ಸ್ ಗಳನ್ನು ಮಾಡಿಸಿಕೊಳ್ಳಬಹುದು. ಅವು ಮುಚ್ಚಿದ ಡಸ್ಟ್ ಬಿನ್‌ಗಳಾಗಿ ಕೆಲಸ ಮಾಡುತ್ತವೆ.
ಬೆಳಕು ಕೂಡ ಅಗತ್ಯ : ಅಡುಗೆಮನೆಯನ್ನು ಆಕರ್ಷಕಗೊಳಿಸಲು ಬೆಳಕಿನ ವ್ಯವಸ್ಥೆಯನ್ನು ಅತ್ಯುತ್ತಮಗೊಳಿಸಿ. ಅಡುಗೆಮನೆಯ ಪ್ರತಿ ಮೂಲೆಗೂ ಪ್ರಕಾಶಮಾನವಾಗಿರುವಂತಹ ಲೈಟ್ಸ್ ಅಳವಡಿಸಿ. ನೀವು ಅಡುಗೆಮನೆಯ ಗೋಡೆಗಳ ಹೊರತುಪಡಿಸಿ ಶೆಲ್ಫ್ ಗಳ ಒಳಗೂ ಕೂಡ ಲೈಟ್ಸ್ ಹಾಕಿಸಬಹುದು. ಈ ದೀಪಗಳಿಂದ ಅಡುಗೆಮನೆಯ ಮೆರುಗು ಹೆಚ್ಚುತ್ತದೆ.
– ಪ್ರೇಮಲತಾ