ಫಿಲ್ಮ್ ಗಳಲ್ಲಿನ ಉಡುಪುಗಳು, ನೆಕ್ ಲೈನ್, ಹೇರ್ ಕಟ್, ಮೇಕ್‌ಓವರ್, ಮೇಕಪ್, ಜ್ಯೂವೆಲರಿ ಇತ್ಯಾದಿಗಳನ್ನು ಪ್ರೇಕ್ಷಕರು ಯಾವಾಗಲೂ ಅನುಸರಿಸಿಕೊಂಡು ಬಂದಿದ್ದಾರೆ. ಅವರಿಗೆ ತಾರೆಯರಂತೆ ಸುಂದರವಾಗಿ, ಆಕರ್ಷಕವಾಗಿ ಕಾಣಬೇಕೆಂದು ಆಸೆ. ಇದರ ಬಗ್ಗೆ ಸುಮಾರು 100ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ಕಾಸ್ಟ್ಯೂಮ್ ಡಿಸೈನ್ ಮಾಡಿದ ಲೀನಾದರೂ ಹೀಗೆ ಹೇಳುತ್ತಾರೆ, “ಮೊದಲಿನಿಂದಲೇ ಜನರ ಮನರಂಜನೆಯ ಸಾಧನ ಸಿನಿಮಾಗಳೇ ಆಗಿವೆ. ಅವುಗಳಿಂದ ಅವರು ಪ್ರಭಾವಿತರಾಗುತ್ತಾರೆ. 1966ರಲ್ಲಿ ಆಶಾ ಪಾರೇಖ್‌ರ `ದೋ ಬದನ್’ ಚಿತ್ರದ ಒಂದು ಹಾಡಿಗೆ ಆಶಾ ಸೀರೆ ಧರಿಸಿ ಡ್ಯಾನ್ಸ್ ಮಾಡಬೇಕಿತ್ತು.
“ನೃತ್ಯ ಮಾಡುವಾಗ ಹಾಳಾಗದಂತೆ ಸೀರೆಯನ್ನು ಡಿಸೈನ್‌ಮಾಡಲು ಅವರು ನನಗೆ ಮನವಿ ಮಾಡಿದರು. ಆಗ ನಾನು `ಸ್ಟಿಚ್ಡ್ ಸೀರೆ ವಿತ್ ಸೆರಗು’ ಸಿದ್ಧಪಡಿಸಿದೆ. ಅದನ್ನು ಧರಿಸಿ ಆಶಾ ನರ್ತಿಸಿದರು. ಆ ಹಾಡು ಬಹಳ ಹಿಟ್ ಆಯಿತು. ಆಶಾ ಧರಿಸಿದ್ದ ಆ ಸೀರೆ ಮಹಿಳೆಯರಿಗೆ ಎಷ್ಟು ಇಷ್ಟವಾಯಿತೆಂದರೆ ಅವರೂ ಸಹ ಅಂತಹುದೇ ಸೀರೆಯನ್ನು ಪಾರ್ಟಿಗಳಲ್ಲಿ, ಮದುವೆಗಳಲ್ಲಿ ಧರಿಸತೊಡಗಿದರು. ಹೀಗೆಯೇ ಆಶಾ ಪಾರೇಖ್`ಆಯಿ ಮಿಲನ್ ಕಿ ಬೇಲಾ’ ಮತ್ತು `ಆಯೆ ದಿನ್ ಬಹಾರ್ ಕೆ’ ಚಿತ್ರಗಳಲ್ಲಿ ಧರಿಸಿದ್ದ ಚೂಡಿದಾರ್ ಡ್ರೆಸ್ ಕೂಡ ಬಹಳ ಜನಪ್ರಿಯವಾಯಿತು.
`ಪ್ಯಾರ್ ಕಾ ಮೌಸಮ್’ ಚಿತ್ರದಲ್ಲಿ ಚೂಡಿದಾರ್ ಮತ್ತು ಕಮೀಜ್‌ನೊಂದಿಗೆ ಅದರ ಶ್ರೇಷ್ಠತೆಯೂ ಪ್ರೇಕ್ಷಕರಿಗೆ ಹಿಡಿಸಿತು. ಆಶಾ ನಂತರ ಹೇಮಾಮಾಲಿನಿ ಅವರ 25 ಚಿತ್ರಗಳಿಗೆ ಲೀನಾ ಕಾಸ್ಟ್ಯೂಮ್ ಡಿಸೈನ್ ಮಾಡಿದರು. ಹೇಮಾಮಾಲಿನಿಯ `ಸೀತಾ ಔರ್‌ಗೀತಾ’ ಚಿತ್ರದ ಘಾಘ್ರಾ ರವಿಕೆ ಮತ್ತು ಮಾಡರ್ನ್ ಟ್ರೌಷರ್ ಫುಲ್ ಶರ್ಟ್ ವಿತ್ ಜಾಕೆಟ್ ಬಹಳ ಚೆನ್ನಾಗಿ ಕಂಡುಬಂದಿತು. ಇದಲ್ಲದೆ ಶ್ರೀದೇವಿ ಮತ್ತು ನೀತೂ ಸಿಂಗ್‌ರ ಚಿತ್ರಗಳಲ್ಲಿನ ಉಡುಪುಗಳೂ ಹುಡುಗಿಯರನ್ನು ಆಕರ್ಷಿಸಿದವು. ನೀತೂ ಸಿಂಗ್‌ರ ಲುಕ್ ಮಾಡರ್ನ್ ಆಗಿದ್ದರಿಂದ ಎಲ್ಲ ಪ್ರೊಡ್ಯೂಸರ್‌ಗಳೂ ಅವರನ್ನು ಅದೇ ರೂಪದಲ್ಲಿ ನೋಡಲು ಇಚ್ಛಿಸುತ್ತಿದ್ದರು. `ಖೇಲ್ ಖೇಲ್ ಮೆ,’ `ದೀವಾರ್,’ `ಯಾರಾನಾ’ ಇತ್ಯಾದಿ ಚಿತ್ರಗಳಲ್ಲಿ ಅವರು ಮಿನಿ ಸ್ಕರ್ಟ್‌ನೊಂದಿಗೆ ಟಾಪ್ ಧರಿಸಿದರು. ಅದನ್ನು ಹುಡುಗಿಯರು ಬೇಗನೇ ಅನುಸರಿಸಿದರು. ನೀತೂ ಸಿಂಗ್‌ರ ಬೆಲ್ ಬಾಟಮ್ ಕೂಡ ಪ್ರೇಕ್ಷಕರಲ್ಲಿ ಬಹಳ ಜನಪ್ರಿಯವಾಯಿತು.
ಚೂಡಿದಾರ್ ಕಮೀಜ್
ನಾವು ಯಾವುದಾದರೂ ಹೀರೋಯಿನ್‌ನ ಕಾಸ್ಟ್ಯೂಮ್ ಡಿಸೈನ್ ಮಾಡುವಾಗ ಅವರ ಸಂಪೂರ್ಣ ಶಾರೀರಿಕ ರಚನೆಯನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಏಕೆಂದರೆ ಆ ಪೋಷಾಕು ಅವರಿಗೆ ಚೆನ್ನಾಗಿ ಒಪ್ಪಬೇಕು. ರೇಖಾರ ಇಂಡಿಯನ್ ಲುಕ್ ಬಹಳ ಚೆನ್ನಾಗಿತ್ತು. ಆದ್ದರಿಂದ ಅವರಿಗೆ ಹೆಚ್ಚಾಗಿ ಬೇರೆ ಬೇರೆ ನೆಕ್ ಲೈನ್‌ನೊಂದಿಗೆ ಬ್ಲೌಸ್‌ಗಳನ್ನು ತಯಾರಿಸಲಾಗುತ್ತಿತ್ತು. ಅವರು ಹೆವಿ ಜ್ಯೂವೆಲರಿಯನ್ನೂ ಚೆನ್ನಾಗಿ ಕ್ಯಾರಿ ಮಾಡುತ್ತಾರೆ. `ಜುದಾಯಿ’ ಚಿತ್ರದಲ್ಲಿ ಅವರಿಗೆ ಒಬ್ಬ ಸಾಮಾನ್ಯ ಮಹಿಳೆಯ ಲುಕ್ ಕೊಡಬೇಕಿತ್ತು. ಆದ್ದರಿಂದ ಅವರಿಗೆ ಹತ್ತಿಯ ಸೀರೆಯ ಜೊತೆಗೆ ಮಂಗಳಸೂತ್ರ ಕೊಡಲಾಯಿತು. ಅದರಲ್ಲಿ ಪ್ರತಿ ಸೀರೆಯ ಬಣ್ಣಕ್ಕೆ ತಕ್ಕಂತೆ ಮುತ್ತನ್ನು ಪೋಣಿಸಿ ಮಾಡಲಾಗಿತ್ತು. ಅದನ್ನು ಕಂಡು ಮಹಿಳೆಯರು ಅಂತಹ ಮಂಗಳಸೂತ್ರವನ್ನೇ ಧರಿಸಲು ಆರಂಭಿಸಿದರು. ರೇಖಾರ `ಖೂನ್ ಭರೀ ಮಾಂಗ್’ ಚಿತ್ರದಲ್ಲಿ ಸಾಧಾರಣ ಮಹಿಳೆಯಿಂದ ಕೊಂಚ ಮಾಡರ್ನ್ ಆಗಿ ಮೇಕ್‌ಓವರ್‌ಇತ್ತು. ಅದನ್ನೂ ಸಹ ಮಹಿಳೆಯರು ತಮ್ಮದಾಗಿಸಿಕೊಂಡರು. `ಉಮ್ರಾಮ್ ಜಾನ್’ನ ಹೆವಿ ಲಂಗಾ ರವಿಕೆಯನ್ನೂ ಸಹ ಎಷ್ಟೋ ಮದುವೆಗಳಲ್ಲಿ ಧರಿಸಲಾಯಿತು.
`ಚಾಂದಿನಿ’ಯಲ್ಲಿ ಶ್ರೀದೇವಿ ಸ್ಲೀವ್ ಲೆಸ್ ಬ್ಲೌಸ್ ಜೊತೆಗೆ ಶಿಫಾನ್ ಸೀರೆ ಧರಿಸಿದ್ದೂ ಸಹ ಬಹಳ ಚರ್ಚೆಯಾಗಿತ್ತು. ಶ್ರೀದೇವಿಯ `ಲಮ್ಹೆ’ ಚಿತ್ರದಲ್ಲಿನ `ಘಾಘ್ರಾ’ ಚೋಲಿಯನ್ನೂ ಮಹಿಳೆಯರು ಪ್ರತಿ ನವರಾತ್ರಿಯಲ್ಲಿ ಧರಿಸುತ್ತಿದ್ದರು. `ಚಾಂದಿನಿ’ ಚಿತ್ರದ ಬಿಳಿ ಚೂಡಿದಾರ್ ಮತ್ತು ಕುರ್ತಾ ವಿತ್ ಶೇಡೆಡ್ ದುಪಟ್ಟಾ ಇಂದಿಗೂ ಜನಪ್ರಿಯವಾಗಿದೆ. ಲೀನಾದರೂ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್ ನಿಂದ ಫೈನಲ್ ಆರ್ಟ್ಸ್ ಮುಗಿಸಿ ಚಿತ್ರಗಳಲ್ಲಿ ಕಾಸ್ಟ್ಯೂಮ್ ಡಿಸೈನಿಂಗ್ ಕೆಲಸ ಶುರು ಮಾಡಿದರು. ಚಿತ್ರದ ಕಥೆಯ ಪಾತ್ರದ ಆಧಾರದ ಮೇಲೆ ಹೀರೋಯಿನ್ ಅಥವಾ ಹೀರೋನ ಡ್ರೆಸ್‌ನ್ನು ಕಾಗದದಲ್ಲಿ ರೇಖಾ ಚಿತ್ರ ಬರೆದು ನಿರ್ಮಾಪಕ ಮತ್ತು ನಿರ್ದೇಶಕರಿಗೆ ಪಾತ್ರಕ್ಕೆ ತಕ್ಕಂತೆ ಡ್ರೆಸ್ ತಯಾರಿಸಲೆಂದು ತೋರಿಸಲಾಗುತ್ತದೆ. ನೀತೂ ಸಿಂಗ್, ಪರ್ವೀನ್ ಬಾಬಿರವರಿಗೆ ಮಾಡರ್ನ್ ಲುಕ್ ಇದ್ದಿದ್ದರಿಂದ ಅವರಿಗೆ ಹೆಚ್ಚಾಗಿ ವೆಸ್ಟರ್ನ್ ಔಟ್ ಫಿಟ್‌ನೊಂದಿಗೆ ಸ್ಕಾರ್ಫ್ ಅಥವಾ ಹ್ಯಾಟ್ ಕೊಡಲಾಗುತ್ತಿತ್ತು. ಅದನ್ನು ತಕ್ಷಣವೇ ಪ್ರೇಕ್ಷಕರು ಅನುಸರಿಸುತ್ತಿದ್ದರು. `ಕಾಲಿಯಾ,’ `ಖುದ್ದಾರ್,’ `ಶಾನ್,’ `ದಿ ಬರ್ನಿಂಗ್ ಟ್ರೇನ್,’ `ಸುಹಾಗ್,’ `ಅಮರ್ ಅಕ್ಬರ್ ಆ್ಯಂಟೋನಿ’ ಇತ್ಯಾದಿ ಅಂತಹುದೇ ಚಿತ್ರಗಳಾಗಿದ್ದವು.
ಮಾಧುರಿ ದೀಕ್ಷಿತ್ `ಖಲ್ ನಾಯಕ್’ ಚಿತ್ರದ ಘಾಘ್ರಾ ಚೋಲಿಯ ಮೇಲಿದ್ದ ಮಿರರ್ ವರ್ಕ್ ಇಂದಿಗೂ ಜನಪ್ರಿಯವಾಗಿದೆ. `ಸಾಜನ್’ ಚಿತ್ರದ ಗರಾರಾ ಸೂಟ್‌ನ್ನೂ ಪ್ರೇಕ್ಷಕರು ಇಷ್ಟಪಟ್ಟರು. `ಸಂಗೀತ್’ ಚಿತ್ರದ ಘಾಘ್ರಾ ಚೋಲಿಯನ್ನು ಇಂದಿಗೂ ನವರಾತ್ರಿ ಹಾಗೂ ಮದುವೆಗಳಲ್ಲಿ ಹುಡುಗಿಯರು ಧರಿಸುತ್ತಾರೆ. ಕರಿಶ್ಮಾ ಕಪೂರ್‌ರ `ಧನಾನ್’ ಚಿತ್ರದ ವೆಸ್ಟರ್ನ್ ಔಟ್ ಫಿಟ್ ಕೂಡ ಬಹಳ ಜನಪ್ರಿಯವಾಯಿತು. ಅದರಲ್ಲಿ ಮಿನಿಸ್ಕರ್ಟ್ ಮತ್ತು ಟಾಪ್‌ನೊಂದಿಗೆ ಮ್ಯಾಚಿಂಗ್ ಶೂಸ್‌ನ್ನೂ ಇಷ್ಟಪಡಲಾಯಿತು. ಹಿಂದೆ ಬಟ್ಟೆಗಳಲ್ಲಿ ಎಂಬ್ರಾಯಿಡರಿ, ಜರಿವರ್ಕ್, ಮಿರರ್ ವರ್ಕ್, ಮೋತಿ, ಗೋಟಾ ಇತ್ಯಾದಿ ಮಾಡಿಸುತ್ತಿದ್ದರು. ಇಂದು ಆ ಸ್ಟೈಲ್‌ನಲ್ಲಿ ಬದಲಾವಣೆಯೊಂದಿಗೆ ಪ್ರೇಕ್ಷಕರು ಚಿತ್ರಗಳಲ್ಲದೆ, ಫ್ಯಾಷನ್ ಶೋಸ್, ಇಂಟರ್‌ನೆಟ್‌ಗಳಿಂದ ಬಹಳಷ್ಟು ಮಾಹಿತಿ ಪಡೆಯುತ್ತಿದ್ದಾರೆ.
ಫ್ಯಾಷನ್ ಮತ್ತು ಸಿನಿಮಾ ಯಾವಾಗಲೂ ಜೊತೆ ಜೊತೆಯಲ್ಲಿ ಸಾಗುತ್ತವೆ. ಫ್ಯಾಷನ್ ಡಿಸೈನರ್ ಅರ್ಚನಾ ಕೋಚರ್, “ಫ್ಯಾಷನ್ ಬಗ್ಗೆ ಯೋಚಿಸಿದ ಕೂಡಲೇ ನಮ್ಮ ಮನಸ್ಸಿನಲ್ಲಿ ಗ್ಲಾಮರ್ ನೆನಪಿಗೆ ಬರುತ್ತದೆ. ಅದು ಸಿನಿಮಾದಿಂದಲೇ ಸಿಗುತ್ತದೆ. ಪ್ರೇಕ್ಷಕರು ಸಿನಿಮಾ ನೋಡಿದಾಗ ಕಲಾವಿದರನ್ನು ತಮ್ಮ ಐಕಾನ್‌ಗಳೆಂದು ತಿಳಿದು ಅವರು ಧರಿಸಿದ ಉಡುಪುಗಳನ್ನೇ ಧರಿಸುತ್ತಾರೆ,” ಎನ್ನುತ್ತಾರೆ.
ಅರ್ಚನಾ ಕೋಚರ್, `ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ’ನಲ್ಲಿ ಕಂಗನಾ ರಾಣಾವತ್‌ರ ಉಡುಪುಗಳನ್ನು ಡಿಸೈನ್‌ಮಾಡಿದ್ದರು. ಅದರಲ್ಲಿ ಗೋಲ್ಡನ್ ಕಲರ್‌ನ ಗೌನ್ ಸಾಕಷ್ಟು ಪ್ರಸಿದ್ಧವಾಗಿತ್ತು. ಒಬ್ಬ ಕಲಾವಿದೆ ಧರಿಸಿದ ಹೊಸ ಉಡುಗೆಯನ್ನು ಸಾಮಾನ್ಯ ಪ್ರೇಕ್ಷಕರು ಮಾರುಕಟ್ಟೆಯಲ್ಲಿ ಹುಡುಕುತ್ತಾರೆ. ಡಿಸೈನರ್‌ಗಳಿಗೆ ಇದು ಗೊತ್ತಾದಾಗ ಅವರು ಅಂತಹುದೇ ಉಡುಪನ್ನು ತಯಾರಿಸುತ್ತಾರೆ, ಎಂದು ಅರ್ಚನಾ ಹೇಳುತ್ತಾರೆ.
ಅನಾರ್ಕಲಿ ಡ್ರೆಸ್‌ಗಳು
ವಿದ್ಯಾ ಬಾಲನ್ ಒಂದು ಪಾರ್ಟಿಯಲ್ಲಿ ಧರಿಸಿದ್ದ ಇತ್ತೀಚಿನ ಅನಾರ್ಕಲಿ ಡ್ರೆಸ್‌ನಿಂದ ಜನಪ್ರಿಯರಾದರು. ಇಂದು ಎಲ್ಲ ಕಡೆ ಗಾಢ ಬಣ್ಣಗಳ ಅನಾರ್ಕಲಿ ಡ್ರೆಸ್‌ಗಳ ಮಹಾಪೂರವೇ ಇದೆ. ಮುಂಬರುವ ಟ್ರೆಂಡ್ `ಕಲರ್ ಬ್ಲಾಕಿಂಗ್’ ಆಗಿರುತ್ತದೆ. ಕಾಫ್ತಾನ್ ಮತ್ತು ಟ್ಯೂನಿಕ್ ಮತ್ತೆ ಬರುತ್ತದೆ. ಸಿನಿಮಾಗಳಲ್ಲಿನ ಫ್ಯಾಷನ್‌ನಿಂದ ಸಾಮಾನ್ಯ ಪ್ರೇಕ್ಷಕನಷ್ಟೇ ಪ್ರಭಾವಿತನಾಗುವುದಿಲ್ಲ, ಡಿಸೈನರ್ ಗಳಿಗೂ ಇದರಿಂದ ಲಾಭವುಂಟಾಗುತ್ತದೆ. `ರಂಗೀಲಾ’ ಚಿತ್ರದಲ್ಲಿ ಉರ್ಮಿಳಾ ಮಾತೊಂಡ್‌ಕರ್‌ಗೆ ಉಡುಪು ಡಿಸೈನ್ ಮಾಡಿದ ಮನೀಷ್ ಮಲ್ಹೋತ್ರಾ ಜನಪ್ರಿಯರಾದರು. ಅವರು ತಮ್ಮ ಕಟ್ಸ್ ಹಾಗೂ ಡಿಸೈನ್‌ಗಳಿಗೆ ಪ್ರಸಿದ್ಧರು. ನಂತರ ಅವರು `ಮೊಹಬ್ಬತ್,’ `ರಾಜಾ ಹಿಂದೂಸ್ತಾನಿ,’ `ದಿಲ್ ತೋ ಪಾಗಲ್ ಹೈ’ ನಂತಹ ಚಿತ್ರಗಳಿಗೆ ಕಾಸ್ಟ್ಯೂಮ್ ಡಿಸೈನ್ ಮಾಡಿದರು. ಅವರು ಡಿಸೈನ್ ಮಾಡಿದ ಡ್ರೆಸ್‌ಗಳನ್ನು ಕರೀನಾ ಕಪೂರ್, ಪ್ರಿಯಾಂಕಾ ಚೋಪ್ರಾ ಮತ್ತು ಐಶ್ವರ್ಯಾ ರೈ ಧರಿಸಿದ್ದಾರೆ. ಫ್ಯಾಷನ್ ಫಿಲ್ಮ್ ಗಳಿಂದಷ್ಟೇ ಅಲ್ಲ, ಫ್ಯಾಷನ್ ಪರೇಡ್ ಹಾಗೂ ಮ್ಯಾಗಝೀನ್‌ಗಳಿಂದಲೂ ಬರುತ್ತದೆ. ಕಳೆದ 2 ದಶಕಗಳಿಂದ ಫ್ಯಾಷನ್ ಡಿಸೈನಿಂಗ್ ಮಾಡುತ್ತಿರುವ ಬಬಿತಾ ಹೀಗೆ ಹೇಳುತ್ತಾರೆ, “ಹಳೆಯ ಫ್ಯಾಷನ್ ಸುತ್ತಾಡಿ ಮತ್ತೆ ಹೊಸ ಕಾಂತಿಯೊಂದಿಗೆ ವಾಪಸ್ ಬರುತ್ತದೆ. ಈಗ ಪಟಿಯಾಲಾ, ಅನಾರ್ಕಲಿ, ಶಾರ್ಟ್ ಟಾಪ್ಸ್ ಸಾಕಷ್ಟು ಜನಪ್ರಿಯವಾಗಿವೆ. ಇವನ್ನು 60 ಮತ್ತು 70ರ ದಶಕದಲ್ಲಿ ಹೀರೋಯಿನ್‌ಗಳು ಧರಿಸುತ್ತಿದ್ದರು. ಮುಂಬರುವ ವರ್ಷಗಳಲ್ಲಿ ಬಣ್ಣಗಳ ಜೊತೆ ಜೊತೆಗೆ ಪ್ರಿಂಟ್ ಮತ್ತೆ ಬರುತ್ತದೆ.”
ಜನಪ್ರಿಯ ಫಿಲ್ಮಿ ಫ್ಯಾಷನ್
ಫ್ಯಾಷನ್ ಹೆಚ್ಚಾಗಿ ಕಲ್ಚರ್ ಮತ್ತು ಅಲ್ಲಿನ ಜನರ ರೀತಿನೀತಿಗಳನ್ನು ಅವಲಂಬಿಸುತ್ತದೆ. ಇಂದು ಚಿತ್ರಗಳಲ್ಲಿನ ಫ್ಯಾಷನ್ ಹಾಗೂ ಸಾಮಾನ್ಯ ಫ್ಯಾಷನ್ ಸ್ವಲ್ಪ ವಿಭಿನ್ನವಾಗಿದೆ. ಕೆಲವು ಡ್ರೆಸ್‌ಗಳು ಸುಂದರವಾಗಿದ್ದರೆ ಇಂದೂ ನಡೆಯುತ್ತದೆ. ಪ್ರಿಯಾಂಕಾ ಚೋಪ್ರಾರ `ಫ್ಯಾಷನ್’ ಫಿಲ್ಮ್ನ ಔಟ್‌ಫಿಟ್ ಸಾಕಷ್ಟು ಜನಪ್ರಿಯವಾಗಿತ್ತು. ಕಾಜೋಲ್‌ರ ಸಿಂಪಲ್ ಸೀರೆಯನ್ನೂ ಪ್ರೇಕ್ಷಕರು ಬಹಳ ಇಷ್ಟಪಟ್ಟರು.
10 ವರ್ಷಗಳಿಂದ ಜ್ಯೂವೆಲರಿ ಕ್ಷೇತ್ರದಲ್ಲಿರುವ ಡಿಸೈನರ್ ವಸುಂಧರಾ ಹೀಗೆ ಹೇಳುತ್ತಾರೆ, “ನಾನು `ಜೋಧಾ ಅಕ್ಬರ್’ ಚಿತ್ರದ ಟ್ರೆಡಿಶನಲ್ ಜ್ಯೂವೆಲರಿಯಿಂದ ಪ್ರಭಾವಿತಳಾಗಿ ಒಡವೆಗಳನ್ನು ತಯಾರಿಸಿದೆ. ಅವು ಚೆನ್ನಾಗಿ ಮಾರಾಟವಾದವು. `ಐ ಕ್ಯಾಚಿ’ಯಾದ ಯಾವುದೇ ಜ್ಯೂವೆಲರಿ ನೋಡುವವರಿಗೆ ಇಷ್ಟವಾಗುತ್ತದೆ. ಮುಂಬರುವ ವರ್ಷಗಳಲ್ಲಿ ಮೀನಾಕಾರಿ, ಸ್ಟೋನ್, ಮುತ್ತು ಇತ್ಯಾದಿಗಳಿಂದ ತಯಾರಾದ ಪಾರಂಪರಿಕ ಜ್ಯೂವೆಲರಿ ಬಹಳ ಜನಪ್ರಿಯವಾಗಿರುತ್ತವೆ.
ಪ್ರೇಕ್ಷಕರು ಚಿತ್ರದ ಪಾತ್ರಗಳಿಂದ ಪ್ರೇರಿತವಾಗಿ ಅವರಂತೆಯೇ ಹಾವಭಾವ ಮಾಡುತ್ತಾರೆ ಎಂದು ಮೈಸೂರಿನ ಅಮಿತ್‌ಹೇಳುತ್ತಾರೆ. ಅವರು ಜಾನ್ ಅಬ್ರಹಾಂನಿಂದ ಪ್ರಭಾವಿತರಾಗಿ ಜಾನ್‌ನಂತೆಯೇ ತಮ್ಮ ಕೂದಲನ್ನು ಕತ್ತರಿಸಿಕೊಂಡರು.
ಡಯೆಟೀಶಿಯನ್ ದೇವಯಾನಿ, ರಾಣಿ ಮುಖರ್ಜಿಯ ಸೀರೆಗಳು ಮತ್ತು ಪ್ರಿಯಾಂಕಾರ ಬ್ಲೌಸ್ ಚೆನ್ನಾಗಿರುತ್ತದೆ ಎನ್ನುತ್ತಾರೆ. ಅಂತಹುದೇ ಸೀರೆಗಳು ಹಾಗೂ ಬ್ಲೌಸ್‌ಗಳನ್ನು ತಮಗಾಗಿ ಮಾಡಿಸಿಕೊಂಡಿದ್ದಾರೆ. ಐಶ್ವರ್ಯಾರ `ತಾಲ್’ ಚಿತ್ರದ ಗೌನ್ ಕೂಡ ಅವರಿಗೆ ಬಹಳ ಇಷ್ಟ.
35 ವರ್ಷದ ನಮ್ರತಾ `ಚಾಂದಿನಿ’ ಚಿತ್ರದಿಂದ ಪ್ರಭಾವಿತರಾಗಿ `ಮ್ಯಾಂಗೋ’ ಕಲರ್‌ನ ಶಿಫಾನ್ ಸೀರೆ ವಿಥ್ ಪ್ಲೇನ್ ಬ್ಲೌಸ್ ಹೊಲಿಸಿಕೊಂಡರು.