ಫಿಲ್ಮ್ ಗಳಲ್ಲಿನ ಉಡುಪುಗಳು, ನೆಕ್ ಲೈನ್, ಹೇರ್ ಕಟ್, ಮೇಕ್‌ಓವರ್, ಮೇಕಪ್, ಜ್ಯೂವೆಲರಿ ಇತ್ಯಾದಿಗಳನ್ನು ಪ್ರೇಕ್ಷಕರು ಯಾವಾಗಲೂ ಅನುಸರಿಸಿಕೊಂಡು ಬಂದಿದ್ದಾರೆ. ಅವರಿಗೆ ತಾರೆಯರಂತೆ ಸುಂದರವಾಗಿ, ಆಕರ್ಷಕವಾಗಿ ಕಾಣಬೇಕೆಂದು ಆಸೆ. ಇದರ ಬಗ್ಗೆ ಸುಮಾರು 100ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ಕಾಸ್ಟ್ಯೂಮ್ ಡಿಸೈನ್ ಮಾಡಿದ ಲೀನಾದರೂ ಹೀಗೆ ಹೇಳುತ್ತಾರೆ, ``ಮೊದಲಿನಿಂದಲೇ ಜನರ ಮನರಂಜನೆಯ ಸಾಧನ ಸಿನಿಮಾಗಳೇ ಆಗಿವೆ. ಅವುಗಳಿಂದ ಅವರು ಪ್ರಭಾವಿತರಾಗುತ್ತಾರೆ. 1966ರಲ್ಲಿ ಆಶಾ ಪಾರೇಖ್‌ರ `ದೋ ಬದನ್' ಚಿತ್ರದ ಒಂದು ಹಾಡಿಗೆ ಆಶಾ ಸೀರೆ ಧರಿಸಿ ಡ್ಯಾನ್ಸ್ ಮಾಡಬೇಕಿತ್ತು.
``ನೃತ್ಯ ಮಾಡುವಾಗ ಹಾಳಾಗದಂತೆ ಸೀರೆಯನ್ನು ಡಿಸೈನ್‌ಮಾಡಲು ಅವರು ನನಗೆ ಮನವಿ ಮಾಡಿದರು. ಆಗ ನಾನು `ಸ್ಟಿಚ್ಡ್ ಸೀರೆ ವಿತ್ ಸೆರಗು' ಸಿದ್ಧಪಡಿಸಿದೆ. ಅದನ್ನು ಧರಿಸಿ ಆಶಾ ನರ್ತಿಸಿದರು. ಆ ಹಾಡು ಬಹಳ ಹಿಟ್ ಆಯಿತು. ಆಶಾ ಧರಿಸಿದ್ದ ಆ ಸೀರೆ ಮಹಿಳೆಯರಿಗೆ ಎಷ್ಟು ಇಷ್ಟವಾಯಿತೆಂದರೆ ಅವರೂ ಸಹ ಅಂತಹುದೇ ಸೀರೆಯನ್ನು ಪಾರ್ಟಿಗಳಲ್ಲಿ, ಮದುವೆಗಳಲ್ಲಿ ಧರಿಸತೊಡಗಿದರು. ಹೀಗೆಯೇ ಆಶಾ ಪಾರೇಖ್`ಆಯಿ ಮಿಲನ್ ಕಿ ಬೇಲಾ' ಮತ್ತು `ಆಯೆ ದಿನ್ ಬಹಾರ್ ಕೆ' ಚಿತ್ರಗಳಲ್ಲಿ ಧರಿಸಿದ್ದ ಚೂಡಿದಾರ್ ಡ್ರೆಸ್ ಕೂಡ ಬಹಳ ಜನಪ್ರಿಯವಾಯಿತು.
`ಪ್ಯಾರ್ ಕಾ ಮೌಸಮ್' ಚಿತ್ರದಲ್ಲಿ ಚೂಡಿದಾರ್ ಮತ್ತು ಕಮೀಜ್‌ನೊಂದಿಗೆ ಅದರ ಶ್ರೇಷ್ಠತೆಯೂ ಪ್ರೇಕ್ಷಕರಿಗೆ ಹಿಡಿಸಿತು. ಆಶಾ ನಂತರ ಹೇಮಾಮಾಲಿನಿ ಅವರ 25 ಚಿತ್ರಗಳಿಗೆ ಲೀನಾ ಕಾಸ್ಟ್ಯೂಮ್ ಡಿಸೈನ್ ಮಾಡಿದರು. ಹೇಮಾಮಾಲಿನಿಯ `ಸೀತಾ ಔರ್‌ಗೀತಾ' ಚಿತ್ರದ ಘಾಘ್ರಾ ರವಿಕೆ ಮತ್ತು ಮಾಡರ್ನ್ ಟ್ರೌಷರ್ ಫುಲ್ ಶರ್ಟ್ ವಿತ್ ಜಾಕೆಟ್ ಬಹಳ ಚೆನ್ನಾಗಿ ಕಂಡುಬಂದಿತು. ಇದಲ್ಲದೆ ಶ್ರೀದೇವಿ ಮತ್ತು ನೀತೂ ಸಿಂಗ್‌ರ ಚಿತ್ರಗಳಲ್ಲಿನ ಉಡುಪುಗಳೂ ಹುಡುಗಿಯರನ್ನು ಆಕರ್ಷಿಸಿದವು. ನೀತೂ ಸಿಂಗ್‌ರ ಲುಕ್ ಮಾಡರ್ನ್ ಆಗಿದ್ದರಿಂದ ಎಲ್ಲ ಪ್ರೊಡ್ಯೂಸರ್‌ಗಳೂ ಅವರನ್ನು ಅದೇ ರೂಪದಲ್ಲಿ ನೋಡಲು ಇಚ್ಛಿಸುತ್ತಿದ್ದರು. `ಖೇಲ್ ಖೇಲ್ ಮೆ,' `ದೀವಾರ್,' `ಯಾರಾನಾ' ಇತ್ಯಾದಿ ಚಿತ್ರಗಳಲ್ಲಿ ಅವರು ಮಿನಿ ಸ್ಕರ್ಟ್‌ನೊಂದಿಗೆ ಟಾಪ್ ಧರಿಸಿದರು. ಅದನ್ನು ಹುಡುಗಿಯರು ಬೇಗನೇ ಅನುಸರಿಸಿದರು. ನೀತೂ ಸಿಂಗ್‌ರ ಬೆಲ್ ಬಾಟಮ್ ಕೂಡ ಪ್ರೇಕ್ಷಕರಲ್ಲಿ ಬಹಳ ಜನಪ್ರಿಯವಾಯಿತು.
ಚೂಡಿದಾರ್ ಕಮೀಜ್
ನಾವು ಯಾವುದಾದರೂ ಹೀರೋಯಿನ್‌ನ ಕಾಸ್ಟ್ಯೂಮ್ ಡಿಸೈನ್ ಮಾಡುವಾಗ ಅವರ ಸಂಪೂರ್ಣ ಶಾರೀರಿಕ ರಚನೆಯನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಏಕೆಂದರೆ ಆ ಪೋಷಾಕು ಅವರಿಗೆ ಚೆನ್ನಾಗಿ ಒಪ್ಪಬೇಕು. ರೇಖಾರ ಇಂಡಿಯನ್ ಲುಕ್ ಬಹಳ ಚೆನ್ನಾಗಿತ್ತು. ಆದ್ದರಿಂದ ಅವರಿಗೆ ಹೆಚ್ಚಾಗಿ ಬೇರೆ ಬೇರೆ ನೆಕ್ ಲೈನ್‌ನೊಂದಿಗೆ ಬ್ಲೌಸ್‌ಗಳನ್ನು ತಯಾರಿಸಲಾಗುತ್ತಿತ್ತು. ಅವರು ಹೆವಿ ಜ್ಯೂವೆಲರಿಯನ್ನೂ ಚೆನ್ನಾಗಿ ಕ್ಯಾರಿ ಮಾಡುತ್ತಾರೆ. `ಜುದಾಯಿ' ಚಿತ್ರದಲ್ಲಿ ಅವರಿಗೆ ಒಬ್ಬ ಸಾಮಾನ್ಯ ಮಹಿಳೆಯ ಲುಕ್ ಕೊಡಬೇಕಿತ್ತು. ಆದ್ದರಿಂದ ಅವರಿಗೆ ಹತ್ತಿಯ ಸೀರೆಯ ಜೊತೆಗೆ ಮಂಗಳಸೂತ್ರ ಕೊಡಲಾಯಿತು. ಅದರಲ್ಲಿ ಪ್ರತಿ ಸೀರೆಯ ಬಣ್ಣಕ್ಕೆ ತಕ್ಕಂತೆ ಮುತ್ತನ್ನು ಪೋಣಿಸಿ ಮಾಡಲಾಗಿತ್ತು. ಅದನ್ನು ಕಂಡು ಮಹಿಳೆಯರು ಅಂತಹ ಮಂಗಳಸೂತ್ರವನ್ನೇ ಧರಿಸಲು ಆರಂಭಿಸಿದರು. ರೇಖಾರ `ಖೂನ್ ಭರೀ ಮಾಂಗ್' ಚಿತ್ರದಲ್ಲಿ ಸಾಧಾರಣ ಮಹಿಳೆಯಿಂದ ಕೊಂಚ ಮಾಡರ್ನ್ ಆಗಿ ಮೇಕ್‌ಓವರ್‌ಇತ್ತು. ಅದನ್ನೂ ಸಹ ಮಹಿಳೆಯರು ತಮ್ಮದಾಗಿಸಿಕೊಂಡರು. `ಉಮ್ರಾಮ್ ಜಾನ್'ನ ಹೆವಿ ಲಂಗಾ ರವಿಕೆಯನ್ನೂ ಸಹ ಎಷ್ಟೋ ಮದುವೆಗಳಲ್ಲಿ ಧರಿಸಲಾಯಿತು.