ಮಹಾರಾಷ್ಟ್ರದ ಪೈಠಣ್‌ ಅಂದರೆ ನಾರಾಯಣ ಪೇಠ ಮತ್ತು ಜೀಜಾಮಾತಾ ಸೀರೆಗಳು ಮತ್ತು ಕರ್ನಾಟಕದ ಇಳಕಲ್ ಸೀರೆಗಳು ಪಾರಂಪರಿಕ ಸೀರೆಗಳೆಂದು ಬಹಳ ಪ್ರಸಿದ್ಧಿ ಪಡೆದಿವೆ.

ಸೆರಗಿನ ಮೇಲೆ ನವಿಲಿನ ಚಿತ್ರ ಇದು ಪೈಠಣಿ ಸೀರೆಗಳ ವಿಶೇಷ. ನಾರಾಯಣ ಪೇಠ ಸೀರೆಗಳ ಬಾರ್ಡರ್‌ ದೊಡ್ಡದಾಗಿರುತ್ತದೆ ಹಾಗೂ ಜೀಜಾಮಾತಾ ಸೀರೆಗಳ ಬಾರ್ಡರ್‌ ಅತ್ಯಂತ ಚಿಕ್ಕದಾಗಿರುತ್ತದೆ. ಅದೇ ಇಳಕಲ್ ಸೀರೆಯ ಸೆರಗಿನಲ್ಲಿ ತೂಗಾಡುವ ಗುಚ್ಛಗಳು ಅದರ ವಿಶೇಷತೆಯನ್ನು ಬಿಂಬಿಸುತ್ತವೆ.

ಕಾಲಕ್ಕೆ ತಕ್ಕಂತೆ ಪೋಷಾಕಿನಲ್ಲೂ ಭಾರಿ ಬದಲಾವಣೆ ಬಂದಿದೆ. ಅಂದರೆ ತೀರಾ ಇತ್ತೀಚಿನತನಕ ಮಹಿಳೆಯರು ಇವನ್ನು ಸೀರೆಯ ರೂಪದಲ್ಲಿ ದರಿಸುತ್ತಿದ್ದರು. ಈಗ ಈ ಪಾರಂಪರಿಕ ಸೀರೆಗಳಿಂದ ಆಧುನಿಕ ಪೋಷಾಕುಗಳನ್ನು ಸಿದ್ಧಪಡಿಸಿಕೊಂಡು ಧರಿಸಲು ಹೆಮ್ಮೆಪಡುತ್ತಾರೆ.

ಆಧುನಿಕ ಪೋಷಾಕುಗಳು ಅಷ್ಟೇ ಸುಂದರವಾಗಿ ಗೋಚರಿಸುತ್ತವೆ. ಈ ಪಾರಂಪರಿಕ ಸೀರೆಗಳಿಂದ ಕುರ್ತಿ, ಸ್ಟೋಲ್, ಜಾಕೆಟ್ಸ್ ಮುಂತಾದವುಗಳನ್ನು ಸಿದ್ಧಪಡಿಸಲಾಗುತ್ತಿದೆ.

ಔರಂಗಾಬಾದ್‌ನ ಪೈಠಣದಲ್ಲಿ ತಯಾರಾಗುವ ಸೀರೆಗಳನ್ನು `ಪೈಠಣಿ' ಸೀರೆಗಳೆಂದು ಪ್ರಸಿದ್ಧವಾಗಿವೆ. ಇವು ಹೆಚ್ಚಾಗಿ ಕೈಮಗ್ಗದಿಂದಲೇ ತಯಾರಾಗುತ್ತವೆ.

ಈ ಸೀರೆಗಳಲ್ಲಿ ಉತ್ತಮ ಗುಣಮಟ್ಟದ ರೇಷ್ಮೆಯನ್ನು ಬಳಸಲಾಗುತ್ತದೆ. ಹೀಗಾಗಿ ಈ ಸೀರೆಗಳು ಬಹಳ ಜನಪ್ರಿಯವಾಗಿವೆ. ಸೀರೆಯ ಸೆರಗಿನ ಮೇಲೆ ನವಿಲಿನ ಸುಂದರ ಚಿತ್ರವನ್ನು ನೇಯ್ಗೆ ಮಾಡುವುದು ಇದರ ವಿಶೇಷತೆಯಾಗಿದೆ. ಅದೇ ರೀತಿ ಬೇರೆ ಬೇರೆ ಬಣ್ಣಗಳ ಶೇಡ್‌ ಕೂಡ ಇದಕ್ಕೆ ವಿಭಿನ್ನ ಮೆರುಗನ್ನು ನೀಡುತ್ತದೆ. ಒಂದು ಬಣ್ಣದ ಎಳೆ ಉದ್ದವಾಗಿಯೂ, ಇನ್ನೊಂದನ್ನು ಅಡ್ಡವಾಗಿ ನೇಯ್ಗೆ ಮಾಡಿರುವ ಕಾರಣದಿಂದ ಈ ಸೀರೆಗಳಲ್ಲಿ ವಿಭಿನ್ನ ಶೇಡ್‌ ಕಂಡುಬರುತ್ತದೆ. ಈ ಸೀರೆಗಳು ನೀಲಿ, ನೇರಳೆ, ಮೆರೂನ್‌ ಮತ್ತು ಕಪ್ಪು ಹೀಗೆ ಪ್ರಖರ ವರ್ಣಗಳಲ್ಲಿ ಲಭಿಸುತ್ತವೆ.

ಚಿನ್ನ ಬೆಳ್ಳಿಯ ಬಳಕೆ

p2

ಪೇಶ್ವೆಗಳ ಕಾಲದಲ್ಲಿ ಇಂತಹ ಸೀರೆಗಳ ಸೆರಗಿನ ಅಂಚನ್ನು ಶುದ್ಧ ಚಿನ್ನ ಹಾಗೂ ತಾಮ್ರದ ಮಿಶ್ರಣದಿಂದ ತಯಾರಿಸಲಾಗುತ್ತಿತ್ತು. ಅದರ ಒಂದು ಎಳೆಯನ್ನು ಜರಿ ಎಂದು ಹೇಳಲಾಗುತ್ತಿತ್ತು. ಇತ್ತೀಚಿನ ಸೀರೆಗಳಲ್ಲಿ ಬೆಳ್ಳಿಯ ಮೇಲೆ ಚಿನ್ನದ ಎರಕ ಹೊಯ್ಯಲಾಗುತ್ತದೆ. ಇಂತಹ ಒಂದು ಸೀರೆಯನ್ನು ತಯಾರಿಸಲು ಅನೇಕ ತಿಂಗಳುಗಳೇ ಬೇಕು.

ಸೀರೆ ನೇಯುವ ಅದನ್ನು ಎಷ್ಟೇ ಚೆನ್ನಾಗಿ ರೂಪಿಸಿರಬಹುದು, ಆದರೆ ಜರಿಯ ಬಾರ್ಡರ್‌ ಸಿದ್ಧಪಡಿಸಲು ನುರಿತ ಕೆಲಸಗಾರ ಬೇಕೇಬೇಕು. ಸೀರೆಯ ಬಣ್ಣ ಯಾವುದೇ ಆಗಿರಬಹುದು. ಆದರೆ ಸೀರೆಯ ಸೆರಗು ಮಾತ್ರ ಜರಿಯದ್ದೇ ಆಗಿರುತ್ತದೆ.

ಈ ಸೀರೆಗಳಿಂದ ಇನ್ನೂ ಬೇರೆ ಬೇರೆ ಬಗೆಯ ಆಧುನಿಕ ಬಟ್ಟೆಗಳನ್ನು ತಯಾರಿಸಲಾಗುತ್ತದೆ. ಫ್ಯಾಷನ್‌ ಡಿಸೈನರ್‌ ಪೂರ್ಣಿಮಾ ಈ ಕುರಿತಂತೆ ಹೀಗೆ ಹೇಳುತ್ತಾರೆ, ``ಪೈಠಣಿ ಸೀರೆಗಳಿಂದ ಸುಂದರ ಅರ್ನಾಕಲಿ ಸೂಟ್‌ಗಳನ್ನು ತಯಾರಿಸಬಹುದು. 20 ನವಿಲುಗಳುಳ್ಳ ಸೀರೆಗೆ, ಇನ್ನು 20 ನವಿಲುಗಳುಳ್ಳ ಸೀರೆ ಜೋಡಿಸಿ 40 ನವಿಲುಗಳುಳ್ಳ ಅರ್ನಾಕಲಿ ಸೂಟನ್ನು ತಯಾರಿಸಬಹುದಾಗಿದೆ. ಇನ್ನು ವಿಶೇಷವಾಗಿ ಪಾರ್ಟಿವೇರ್‌ಗಾಗಿ ಡಿಸೈನ್‌ ಮಾಡಲಾಗಿದೆ.

ಕ್ರಾಸ್‌ ಕಲ್ಚರ್‌ ಮಾಡಿದ ಔಟ್‌ಫಿಟ್ಸ್ ಪಾರ್ಟಿಯ ಶೋಭೆ ಹೆಚ್ಚಿಸುತ್ತವೆ. ಪೈಠಣಿ ಸೀರೆಗಳ ಬಾರ್ಡರ್‌ನ ಟ್ಯೂಬ್‌ ಟಾಪ್‌ ಪ್ಯಾಂಟಿನ ಮೇಲೆ ಚೆನ್ನಾಗಿ ಒಪ್ಪುತ್ತದೆ. ವೈಟ್‌ ಅಥವಾ ಆಫ್‌ ವೈಟ್‌ನ ಡ್ರೆಸ್‌ನ ಮೇಲೆ ಗಾಢ ವರ್ಣದ ಬಾರ್ಡರಿನ ಸ್ಟೋಲ್ ‌ಬಹಳ ಸುಂದರವಾಗಿ ಕಾಣುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ