ಭಾರತೀಯ ಉಡುಗೆಗಳ ಸ್ಟೈಲ್‌ನ್ನು ಆಧುನಿಕ ರೂಪದಲ್ಲಿ ಪ್ರಸ್ತುತಗೊಳಿಸುವುದು ಶೃತಿ ಸಂಚೇತಿಯವರಂಥ ಫ್ಯಾಷನ್ ಡಿಸೈನರ್ಸ್‌ಗಳ ವೈಶಿಷ್ಟ್ಯವಾಗಿದೆ. ಅವರೇ ರೂಪಿಸಿದ ಕೆಲವು ವಿಶಿಷ್ಟ ವಿನ್ಯಾಸಗಳು ಇಲ್ಲಿವೆ. ಸಂಪ್ರದಾಯ, ಸಂಸ್ಕ್ತಿ, ಬಣ್ಣಗಳು ಮೇಳೈಸಿರುವ ಈ ಉಡುಗೆಗಳು ಹೇಗಿವೆ....?

ಫ್ಯೂಷನ್ನಿನ ಮೋಡಿ

ವಿನಮ್ರ ಸ್ವಭಾವದ ಶೃತಿ ಸಂಚೇತಿ ಫ್ಯಾಷನ್‌ ಡಿಸೈನಿಂಗ್‌ ಜೊತೆ ನಾಗ್‌ಪುರದ ಖಾಸಗಿ ಕಾಲೇಜಿನಲ್ಲಿ ಫ್ಯಾಷನ್‌ ಡಿಸೈನಿಂಗ್ ಕಲಿಸುವುದಲ್ಲದೆ, 'ಪಿನಾಕೆಲ್ ‌ಶೃತಿ ಸಂಚೇತಿ' ಎಂಬ ಕಂಪನಿಯನ್ನೂ ನಡೆಸುತ್ತಿದ್ದಾರೆ.

fashion-2

``ನಾನು ನನ್ನ ಡಿಸೈನ್‌ಗಳನ್ನು ಪಾಶ್ಚಾತ್ಯ ಸಭ್ಯತೆಯಿಂದ ಪ್ರಭಾವಿತಗೊಳ್ಳಲು ಬಿಡುವುದಿಲ್ಲ. ನಾನು ಭಾರತೀಯ ಶೈಲಿಯನ್ನೇ ಆಧುನಿಕ ರೀತಿಯಲ್ಲಿ ಪ್ರಸ್ತುತಪಡಿಸುತ್ತೇನೆ. ಭಾರತೀಯ ಸಾಂಪ್ರದಾಯಿಕ ಶೈಲಿಯನ್ನು ಹೊಸ ಸ್ಟೈಲ್‌ನಲ್ಲಿ ಯುವಜನತೆಗೆ ತಲುಪಿಸುವೆ, ಜೊತೆಗೆ ಮಹಾರಾಷ್ಟ್ರದ ಸಂಸ್ಕೃತಿಯನ್ನೂ ಮೇಳೈಸಿರುವೆ,'' ಎನ್ನುತ್ತಾರೆ.

 

ಮಹಾರಾಷ್ಟ್ರದ ಸಾಜ್‌ ಕಳೆದ 5 ವರ್ಷಗಳಿಂದ ಲ್ಯಾಕ್ಮೆ ಫ್ಯಾಷನ್‌ ವೀಕ್‌ನಲ್ಲಿ ತಮ್ಮ ವಿಭಿನ್ನ ಡಿಸೈನ್‌ಗಳನ್ನು ಮಾಡೆಲ್‌ಗಳ ಮುಖಾಂತರ ರಾಂಪ್‌ ಶೋ ನಡೆಸಿದ್ದಾರೆ. ಥಾರ್‌, ಸ್ವದೇಶೀ, ಸೂಫಿ ಇತ್ಯಾದಿ ವಿವಿಧ ಉಡುಗೆಗಳ ರಾಂಪ್‌ ಶೋ ನಡೆಸಿದ್ದಾರೆ. ಕಳೆದ ಲ್ಯಾಕ್ಮೆ ವಿಂಟರ್‌ ಫೆಸ್ಟಿವಲ್‌ನಲ್ಲಿ ಆಕೆ `ಸಾಜ್‌' ಕಾನ್‌ಸೆಪ್ಟ್ ನ ಜೊತೆ ಮಹಾರಾಷ್ಟ್ರದ ಉಡುಗೆಗಳನ್ನು ರಾಂಪ್‌ಗಳಿಸಿದರು.

fashion-6

ಮಹಾರಾಷ್ಟ್ರದ ಮಹಿಳೆ ಸರ್ವಾಲಂಕಾರ ಭೂಷಿತೆಯಾಗಿ ಸಿಂಗರಿಸಿಕೊಂಡಾಗ ಅದನ್ನು `ಸಾಜ್‌' ಶೈಲಿ ಎನ್ನುತ್ತಾರೆ. ಸಾಮಾನ್ಯವಾಗಿ ಮಹಾರಾಷ್ಟ್ರದ ಫ್ಯಾಷನ್‌ ಎಂದಾಕ್ಷಣ ಎಲ್ಲರೂ ಪೈಠಣಿ ಉಡುಗೆಗಳನ್ನೇ ನೆನೆಸುತ್ತಾರೆ. ಆದರೆ ಇಲ್ಲಿ ಶಹಾಪುರಿ, ರಾಸ್ತಾ ನಾಲಿ, ರೈಪ್‌, ಕರತಾಕಾರಿ, ಜ್ಯೋತಿ ಇತ್ಯಾದಿಗಳು ಕಾಟನ್‌ ರೇಷ್ಮೆಯಲ್ಲಿರುತ್ತವೆ.

ಪೈಠಣಿಗೆ ಹೊಸ ಲುಕ್ಸ್

fashion-3

ಶೃತಿ ಹೇಳುವುದೆಂದರೆ ಆಕೆ ಪೈಠಣಿಗೆ ಹೊಸ ಲುಕ್ಸ್ ನೀಡಲು ಇದಕ್ಕೆ ಕಸೂತಿ ಜೊತೆ ಸಿಲ್ಕ್ ಕಾಟನ್‌ ಬೆರೆಸಿದ್ದಾರೆ. ಇಂಥ ಉಡುಗೆಗಳನ್ನು ಲಾಂಚ್‌ ಮಾಡಲು ಮಹಾರಾಷ್ಟ್ರ ಸರ್ಕಾರ ಇವರಿಗೆ ಸಹಕಾರ ನೀಡಿದೆ.

ಪರಿಶ್ರಮ ತಂದ ಗರಿಮೆ

fashion-4

ನಾಗ್‌ಪುರ್‌ನಲ್ಲಿ ಕೇವಲ ರೂ.80 ಸಾವಿರ ಹೂಡಿ ತಮ್ಮ ಕಂಪನಿ ಆರಂಭಿಸಿದ ಶೃತಿ, ವಿನ್ಯಾಸ ಕ್ಷೇತ್ರದಲ್ಲಿ ಸತತ ದುಡಿಮೆಯಿಂದ ಇಂದು ಭಾರತದಾದ್ಯಂತ 26 ಮತ್ತು ವಿದೇಶಗಳಲ್ಲಿ 56 ಸ್ಟೋರ್ಸ್‌ ಹೊಂದಿದ್ದಾರೆ. ಇಂದು ಅವರ ಸಂಪಾದನೆ ಕೋಟಿಗಳನ್ನು ಮೀರಿದೆ. ಈ ಕ್ರೆಡಿಟ್‌ನ್ನು ಆಕೆ ತಮ್ಮ ಪತಿ ಹಾಗೂ ಅತ್ತೆ ಮನೆಯವರಿಗೆ ನೀಡುತ್ತಾರೆ. ಇವರ ಮಕ್ಕಳಾದ ರಚನಾ, ಕರಣ್‌ರನ್ನು ಸಂಭಾಳಿಸಿಕೊಂಡು ಇಂದು ಬಿಸ್‌ನೆಸ್‌ನಲ್ಲೂ ಹೆಚ್ಚಿನ ಸಹಾಯ ಮಾಡುತ್ತಿದ್ದಾರೆ. ಬಣ್ಣಗಳ ಅದ್ಭುತ ಮಿಶ್ರಣ ಮಹಾರಾಷ್ಟ್ರದ ಫ್ಯಾಬ್ರಿಕ್ಸ್ ತಮ್ಮ ಬಣ್ಣ ಮತ್ತು ಸೌಂದರ್ಯಕ್ಕಾಗಿ ಪ್ರಸಿದ್ಧ. ಲಿಕ್ವಿಡ್‌ ಗೋಲ್ಡ್, ಹೊಳೆ ಹೊಳೆಯುವ ಕೆಂಬಣ್ಣ, ಎಮೆರಾಲ್ಡ್ ಗ್ರೀನ್‌, ಶೈನಿಂಗ್‌ ಬ್ಲೂ, ಗಾಢ ಬದನೆ ಬಣ್ಣ ಇತ್ಯಾದಿಗಳಿಂದ ಹೊಸ ಪ್ಯಾಟರ್ನ್‌ ತಯಾರಿಸುವುದು ಶೃತಿಯ ಹವ್ಯಾಸ. ಘಾಘ್ರಾ ಚೋಲಿ, ಲುಗಟಾ ಪ್ಯಾಂಟ್‌, ಜಾಮಾ, ಅಚ್‌ಕನ್‌, ಜ್ಯೂವೆಲರಿ ನೆಕ್‌ಲೈನ್‌ ಇತ್ಯಾದಿ ತಯಾರಿಸಿ ಶೃತಿ ಅವನ್ನು ಜನಪ್ರಿಯಗೊಳಿಸಿದ್ದಾರೆ. ಪ್ರತಿ ಡಿಸೈನ್‌ ರೂಪಿಸುವಾಗಲೂ ಆಕೆ ಪ್ರಾಚೀನ ನವೀನ ವಿನ್ಯಾಸಗಳನ್ನು ಮೇಳೈಸುತ್ತಾರೆ.

fashion-5

ಟ್ರೆಂಡ್‌ ಕುರಿತು ಶೃತಿ ಹೇಳುತ್ತಾರೆ, ``ನಾನು ಟ್ರೆಂಡ್‌ಗೆ ಹೆಚ್ಚಿನ ಮಹತ್ವ ಕೊಡುವುದಿಲ್ಲ. ಒಂದು ಸೀಸನ್‌ ನಂತರ ಆ ಉಡುಗೆಗಳನ್ನು ಧರಿಸಲಾಗದು ಎಂದು ನಿರ್ಲಕ್ಷಿಸಲಾಗದು. ಉಡುಗೆಗಳೆಂದೂ ಟೈ‌ಸ್‌ ಆಗಿರಬೇಕು. ಆಗ ಅದು ಮುಂದಿನ ಪೀಳಿಗೆಗೂ ಬಳಕೆಗೆ ಬರುತ್ತದೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ